ತಾಜಾ ಸುದ್ದಿ

ಖಾಸಗಿ ಕಾಲೇಜಿನ ಹಾಸ್ಟೆಲ್‍ನಲ್ಲಿ ಕತ್ತು ಕೊಯ್ದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ

ಬೆಂಗಳೂರು: ಖಾಸಗಿ ಕಾಲೇಜ್ ಒಂದರ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಕತ್ತು ಕೊಯ್ದುಕೊಂಡ ಸ್ಥಿತಿಯಲ್ಲಿ ಹಾಸ್ಟೆಲ್‍ನ ಶೌಚಾಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಬನ್ನೇರುಘಟ್ಟ ಸಮೀಪದ ಖಾಸಗಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ನಿತಿನ್ (19) ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ತೆಯಾದ ಕೇರಳ ಮೂಲದ ವಿದ್ಯಾರ್ಥಿ. ನಿತಿನ್ ಇದೇ ತಿಂಗಳು ಡಿ.1ಕ್ಕೆ ಕಾಲೇಜು ಸೇರಿದ್ದ. ಪ್ರಥಮ ವರ್ಷದ ಇಂಜಿನಿಯರಿಂಗ್ ಪದವಿಗೆ ಅಡ್ಮಿಷನ್ ಮಾಡಿಸಿದ್ದ ನಿತಿನ್ ಚಾಕುವಿನಿಂದ ತಾನೇ ಚುಚ್ಚಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕಾಲೇಜ್ ಕ್ಯಾಂಪಸ್ ಒಳಗಿನ ಹಾಸ್ಟೆಲ್‍ನಲ್ಲಿ ವಾಸವಿದ್ದ ನಿತಿನ್ ನಿನ್ನೆ ಮಧ್ಯಾಹ್ನ ಹಾಸ್ಟೆಲ್ ಕೊಠಡಿಯ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ. …

Read More »

ಮತ್ತೊಂದು ಬೆತ್ತಲೆ ಫೋಟೋ ಶೂಟ್ ವೈರಲ್…!

ಬಾಲಿವುಡ್ ನಟ ರಣವೀರ್ ಸಿಂಗ್ ಬಟ್ಟೆ ಇಲ್ಲದೆ ನ್ಯೂಡ್‌ ಫೋಟೋಶೂಟ್ ಮಾಡಿ ಸಾಕಷ್ಟು ಟ್ರೋಲ್ ಆಗಿರುವ ಬೆನ್ನಲ್ಲೇ ಇನ್ನೊಬ್ಬರು ಅದೇ ಧೈರ್ಯ ಮಾಡಿದ್ದಾರೆ. ಈ ಬಾರಿ ಪಾಕಿಸ್ತಾನಿ ಮಾಡೆಲ್ ಒಬ್ಬರು ನ್ಯೂಡ್ ಫೋಟೋಶೂಟ್ ಮಾಡುವ ಮೂಲಕ ಸಂಚಲನ ಮೂಡಿಸಿದ್ದು, ಪಾಕ್ ನಲ್ಲಿ ಭಾರೀ ಟೀಕೆಗೆ ಕಾರಣವಾಗಿದೆ. ಪಾಕಿಸ್ತಾನಿ ಮಾಡೆಲ್ ಹೆಸರು ಅಜ್ಮಲ್ ಖಾನ್. ರಣವೀರ್ ಸಿಂಗ್ ಅವರಂತೆ ಬಟ್ಟೆ ಇಲ್ಲದೆ ಫೋಟೋಶೂಟ್ ಮಾಡಿ ಪಾಕಿಸ್ತಾನದಲ್ಲಿ ಸಂಚಲನ ಮೂಡಿಸಿದ್ದಾರೆ. ಪಾಕಿಸ್ತಾನಿ ಮಾಡೆಲ್ ಅಜ್ಮಲ್ ಖಾನ್ ಅವರ ಈ ಬೋಲ್ಡ್‌ ಫೋಟೋಗಳನ್ನು ಲಕ್ಸ್ ಸ್ಟೈಲ್ ಪ್ರಶಸ್ತಿ ವಿಜೇತ …

