ತಾಜಾ ಸುದ್ದಿ

ಮಲ್ಪೆ (ಕೆಮ್ಮಣ್ಣು) : ಜೇನು ನೊಣಗಳ ದಾಳಿಯಿಂದ ಅಸ್ವಸ್ಥಗೊಂಡಿದ್ದ ಮಹಿಳೆ ಸಾವು

ಮಲ್ಪೆ: ಜೇನು ನೊಣ ದಾಳಿ ನಡೆಸಿ ಕಚ್ಚಿದ ಪರಿಣಾಮ ತೀವ್ರವಾಗಿ ಅಸ್ವಸ್ಥಗೊಂಡ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ. ಕೆಮ್ಮಣ್ಣು ನಿವಾಸಿ ಸಂಪಾ(53) ಮೃತ ಮಹಿಳೆ. ಇವರು ನ.11ರಂದು ಹಸುಗಳಿಗೆ ಹುಲ್ಲು ತರಲು ತೋಟಕ್ಕೆ ಹೋಗಿದ್ದು, ಅಲ್ಲಿ ಹುಲ್ಲು ಕೊಯ್ಯುತ್ತಿದ್ದಾಗ ಜೇನು ದಾಳಿ ನಡೆಸಿ ಕಚ್ಚಿತ್ತೆನ್ನಲಾಗಿದೆ. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಇವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಸಂಜೆ ವೇಳೆ ಅವರು ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಸುಲಭವಾಗಿ ತಯಾರಿಸಿ ತರಕಾರಿ ನೂಡಲ್ಸ್ ʼಸೂಪ್ʼ

ತರಕಾರಿ ನೂಡಲ್ಸ್ ಸೂಪ್ ಬಾಯಿಗಷ್ಟೇ ರುಚಿಯಲ್ಲ. ಆರೋಗ್ಯಕ್ಕೂ ಒಳ್ಳೆಯದು. ಬಿಸಿ ಬಿಸಿ ನೂಡಲ್ಸ್ ಸೂಪ್ ಸೇವಿಸುವ ಮಜವೇ ಬೇರೆ. ಇದನ್ನು ಮಾಡಲು ಕಡಿಮೆ ಸಮಯ ಸಾಕು. ಹಾಗೆ ತಯಾರಿಸುವುದು ಬಲು ಸುಲಭ. ತರಕಾರಿ ನೂಡಲ್ಸ್ ಸೂಪ್ ಮಾಡಲು ಬೇಕಾಗುವ ಪದಾರ್ಥ: 150 ಗ್ರಾಂ ನೂಡಲ್ಸ್ ಮೂರು ಟೊಮ್ಯಾಟೊ ಒಂದು ಕ್ಯಾರೆಟ್, ಕ್ಯಾಪ್ಸಿಕಂ, ಶುಂಠಿ ಅರ್ಧ ಕಪ್ ಅವರೆಕಾಳು ಅರ್ಧ ಚಮಚ ಕರಿಮೆಣಸಿನ ಪುಡಿ ಅರ್ಧ ಚಮಚ ಬಿಳಿ ಮೆಣಸಿನ ಪುಡಿ ಎರಡು ಹಸಿ ಮೆಣಸಿನ ಕಾಯಿ ಅರ್ಧ ಚಮಚ ನಿಂಬೆ ರಸ ಎರಡು ಚಮಚ …

Read More »

