ತಾಜಾ ಸುದ್ದಿ

ಕೋಟ: ಖ್ಯಾತ ವೈದ್ಯ, ಕುಂದಾಪುರ ಶ್ರೀಮಾತಾ ಆಸ್ಪತ್ರೆಯ ಡಾ.ಸತೀಶ ಪೂಜಾರಿ ನಿಧನ

ಕೋಟ: ಕುಂದಾಪುರ ಶ್ರೀಮಾತಾ ಅಸ್ಪತ್ರೆಯ ಆಡಳಿತ ಪಾಲುದಾರ, ಖ್ಯಾತ ಇ.ಎನ್.ಟಿ. ತಜ್ಞ ಡಾ.ಸತೀಶ ಪೂಜಾರಿ ಸಾಸ್ತಾನ (52) ಅವರು ಜು.11.ಗುರುವಾರ ಹೃದಯಾಘಾತದಿಂದ ಕೋಟ ಮಣೂರು ಸ್ವಗೃಹದಲ್ಲಿ ನಿಧನರಾದರು. ಮೃತರು, ಪತ್ನಿ, ಪುತ್ರನನ್ನು ಅಗಲಿದ್ದಾರೆ. ಇವರು ಕುಂದಾಪುರ ಶ್ರೀಮಾತಾ ಆಸ್ಪತ್ರೆ, ಕೋಟ ಮನಸ್ಮಿತಾ ಫೌಂಡೇಶನ್ ಮೊದಲಾದ ಸಂಸ್ಥೆಗಳ ಆಡಳಿತ ಪಾಲುದಾರರಾಗಿದ್ದರು. ಹವ್ಯಾಸಿ ಗಾಯಕರಾಗಿದ್ದ ಇವರು ಹಲವಾರು ಆಲ್ಬಂ ಸಾಂಗ್ ಗಳಿಗೆ, ಭಕ್ತಿಗೀತೆಗಳಿಗೆ ಧ್ವನಿಯಾಗಿದ್ದರು. ಸಂಗೀತ ರಸಮಂಜರಿಗಳಲ್ಲೂ ಕಾರ್ಯಕ್ರಮ ನೀಡಿದ್ದಾರೆ. ಡಾ. ಎಸ್. ಜಾನಕಿ ಅವರ ಕಟ್ಟಾ ಅಭಿಮಾನಿಯಾಗಿ ಪ್ರತಿ ವರ್ಷ ಕೋಟೇಶ್ವರದಲ್ಲಿ ಡಾ. ಎಸ್. ಜಾನಕಿ ರಾಷ್ಟ್ರೀಯ …

Read More »

ಪ್ರಿಯದರ್ಶಿನಿ ಪಿ. ರವರ “ಕೀಕಾ” ಕೃತಿ ಲೋಕಾರ್ಪಣೆಯ ಸಮಾರಂಭ

ವೃತ್ತಿಯಲ್ಲಿ ಓರ್ವ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದುಕೊಂಡು ಪ್ರವೃತ್ತಿಯಲ್ಲಿ ಓದುವ, ಬರೆಯುವ ಹವ್ಯಾಸವನ್ನು ನೆಚ್ಚಿಕೊಂಡಿರುವ ಪ್ರಿಯದರ್ಶಿನಿ ಅವರ “ಕೀಕಾ” ಕೃತಿಯ ಬಿಡುಗಡೆ ಸಮಾರಂಭವು 12.07.2024ನೇ ಶುಕ್ರವಾರ ಬೆಳಿಗ್ಗೆ ಗಂಟೆ 11ಕ್ಕೆ ಉಡುಪಿ ಅಜ್ಜರಕಾಡು ಪುರಭವನದಲ್ಲಿ ನಡೆಯಲಿದೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಮಾರಂಭದ ಅಧ್ಯಕ್ಷತೆ ವಹಿಸಿ ಕೃತಿ ಬಿಡುಗಡೆ ಗೊಳಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಹಾಸ್ಯ ಕವಿ, ಲೇಖಕ ಶಾಂತರಾಜ ಐತಾಳ್, ಅತಿಥಿಗಳಾಗಿ ಕಸಾಪ ತಾಲೂಕು ಘಟಕದ ಅಧ್ಯಕ್ಷ ರವಿರಾಜ ಎಚ್.ಪಿ, ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು, ಸೀತಾ …

Read More »

ಮಂಗಳೂರು: ಹಿಂದೂ ಯುವತಿ 15 ಕ್ರಿಮಿನಲ್‌ ಪ್ರಕರಣಗಳ ಆರೋಪಿ ಮುಸ್ಲಿಂ ಯುವಕನ ಜತೆ ಪರಾರಿ ?

