ತಾಜಾ ಸುದ್ದಿ

ಉಡುಪಿ: ಬಾರ್ ಮಾಲೀಕನ ಮನೆಯಲ್ಲಿ ಅಗ್ನಿ ಅವಘಡ ಪ್ರಕರಣ – ಉದ್ಯಮಿಯ ಪತ್ನಿಯೂ ಚಿಕಿತ್ಸೆಗೆ ಸ್ಪಂದಿಸದೆ ಸಾವು

ಉಡುಪಿ: ಉಡುಪಿ ನಗರದ ಮನೆಯೊಂದರಲ್ಲಿ ನಡೆದಿದ್ದ ಭಾರೀ ಬೆಂಕಿ ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದ ಬಾರ್ ಮಾಲೀಕ ರಮಾನಂದ್ ಶೆಟ್ಟಿ ಅವರ ಪತ್ನಿ ಅಶ್ವಿನಿ (45) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಿನ್ನೆ ಮುಂಜಾನೆ ನಡೆದಿದ್ದ ಅಗ್ನಿ ಅವಘಡದಲ್ಲಿ ಅಶ್ವಿನಿ ಅವರ ಪತಿ ರಮಾನಂದ್ ಶೆಟ್ಟಿ ಮೃತಪಟ್ಟಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಪತ್ನಿ ಕೂಡ ಮೃತಪಟ್ಟಿದ್ದು ಕುಟುಂಬದಲ್ಲಿ ಶೋಕ ಮುಗಿಲು ಮುಟ್ಟಿದೆ. ಉಡುಪಿ ನಗರದಲ್ಲಿ ವಾಸ ಮಾಡುತ್ತಿದ್ದ ಶೆಟ್ಟಿ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ರಮಾನಂದ್ ಶೆಟ್ಟಿ ಮನೆಯಲ್ಲಿ ನಿನ್ನೆ ಮುಂಜಾನೆ ಶಾರ್ಟ್ ಸರ್ಕ್ಯುಟ್ ನಿಂದ ಅಗ್ನಿ …

Read More »

ಬೆಳ್ತಂಗಡಿ: ಚಾರ್ಮಾಡಿ ಬಳಿ ಲಾರಿಯಲ್ಲಿ ಭಾರತ್ ಬ್ರಾಂಡ್‌ ಅಕ್ಕಿ ಮಾರಾಟ – ಸ್ಥಳೀಯರಿಂದ ತಡೆ

ಬೆಳ್ತಂಗಡಿ: ಉಜಿರೆಯ ಚಾರ್ಮಾಡಿ ರಸ್ತೆಯಲ್ಲಿರುವ ಎಸ್.ಆರ್. ಬಾರ್ ಬಳಿ ಭಾರತ್ ಬ್ರಾಂಡ್‌ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಲಾರಿ ಒಂದನ್ನು ಸ್ಥಳೀಯರು ತಡೆ ಹಿಡಿದಿದ್ದಾರೆ. ಪಿ.ಕೆ.ಮಳಗಿ ಆಟ್ರೊ ಟೆಕ್ ಎಂಬ ಬೋರ್ಡ್ ಹೊಂದಿರುವ ಕೆಎ27 ಸಿ6204 ನೋಂದಣಿ ಸಂಖ್ಯೆಯ ಲಾರಿಯಲ್ಲಿ ಭಾರತ್ ಅಕ್ಕಿ ಮೂಟೆಗಳಿದ್ದು, ಕೆ.ಜಿ.ಗೆ 29 ರೂ.ನಂತೆ ಮಾರಾಟ ಮಾಡಲಾಗುತ್ತಿದ್ದು, ಇದನ್ನು ನೋಡಿ ಅನುಮಾನಗೊಂಡು ಸ್ಥಳೀಯರು ವಾಹನವನ್ನುತಡೆದಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಪೃಥ್ವಿಸಾನಿಕಂ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾರಿಯನ್ನು ಬೆಳ್ತಂಗಡಿ ಠಾಣೆಗೆ ಕೊಂಡೊಯ್ಯುವಂತೆ ತಹಶೀಲ್ದಾ‌ರ್ ಸೂಚಿಸಿದ್ದಾರೆ. ಈ ವೇಳೆ …

Read More »

