ತಾಜಾ ಸುದ್ದಿ

‘ಹಿಂದೂ’ ವ್ಯಕ್ತಿಯಂತೆ ವೇಷ ಧರಿಸಿ ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್ : ಸ್ಪೋಟಕ ಮಾಹಿತಿ ಬಯಲು

ಮಂಗಳೂರು : ಮಂಗಳೂರು ಸ್ಪೋಟ ಪ್ರಕರಣ ರಾಜ್ಯದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದ್ದು, ಹಿಂದೂ ವ್ಯಕ್ತಿಗಳ ವೇಷ ಧರಿಸಿ ರಾಜ್ಯದಲ್ಲಿ ದೊಡ್ಡ ಅನಾಹುತ ನಡೆಸಲು ಉಗ್ರರು ಸ್ಕೆಚ್ ಹಾಕಿದ್ದರು ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ. ಮಂಗಳೂರು ಸ್ಪೋಟ ಪ್ರಕರಣದಲ್ಲೂ ಶಾರೀಕ್ ಹಿಂದೂ ವ್ಯಕ್ತಿ ವೇಷ ಧರಿಸಿ ಕೃತ್ಯ ನಡೆಸಲು ಸಂಚು ರೂಪಿಸಿದ್ದಾನೆ ಎನ್ನುವ ಮಾಹಿತಿ ಬಯಲಾಗಿದೆ. ಕುಕ್ಕರ್ ಬಾಂಬ್ ಸ್ಫೋಟಿಸಿ ಹಿಂದೂ ಭಯೋತ್ಪಾದನೆ ಎಂದು ಬಿಂಬಿಸಲು ಶಾರೀಕ್ ಭಾರೀ ಸಂಚು ರೂಪಿಸಿದ್ದನು ಎನ್ನಲಾಗಿದೆ. ಹುಬ್ಬಳ್ಳಿ ಮೂಲದ ಪ್ರೇಮರಾಜ್ ಅವರ ಆಧಾರ್ ಕಾರ್ಡ್ ಬಳಸಿಕೊಂಡ ಈತ ಸಂಪೂರ್ಣವಾಗಿ …

Read More »

ಈಕೆಯ ಮೋಹದ ಜಾಲಕ್ಕೆ ಬಿದ್ದ ವೃದ್ಧ ಕಳೆದುಕೊಂಡ ಹಣ ಎಷ್ಟೆಂದರೆ, ಖಂಡಿತ ಬೆರಗಾಗ್ತೀರಾ!

ಮಲಪ್ಪುರಂ: ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್​​ ಮಾಡುವ ವ್ಲಾಗರ್​ ಮತ್ತು ಆಕೆಯ ಪತಿ, ಹನಿಟ್ರ್ಯಾಪ್​ ಪ್ರಕರಣದಡಿ ಕೇರಳದ ಕಲ್ಪಕಂಚೇರಿ ಪೊಲೀಸರಿಂದ ಬಂಧನವಾಗಿದ್ದಾರೆ. 68 ವರ್ಷದ ವ್ಯಕ್ತಿಯನ್ನು ಹನಿಟ್ರ್ಯಾಪ್​ ಬಲಗೆ ಬೀಳಿಸಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ವ್ಲಾಗರ್​ ರಶೀದಾ (28) ಮತ್ತು ಆಕೆಯ ಪತಿ ನಿಶಾದ್​ ಬಂಧಿತ ಆರೋಪಿಗಳು. ಇಬ್ಬರು ಕೂಡ ತ್ರಿಸ್ಸೂರ್​ನ ಕುನ್ನಮಕುಲಮ್​ ಮೂಲದವರು. ವ್ಲಾಗರ್​ ಆಗಿರುವ ರಶೀದಾ ಕಣ್ಣುಕುಕ್ಕುವಂತಹ ಉಡುಗೆ ತೊಟ್ಟು ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಡುತ್ತಿದ್ದಳು. ಈಕೆಯ ವಿಡಿಯೋ ನೋಡಿಯೇ ಆಕೆಯ ಹನಿಟ್ರ್ಯಾಪ್​ ಬಲೆಗೆ 68 ವರ್ಷದ …