ಮಂಗಳೂರು: ಕೇರಳದ ಕಾಸರಗೋಡು ಜಿಲ್ಲೆಯ ಯುವಕನೊಬ್ಬ ತನ್ನ ಬೆಂಬಲಿಗರ ಸಹಾಯದಿಂದ ನನ್ನ ಮಗಳನ್ನು ಉಳ್ಳಾಲದಿಂದ ಅಪಹರಿಸಿದ್ದು, ವಿವಾಹವಾಗುವ ಉದ್ದೇಶದಿಂದ ಆಕೆಯನ್ನು ಮುಸ್ಲಿಂ ಮತಕ್ಕೆ ಮತಾಂತರಗೊಳಿಸಲು ಯತ್ನಿಸಿರುವುದಾಗಿ ಕೇರಳ ಮೂಲದ ಪೋಷಕರೊಬ್ಬರು ಮಂಗಳೂರು ಪೊಲೀಸ್ ಕಮೀಷನರಿಗೆ ದೂರು ನೀಡಿದ್ದಾರೆ. ಕಾಸರಗೋಡಿನ ಇಸ್ಸಾತ್ ನಗರದ ಅಸ್ಪಾಕ್ ಮಗಳನ್ನು ಅಪಹರಿಸಿದವ ಎಂದು ದೂರಿನಲ್ಲಿ ತಿಳಿಸಿದ್ದಾನೆ. ದೂರುದಾರರು ಕಾಸರಗೋಡಿನವರಾಗಿದ್ದು, ಅವರ ಸಹೋದರಿಯನ್ನು ಉಳ್ಳಾಲದ ಬಂದಿಕೊಟ್ಯಾಕ್ಕೆ ವಿವಾಹ ಮಾಡಿಕೊಡಲಾಗಿದೆ. ಅಪಹರಿಸಲ್ಪಟ್ಟಿದ್ದಾಳೆ ಎನ್ನಲಾಗುತ್ತಿರುವ ದೂರುದಾರರ ಮಗಳು(20 ವ) ಮಂಗಳೂರಿನ ಪಾಂಡೇಶ್ವರ ಶ್ರೀನಿವಾಸ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದು, ಉಳ್ಳಾಲದ ಅತ್ತೆಯ ಮನೆಯಿಂದ ಹೋಗಿ …

Read More »

ಚಡ್ಡಿಗ್ಯಾಂಗ್ ಅರೆಸ್ಟ್ ಪ್ರಕರಣ: ಉರ್ವಾ ಇನ್ಸ್ ಪೆಕ್ಟರ್ ಭಾರತಿ ಮತ್ತು ತಂಡಕ್ಕೆ 50 ಸಾವಿರ ಬಹುಮಾನ..!

ಮಂಗಳೂರು: ಮಂಗಳೂರಿನಲ್ಲಿ ದರೋಡೆ ನಡೆಸಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದ ಚಡ್ಡಿಗ್ಯಾಂಗ್ ಸದಸ್ಯರು ಪಂಚನಾಮೆ ವೇಳೆ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ ಈ ವೇಳೆ ಉರ್ವಾ ಪೊಲೀಸ್ ಇನ್ಸ್ ಪೆಕ್ಟರ್ ಭಾರತಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು ಮಂಗಳೂರಿನಲ್ಲಿ ದರೋಡೆ ನಡೆಸಿದ್ದ ಚಡ್ಡಿ ಗ್ಯಾಂಗಿನ ಸದಸ್ಯರನ್ನು ಕ್ಷಿಪ್ರವಾಗಿ ಅರೆಸ್ಟ್ ಮಾಡಲಾಗಿದ್ದು, ಅವರು ದರೋಡೆ ಕೃತ್ಯಕ್ಕೆ ಬಳಸಿದ್ದ ರಾಡ್ ಅನ್ನು ವಶಕ್ಕೆ ಪಡೆಯುವ ಸಲುವಾಗಿ ಆರೋಪಿಗಳನ್ನು ಮುಲ್ಕಿ ಬಳಿಯ ಪಡು …

Read More »

