ತಾಜಾ ಸುದ್ದಿ

ಸಿನೆಮಾ ರೀತಿಯಲ್ಲಿ ಹಾಡಹಗಲೇ ಮನೆಗೆ ನುಗ್ಗಿ ವೈದ್ಯೆಯ ಅಪಹರಣ..!

ಹೈದರಾಬಾದ್: ಸಿನೆಮಾದಲ್ಲಿ ಬರುವ ರೀತಿಯಲ್ಲಿ 50ಕ್ಕೂ ಅಧಿಕ ಮಂದಿ ಗೂಂಡಾಗಳು ಮನೆಯೊಂದಕ್ಕೆ ನುಗ್ಗಿ ಅಲ್ಲಿದ್ದ ವೈದ್ಯೆಯನ್ನು ಕಿಡ್ನ್ಯಾಪ್ ಮಾಡಿದ ಘಟನೆ ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಣೆಯಾದ ವೈದ್ಯೆಯನ್ನು ವೈಶಾಲಿ (24) ಎಂದು ಗುರುತಿಸಲಾಗಿದೆ. ವೈದ್ಯೆ ವೈಶಾಲಿ ಮನೆಗೆ ನುಗ್ಗಿದ್ದ ಗೂಂಡಾಗಳು ಮನೆಯನ್ನು ಧ್ವಂಸಗೊಳಿಸಿದ್ದಾರೆ. ಅದಾದ ಬಳಿಕ ಮನೆಯಲ್ಲಿದ್ದ ಆಕೆಯ ತಂದೆ ಹಾಗೂ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ. ಅದಾದ ನಂತರ ಬಲವಂತವಾಗಿ ವೈಶಾಲಿಯನ್ನು ಮನೆಯಿಂದ ಕರೆದುಕೊಂಡು ಹೋಗಿದ್ದಾರೆ. ವೈಶಾಲಿಯ ಒಪ್ಪಿಗೆಯಿಲ್ಲದೇ …

Read More »

ಭಟ್ಕಳ: ಕಾರು-ದ್ವಿಚಕ್ರ ವಾಹನ ಮಧ್ಯೆ ಡಿಕ್ಕಿ-ಸವಾರ ಸ್ಥಳದಲ್ಲೇ ದುರ್ಮರಣ

ಭಟ್ಕಳ: ತಾಲೂಕಿನ ಮರವರ್ಗ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ ಹಾಗೂ ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮವಾಗಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ದುರ್ಮರಣಕ್ಕೆ ಈಡಾಗಿದ್ದಾನೆ. ಮೃತ ಸವಾರನನ್ನು ಮೂಸಾ ನಗರದ ಇಮಾನ್ ಸಲೀಂ (34) ಎಂದು ಗುರುತಿಸಲಾಗಿದೆ. ಈತ ಕುಂದಾಪುರದಿಂದ ಭಟ್ಕಳದ ಕಡೆಗೆ ಪ್ರಯಾಣಿಸುತ್ತಿದ್ದರೆ, ಕಾರು ಭಟ್ಕಳದಿಂದ ಕುಂದಾಪುರದ ಕಡೆಗೆ ಹೊರಟಿತ್ತು. ಈ ವೇಳೆ ಕಾರ್‌ ಮತ್ತು ದ್ವಿಚಕ್ರ ವಾಹನ ಮಧ್ಯೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಭಟ್ಕಳ ಶಹರ ಪೊಲೀಸ್‌ …

Read More »

ಬೈಂದೂರು ಹುಡುಗರ ಮೇಲೆ ಹಲ್ಲೆ ಮಾಡಿದ ರೌಡಿಗಳು ಅರೆಸ್ಟ್..!

ಬೆಂಗಳೂರು  : ಬೆಂಗಳೂರು ಕುಂದಲಹಳ್ಳಿ ಗೇಟ್ ಬಳಿ ಬೇಕರಿಯೊಂದಕ್ಕೆ ನುಗ್ಗಿ ಬೈಂದೂರು ಮೂಲದ ಹುಡುಗರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪುಡಿರೌಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಡೆಲಿವರಿ ಬಾಯ್ ಕಾರ್ತಿಕ್(20), ಅಲ್ಯೂಮಿನಿಯಂ ವರ್ಕ್ ಮಾಡುವ ಸಲ್ಮಾನ್(20) ಖಾಸಗಿ ಹೊಟೇಲ್ ಮ್ಯಾನೇಜರ್ ಕಾರ್ತಿಕ್(23) ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ವೈಟ್‌ಫೀಲ್ಡ್ ಡಿಸಿಪಿ ಗಿರೀಶ್ ತಿಳಿಸಿದ್ದಾರೆ. ಉಡುಪಿಯ ಬೈಂದೂರು ಮೂಲದ ನವೀನ್ ಕುಮಾರ್ ಹಾಗೂ ಪ್ರಜ್ವಲ್ ಶೆಟ್ಟಿ, ನಿತೀನ್ ಶೆಟ್ಟಿ ಎಂಬುವರ ಮೇಲೆ ಮಾರಣಾಂತಿಕ …

