ತಾಜಾ ಸುದ್ದಿ

ಮಂಗಳೂರು : ಸ್ಪೋಟದಲ್ಲಿ ಗಾಯಗೊಂಡಿದ್ದ ರಿಕ್ಷಾ ಚಾಲಕನ ಚಿಕಿತ್ಸೆ ವೆಚ್ಚ ಬಿಜೆಪಿ ಭರಿಸಲಿದೆ – ಸುನಿಲ್ ಕುಮಾರ್

ಮಂಗಳೂರು : ಮಂಗಳೂರಿನ ಗರೋಡಿಯಲ್ಲಿ ನಡೆದ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟದಿಂದ ಗಂಭೀರವಾಗಿ ಗಾಯಗೊಂಡಿದ್ದ ರಿಕ್ಷಾ ಚಾಲಕ ಪುರುಷೋತ್ತಮ ಅವರ ಚಿಕಿತ್ಸೆ ವೆಚ್ಚವನ್ನು ಜನಪ್ರತಿನಿಧಿಗಳು ಸೇರಿ ಬಿಜೆಪಿಯಿಂದ ಭರಿಸಲಿದ್ದೇವೆ. ಅವರಿಗೆ ಸರ್ಕಾರದಿಂದ ಪರಿಹಾರ ನೀಡುವುದಕ್ಕೂ ಕ್ರಮ ಕೈಗೊಳ್ಳಲಾಗುವುದು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದರು. ಕುಕ್ಕರ್ ಬಾಂಬ್ ಸ್ಫೋಟಗೊಂಡ ಸ್ಥಳಕ್ಕೆ ಭೇಟಿ ನೀಡಿದ ಅವರು ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು. ‘ಈ ಘಟನೆಯನ್ನು ಅತ್ಯಂತ ಉಗ್ರವಾಗಿ ಖಂಡಿಸುತ್ತೇನೆ. ಈ ಪ್ರಕರಣವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಲು ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. …

Read More »

ಸೆಕ್ಸ್‌ ವೇಳೆ ಹೃದಯಘಾತದಿಂದ ವ್ಯಕ್ತಿ ಸಾವು, ಹೆಂಡ್ತಿ ಪ್ರಿಯಕರನ ದೇಹ ಸಾಗಿಸಲು ಸಹಾಯ ಮಾಡಿದ ಗಂಡ

ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಮೃತಪಟ್ಟ ವೃದ್ಧನ ಶವವನ್ನು ಎಸೆದ ಆರೋಪದ ಮೇಳೇ ಮಹಿಳೆ ಮತ್ತು ಆಕೆಯ ಕುಟುಂಬ ಸದಸ್ಯರನ್ನು ಬಂಧಿಸಿರುವ ಘಟನೆ ನಡೆದಿದೆ. ಬೆಂಗಳೂರಿನ ಜೆಪಿ ನಗರದಲ್ಲಿ ಈ ಘಟನೆ ನಡೆದಿದೆ. 67 ವರ್ಷದ ವ್ಯಕ್ತಿಯನ್ನು ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ನವೆಂಬರ್ 17 ರಂದು 67 ವರ್ಷದ ಉದ್ಯಮಿಯ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಪತ್ತೆಯಾದ ನಂತರ ತನಿಖೆಯನ್ನು ಪ್ರಾರಂಭಿಸಲಾಗಿತ್ತು, ತನಿಖೆ ವೇಳೇಯಲ್ಲಿ 67 ವರ್ಷದ ಉದ್ಯಮಿಯು ತನ್ನ 35 ವರ್ಷದ ಮನೆಕೆಲಸದಾಕೆಯೊಂದಿಗೆ ಸಂಬಂಧ ಹೊಂದಿದ್ದನು ಎಂದು ಪೊಲೀಸರು …

Read More »