ಹುಬ್ಬಳ್ಳಿ: ಹೊತ್ತಿ ಉರಿದ ಖಾಸಗಿ ಬಸ್- 30 ಪ್ರಯಾಣಿಕರು ಪಾರು

ಹುಬ್ಬಳ್ಳಿ: ಪುಣೆ ನಗರದಿಂದ ಉಡುಪಿಗೆ ಹೋಗುತ್ತಿದ್ದ ಬಸ್‌ನ ಹಿಂದಿನ ಚಕ್ರ ಬ್ಲಾಸ್ಟ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಖಾಸಗಿ ಬಸ್ ನಡು ರಸ್ತೆಯಲ್ಲಿಯೇ ಹೊತ್ತಿ ಉರಿದಿದೆ. ಬಸ್‌ನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಹುಬ್ಬಳ್ಳಿಯ ಕಾರವಾರ ರಸ್ತೆಯ ಬಳಿ ರವಿವಾರ ಬೆಳಗಿನ ಜಾವ 2.45ರ ಸುಮಾರಿಗೆ ನಡೆದಿದೆ. ರೇಷ್ಮಾ ಟ್ರಾವೆಲ್ಸ್ ಕಂಪನಿಗೆ ಸೇರಿದ ಖಾಸಗಿ ಬಸ್ ನಿನ್ನೆ ಪುಣೆ ನಗರದಿಂದ ಉಡುಪಿಯತ್ತ ಹೋಗುತ್ತಿದ್ದಾಗ ಹು-ಧಾರವಾಡ ಬೈಪಾಸ ಬಳಿಯ ಕಾರವಾರ ರಸ್ತೆಯ ಬಳಿ ಬಸ್‌ನ ಹಿಂದಿನ ಚಕ್ರ ಸ್ಫೋಟಗೊಂಡು ಬೆಂಕಿ …

Read More »

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಮತ್ತೋರ್ವನ ಬಂಧನ..!

ಬೆಳ್ಳಾರೆ:ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವನಿಗೆ ರಾಷ್ಟ್ರೀಯ ತನಿಖಾದಳ ಬಂಧಿಸಿದೆ. ನ.12ರಂದು ಕಾರ್ಯಾಚರಣೆ ನಡೆಸಿದ ಎನ್‌ಐಎ ತಂಡ, ಪ್ರಕರಣಕ್ಕೆ ಸಂಬಂಧಿಸಿ ಎಸ್‌ಡಿಪಿಐ ಮುಖಂಡ ಶಾಫಿ ಬೆಳ್ಳಾರೆ ಅವರ ಬಾವ ಸಾಹಿದ್ ಬೆಳ್ಳಾರೆ(34)ಎಂಬವರನ್ನು ಬಂಧಿಸಿ ವಿಚಾರಣೆಗೊಳಪಡಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸಾಹಿದ್ ಬೆಳ್ಳಾರೆ ಬಂಧನದೊಂದಿಗೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 14 ಮಂದಿ ಬಂಧನವಾಗಿದೆ. ಪ್ರವೀಣ್ ಕೊಲೆಗೆ ಸಂಬಂಧಿಸಿ ಇತ್ತೀಚೆಗೆ ಪೊಲೀಸರು ನಾಲ್ವರು ಪ್ರಮುಖ ಆರೋಪಿಗಳ ಬಗ್ಗೆ ಮಾಹಿತಿ ನೀಡಿದರೆ ನಗದು ಬಹುಮಾನ‌ ನೀಡುವುದಾಗಿ ಘೋಷಣೆ ಮಾಡಿದೆ. ಇಬ್ಬರ ಆರೋಪಿ ಬಗ್ಗೆ ಮಾಹಿತಿ …

Read More »

BREAKING NEWS : ‘ಹೊನ್ನಾಳಿ ಚಂದ್ರು’ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ‘FSL’ ವರದಿಯಲ್ಲಿ ಸ್ಪೋಟಕ ಸತ್ಯ ಬಯಲು

ದಾವಣಗೆರೆ: ಹೊನ್ನಾಳಿ BJP ಶಾಸಕ ರೇಣುಕಾಚಾರ್ಯ ( Renukacharya) ಅವರ ತಮ್ಮನ ಮಗ ಚಂದ್ರಶೇಖರ್ ಮೃತದೇಹವು ತುಂಗಾ ಕಾಲುವೆಯಲ್ಲಿ ಪತ್ತೆಯಾದ ಪ್ರಕರಣ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈಗಾಗಲೇ ಮರಣೋತ್ತರ ಪರೀಕ್ಷೆ ವರದಿ ಪೊಲೀಸರ ಕೈ ಸೇರಿದ್ದು, ಮರಣೋತ್ತರ ಪರೀಕ್ಷೆಯ ಪ್ರಕಾರ ಶ್ವಾಸಕೋಶದ ಒಳಗೆ ನೀರು ನುಗ್ಗಿ ಸಾವನ್ನಪ್ಪಿದ್ದಾರೆ ಎಂದು ವರದಿ ನೀಡಿದ್ದಾರೆ.ಆದರೆ ನಿಜವಾಗಿ ಆಕ್ಸಿಡೆಂಟ್ ನಡೆದಿದ್ಯಾ ಎಂಬುದನ್ನು ತಿಳಿಯಲು ವಿಧಿ ವಿಜ್ಞಾನ ಪ್ರಯೋಗಾಲಯದ (FSL) ವರದಿಗಾಗಿ ಪೊಲೀಸರು ಕಾಯತ್ತಿದ್ದರು. . ಈಗ ಎಫ್‌ಎಸ್‌ಎಲ್ ವರದಿ ಕೂಡ ಬಂದಿದ್ದು, . ವರದಿ ಪ್ರಕಾರ ಕಾರು …