Read More »

ಡಿ.17: ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ

ಬಂಟ್ವಾಳ : ತಾಲೂಕು ಎಲಿಯನಡುಗೋಡು ಮತ್ತು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಗಡಿ ಭಾಗದಲ್ಲಿರುವ ಹೊಕ್ಕಾಡಿಗೋಳಿ ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳವು ಹೊಕ್ಕಾಡಿಗೋಳಿಯಲ್ಲಿ ಡಿ.17ರಂದು ನಡೆಯಲಿದೆ. ಅಂದು ಬೆಳಗ್ಗೆ ಶ್ರೀ ಕ್ಷೇತ್ರ ಪೂಂಜದ ಆಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯ ಅವರು ಕಂಬಳ ಉದ್ಘಾಟಿಸಲಿರುವರು. ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಪ್ರಕಾಶ್ ಆಚಾರ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು ಹಾಗೂ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿರುವರು. ಮಧ್ಯಾಹ್ನ 11ಗಂಟೆಗೆ ಪ್ರವಾಸೋದ್ಯಮ ಮತ್ತು ಪರಿಸರ ಸಚಿವ ಆನಂದ ಸಿಂಗ್ ಭಾಗವಹಿಸಲಿರುವರು. …

Read More »

ಸುಳ್ಯ: ಸರಣಿ ಅಪಘಾತ – ಬೈಕ್ ಸವಾರನಿಗೆ ಗಂಭೀರ

ಸುಳ್ಯ ಮಡಿಕೇರಿ ರಾಜ್ಯ ಹೆದ್ದಾರಿಯ ಪಾಲಡ್ಕ ಎಂಬಲ್ಲಿ ಲಾರಿ, ಕಾರು , ಬೈಕ್ ನಡುವೆ ಸರಣಿ ಅಪಘಾತವಾಗಿ ಬೈಕ್ ಸವಾರರಿಬ್ಬರು, ಹಾಗೂ ಕಾರು ಚಾಲಕ ಗಾಯಗೊಂಡು ಆಸ್ಪತ್ರೆ ಸೇರಿರುವ ಗುರುವಾರ ವರದಿಯಾಗಿದೆ. ಈ ಸಂದರ್ಭದಲ್ಲಿ ಕಾರಿನ ಹಿಂದಿನಂದ ಬರುತ್ತಿದ್ದ ಬೈಕ್ ಕಾರಿಗೆ ಡಿಕ್ಕಿಯಾಗಿದೆ, ಘಟನೆಯಲ್ಲಿ ಬೈಕ್ ಸವಾರರು ರಸ್ತೆಗೆ ಎಸೆಯಲ್ಪಟ್ಟು, ಪೆರಾಜೆ ಗ್ರಾಮದ ದೊಡ್ಡಡ್ಕ ದೀನರಾಜ್ ಹಾಗೂ ಕಂಜಿಪಿಲಿ ಪುರುಷೋತ್ತಮ ತೀವ್ರ ಗಾಯಗೊಂಡರೆ, ಕಾರು ..ಲಾರಿಗೆ ಡಿಕ್ಕಿಯಾದ ತೀವ್ರತೆಗೆ ಕಾರು ಚಾಲಕ ಸೊಂಟಕ್ಕೆ ಗಾಯಗೊಂಡು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು …

Read More »