Read More »

ಬೆಂಗಳೂರು: ಗಂಡ ತನ್ನ ಹೆಂಡ್ತಿಯನ್ನೇ ಸ್ನೇಹಿತರೊಂದಿಗೆ ಮಲಗಿಸಿ ವಿಡಿಯೋ ಚಿತ್ರೀಕರಣ..!

ಬೆಂಗಳೂರು: ನಗರದಲ್ಲಿ ವಿಕೃತಿ ಘಟನೆ ನಡೆದಿದೆ. ಗಂಡ ತನ್ನ ಹೆಂಡತಿಯನ್ನೇ ಸ್ನೇಹಿತರೊಂದಿಗೆ ಬಲವಂತವಾಗಿ ಮಲಗಿಸಿ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಗಂಡನ ಹಲ್ಲೆಗೆ ಬೇಸತ್ತು ಆತನ ಗೆಳೆಯರೊಂದಿಗೆ ದೈಹಿಕ ಸಂಪರ್ಕಕ್ಕೆ ಒಪ್ಪಿಕೊಂಡಿದ್ದಾಳೆ. ನಂತರ ಪತ್ನಿ ಸ್ನೇಹಿತರೊಂದಿಗೆ ಬೆಡ್​ನಲ್ಲಿದ್ದಾಗ ವಿಡಿಯೋ ಚಿತ್ರೀಕರಣ ಮಾಡಿದ್ದು, ಆಕೆಯ ಸಹೋದರಿಯನ್ನು ತನ್ನ ಜೊತೆ ಮಲಗುವಂತೆ ಕಿರುಕುಳ ನೀಡುತ್ತಿದ್ದನು. ಪತಿಯ ಕೆಟ್ಟ ನಡೆಯಿಂದ ಬೇಸತ್ತ ಪತ್ನಿ, ಸಂಪಿಗೆಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ದೂರಿನನ್ವಯ ಲೈಂಗಿಕ ಕಿರುಕುಳ , ಎನ್​ಡಿಪಿಎಸ್ ಹಾಗೂ ಐಟಿ ಆಕ್ಟ್ ಅಡಿ ಪೊಲೀಸರು …

Read More »

‘ಕಾಂತಾರ 2’ಗೆ ದೈವದ ಅನುಮತಿ ಕೇಳಿದ ರಿಷಬ್‌ ಶೆಟ್ಟಿ : ಎಚ್ಚರಿಕೆ ಕೊಟ್ಟ ದೈವ!

ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಮ್ಸ್ ‘ಕಾಂತಾರ’ ಸಿನಿಮಾದ ಯಶಸ್ಸಿನಿಂದ ಥ್ರಿಲ್ ಆಗಿದ್ದಾರೆ. ಕೇವಲ ಸುಮಾರು ಹದಿನೈದು ಕೋಟಿಯಲ್ಲಿ ನಿರ್ಮಿಸಿದ ಸಿನಿಮಾ 400 ಕೋಟಿಗೂ ಹೆಚ್ಚು ಹಣವನ್ನು ಚಿತ್ರಮಂದಿರಗಳಿಂದಲೇ ಕಲೆಕ್ಷನ್ ಮಾಡಿದೆ! ಕರ್ನಾಟಕ ಮಾತ್ರವೇ ಅಲ್ಲದೆ ಹೊರ ರಾಜ್ಯಗಳಲ್ಲಿಯೂ ‘ಕಾಂತಾರ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ನಿರೀಕ್ಷೆಗಿಂತಲೂ ಬಹುದೊಡ್ಡಮಟ್ಟದ ಗೆಲುವನ್ನು ಸಿನಿಮಾ ಕಂಡಿದೆ. ಇದಕ್ಕೆ ಚಿತ್ರತಂಡದ ಶ್ರಮದ ಜೊತೆಗೆ ದೈವದ ಆಶೀರ್ವಾದವೂ ಕಾರಣ ಎನ್ನಲಾಗುತ್ತಿದೆ. ಇದೀಗ ‘ಕಾಂತಾರ 2’ ಸಿನಿಮಾದ ಮಾತುಕತೆ ಶುರುವಾಗಿದ್ದು, ‘ಕಾಂತಾರ 2’ ಸಿನಿಮಾ ಮಾಡಬಹುದೇ ಎಂದು ಸ್ವತಃ ರಿಷಬ್ …

Read More »

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ನಾಲ್ವರ ಗುರುತು ಪತ್ತೆ..!

