BREAKING NEWS : ‘ಹೊನ್ನಾಳಿ ಚಂದ್ರು’ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ‘FSL’ ವರದಿಯಲ್ಲಿ ಸ್ಪೋಟಕ ಸತ್ಯ ಬಯಲು

ದಾವಣಗೆರೆ: ಹೊನ್ನಾಳಿ BJP ಶಾಸಕ ರೇಣುಕಾಚಾರ್ಯ ( Renukacharya) ಅವರ ತಮ್ಮನ ಮಗ ಚಂದ್ರಶೇಖರ್ ಮೃತದೇಹವು ತುಂಗಾ ಕಾಲುವೆಯಲ್ಲಿ ಪತ್ತೆಯಾದ ಪ್ರಕರಣ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಈಗಾಗಲೇ ಮರಣೋತ್ತರ ಪರೀಕ್ಷೆ ವರದಿ ಪೊಲೀಸರ ಕೈ ಸೇರಿದ್ದು, ಮರಣೋತ್ತರ ಪರೀಕ್ಷೆಯ ಪ್ರಕಾರ ಶ್ವಾಸಕೋಶದ ಒಳಗೆ ನೀರು ನುಗ್ಗಿ ಸಾವನ್ನಪ್ಪಿದ್ದಾರೆ ಎಂದು ವರದಿ ನೀಡಿದ್ದಾರೆ.ಆದರೆ ನಿಜವಾಗಿ ಆಕ್ಸಿಡೆಂಟ್ ನಡೆದಿದ್ಯಾ ಎಂಬುದನ್ನು ತಿಳಿಯಲು ವಿಧಿ ವಿಜ್ಞಾನ ಪ್ರಯೋಗಾಲಯದ (FSL) ವರದಿಗಾಗಿ ಪೊಲೀಸರು ಕಾಯತ್ತಿದ್ದರು.

. ಈಗ ಎಫ್‌ಎಸ್‌ಎಲ್ ವರದಿ ಕೂಡ ಬಂದಿದ್ದು, . ವರದಿ ಪ್ರಕಾರ ಕಾರು ವೇಗವಾದ ಸ್ಪೀಡ್ನಿಂದ ಡಿಕ್ಕಿ ಹೊಡೆದು ನೀರಿಗೆ ಬಿದ್ದಿದೆ ಎನ್ನಲಾಗಿದೆ. ಖಾಸಗಿ ವಿಧಿ ವಿಜ್ಞಾನ ತಜ್ಞ ಫಣೀಂದ್ರ ಕೂಡ 40 ಪುಟಗಳ ವರದಿಯನ್ನು ನೀಡಿದ್ದಾರೆ. ವರದಿಯ ಪ್ರಕಾರ ಅಪಘಾತ ಸಂಭವಿಸಿದೆ ಎಂದು ವರದಿ ನೀಡಿದ್ದಾರೆ. ಇನ್ನು ಒಂದು ಹಂತದ ಪರೀಕ್ಷೆ ಬಾಕಿ ಇದೆ ಎಂದು ಫಣೀಂದ್ರ ಹೇಳಿದ್ದಾರೆ ಎನ್ನಲಾಗಿದೆ.

ಇದರ ನಡುವೆ ಇತ್ತೀಚೆಗೆ ಡಯಾಟಮ್ ವರದಿ ಪೊಲೀಸರ ಕೈ ಸೇರಿತ್ತು, . ವರದಿಯಲ್ಲಿ ಚಂದ್ರು ಸಾವು ಸಜಜ ಎಂದು ಡಯಾಟಮ್ ಪರೀಕ್ಷೆ ವರದಿ ನೀಡಿದೆ. ಶ್ವಾಸಕೋಶದ ಒಳಗೆ ನೀರು ಇರುವುದನ್ನು ಖಚಿತಪಡಿಸಿದೆ. ಶ್ವಾಸಕೋಶದ ಒಳಗೆ ನೀರು ಸೇರಿದರೆ ಚಂದ್ರು ಬದುಕಿದ್ದಾಗಲೇ ನಾಲೆಗೆ ಬಿದ್ದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಚಂದ್ರು ಸಾವಿನ ಪ್ರಕರಣ ಹತ್ತು ಹಲವು ಅನುಮಾನಗಳಿಗೆ ಕಾರಣವಾದ ಬೆನ್ನಲ್ಲೇ ವಿಧಿ ವಿಜ್ಞಾನ ತಂಡ ಹಾಗೂ ವೈದ್ಯರ ತಂಡವು ಡಯಾಟಮ್ ಪರೀಕ್ಷೆಗೆ ಮುಂದಾಗಿತ್ತು. . ಕಾರು ನಾಲೆಗೆ ಬೀಳುವ ಮುನ್ನ ಚಂದ್ರಶೇಖರ್ ಮೃತಪಟ್ಟಿದ್ದಾರೆಯೇ ಅಥವಾ ನಾಲೆಗೆ ಕಾರು ಬಿದ್ದ ಬಳಿಕವೇ ಚಂದ್ರಶೇಖರ್ ಮೃತಪಟ್ಟಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಡಯಾಟಮ್ ಪರೀಕ್ಷೆ ಮೊರೆ ಹೋಗಲಾಗಿತ್ತು.

