ಸುಬ್ರಹ್ಮಣ್ಯ: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ತಮಿಳು ನಟ ವಿಶಾಲ್ ಭೇಟಿ ನೀಡಿದ್ದಾರೆ.
ಹೊಸ ಸಿನಿಮಾಗಾಗಿ ನಿರ್ದೇಶನಕ್ಕೂ ಕೈ ಹಾಕಿದ ವಿಶಾಲ್ `ಲಾಠಿ’ ಚಿತ್ರದ ಮೂಲಕ ಖಡಕ್ ಆಫೀಸರ್ ಆಗಿ ತೆರೆಗೆ ಅಪ್ಪಳಿಸುತ್ತಿದ್ದಾರೆ.
ಶನಿವಾರ ಮುಂಜಾನೆ ಸ್ನೇಹಿತರ ಜೊತೆ ಆಗಮಿಸಿದ ವಿಶಾಲ್ ದೇವರ ದರ್ಶನ ಪಡೆದು ಪೂಜೆ ನೆರವೇರಿಸಿದ್ದಾರೆ. ಪಂಚೆ, ಶಲ್ಯ ಧರಿಸಿದ್ದ ಅವರು ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು.ಧರ್ಮಸ್ಥಳ ಹಾಗೂ ಕುಕ್ಕೆಯಲ್ಲಿ ನೆಚ್ಚಿನ ನಟನನ್ನು ನೋಡಿದ ಫ್ಯಾನ್ಸ್ ಸೆಲ್ಪಿಗಾಗಿ ಮುಗಿಬಿದ್ದಿದ್ದಾರೆ.