ಮಣಿಪಾಲ: ನಗರಸಭೆ ಮಾಜಿ ಅಧ್ಯಕ್ಷೆ ಪತಿಗೆ ರಾಡ್‌ನಿಂದ ಹಲ್ಲೆ- ಸ್ಥಿತಿ ಚಿಂತಾಜನಕ

ಮಣಿಪಾಲ: ಉಡುಪಿ ನಗರ ಸಭೆಯ ಮಾಜಿ ಅಧ್ಯಕ್ಷೆ ಶಾಂತಾ ನಾಯ್ಕ್ ಅವರ ಮನೆಗೆ ನುಗ್ಗಿದ ಯುವಕನೋರ್ವ ಅವರ ಪತಿಗೆ ರಾಡ್‌ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಡೆದಿದೆ. ಮಣಿಪಾಲ ಠಾಣೆ ವ್ಯಾಪ್ತಿಯ ಅಲೆವೂರು ಸಮೀಪದ ಮಂಚಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಕೃಷ್ಣ ನಾಯ್ಕ್ (54) ಹಲ್ಲೆಗೆ ಒಳಗಾದವರು. ಅರ್ಜುನ್ ಎಂಬ ಯುವಕ ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೃಷ್ಣ ನಾಯ್ಕ್ ಅವರ ಮನೆಗೆ ಬಂದಿದ್ದ. ಈ ವೇಳೆ ಗೇಟ್ ಮುಂದೆಯೇ ಕೃಷ್ಣ ನಾಯ್ಕ್ ಅವರ ಮೇಲೆ ರಾಡ್‌ನಿಂದ ಹಲ್ಲೆ …

Read More »

ಭಟ್ಕಳ: ಬೈಕ್ ಲಾರಿ ನಡುವೆ ಭೀಕರ ಅಪಘಾತ; ಇಬ್ಬರು ಯುವಕರ ಸ್ಥಳದಲ್ಲೇ ದುರಂತ ಸಾವು..!

ಭಟ್ಕಳ: ಉತ್ತರ ಕನ್ನಡದ ಭಟ್ಕಳದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಇಬ್ಬರು ಯುವಕರು ದಾರುಣ ಅಂತ್ಯ ಕಂಡಿದ್ದಾರೆ. ಭಟ್ಕಳ NH66ರ ಮೂಡ್‍ ಭಟ್ಕಳ ಬೈಪಾಸ್ ಬಳಿ ಬೈಕ್ ಮತ್ತು ಲಾರಿ ನಡುವೆ ಢಿಕ್ಕಿ ಸಂಭವಿಸಿದ್ದು ಬೈಕ್ ನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುರುವಾರ ತಡರಾತ್ರಿ ಈ ಭೀಕರ ರಸ್ತೆ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಸಾವಿಗೀಡಾದವರನ್ನು ತಲಾಂದಸಬ್ಬತ್ತಿ ನಿವಾಸಿ ಶೇಖರ್ ಸುಬ್ರಮಣ್ಯ ನಾಯ್ಕ (25) ಹಾಗೂ ಲೋಕೇಶ್ ಮಂಜುನಾಥ್ ನಾಯ್ಕ (30)ಎಂದು ಗುರುತಿಸಲಾಗಿದೆ. ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಈ ಯುವಕರಿಬ್ಬರು ನಗರದ ಹೋಟೆಲ್‍ ಒಂದರಲ್ಲಿ …

Read More »

ಮೂಡಬಿದಿರೆ: ಪ್ರಯಾಣಿಕನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಬಸ್ ಕಂಡೆಕ್ಟರ್ ಮತ್ತು ತಂಡ