ಮಂಗಳೂರು: ಕುಕ್ಕರ್‌ ಬಾಂಬ್‌ ಸ್ಫೋಟಕ್ಕೂ ಮುನ್ನ ಉಡುಪಿಯಲ್ಲಿ ರಿಂಗಣಿಸಿದ ಸ್ಯಾಟಲೈಟ್‌ ಫೋನ್‌

ಮಂಗಳೂರು: ನಗರದ ನಾಗುರಿಯಲ್ಲಿ ನ. 19ರ ಶನಿವಾರ ಕುಕ್ಕರ್‌ ಬಾಂಬ್‌ ಸ್ಫೋಟಕ್ಕೆ ಮೊದಲು ಕರಾವಳಿಯಲ್ಲಿ ಸ್ಯಾಟಲೈಟ್‌ ಫೋನ್‌ಗಳು ರಿಂಗಣಿಸಿತ್ತು ಅಲ್ಲದೆ ಕರಾವಳಿಯ ದಟ್ಟಾರಣ್ಯ ಪ್ರದೇಶದಲ್ಲಿ ನಿಗೂಢ ಚಟುವಟಿಕೆಗಳು ನಡೆದಿರುವ ಬಗ್ಗೆ ಗುಪ್ತಚರ ಮೂಲಗಳು ದೃಢಪಡಿಸಿವೆ. ಶನಿವಾರ ಸಂಜೆ ಸ್ಫೋಟ ನಡೆದಿದ್ದರೆ ಅದರ ಮುನ್ನಾ ದಿನವಾದ ನ.18ರಂದು ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯ ದಟ್ಟಾರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಸಕ್ರಿಯವಾಗಿದ್ದು ಕರೆಗಳು ಹೋಗಿವೆ.ನ. 19ರಂದು ಬಂಟ್ವಾಳದ ಬಿ.ಸಿ. ರೋಡ್‌ಗೆ ಶಾರೀಕ್‌ ಬಂದಿದ್ದ ಎನ್ನುವ ಹಿನ್ನೆಲೆಯಲ್ಲಿ ಈ ಅಂಶವೀಗ ಮಹತ್ವ ಪಡೆದುಕೊಂಡಿದೆ. ಯಾರೋ ನಿಗೂಢ ವ್ಯಕ್ತಿಗಳು ಸ್ಯಾಟಲೈಟ್‌ ಫೋನ್‌ ಮೂಲಕ …

Read More »

ಶಾಲಾ ಮಕ್ಕಳಿಗೆ ಶೀಘ್ರವೇ `ಡಿಜಿಟಲ್ ಹೆಲ್ತ್ ಕಾರ್ಡ್’ ವಿತರಣೆ

ಬೆಂಗಳೂರು : ರಾಜ್ಯದ ಸರ್ಕಾರಿ ಶಾಲೆಗಳ ಮಕ್ಕಳ ಆರೋಗ್ಯವನ್ನು ತಪಾಸಿಸಿ ವಾರ್ಷಿಕ ಅಂಕಪಟ್ಟಿ ಜೊತೆಗೆ ಡಿಜಿಟಲ್ ಆರೋಗ್ಯ ಕಾರ್ಡ್ ವಿತರಣೆಗೆ ಆರೋಗ್ಯ ಇಲಾಖೆ ಒಪ್ಪಿಗೆ ನೀಡಿದೆ ಎಂದು ಪ್ರೊ.ಎಂ.ಆರ್.ದೊರೆಸ್ವಾಮಿ ಮಾಹಿತಿ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಮಕ್ಕಳ ಶಿಕ್ಷಣದ ಜೊತೆಗೆ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ವಾರ್ಷಿಕ ಅಂಕಪಟ್ಟಿ ಜೊತೆಗೆ ಡಿಜಿಟಲ್ ಆರೋಗ್ಯ ಕಾರ್ಡ್ ವಿತರಣೆಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯದ 48 ಸಾವಿರ ಶಾಲೆಗಳ ಮಕ್ಕಳ ಸಮಗ್ರ ಆರೋಗ್ಯ ತಪಾಸಣೆ ಒಂದು ಇಲಾಖೆಯಿಂದ ಸಾಧ್ಯವಿಲ್ಲ. ಹೀಗಾಗಿ …

Read More »