ಪುತ್ತೂರು: ಭಯಾನಕ ಹಾಸ್ಯಮಯ ಮೋಹಿನಿ ನಾಟಕದ ಶುಭ ಮುಹೂರ್ತ

ಸಾಯಿ ತಂಡೊದ ಕುಶಾಲ್ದ ಕಲಾವಿದೆರ್ ಕುಡ್ಲ ಇವರ ಈ ವರ್ಷದ ವಿನೂತನ ಶೈಲಿಯ ಭಯಾನಕ ಹಾಸ್ಯಮಯ ಮೋಹಿನಿ ನಾಟಕದ ಶುಭ ಮುಹೂರ್ತ ಪೂಜೆ ಜು.7ರಂದು ಬೆಳ್ಳಿಗ್ಗೆ 9:30ಕ್ಕೆ ಶ್ರೀ ಮಹತೋಭರ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇಲ್ಲಿಯ ಪ್ರದಾನ ಅರ್ಚಕರ ಆಶೀರ್ವಾಚನದೊಂದಿಗೆ ನಡೆಯಿತು. ಇನ್ನು ಈ ಸಂದರ್ಭದಲ್ಲಿ ದಂಡದ ಸಾರತ್ಯ ವಹಿಸಿದಂತಹ ಅಶೋಕ್ ಶೆಟ್ಟಿ, ನಾಟಕ ರಚನೆ ಗಾರರಾದ ಶಿವಕುಮಾರ್ ರೈ ಪುತ್ತೂರು, ಹಿನ್ನಲೆ ಗಾಯಕಿ ಸಹನಾ ಭಟ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದಂತಹ ದಯಾನಂದ್ ಕುಂತೂರ್ ಎಲ್ ಐ ಸಿ ಯ ಶ್ರೀನಿವಾಸ್ ಮೂರ್ತಿ, …

Read More »

BREAKING : ನಟ ದರ್ಶನ್ ಗೆ ಸದ್ಯಕ್ಕೆ ಜೈಲೂಟವೇ ಗತಿ ; ರಿಟ್ ಅರ್ಜಿ ವಿಚಾರಣೆ ಜು.18 ಕ್ಕೆ ಮುಂದೂಡಿಕೆ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಗೆ ಸದ್ಯಕ್ಕೆ ಜೈಲೂಟವೇ ಗತಿಯಾಗಿದ್ದು, ನಟ ದರ್ಶನ್ ರಿಟ್ ಅರ್ಜಿಯನ್ನು ಜುಲೈ 18 ಕ್ಕೆ ಹೈಕೋರ್ಟ್ ಮುಂದೂಡಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ನಟ ದರ್ಶನ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು. ಮನೆಯಿಂದ ಊಟ, ಹಾಸಿಗೆ. ಪುಸ್ತಕ ತರಿಸಿಕೊಳ್ಳಲು ಅನುಮತಿ ನೀಡುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ನಟ ದರ್ಶನ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಸಂಬಂಧ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ …

Read More »

ಉಡುಪಿ: ಆಳ್ವಾಸ್ ಕಾಲೇಜಿನ ಸಿಎ ವಿಧ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

ಉಡುಪಿ: ಸಿಎ ಓದುತ್ತಿದ್ದ ವಿಧ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮಣಿಪಾಲದ ಹೆರ್ಗದಲ್ಲಿ ನಡೆದಿದೆ. ಚಿಕ್ಕಮಗಳೂರು ಕೊಪ್ಪ ತಾಲೂಕಿನ ಹರಂದೂರು ಗ್ರಾಮದ ಶ್ರೀನಿಧಿ ಶೆಟ್ಟಿ (20) ಆತ್ಮಹತ್ಯೆ ಮಾಡಿಕೊಂಡವರು. ಈ ಯುವತಿ ಮಂಗಳೂರಿನ ಆಳ್ವಾಸ್ ಕಾಲೇಜಿನಲ್ಲಿ ಸಿಎ ವ್ಯಾಸಂಗ ಮಾಡುತ್ತಿದ್ದರು. ಹೆರ್ಗ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ತಂದೆತಾಯಿಯೊಂದಿಗೆ ಇದ್ದ ಶ್ರೀನಿಧಿ ಶೆಟ್ಟಿ, ಮನೆಯ ರೂಮ್​ನಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಇನ್ನೂ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ …

Read More »