ಫ್ಲೋರೆನ್ಸಿಕ್ ಮೆಡಿಸಿನ್ ತಂಡದಿಂದ ಡಯಾಟಮ್ ಪರೀಕ್ಷೆ ನಡೆಸಿದ್ದು, ಈ ಮೂಲಕ ಶ್ವಾಸಕೋಶವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಚಂದ್ರು ಕಾರಿನ ಸಮೇತ ನೀರಿಗೆ ಬಿದ್ದು ಮೃತಪಟ್ಟಿದ್ದರೆ ಅವರ ಶ್ವಾಸಕೋಶದ ಒಳಗೆ ನೀರು ತುಂಬಿಕೊಳ್ಳುತ್ತದೆ, ನೀರಿನಲ್ಲಿದ್ದ ಕಾರಣ ಶವ ಕೊಳೆತು ಶ್ವಾಸಕೋಶದಲ್ಲಿರುವ ನೀರು ಒಂದು ವೇಳೆ ಹೊರಗೆ ಹೋದರೂ ಕಲ್ಮಶವು ಅಲ್ಲಿಯೇ ಉಳಿದಿರುತ್ತದೆ, ವರದಿಯಲ್ಲಿ ಚಂದ್ಯ ಸಾವು ಸಜಜ ಎಂದು ಡಯಾಟಮ್ ಪರೀಕ್ಷೆ ವರದಿ ನೀಡಿದ್ದು, ಶ್ವಾಸಕೋಶದ ಒಳಗೆ ನೀರು ಇರುವುದನ್ನು ಖಚಿತಪಡಿಸಿತ್ತು, .

ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ತಮ್ಮನ ಮಗ ಚಂದ್ರಶೇಖರ್ ಮೃತದೇಹವು ಕೊಳೆತ ಸ್ಥಿತಿಯಲ್ಲಿ ನಾಲೆಯಲ್ಲಿ ಪತ್ತೆಯಾಗಿದ್ದು, ಇದು ಕೊಲೆ ಎಂದು ರೇಣುಕಾಚಾರ್ಯ ಹಾಗೂ ಮೃತ ಚಂದ್ರು ತಂದೆ ರಮೇಶ್ ಗಂಭೀರವಾಗಿ ಆರೋಪಿಸಿ ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನೂ, ನನ್ನ ಮಗನಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಲಾಗಿದೆ ಎಂದು ಮೃತ ಚಂದ್ರಶೇಖರ್ ತಂದೆ ರಮೇಶ್ ಹಾಗೂ ಶಾಸಕ ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದ್ದರು.

Check Also

ಮಂಗಳೂರು: ಪಿಎಂ ಇಜಿಪಿ, ಮುದ್ರಾಯೋಜನೆ ಫಲಾನುಭವಿಗಳ ಸಂಖ್ಯೆ ಹೆಚ್ಚಳಕ್ಕೆ ಪ್ರಯತ್ನಿಸಿ – ಸಂಸದ ಬ್ರಿಜೇಶ್ ಚೌಟ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಪಿಎಂ ಇಜಿಪಿ ಹಾಗೂ ಮುದ್ರಾ ಯೋಜನೆಯಡಿ ಗ್ರಾಮೀಣ ಭಾಗದವರಿಗೆ ವಿಶೇಷವಾಗಿ ಮಹಿಳೆಯರು …

Leave a Reply

Your email address will not be published. Required fields are marked *

You cannot copy content of this page.