ಸುರತ್ಕಲ್ ಟೋಲ್ ವಿಲೀನ ; ಡಿ.1ರಿಂದ ಹೆಜಮಾಡಿ ಟೋಲ್ ದುಬಾರಿ

ಮಂಗಳೂರು: ಸುರತ್ಕಲ್ ಟೋಲ್ ಗೇಟ್ ನ್ನು, ಡಿ.1ರಿಂದ ಹೆಜಮಾಡಿ ಟೋಲ್ ಗೇಟ್ ನೊಂದಿಗೆ ವಿಲೀನ ಮಾಡುವಂತೆ ಸರಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ  ಹೆಜಮಾಡಿಯಲ್ಲಿ ಟೋಲ್ ಗೇಟ್ ಶುಲ್ಕ ಪರಿಷ್ಕೃರಿಸಿದೆ.ಹೀಗಾಗಿ ನಿರೀಕ್ಷೆಯಂತೆ ಹೆಜಮಾಡಿಯಲ್ಲಿ ಸುಂಕ ದುಬಾರಿಯಾಗಲಿದೆ. ಹೆಜಮಾಡಿ ಟೋಲ್ ಗೇಟ್‌ನಲ್ಲಿ ಟೋಲ್ ಸಂಗ್ರಹಕ್ಕೆ ಯಾವುದೇ ಅಡ್ಡಿ ಅಥವಾ ತೊಂದರೆ ನೋಡಿಕೊಳ್ಳಬೇಕು ಮತ್ತು ಒಂದು ವೇಳೆ ಹೆಜಮಾಡಿಯಲ್ಲಿ ವಿಲೀನದ ಬಳಿಕ ಏರಿಕೆಯಾದ ಸುಂಕದ ಬಳಿಕ ಯಾವುದೇ ಸಮಸ್ಯೆಯಾಗಿ ಟೋಲ್‌ ಸಂಗ್ರಹದಲ್ಲಿ ವ್ಯತ್ಯಯ ಉಂಟಾದರೆ ಎನ್‌ಎಚ್‌ಎಐ ಜತೆಗಿನ ರಾಜ್ಯ ಸಹಕಾರ ಒಪ್ಪಂದದಂತೆ ನಷ್ಟವನ್ನು …

Read More »

BIG NEWS: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೊಣೆ ಹೊತ್ತ ಉಗ್ರರ ಸಂಘಟನೆ ಪೋಸ್ಟರ್ ವೈರಲ್

ಮಂಗಳೂರು: ನಗರದಲ್ಲಿನ ಆಟೋದಲ್ಲಿ ಕುಕ್ಕಲ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣ ಸಂಬಂಧ ಹೊಣೆ ಹೊತ್ತಿರುವಂತ ಉಗ್ರ ಸಂಘಟನೆಯ ಪೋಸ್ಟರ್ ಈಗ ವೈರಲ್ ಆಗಿದೆ. ಮಂಗಳೂರು ಕುಕ್ಕರ್ ಬ್ಲಾಸ್ಟ್ ಕೇಸ್ ಸಂಬಂಧ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಹೆಸರಿನಲ್ಲಿ ಪೋಸ್ಟರ್ ಒಂದು ವೈರಲ್ ಆಗಿದೆ. ಆ ಪೋಸ್ಟರ್ ನಲ್ಲಿ ನಮ್ಮ ಟಾರ್ಗೆಟ್ ಕದ್ರಿ ದೇವಸ್ಥಾನ ಆಗಿತ್ತು. ಆದ್ರೇ ಗುರಿ ತಲುಪುವ ಮುನ್ನವೇ ಬಾಂಬ್ ಬ್ಲಾಸ್ಟ್ ಆಗಿರುವುದಾಗಿ ಹೇಳಿದೆ. ಇನ್ನೂ ಎಡಿಜಿಪಿ ಅಲೋಕ್ ಕುಮಾರ್ ಅವರೇ ನಿಮಗೆ ಒಳಗೊಳಗೆ ಸಂತೋಷ ಆಗುತ್ತಿರಬಹುದು. …

Read More »