Read More »

ಮುಲ್ಕಿ: ಇಸ್ಪೀಟ್ ಅಡ್ಡೆ ಮೇಲೆ ದಾಳಿ – ಆರು ಜನರ ಬಂಧನ

ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು, ಯಲ್ಲಮ್ಮ ದೇವಸ್ಥಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರು ಮಂದಿ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಸ್ಥಳೀಯ ನಿವಾಸಿಗಳಾದ ಸಂತೋಷ್, ಬಶೀರ್, ಪ್ರದೀಪ್, ಮುಸ್ತಾಫ, ಆದಿವಪ್ಪ ಸೋಮ ಗುಂಡ, ವಿಶ್ವನಾಥ ಎಂದು ಗುರುತಿಸಲಾಗಿದೆ. ಆರೋಪಿಗಳು ಇಸ್ಪೀಟು ಜೂಜಾಟಕ್ಕೆ ಪಣವಾಗಿಟ್ಟ ಒಟ್ಟು 3350 ರೂಪಾಯಿ, ಜೂಜಾಟಕ್ಕೆ ಬಳಸಿದ್ದ ಇಸ್ಪೀಟುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Read More »

ಆಸ್ಪತ್ರೆಯಲ್ಲಿ ಸಾವು- ಬದುಕಿನ ನಡುವೆ ನರಳುತ್ತಿರುವ ಶಂಕಿತ ಉಗ್ರ ‘ಶಾರೀಕ್’ : ಪೊಲೀಸರಲ್ಲಿ ಹೆಚ್ಚಿದ ಟೆನ್ಷನ್‌

ಮಂಗಳೂರು: ಬಾಂಬ್ ಸ್ಫೋಟದ ಆರೋಪಿ ಉಗ್ರ ಶಾರೀಕ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಪೊಲೀಸರು ಆತನ ಚೇತರಿಕೆ ಕಾಯುತ್ತಿದ್ದು, ಯಾವಾಗ ಬಾಯಿ ಬಿಡ್ತಾನೆ ಅಂತ ಕಾದು ಕುಳಿತಿದ್ದಾರೆ. ಇದೀಗ ಮತ್ತೊಂದು ಟೆನ್ಷನ್‌ ಶುರುವಾಗಿದೆ. ಆ ಬಳಿಕವೇ ಉಗ್ರನ ಕೃತ್ಯದ ಆಳ ಅಗಲ ತಿಳಿಯಲಿದೆ. ಒಂದು ವೇಳೆ ಬದುಕುಳಿಯದೇ ಇದ್ರೆ ಎಲ್ಲವೂ ಆತನೊಂದಿಗೇ ಹೋಗುತ್ತೆ ಅನ್ನೋ ಆತಂಕ ಶುರುವಾಗಿದೆ. ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ದ ರೂವಾರಿ ಶಂಕಿತ ಉಗ್ರ ಶಾರೀಕ್ ಶೇ. 45ರಷ್ಟು ಸುಟ್ಟಗಾಯಗಳೊಂದಿಗೆ ಗಂಭೀರ ಸ್ಥಿತಿಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. …

Read More »