Read More »

BREAKING NEWS : 3 ದಶಕದ ಬಳಿಕ ರಾಜೀವ್ ಗಾಂಧಿ ಹತ್ಯೆ ಆರೋಪಿ ‘ನಳಿನಿ ಶ್ರೀಹರನ್’ ಜೈಲಿನಿಂದ ಬಿಡುಗಡೆ

ವೆಲ್ಲೂರು : ಸುಪ್ರೀಂಕೋರ್ಟ್ ಆದೇಶದ ಒಂದು ದಿನದ ಬಳಿಕ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಶ್ರೀಹರನ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರು ಅಪರಾಧಿಗಳನ್ನ 31 ವರ್ಷಗಳ ಜೈಲುವಾಸದ ನಂತರ ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿ ಆದೇಶದ ಬಳಿಕ ನಳಿನಿ ಶ್ರೀಹರನ್ ಶನಿವಾರ ಸಂಜೆ ಬಿಡುಗಡೆಯಾಗಿದ್ದಾರೆ. ಪೆರೋಲ್ ಷರತ್ತುಗಳ ಭಾಗವಾಗಿ ತನ್ನ ಉಪಸ್ಥಿತಿಯನ್ನ ಗುರುತಿಸಲು ಆಕೆ ಇಂದು ಬೆಳಿಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಳು. ಅಂದ್ಹಾಗೆ, ಮೇ ತಿಂಗಳಲ್ಲಿ, ಸರ್ವೋಚ್ಚ ನ್ಯಾಯಾಲಯವು ತನ್ನ ಅಸಾಧಾರಣ ಅಧಿಕಾರವನ್ನು …

Read More »

ಉಡುಪಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ನ.14ರಂದು ಎಲ್ಲೋ ಅಲರ್ಟ್‌

ಬೆಂಗಳೂರು: ಬಂಗಾಲ ಕೊಲ್ಲಿ ಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರಿಂದಾಗಿ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಮುಂದಿನ 2 ದಿನ ಸಾಧಾರಣ ಮಳೆ ಆಗಬಹುದು. ನ. 14ರಂದು ಕರಾವಳಿಯ ಉಡುಪಿ, ಮಂಗಳೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿದ್ದು, ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಮಂಡ್ಯ, ಮೈಸೂರು ಸೇರಿದಂತೆ ಹಳೆ ಮೈಸೂರು ಭಾಗಗಳಲ್ಲಿ ಶುಕ್ರವಾರ ದಿನವಿಡೀ ತುಂತುರು ಮಳೆಯಾಗಿದೆ. ಹಲವು ಜಿಲ್ಲೆಗಳಲ್ಲಿ ಶೀತ ಗಾಳಿ ಬೀಸಿದೆ. ಮೈಸೂರಿನಲ್ಲಿ ತುಂತುರು ಮಳೆ ಹಾಗೂ ಮಂಜು ಕವಿದ ವಾತಾವರಣವಿತ್ತು. ಹಲವು ಜಿಲ್ಲೆಗಳಲ್ಲಿ ಶನಿವಾರದಿಂದ 2 ದಿನ  ಮೋಡ ಕವಿದ …

Read More »