ಕಾಸರಗೋಡು: ಮಂಗಳೂರಿನಲ್ಲಿ ಕುಕ್ಕರ್‌ ಪ್ರಕರಣದ ಆರೋಪಿ ಶಾರೀಕ್‌ ಕೊಚ್ಚಿಯಲ್ಲಿ ವಿದೇಶಿಗ ಸಹಿತ ನಾಲ್ವರ ಸಂಪರ್ಕದಲ್ಲಿದ್ದನೆಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌.ಐ.ಎ.) ಅವರ ಗುರುತು ಪತ್ತೆಹಚ್ಚಿದ್ದು ಯಾವುದೇ ಮಾಹಿತಿ ನೀಡಲು ನಿರಾಕರಿಸಿದೆ. ಸ್ಫೋಟದ ಮುನ್ನ ಕೊಚ್ಚಿಗೆ ಹೋಗಿದ್ದು, ಅಲ್ಲಿ ವ್ಯವಹಾರ ನಡೆಸಿದವರ ಪೈಕಿ ನಾಲ್ವರ ಮಾಹಿತಿ ಲಭಿಸಿದೆ. ಇವರಲ್ಲಿ ಓರ್ವ ವಿದೇಶಿಗ, ಇಬ್ಬರು ಕೇರಳೀಯರು ಮತ್ತು ತಮಿಳುನಾಡು ನಿವಾಸಿಯಾಗಿದ್ದಾನೆ. ಇವರ ಮಾಹಿತಿಯನ್ನು ಬಹಿರಂಗ ಮಾಡಿಲ್ಲ. ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಹಸ್ತಾಂತರಿಸ ಲಾಗಿದ್ದರೂ ಕರ್ನಾಟಕ ವಿಶೇಷ ತನಿಖಾ ತಂಡ ಈಗಲೂ ತನಿಖೆಯನ್ನು ಮುಂದುವರಿಸುತ್ತಿದೆ. ಕೇರಳದಲ್ಲಿ ನಡೆಸುತ್ತಿರುವ …

Read More »

BREAKING NEWS: ಕಾರ್ಕಳದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ; ಬಸ್, ಕಾರು ಡಿಕ್ಕಿ- ಮೂವರು ಮೃತ್ಯು

ಕಾರ್ಕಳ: ಖಾಸಗಿ ಬಸ್ಸೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟ ದಾರುಣ ಘಟನೆ ಬಜೆಗೋಲಿ ಸಮೀಪದ ನೆಲ್ಲಿಕಾರು ಎಂಬಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ ಮೃತರನ್ನು ಆಂಧ್ರಪ್ರದೇಶ ಮೂಲದ ನಾಗರಾಜ್ (40), ಅವರ ಪತ್ನಿ ಪ್ರತ್ಯುಷಾ (32) ಹಾಗೂ ಎರಡು ವರ್ಷದ ಮಗು ಎಂದು ಗುರುತಿಸಲಾಗಿದೆ ಇವರು ತೀರ್ಥಕ್ಷೇತ್ರವಾದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿದ್ದು ಪರಿಶೀಲ ನಡೆಸಿದ್ದಾರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

Read More »

ಈ ದೇಶದ 18-25 ವರ್ಷದ ಯುವಜನರಿಗೆ ‘ಉಚಿತ ಕಾಂಡೋಮ್‌’ ಲಭ್ಯ

ಪ್ಯಾರಿಸ್: ಲೈಂಗಿಕವಾಗಿ ಹರಡುವ ರೋಗಗಳನ್ನು ತಡೆಗಟ್ಟಲು ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದು, ಮುಂದಿನ ವರ್ಷದಿಂದ ಔಷಧಾಲಯಗಳಲ್ಲಿ ʻ18-25 ವರ್ಷದʼ ಒಳಗಿನ ಯುವಜನರಿಗೆ ʻಉಚಿತ ಕಾಂಡೋಮ್‌ʼ ನೀಡಲು ಮುಂದಾಗಿದ್ದಾರೆ ಯುವ ಜನರ ಆರೋಗ್ಯದ ಕುರಿತಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಔಷಧಾಲಯಗಳಲ್ಲಿ ಜನವರಿ 1 ರಿಂದ 18 ರಿಂದ 25 ವರ್ಷ ವಯಸ್ಸಿನವರಿಗೆ ಕಾಂಡೋಮ್‌ಗಳನ್ನು ಉಚಿತವಾಗಿ ನೀಡಲಾಗುವುದು ಪ್ರಕಟನೆಯನ್ನು ಹೊರಡಿಸಿದ್ದಾರೆ. ಫ್ರಾನ್ಸ್‌ನಲ್ಲಿ 2020 ಮತ್ತು 2021 ರಲ್ಲಿ ಎಸ್‌ಟಿಡಿ ಹರಡುವ ಪ್ರಮಾಣ ಶೇ.30 ರಷ್ಟು ಹೆಚ್ಚಾಗಿದೆ ಎಂದು ಆರೋಗ್ಯ …