ಉಡುಪಿ: ರೋಸ್ ಸಮಾರಂಭದಲ್ಲಿ ಯುವತಿ ಕುಸಿದು ಬಿದ್ದು ಸಾವು

ಉಡುಪಿ: ಕ್ರಿಶ್ಚಿಯನ್ನರ ಮನೆಯಲ್ಲಿ ನಡೆಯುವ ರೋಸ್ ಸಮಾರಂಭಕ್ಕೆ ಆಗಮಿಸಿದ್ದ ಯುವತಿಯೊಬ್ವರು ಕುಸಿದು ಬಿದ್ದು ಸಾವನ್ನಪ್ಪಿದ್ದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಮೃತ ಯುವತಿಯನ್ನು ಹಾವಂಜೆ ನಿವಾಸಿ ಜೋಸ್ನಾ ಲೂವಿಸ್ (23) ಎಂದು ಗುರುತಿಸಲಾಗಿದೆ. ಜೋಸ್ನಾ ಅವರು ಬುಧವಾರ ರಾತ್ರಿ ಕೊಳಲಗಿರಿ ಹಾವಂಜೆಯ ತನ್ನ ಸಂಬಂಧಿಕರ ಮನೆಯ ರೋಸ್ ಕಾರ್ಯಕ್ರಮಕ್ಕೆ ಬಂದಿದ್ದರು. ರಾತ್ರಿ ಸುಮಾರು 8.30 ಸುಮಾರಿಗೆ ಕುಳಿತಲ್ಲೇ ಜೋಸ್ನಾ ಕುಸಿದು ಬಿದ್ದಿದ್ದಾರೆ.ತಕ್ಷಣ ಯುವತಿಯನ್ನು ಮಣಿಪಾಲ ಆಸ್ಪತ್ರೆಗೆ ಸಂಬಂಧಿಕರು ದಾಖಲಿಸಿದ್ದಾರೆ.ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಿಗ್ಗೆ ಜೋಸ್ನಾ ಸಾವನ್ನಪ್ಪಿದ್ದಾರೆ.

Read More »

ಎಚ್ಚರ..! 24 ಗಂಟೆಗಿಂತ ಹೆಚ್ಚು ಕಾಲ ಇರುವ ಹೊಟ್ಟೆ ನೋವು ಮಾರಣಾಂತಿಕವಾಗಬಹುದು

ಆಗಾಗ ನಾವು ಹೋಟೆಲ್‌, ಬೇಕರಿ ಹಾಗೂ ಬೀದಿ ಬದಿಯ ತಿಂಡಿ ತಿನಿಸುಗಳನ್ನು ತಿನ್ನುತ್ತಲೇ ಇರುತ್ತವೆ. ಇವುಗಳಿಂದ ಹೊಟ್ಟೆ ಕೆಟ್ಟು ಹೋಗುವುದು ಸಾಮಾನ್ಯ. ಹೊಟ್ಟೆಯಲ್ಲಿ ಸೋಂಕು ಉಂಟಾಗುತ್ತದೆ. ಪರಿಣಾಮ ಅತಿಸಾರ, ವಾಂತಿ ಮತ್ತು ಹೊಟ್ಟೆನೋವು ಕಾಡಲಾರಂಭಿಸುತ್ತದೆ. ಈ ರೀತಿಯ ತೊಂದರೆಗಳಿದ್ದಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಬಹಳ ದಿನಗಳಿಂದ ಹೊಟ್ಟೆನೋವು ಇದ್ದರೆ ಅದನ್ನು ಲಘುವಾಗಿ ಪರಿಗಣಿಸಬೇಡಿ.ಯಾಕೆಂದರೆ ಅದೊಂದು ಗಂಭೀರ ಸಮಸ್ಯೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಯಾಕೆಂದ್ರೆ ಮಲಬದ್ಧತೆ, ಫುಡ್‌ ಪಾಯ್ಸನ್‌ ಮತ್ತು ಹೊಟ್ಟೆ ಜ್ವರ ಅನೇಕ ಇತರ ಕಾಯಿಲೆಗಳ ಲಕ್ಷಣವೂ ಆಗಿದೆ. ಕಿಬ್ಬೊಟ್ಟೆಯ ನೋವಿಗೆ ಕೂಡ ಅನೇಕ ಕಾರಣಗಳಿವೆ …

Read More »