ಸುಬ್ರಹ್ಮಣ್ಯ: “ನನ್ನನ್ನು ಯಾರೂ ಅಪಹರಿಸಿಲ್ಲ” ನಾಪತ್ತೆಯಾಗಿದ್ದ ಮಹಿಳೆ ವೀಡಿಯೊ ವೈರಲ್

ಸುಬ್ರಹ್ಮಣ್ಯ: ನನ್ನನ್ನು ಯಾರೂ ಅಪಹರಿಸಿಲ್ಲ, ಪ್ರೀತಿಸಿದವರೊಂದಿಗೆ ನಾನೇ ಸ್ವಇಚ್ಛೆಯಿಂದ ಹೋಗಿದ್ದೇನೆ ಎಂದು ಸುಬ್ರಹ್ಮಣ್ಯದಿಂದ ನಾಪತ್ತೆಯಾಗಿದ್ದ ಗ್ರಾಮ ಪಂಚಾಯಿತಿ ಸದಸ್ಯೆ ಭಾರತಿ ಹೇಳಿರುವ ವೀಡಿಯೊ ಇದೀಗ ವೈರಲ್ ಆಗುತ್ತಿದೆ. ನಾನಾಗಿಯೇ ಬಂದಿದ್ದೇನೆ, ನನ್ನನ್ನು ಯಾರೂ ಅಪಹರಿಸಿಲ್ಲ. ನಾನು ಒಬ್ಬರನ್ನು ಮನೆಯ ಹತ್ತಿರ ಬರಲು ಹೇಳಿದ್ದೆ. ಅವರು ಬಂದು ನನ್ನನ್ನು ಕರೆದುಕೊಂಡು ಹೋದ್ರು. ನಾವು ಕಳೆದ 5 ವರ್ಷಗಳಿಂದ ಲವ್ ಮಾಡ್ತಾ ಇದ್ದೇವೆ. ಈಗಲೂ ಮಾಡ್ತಾ ಇದ್ದೇವೆ. ಮದುವೆಗೆ ಮುಂಚೆನೂ ಲವ್ ಮಾಡ್ತಿದ್ದೆ. ಇದರಿಂದಾಗಿ ಯಾರಿಗೂ ತೊಂದರೆ ಕೊಡಬೇಡಿ. ಯಾರ ಹತ್ತಿರವೂ ಕೇಳುವುದೂ ಬೇಡ. ನಮಗೆ ತೊಂದರೆ …

Read More »

BIGG NEWS : ‘ಪ್ರಧಾನಿ ಮೋದಿ’ಗೆ ಜೀವ ಬೆದರಿಕೆ : ‘ಪೊಲೀಸ’ರಿಗೆ ಸಂದೇಶ ಕಳುಹಿಸಿ, ಕೊಲ್ಲುವುದಾಗಿ ಧಮ್ಕಿ

ಮುಂಬೈ : ಪ್ರಧಾನಿ ನರೇಂದ್ರ ಮೋದಿಗೆ ಜೀವ ಬೆದರಿಕೆ ಹಾಕಲಾಗಿದ್ದು, ಮುಂಬೈ ಟ್ರಾಫಿಕ್ ಪೊಲೀಸರ ವಾಟ್ಸಾಪ್ ಸಂಖ್ಯೆಯ ಆಡಿಯೋ ಸಂದೇಶದಲ್ಲಿ ಪ್ರಧಾನಿ ಮೋದಿ ಅವ್ರಿಗೆ ಜೀವ ಬೆದರಿಕೆ ಹಾಕಲಾಗಿದೆ. ಪ್ರಧಾನಿ ಮೋದಿಯವರನ್ನ ಕೊಲ್ಲುವುದಾಗಿ ಕಿಡಿಗೇಡಿಗಳು ಮುಂಬೈ ಟ್ರಾಫಿಕ್ ಪೊಲೀಸರಿಗೆ ಅಡಿಯೋ ಸಂದೇಶ ಕಳುಹಿಸಿದ್ದಾರೆ. ಇನ್ನು ಈ ಸಂದೇಶ ಕಳುಹಿಸಿದ್ದು ಯಾರು ಎನ್ನುವ ಹುಡುಕಾಟದಲ್ಲಿ ಪೊಲೀಸರಿದ್ದಾರೆ. ಈ ಪ್ರಕರಣ ಮಹಾರಾಷ್ಟ್ರದ ವರ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More »