Read More »

ಬೈಂದೂರಿನ ಹುಡುಗರ ಮೇಲೆ ಬೆಂಗಳೂರಿ ಪುಡಿ ರೌಡಿಗಳ ಅಟ್ಟಹಾಸ..!

ಬೆಂಗಳೂರು : ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ ಹೊಟೇಲ್ ಬೇಕರಿಯಲ್ಲಿ ಕೆಲಸ ನಿರ್ವಹಿಸುತ್ತಿರುವವರ ಮೇಲೆ ಬೆಂಗಳೂರಿನಲ್ಲಿ ಪುಡಿ ರೌಡಿಗಳ ಕಾಟ ಹೆಚ್ಚಾಗುತ್ತಿದ್ದು, ಎಚ್​​ಎಲ್ ಕುಂದನಹಳ್ಳಿ ಗೇಟ್​ ಬಳಿ, ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಉಡುಪಿ ಜಿಲ್ಲೆಯ ಯುವಕರ ಮೇಲೆ ರೌಡಿಗಳ ಗುಂಪೊಂದು ಹಲ್ಲೆ ಮಾಡಿರುವ ಘಟನೆ ನಡೆದಿದೆ. ಹಲ್ಲೆಗೊಳಗಾದ ಯುವಕರನ್ನು ಬೈಂದೂರು ಮೂಲದ ನವೀನ್ ಹಾಗೂ ಪ್ರಜ್ವಲ್ ಎಂದು ಗುರುತಿಸಲಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ರಹ್ಮಲಿಂಗೇಶ್ವರ ಬೇಕರಿ ಬೈಂದೂರಿನ ಯುವಕರು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ನಾಲ್ಕೈದು ಜನರಿಂದ ಯುವಕರ ಗುಂಪೊಂದು ಬಂದು ಸಿಗರೇಟ್ ಖರೀದಿಸಿ, …

Read More »

ಒಂದೇ ರಾತ್ರಿಯಲ್ಲಿ ಎರಡು ಬಾರಿ ಸೆಕ್ಸ್ ಮಾಡಲು ನಿರಾಕರಿಸಿದ್ದಕ್ಕೆ ಪತ್ನಿಯನ್ನೇ ಕೊಲೆಗೈದ..!

ಲಕ್ನೋ: ವ್ಯಕ್ತಿಯೊಬ್ಬ ಒಂದೇ ರಾತ್ರಿಯಲ್ಲಿ ಎರಡು ಬಾರಿ ಸಂಭೋಗಿಸಲು ನಿರಾಕರಿಸಿದ್ದಕ್ಕೆ ತನ್ನ ಪತ್ನಿಯನ್ನೇ ಕೊಲೆಗೈದಿರುವ ಘಟನೆ ಉತ್ತರಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ. ಒಂದೇ ರಾತ್ರಿಯಲ್ಲಿ ಎರಡು ಬಾರಿ ಸಂಭೋಗಿಸುವ ತನ್ನ ಬೇಡಿಕೆಯನ್ನು ನಿರಾಕರಿಸಿದ್ದರಿಂದ ಕೋಪಗೊಂಡ ಪತಿ, ತನ್ನ 30 ವರ್ಷದ ಪತ್ನಿಯ ಕತ್ತಿಗೆ ಹಗ್ಗ ಬಿಗಿದು, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆ ಆರೋಪಿಯನ್ನು ಮೊಹಮ್ಮದ್ ಅನ್ವರ್ (34) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ನಂತರ ಆಕೆಯ ಶವವನ್ನು ಮನೆಯಿಂದ 50 ಕಿಮೀ ದೂರದಲ್ಲಿ ಎಸೆದು ನಂತರ ಪರಾರಿಯಾಗಿದ್ದಾನೆ. ಮಂಗಳವಾರ ಪೊಲೀಸರು ಶವವನ್ನು ಪತ್ತೆಹಚ್ಚಿದ್ದಾರೆ. …

Read More »

You cannot copy content of this page.