ಮಂಗಳೂರು: ಮಹಜರು ವೇಳೆ ‘ಚಡ್ಡಿಗ್ಯಾಂಗ್’ ಆರೋಪಿಗಳು ಪರಾರಿಗೆ ಯತ್ನ – ಇಬ್ಬರಿಗೆ ಗುಂಡೇಟು

ಮಂಗಳೂರು: ಸ್ಥಳ ಮಹಜರು ನಡೆಸಲು ಚಡ್ಡಿಗ್ಯಾಂಗ್‌ನ ಆರೋಪಗಳನ್ನು ಕೊಂಡೊಯ್ಯುತ್ತಿದ್ದ ವೇಳೆ ಪರಾರಿಗೆ ಯತ್ನಿಸಿದ ಇಬ್ಬರು ಆರೋಪಿಗಳಿಗೆ ಪೊಲೀಸರು ಗುಂಡಿಕ್ಕಿರುವ ಘಟನೆ ನಗರದ ಮುಲ್ಕಿ ಸಮೀಪದ ಪಡು ಪಣಂಬೂರು ಬಳಿ ನಡೆದಿದೆ. ಮಂಗಳವಾರ ನಸುಕಿನ ವೇಳೆ ಚಡ್ಡಿಗ್ಯಾಂಗ್‌ನ ನಾಲ್ವರಿದ್ದ ತಂಡ ಮಂಗಳೂರಿನ ಕೋಟೆಕಣಿಯ ಮನೆಯೊಂದಕ್ಕೆ ನುಗ್ಗಿ ದಂಪತಿಯನ್ನು ಬೆದರಿಸಿ 14ಲಕ್ಷ ಮೌಲ್ಯದ ಸೊತ್ತು ದರೋಡೆ ಮಾಡಿ ಪರಾರಿಯಾಗಿತ್ತು. ಬಳಿಕ ಕಾರನ್ನು ಮುಲ್ಕಿ ಬಳಿ ತೊರೆದು, ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಮತ್ತೆ ಮಂಗಳೂರಿಗೆ ಬಂದು ಬೆಂಗಳೂರಿಗೆ ಪರಾರಿಯಾಗಲೆತ್ನಿಸಿತ್ತು. ಅಷ್ಟರಲ್ಲಿ ಅಲರ್ಟ್ ಆದ ಪೊಲೀಸರು ಸಕಲೇಶಪುರ ಮಾರ್ಗದಲ್ಲಿದ್ದ ಬಸ್‌ಅನ್ನು ತಡೆದು …

Read More »

ಮುಡಾ ಅವ್ಯವಹಾರ ಕೇಸ್:‌ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು

ಮೈಸೂರು: ಮುಡಾ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದೂರು ದಾಖಲಾಗಿದೆ. ನಕಲಿ ದಾಖಲೆ ಸೃಷ್ಟಿ ಮೂಲಕ ಮುಡಾ ವಂಚಿಸಿ ಕೋಟ್ಯಂತರ ಬೆಲೆಯ ನಿವೇಶನ ಪಡೆದ ಆರೋಪ ಹೊರಿಸಲಾಗಿದೆ. ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನಸ್ವಾಮಿ, ಭೂ ಮಾಲೀಕ ಎಂದು ಹೇಳುವ ದೇವರಾಜು ಹಾಗೂ ಕುಟುಂಬದವರ ವಿರುದ್ಧ ದೂರು ದಾಖಲಾಗಿದೆ. ಇದೇ ಪ್ರಕರಣದಲ್ಲಿ ಜಿಲ್ಲಾಧಿಕಾರಿ, ತಹಸೀಲ್ದಾರ್, ಉಪ ನೋಂದಣಾಧಿಕಾರಿ ಹಾಗೂ ಮುಡಾ ಅಧಿಕಾರಿಗಳ ಶಾಮೀಲು ಬಗ್ಗೆಯು ದೂರು ಕೇಳಿಬಂದಿದೆ. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ …

Read More »

ಕಾರ್ಕಳ: ಕ್ರೇನ್ ಡಿಕ್ಕಿ ಹೊಡೆದು ಪಾದಚಾರಿ ಮೃತ್ಯು..!

ಕಾರ್ಕಳ:  ಕ್ರೇನ್  ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಉಡುಪಿ ಜಿಲ್ಲೆ ಕಾರ್ಕಳ ನಗರ ಠಾಣೆಯ ವ್ಯಾಪ್ತಿಯ ಅಯ್ಯಪ್ಪ ನಗರ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಅಂಗಾರ(75) ಮೃತಪಟ್ಟ ದುರ್ದೈವಿಯಾಗಿದ್ದಾರೆ.  ಅಂಗಾರ ಕುಕ್ಕುಂದೂರು ಅಯ್ಯಪ್ಪ ನಗರದಿಂದ ಕುಕ್ಕುಂದೂರು ಜಲದುರ್ಗದ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕಾರ್ಕಳ ಜೋಡುರಸ್ತೆಯಿಂದ ಅಯ್ಯಪ್ಪ ನಗರದ ಕಡೆಗೆ ಹೋಗುತ್ತಿದ್ದ ಕ್ರೇನ್ ಅಂಗಾರರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಕಾರ್ಕಳ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ …

Read More »

You cannot copy content of this page.