ಮೂಡಬಿದಿರೆ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮುಲ್ಲರಪಟ್ನ ನಿವಾಸಿ 45 ವರ್ಷದ ಇಸ್ಹಾಕ್ ಎಂಬವರಿಗೆ ಬಸ್ ಕಂಡೆಕ್ಟರ್ ಸೇರಿದಂತೆ ಸಂಘ ಪರಿವಾರದ ಕಾರ್ಯಕರ್ತರೆನ್ನಲಾದ ತಂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ರಾಯಿ ಎಂಬಲ್ಲಿ ನಡೆದಿದೆ. ಈಗ ಬಿಸಿರೋಡಿನಲ್ಲಿ ವಾಸವಿರುವ ಇಸ್ಹಾಕ್ ಮೇಸ್ತ್ರಿ ಕೆಲಸ ಮಾಡುತ್ತಿದ್ದು, ನಿನ್ನೆ ಬೆಳಗ್ಗೆ ಬಿ.ಸಿ.ರೋಡ್ ನಿಂದ ಮೂಡುಬಿದಿರೆಗೆ ತೆರಳಲೆಂದು ಖಾಸಗಿ ಬಸ್ ಹತ್ತಿದ್ದಾರೆ. ಬಸ್ಸಿನಲ್ಲಿ ಪ್ರಯಾಣಿಕರ ದಟ್ಟಣೆಯಿದ್ದುರಿಂದ ಇಸ್ಹಾಕ್ ಕುಳಿತಿದ್ದ ಸೀಟಿನ ಬಳಿ ನಿಂತಿದ್ದ ಮಹಿಳೆಯೊಬ್ಬರು ಬ್ಯಾಗ್ ಹಿಡಿದುಕೊಳ್ಳುವಂತೆ ಇಸ್ಹಾಕ್ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ. ಮಹಿಳೆ ತಾನು ಇಳಿಯುವ ಜಾಗ ತಲುಪಿದಾಗ ಇಸ್ಹಾಕ್ ಅವರಿಂದ …

Read More »

ಬೇಲ್ ಮೇಲೆ ಹೊರಗೆ ಬಂದು ಪ್ರೇಯಸಿಯ ಸ್ಕೂಟಿಗೆ ಬೆಂಕಿಯಿಟ್ಟ ಪಾಗಲ್ ಪ್ರೇಮಿ

ಬೆಂಗಳೂರು: ತಾನು ಜೈಲಿಗೆ ಹೋಗಲು ಪ್ರೀತಿಸಿದ ಹುಡುಗಿಯೇ ಕಾರಣ ಎಂದು ಯುವತಿ ಮೇಲಿನ ಕೋಪಕ್ಕೆ ಆಕೆಯ ಸ್ಕೂಟರ್​ಗೆ ಬೆಂಕಿಯಿಟ್ಟ ಪಾಗಲ್ ಪ್ರೇಮಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಕ್ರಂ ಬಂಧಿತ ಯುವಕ. ಡಿ.12 ರಂದು ಹಲಸೂರಿನಲ್ಲಿರುವ ಯುವತಿ ಮನೆ ಬಳಿ ಹೋಗಿ ಸ್ಕೂಟರ್​ ಮೇಲೆ ಪೆಟ್ರೋಲ್ ಸುರಿದು ಯುವಕ ಬೆಂಕಿ ಹಚ್ಚಿ ಪರಾರಿಯಾಗಿದ್ದ. ವಿಕ್ರಂ ಕಳೆದ ಮೂರು ವರ್ಷಗಳಿಂದ ಯುವತಿ ಪ್ರೀತಿಸುತ್ತಿದ್ದ. ಅಲ್ಲದೇ ಡ್ರಗ್ ಪೆಡ್ಲಿಂಗ್​​ನಲ್ಲಿ ತೊಡಗಿಸಿಕೊಂಡಿದ್ದ. ಈ ಬಗ್ಗೆ ಅರಿತ ಯುವತಿ, ಅಪರಾಧ ಕೃತ್ಯವೆ ಎಸಗದಂತೆ ಬೈದು ಬುದ್ಧಿ ಹೇಳಿದರೂ ವಿಕ್ರಂ ಬಿಟಿಎಂ ಲೇಔಟ್, ಕೋರಮಂಗಲ, …

Read More »

ಮಸಾಜ್ ಪಾರ್ಲರ್ನಲ್ಲಿ ವೇಶ್ಯಾ ವಾಟಿಕೆ ದಂದೆ: ಇಬ್ಬರ ಬಂಧನ..!