ಉಡುಪಿ: ನಿಂತಿದ್ದ ಬಸ್ಸಿನ ಹಿಂಬದಿಗೆ ಸ್ಕೂರ್ ಢಿಕ್ಕಿ- ಸವಾರ ಗಂಭೀರ

ಉಡುಪಿ: ನಿಂತಿದ್ದ ಬಸ್ಸಿನ ಹಿಂಬದಿಗೆ ಸ್ಕೂರ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಗುಂಡಿಬ್ಯೆಲು ನಿವಾಸಿ ಲಕ್ಷ್ಮಣ (60)ಗಂಭೀರ ಗಾಯಗೊಂಡಿದ್ದು ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಲ್ಪೆ ಸಿಟಿಜನ್ ಸರ್ಕಲ್ ಸಮೀಪದ ನೆರ್ಗಿ ಎಂಬಲ್ಲಿ ಈ ಘಟನೆ ನಡೆದಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ಸಮಾಜಸೇವಕ ಈಶ್ವರ ಮಲ್ಪೆ ಮತ್ತು ತಂಡದವರು ಸಹಕರಿಸಿದರು. ಇವರಿಗೆ ಗುಂಡಿಬ್ಯೆಲಿನಲ್ಲಿ ವರ್ಕ್ ಶಾಪ್ ಇದೆ ಎನ್ನಲಾಗುತ್ತಿದೆ. ಮಲ್ಪೆ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಢಿಕ್ಕಿಯ ರಭಸಕ್ಕೆ ಬಸ್ ನ ಹಿಂಭಾಗ ಜಖಂಗೊಂಡಿದೆ.

Read More »

ಸುಬ್ರಹ್ಮಣ್ಯ:  ಕುಮಾರಧಾರ ನದಿಯಲ್ಲಿ ಆನೆಯ ಮೃತದೇಹ ಪತ್ತೆ

ಸುಬ್ರಹ್ಮಣ್ಯ:  ಕುಮಾರಧಾರ ನದಿಯಲ್ಲಿ ನಿನ್ನೆ ತಡ ರಾತ್ರಿ ಆನೆಯ ಮೃತದೇಹ ಪತ್ತೆಯಾಗಿದೆ. ಸುಬ್ರಹ್ಮಣ್ಯ ಸಮೀಪ ಹರಿಯುವ ಕುಮಾರಧಾರಾ ನದಿಯಲ್ಲಿ ನಿನ್ನೆ  ತಡ ರಾತ್ರಿ ಪತ್ತೆಯಾದ ಆನೆಯ ಮೃತದೇಹ ಪತ್ತೆಯಾಗಿದ್ದು,  ಕಾಡಿನಲ್ಲಿದ್ದ ಆನೆ ನದಿಯ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ನಿನ್ನೆ ರಾತ್ರಿ ಪ್ರವಾಹ ನೀರಿನಲ್ಲಿ ಆನೆ ಮೃತದೇಹ ಕೊಚ್ಚಿ ಕೊಂಡು ಬಂದಿದೆ, ಇದೀಗ  ನದಿ ನೀರಿನಲ್ಲಿ ಕೊಚ್ಚಿ ಹೋಗಿರುವ ಆನೆಯ ಮೃತದೇಹಕ್ಕೆ ಅರಣ್ಯ ಇಲಾಖೆ ಹುಡುಕಾಟ ಆರಂಭಿಸಿದ್ದಾರೆ.

Read More »

ಉಡುಪಿ: ಭಾರೀ ಮಳೆಗೆ ದೊಡ್ಡಣಗುಡ್ಡೆ ಶಾಲೆ ಅಡುಗೆ ಕೋಣೆ ಕುಸಿತ- ತಪ್ಪಿದ ದುರಂತ

ಉಡುಪಿ: ಉಡುಪಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಯ ಅಬ್ಬರಕ್ಕೆ ದೊಡ್ಡಣಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆಮನೆ ಗೋಡೆ ಕುಸಿದು ಬಿದ್ದಿದೆ. ಅಡುಗೆ ತಯಾರಿಸುವ ಕೋಣೆಯಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್ ವಿದ್ಯಾರ್ಥಿಗಳು ಪಾರಾಗಿದ್ದಾರೆ. ಭಾರೀ ಮಳೆ ನೀರಿಗೆ ತೇವಗೊಂಡು ಒಂದು ಭಾಗದ ಗೋಡೆ ಕುಸಿದು ಬಿದ್ದಿದೆ. ಗೋಡೆ ಕುಸಿದು ಬಿದ್ದ ಪರಿಣಾಮ ಅಡುಗೆ ಪರಿಕರ, ಗ್ಯಾಸ್ ಸಿಲಿಂಡರ್, ಮಕ್ಕಳು ಊಟಕ್ಕೆ ಬಳಸುವ 40ಕ್ಕೂ ಹೆಚ್ಚು ಸ್ಟೀಲ್ ಬಟ್ಟಲುಗಳು ಮಣ್ಣಿನಡಿ ಸಿಲುಕಿವೆ. 1990ರ ಸುಮಾರಿಗೆ ಇಲ್ಲಿ ಅಂಗನವಾಡಿಯನ್ನು ನಿರ್ಮಾಣ ಮಾಡಲಾಗಿತ್ತು. ಮುಂದೆ ಹೊಸ ಕಟ್ಟಡ ನಿರ್ಮಾಣವಾದಾಗ …

Read More »