ಬೈಂದೂರು: ಯಕ್ಷಗಾನ ಕಲಾವಿದನ ಮನೆಯಲ್ಲಿ ಕಳವು

ಬೈಂದೂರು: ಫೇಸ್‌ಬುಕ್‌ನಲ್ಲಿ ಪರಿಚಯವಾದ ಗೆಳೆಯ ಯಕ್ಷಗಾನ ಕಲಾವಿದರೊಬ್ಬರ ಮನೆಗೆ ನುಗ್ಗಿ ಸೊತ್ತುಗಳನ್ನು ಕಳವು ಮಾಡಿರುವ ಘಟನೆ  ಶಿರೂರು ಮೇಲ್ಪೇಟೆ ಎಂಬಲ್ಲಿ ನಡೆದಿದೆ. ಮೇಲ್ಪೇಟೆ ಕೊಠಡಿಯಲ್ಲಿ ವಾಸವಾಗಿರುವ ಯಕ್ಷಗಾನ ಕಲಾವಿದ ಸಂತೋಷ್ ಮೊಗವೀರ(34) ಎಂಬವರಿಗೆ ಗುರುರಾಜ್ ಎಂಬಾತನನ್ನು ಫೇಸ್‌ಬುಕ್‌ನಲ್ಲಿ 2 ವರ್ಷಗಳ ಹಿಂದೆ ಪರಿಚಯವಾಗಿತ್ತು. ಗುರುರಾಜ್ ನ.9ರಂದು  ಸಂತೋಷ್ ಅವರ ಕೊಠಡಿಗೆ ಬಂದು ಉಳಿದುಕೊಂಡಿದ್ದನು. ನ.12ರಂದು ಸಂತೋಷ್ ಹಾಗೂ ಗುರುರಾಜ್ ಹೆರಿಕುದ್ರು ಎಂಬಲ್ಲಿ ಕಾರ್ಯಕ್ರಮಕ್ಕೆ ಹೋಗಿದ್ದರು. ಅಲ್ಲಿ ಗುರುರಾಜ್, ಸಂತೋಷ್‌ಗೆ ಹೇಳದೆಯೇ ಮೇಲ್ಪೆಟೆಗೆ ಬಂದು ಕೊಠಡಿಯ ಬೀಗವನ್ನು ಒಡೆದು ಬ್ಯಾಗ್‌ನಲ್ಲಿಟ್ಟಿದ್ದ ಚಿನ್ನದ ಚೈನ್, ಚಿನ್ನದ ಉಂಗುರ, …

Read More »

BREAKING NEWS : ಚಿತ್ರದುರ್ಗದಲ್ಲಿ ಸಿಎಂ ಬೊಮ್ಮಾಯಿ ‘ಎಸ್ಕಾರ್ಟ್ ವಾಹನ’ ಪಲ್ಟಿ : ಪೊಲೀಸ್ ಸಿಬ್ಬಂದಿಗಳಿಗೆ ಗಾಯ

ಚಿತ್ರದುರ್ಗ : ಸಿಎಂ ಬೊಮ್ಮಾಯಿ ‘ಎಸ್ಕಾರ್ಟ್ ವಾಹನ’ ಪಲ್ಟಿಯಾಗಿ ಹಲವರಿಗೆ ಗಾಯಗಳಾದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ನಡೆದಿದೆ. ಅಫಘಾತದಲ್ಲಿ ಸಿಇಎನ್ ಸಿಪಿಐ ರಮಾಕಾಂತ್ ಸೇರಿ ಹಲವರಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ವಾಣಿವಿಲಾಸ ಡ್ಯಾಂನಿಂದ ಹಿರಿಯೂರುಗೆ ಬರುವ ವೇಳೆ ಸಿಎಂ ಬೊಮ್ಮಾಯಿಗೆ ಎಸ್ಕಾರ್ಟ್ ನೀಡಿದ ಪೊಲೀಸ್ ವಾಹನ ಪಲ್ಟಿಯಾಗಿದೆ. ವಾಣಿವಿಲಾಸ ಡ್ಯಾಮ್ ನಿಂದ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸಿಎಂ ಬೊಮ್ಮಾಯಿ ‘ಎಸ್ಕಾರ್ಟ್ ವಾಹನ’ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ …

