ಕದ್ರಿ ಮಂಜುನಾಥ ಸ್ವಾಮಿ ಸನ್ನಿಧಿಯೇ ಟಾರ್ಗೆಟ್ ಮಾಡಿದ್ನಾ ಶಾರಿಕ್​​..?

ಮಂಗಳೂರು : ಕದ್ರಿ ದೇಗುಲ ಟಾರ್ಗೆಟ್​ ಮಾಡಿದ್ನಾ ಶಾರಿಕ್​​..? ಕದ್ರಿ ಮಂಜುನಾಥ ಸ್ವಾಮಿ ಸನ್ನಿಧಿಯೇ ಟಾರ್ಗೆಟ್ ಆಗಿತ್ತಾ..? ಆ ಮಂಜುನಾಥೇಶ್ವರನೇ ದೊಡ್ಡ ದುರಂತ ತಪ್ಪಿಸಿದ್ನಾ..? ಆಟೋ ರೂಪದಲ್ಲೇ ಕದ್ರಿ ಮಂಜುನಾಥ್​​​ ಬಂದ್ನಾ..? ಅಂದು ಮಂಗಳೂರನ್ನು ಸೇಫ್​ ಮಾಡಿದ್ದೇ ಕದ್ರಿ ಮಂಜುನಾಥನಾ..?ಶಾರಿಕ್​​​​​​​​ ಕದ್ರಿ ಟೆಂಪಲ್​​ ಟಾರ್ಗೆಟ್ ಮಾಡಿದ್ದು, IRC ಟಾರ್ಗೆಟ್​ ಕದ್ರಿಯ ಸೀಕ್ರೆಟ್ ​ರಿವೀಲ್​ ಮಾಡಿದೆ. IRC ಸ್ಫೋಟದ ಹೊಣೆ ಹೊತ್ತು ಪೋಸ್ಟ್ ಹಾಕಿದ್ದು, ಇಸ್ಲಾಮಿಕ್​ ರೆಸಿಸ್ಟೆನ್ಸ್​ ಕೌನ್ಸಿಲ್​​​ ಆಗಿದೆ.

ಪೊಲೀಸರು IRC ಬೆನ್ನು ಹತ್ತಿ ತನಿಖೆ ಮಾಡುತ್ತಿದ್ದಾರೆ. ಡಾರ್ಕ್​​ವೆಬ್​ನಲ್ಲಿ ದಾಳಿ ಮಾಡಿದ್ದು ನಾವೇ ಎಂದು ಮೆಸೇಜ್​​​ ಕೊಟ್ಟಿದ್ದು, IRC ಅರೇಬಿಕ್​ ಭಾಷೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಕದ್ರಿಯ ದೇವಸ್ಥಾನ ಟಾರ್ಗೆಟ್​ ಮಾಡಿದ್ದಾಗಿ ಸಂದೇಶ ಹೊರಹಾಕಿದ್ದಾರೆ. ಕದ್ರಿ ದೇಗುಲ ಟಾರ್ಗೆಟ್ ಮಾಡಿದ್ವಿ, ಅದಕ್ಕೂ ಮುನ್ನ ಸ್ಫೋಟವಾಗಿದೆ. ಮಜ್ಲಿಸ್​ ಅಲ್ವುಕ್​​​ವಾಮತ್​ ಅಲ್​ ಇಸ್ಲಾಮಿಯಾ ಎಂದು ಮೆಸೇಜ್​​ ಕೊಟ್ಟಿದ್ದು, ಗಾಯಾಳು ಶಾರಿಕ್​​ನ ಎರಡು ಫೋಟೋ ಹಾಕಿ ಡಾರ್ಕ್​​ವೆಬ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.ADGP ಅಲೋಕ್​​ಕುಮಾರ್​​ಗೂ ಬೆದರಿಕೆ ಹಾಕಿರುವ ಮಾಹಿತಿ ದೊರಕಿದ್ದು, ನಿಮ್ಮ ಸಂಭ್ರಮ ಕ್ಷಣಿಕ, ಇದಕ್ಕೆ ತಕ್ಕ ಫಲ ಅನುಭವಿಸುತ್ತೀರಿ, ಹೀಗೆಂದು ಡಾರ್ಕ್​​​​ವೆಬ್​ ಸಂದೇಶದಲ್ಲಿ ಬೆದರಿಕೆ ಹಾಕಿರೋ ಮಾಹಿತಿ ಹೊರಬಂದಿದೆ. ಪೊಲೀಸರು ಈ ಸಂಘಟನೆಯ ಬಗ್ಗೆ ಕೇಂದ್ರ ಸಂಸ್ಥೆಗಳಿಂದ ಮಾಹಿತಿ ಪಡೆಯುತ್ತಿದ್ದಾರೆ. ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳೊಂದಿಗೆ ಮಾಹಿತಿ ಸಂಗ್ರಹವಾಗಿದೆ.

Check Also

ಕುಂದಾಪುರ : ಸಮುದ್ರ ಪಾಲಾಗಿದ್ದ ಯುವಕನ ಮೃತದೇಹ ವಾರದ ಬಳಿಕ ಪತ್ತೆ

ಕುಂದಾಪುರ : ಕಳೆದ ಬುಧವಾರ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೀಜಾಡಿ ಸಮುದ್ರ ತೀರದಲ್ಲಿ ಮುಳುಗಿ ನಾಪತ್ತೆಯಾಗಿದ್ದ ತುಮಕೂರು ಮೂಲದ …

Leave a Reply

Your email address will not be published. Required fields are marked *

You cannot copy content of this page.