BREAKING NEWS: ಶೂಟಿಂಗ್ ವೇಳೆ ನಟ ಉಪೇಂದ್ರ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಬೆಂಗಳೂರು: ಚಿತ್ರೀಕರಣವೊಂದರಲ್ಲಿ ತೊಡಗಿದ್ದಂತ ರಿಯಲ್ ಸ್ಟಾರ್ ಉಪೇಂದ್ರ ( Real Star Upendra ) ಅವರು ಡಸ್ಟ್ ಅಲರ್ಜಿಯಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರೋದಾಗಿ ತಿಳಿದು ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಬಳಿಯಲ್ಲಿ ಇಂದು ನಟ ಉಪೇಂದ್ರ ಶೂಟಿಂಗ್ ನಲ್ಲಿ ತೊಡಗಿದ್ದರು. ಈ ವೇಳೆ ಅಲ್ಲಿ ಉಂಟಾದಂತ ದೂಳಿನಿಂದಾಗಿ ಡಸ್ಟ್ ಅಲರ್ಜಿಗೊಂಡು, ಅಸ್ವಸ್ಥರಾಗಿದ್ದರು ಎಂದು ತಿಳಿದು ಬಂದಿದೆ. ನಟ ಉಪೇಂದ್ರ ಅವರನ್ನು ಕೂಡಲೇ ಸಮೀಪದ ಹರ್ಷ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿರೋದಾಗಿ ತಿಳಿದು ಬಂದಿದೆ. ವೈದ್ಯರಿಂದ ಚಿಕಿತ್ಸೆ ಪಡೆದ ಬಳಿಕ, ನಟ ಉಪೇಂದ್ರ ಮತ್ತೆ …

Read More »

ಕದ್ರಿ ಮಂಜುನಾಥ ಸ್ವಾಮಿ ಸನ್ನಿಧಿಯೇ ಟಾರ್ಗೆಟ್ ಮಾಡಿದ್ನಾ ಶಾರಿಕ್​​..?

ಮಂಗಳೂರು : ಕದ್ರಿ ದೇಗುಲ ಟಾರ್ಗೆಟ್​ ಮಾಡಿದ್ನಾ ಶಾರಿಕ್​​..? ಕದ್ರಿ ಮಂಜುನಾಥ ಸ್ವಾಮಿ ಸನ್ನಿಧಿಯೇ ಟಾರ್ಗೆಟ್ ಆಗಿತ್ತಾ..? ಆ ಮಂಜುನಾಥೇಶ್ವರನೇ ದೊಡ್ಡ ದುರಂತ ತಪ್ಪಿಸಿದ್ನಾ..? ಆಟೋ ರೂಪದಲ್ಲೇ ಕದ್ರಿ ಮಂಜುನಾಥ್​​​ ಬಂದ್ನಾ..? ಅಂದು ಮಂಗಳೂರನ್ನು ಸೇಫ್​ ಮಾಡಿದ್ದೇ ಕದ್ರಿ ಮಂಜುನಾಥನಾ..?ಶಾರಿಕ್​​​​​​​​ ಕದ್ರಿ ಟೆಂಪಲ್​​ ಟಾರ್ಗೆಟ್ ಮಾಡಿದ್ದು, IRC ಟಾರ್ಗೆಟ್​ ಕದ್ರಿಯ ಸೀಕ್ರೆಟ್ ​ರಿವೀಲ್​ ಮಾಡಿದೆ. IRC ಸ್ಫೋಟದ ಹೊಣೆ ಹೊತ್ತು ಪೋಸ್ಟ್ ಹಾಕಿದ್ದು, ಇಸ್ಲಾಮಿಕ್​ ರೆಸಿಸ್ಟೆನ್ಸ್​ ಕೌನ್ಸಿಲ್​​​ ಆಗಿದೆ. ಪೊಲೀಸರು IRC ಬೆನ್ನು ಹತ್ತಿ ತನಿಖೆ ಮಾಡುತ್ತಿದ್ದಾರೆ. ಡಾರ್ಕ್​​ವೆಬ್​ನಲ್ಲಿ ದಾಳಿ ಮಾಡಿದ್ದು ನಾವೇ ಎಂದು …

Read More »

You cannot copy content of this page.