ಕುಕ್ಕೆ ಸುಬ್ರಹ್ಮಣ್ಯ ಕ್ಕೆ ತಮಿಳು ನಟ ವಿಶಾಲ್ ಭೇಟಿ

ಸುಬ್ರಹ್ಮಣ್ಯ: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ತಮಿಳು ನಟ ವಿಶಾಲ್ ಭೇಟಿ ನೀಡಿದ್ದಾರೆ. ಹೊಸ ಸಿನಿಮಾಗಾಗಿ ನಿರ್ದೇಶನಕ್ಕೂ ಕೈ ಹಾಕಿದ ವಿಶಾಲ್ `ಲಾಠಿ’ ಚಿತ್ರದ ಮೂಲಕ ಖಡಕ್ ಆಫೀಸರ್ ಆಗಿ ತೆರೆಗೆ ಅಪ್ಪಳಿಸುತ್ತಿದ್ದಾರೆ. ಶನಿವಾರ ಮುಂಜಾನೆ ಸ್ನೇಹಿತರ ಜೊತೆ ಆಗಮಿಸಿದ ವಿಶಾಲ್ ದೇವರ ದರ್ಶನ ಪಡೆದು ಪೂಜೆ ನೆರವೇರಿಸಿದ್ದಾರೆ. ಪಂಚೆ, ಶಲ್ಯ ಧರಿಸಿದ್ದ ಅವರು ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು.ಧರ್ಮಸ್ಥಳ ಹಾಗೂ ಕುಕ್ಕೆಯಲ್ಲಿ ನೆಚ್ಚಿನ ನಟನನ್ನು ನೋಡಿದ ಫ್ಯಾನ್ಸ್ ಸೆಲ್ಪಿಗಾಗಿ ಮುಗಿಬಿದ್ದಿದ್ದಾರೆ.

Read More »

ವಾಟ್ಸಾಪ್ ನಕಲಿ ವೈರಲ್‌ ಸಂದೇಶದ ಯಡವಟ್ಟು: ಫ್ಲೇಮ್​ ಲಿಲ್ಲಿ ಗಡ್ಡೆ ತಿಂದು ಯುವಕ ಸಾವು

ಚನ್ನೈ: ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚಿಗೆ ವೈರಲ್‌ ಸುದ್ದಿಗಳು ಹೆಚ್ಚುತ್ತಿದ್ದು, ಕೆಲವು ಮಂದಿ ನಕಲಿ ಸುದ್ದಿಗಳನ್ನು ಕೂಡ ಹರಡುತ್ತಿದ್ದು, ಇದರಿಂದ ಹಲವು ಮಂದಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿರುವ ಸನ್ನಿವೇಶ ನಿರ್ಮಾಣವಾಗಿದೆ ಕೂಡ. ಈ ನಡುವೆ ವಾಟ್ಸಪ್‌ ಬಂದಿದ್ದ ಸಂದೇಶವನ್ನು ಅನುಸರಿಸಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಲೋಕನಾಥನ್ ಅವರು ತಿರುಪಟ್ಟೂರು ಜಿಲ್ಲೆಯ ಅಂಬೂರು ಬಳಿಯ ಮಿನ್ನೂರು ಮೂಲದವರು. 25 ವರ್ಷದ ಲೋಗನಾಥನ್ ಎನ್ನುವ ಯುವಕ ಮಿನ್ನೂರಿನ ಖಾಸಗಿ ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ. ಈ ಸಂದರ್ಭದಲ್ಲಿ, ಲೋಗನಾಥನ್ ಸೆನ್ಸಾಂಟಲ್ ಹೂವಿನ ಸಸ್ಯದ ಗೆಡ್ಡೆ ಗೆಣಸುಗಳನ್ನು …

Read More »

ಉಡುಪಿ: ನ.15 ರಂದುನೀರು ಸರಬರಾಜು ವ್ಯತ್ಯಯ

ಉಡುಪಿ: ಹಿರಿಯಡ್ಕದ ಬಜೆ ನೀರು ಸರಬರಾಜು ಘಟಕದಲ್ಲಿ ನವೆಂಬರ್ 15 ರಂದು ವಿದ್ಯುತ್ ಸ್ಥಗಿತಗೊಳಿಸುವುದರಿಂದ, ಅಂದು ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ನಗರಸಭೆ ಪ್ರಕಟಣೆ ತಿಳಿಸಿದೆ.

Read More »

You cannot copy content of this page.