Read More »

ಮಂಗಳೂರು ಬ್ಲಾಸ್ಟ್ ಹಿಂದಿರುವ ಭಯೋತ್ಪಾದಕರನ್ನು ಕಾನೂನಾತ್ಮಕವಾಗಿ ಸಂಹಾರ ಮಾಡುತ್ತೇವೆ : ತೇಜಸ್ವಿ ಸೂರ್ಯ

ಉಡುಪಿ: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಬ್ಲಾಸ್ಟ್ ಹಿಂದಿರುವವರನ್ನು ಕಾನೂನಾತ್ಮಕವಾಗಿ ಸಂಹಾರ ಮಾಡುತ್ತೇವೆ ಎಂದು ಸಂಸದ ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ. ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಭಯೋತ್ಪಾದನಾ ಚಟುವಟಿಕೆ ಮಾಡಬೇಕು ಎಂಬುದು ಕೆಲವರ ಉದ್ದೇಶವಿದ್ದಂತಿದೆ. ಆರ್ಥಿಕ ಶಕ್ತಿಕೇಂದ್ರದಲ್ಲಿ ಕೋಮುಗಲಭೆ ಸೃಷ್ಟಿಸುವ ಷಡ್ಯಂತ್ರ ನಡೆದಿದೆ. ಕರ್ನಾಟಕದಲ್ಲಿ ಸರಣಿ ಕೊಲೆಗಳು ನಡೆದಿದ್ದವು, ಈಗ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕೆಡಿಸುವ ಕೆಲಸ ನಡೆಯುತ್ತಿದೆ. ಪಿಎಫ್‍ಐ ಬ್ಯಾನ್ ಮಾಡಿದಂತೆ ಭಯೋತ್ಪಾದಕರ ಬೇರು ಸಮೇತ ಕಿತ್ತು ಹಾಕುತ್ತೇವೆ ಎಂದಿದ್ದಾರೆ ಭಯೋತ್ಪಾದನೆ ಸದೆಬಡಿಯುವ …

Read More »

ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ-ಆರೋಪಿ ಶಾರೀಕ್ ಜೊತೆ ಮದ್ಯ ಖರೀದಿಸಿದ ಮತ್ತೊಬ್ಬ ವ್ಯಕ್ತಿ ಯಾರು..?

ಮಂಗಳೂರು: ಮಂಗಳೂರು ನಗರದ ಗರೋಡಿಯಲ್ಲಿ ಆಟೋ ಕುಕ್ಕರ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್ ಒಬ್ಬನೇ ಮಾತ್ರವಲ್ಲದೆ ಆತನ ಜೊತೆ ಮತ್ತೊಬ್ಬ ವ್ಯಕ್ತಿ ಕೂಡಾ ಮಂಗಳೂರಿಗೆ ಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೈಸೂರು- ಮಂಗಳೂರು ಬಸ್‌ನಿಂದ ಪಡೀಲಿಗೆ ಬಂದಿಳಿದ ಶಂಕಿತ ಉಗ್ರ ಮೊಹಮ್ಮದ್ ಶಾರೀಕ್ ಹಾಗೂ ಮತ್ತೋರ್ವ ವ್ಯಕ್ತಿ ನಾಗುರಿಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈನ್‌ಶಾಪ್‌ ಒಂದರಲ್ಲಿ ಮದ್ಯ ಖರೀದಿಸಿದ್ದಾರೆ. ಬ್ಯಾಗ್ ಹಿಡಿದುಕೊಂಡು ವೈನ್‌ಶಾಪ್‌ನಿಂದ ಹೊರಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೊಹಮ್ಮದ್ ಶಾರೀಕ್ ಜೊತೆಗಿದ್ದ ವ್ಯಕ್ತಿ ಎಲ್ಲಿ ಹೋದ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ …

Read More »

You cannot copy content of this page.