ಮೈಸೂರು : ವೇಶ್ಯಾ ವಾಟಿಕೆ ನಡೆಯುತ್ತಿದ್ದ ಸ್ಪಾ ಮೇಲೆ ದಾಳಿ ನಡೆಸಿದ ವಿಜಯನಗರ ಠಾಣೆ ಪೊಲೀಸರು ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಿ, ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ.ಸ್ಪಾ ಹೆಸರಿನಲ್ಲಿ ಆನ್ ಲೈನ್ ಮೂಲಕ ಗ್ರಾಹಕರನ್ನು ಸೆಳೆದು ಯುವತಿಯರನ್ನಿಟ್ಟುಕೊಂಡು ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಬುಧುವಾರ ಸಂಜೆ ವಿಜಯನಗರ ಠಾಣೆ ಇನ್ಸಪೆಕ್ಟರ್ ರವಿಶಂಕರ್ ನೇತೃತ್ವದ ತಂಡ, ವಿಜಯನಗರ 2ನೇ ಹಂತದ ವಾಟರ್ ಟ್ಯಾಂಕ್ ಬಳಿ ಹನಿವೆಲ್ ಸ್ಪಾ ಮೇಲೆ ದಾಳಿ ನಡೆಸಿತು.ಈ ವೇಳೆ ಇಬ್ಬರು ಯುವತಿರೊಂದಿಗೆ ಗ್ರಾಹಕರೂ ಕೂಡ ಇದ್ದರೆಂದು ಹೇಳಲಾಗಿದ್ದು, ಮೈಸೂರಿನವರೇ ಆದ …

Read More »

ಗೂಗಲ್‌ನಲ್ಲಿ ನೀವು ತಪ್ಪಿಯೂ ಈ ವಿಚಾರಗಳನ್ನು ಸರ್ಚ್ ಮಾಡಬೇಡಿ, ನೀವು ಜೈಲಿಗೆ ಹೋಗ್ತೀರಾ…!

ಇತ್ತೀಚಿನ ದಿನಗಳಲ್ಲಿ, ಜನರು ಗೂಗಲ್ನಲ್ಲಿ ತಮ್ಮ ಮನಸ್ಸಿನಲ್ಲಿ ಮೂಡುವ ಪ್ರಶ್ನೆಯನ್ನು ಹಾಕುವ ಮೂಲಕ ಉತ್ತರವನ್ನು ಕಂಡುಕೊಳ್ಳುತ್ತಾರೆ, ಆದರೆ ಗೂಗಲ್ನಲ್ಲಿ ಹುಡುಕುವ ಮೂಲಕ ನಿಮ್ಮನ್ನು ಜೈಲಿಗೆ ಕಳುಹಿಸುವ ಕೆಲವು ವಿಷಯಗಳಿವೆ ಎಂದು ತಿಳಿದರೆ ನೀವು ಆಶ್ಚರ್ಯಚಕಿತರಾಗುತ್ತೀರಿ.   ಬಾಂಬ್ ತಯಾರಿಸುವುದು ಹೇಗೆ: . ತಪ್ಪಾಗಿ ಅಥವಾ ತಮಾಷೆಯಾಗಿ ಗೂಗಲ್ ನಲ್ಲಿ ಬಾಂಬ್ ತಯಾರಿಸುವುದು ಹೇಗೆ ಎಂದು ನೋಡಲು ನೀವು ಪ್ರಯತ್ನಿಸಿದರೆ, ನೀವು ಜೈಲಿಗೆ ಹೋಗಬೇಕಾಗಬಹುದು. ಅತ್ಯಾಚಾರ ಸಂತ್ರಸ್ಥರ ಹೆಸರು: ನೀವು ಅತ್ಯಾಚಾರ ಸಂತ್ರಸ್ಥರ ಹೆಸರು ವಿವರಗಳನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿದರೆ, ಇದು ತುಂಬಾ ಸೂಕ್ಷ್ಮ ಹಾಗೆ …

Read More »

You cannot copy content of this page.