ಯಜಮಾನಿಯರಿಗೆ ಗುಡ್‌ ನ್ಯೂಸ್‌ : ಖಾತೆಗೆ ʻಗೃಹಲಕ್ಷ್ಮಿʼ ಹಣ ಜಮಾ

ಬೆಂಗಳೂರು: ಯಜಮಾನಿಯರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಇಂದು ಸಂಜೆ ಒಳಗೆ ಗೃಹಲಕ್ಷ್ಮಿ ಹಣ ಖಾತೆಗೆ ಜಮಾ ಆಗಲಿದ್ದು, ಇನ್ಮುಂದೆ ಪ್ರತಿ ತಿಂಗಳ ೧೫ ನೇ ತಾರೀಕ್‌ ಯಜಮಾನಿಯರ ಖಾತೆಗೆ ಹಣ ಜಮೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಚುನಾವಣೆ ನೀತಿ ಸಂಹಿತೆಯಿಂದಾಗಿ ಜೂನ್‌ ತಿಂಗಳ ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು “ಗೃಹ ಲಕ್ಷ್ಮೀ” ಯೋಜನೆ (Gruha Lakshmi Scheme Karnataka) ಯನ್ನು ರೂಪಿಸಿದೆ. ಮಹಿಳೆಯರ ಆರ್ಥಿಕ ಸಬಲೀಕರಣದ ದೃಷ್ಠಿಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಕುಟುಂಬದ ನಿರ್ವಹಣೆಯಲ್ಲಿ ಮನೆ …

Read More »

ಕುತ್ತಾರು ಕೊರಗಜ್ಜನ ಹರಕೆಯ ಕೋಲದಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್, ಕ್ರಿಕೆಟಿಗ ಕೆ.ಎಲ್.ರಾಹುಲ್ ಭಾಗಿ

ಮಂಗಳೂರಿನ ಕುತ್ತಾರು ಕೊರಗಜ್ಜನ ಕ್ಷೇತ್ರದಲ್ಲಿ ಭಾನುವಾರ ರಾತ್ರಿ ನಡೆದ ಹರಕೆಯ ಕೋಲದಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್, ಹಾಗೂ ಕ್ರಿಕೆಟಿಗ ಕೆ.ಎಲ್.ರಾಹುಲ್ ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿ ದೈವದ ಕೃಪೆಗೆ ಪಾತ್ರರಾದರು. ಬಾಲಿವುಡ್ ನಟಿ ಕತ್ರಿನಾ ಕೈಫ್, ಅವರ ಪತಿ ನಟ ವಿಕ್ಕಿ ಕೌಶಲ್, ಕ್ರಿಕೆಟಿಗ ಕೆ.ಎಲ್ .ರಾಹುಲ್, ಅವರ ಪತ್ನಿ ನಟಿ ಆಥಿಯಾ ಶೆಟ್ಟಿ, ನಟ ಅಹನ್ ಶೆಟ್ಟಿ ಸೇರಿದಂತೆ ಮ್ಯಾಟ್ರಿಕ್ಸ್ ಎಂಟರ್​ಟೈನ್​ಮೆಂಟ್​ನ ರೇಷ್ಮಾ ಶೆಟ್ಟಿ ಹಾಗೂ ವಿ.ಎಂ.ಕಾಮತ್ ಸೇರಿದಂತೆ ಒಟ್ಟು 9 ಮಂದಿಯ ಹೆಸರನ್ನು ಎರಡು ತಿಂಗಳ ಹಿಂದೆಯೇ ಕುತ್ತಾರು ಕ್ಷೇತ್ರದ …

Read More »

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲೆ, ಪಿಯು ಕಾಲೇಜುಗಳಿಗೆ ಇಂದು ರಜೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 15ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಆದ್ದರಿಂದ‌ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ , ಪ್ರೌಢಶಾಲೆ, ಪಿಯು ಕಾಲೇಜಿಗಳಿಗೆ ಇಂದು ರಜೆ ಘೋಷಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ, ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ‌ …

Read More »

ಊರಿಗೆ ಉಪಕಾರಿ ಮನೆಗೆ ಮಾರಿ: ಉಡುಪಿಯ ಆಪತ್ಭಾಂದವ ಆಸೀಫನ ನೀಚ ಕೃತ್ಯ ಬಯಲು

ಉಡುಪಿ: ಜಿಲ್ಲೆಯ ಸಮಾಜ ಸೇವಕ, ಆಪತ್ಭಾಂದವ ಎಂದೇ ಖ್ಯಾತಿ ಪಡೆದುಕೊಂಡಿರುವ ಆಸೀಫ್​ನ ನೀಚ ಕೃತ್ಯ ಬಟಾಬಯಲಾಗಿದೆ. ಸ್ವಂತ ಪುತ್ರಿಯ ವಿಡಿಯೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ವೈರಲ್ ಮಾಡಿದ್ದಾನೆ. ಪಡುಬಿದ್ರಿಯಲ್ಲಿ ತನ್ನ ಸ್ವಂತ ಪುತ್ರಿಯ ಖಾಸಗಿ ವಿಡಿಯೋಗಳನ್ನೇ ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ವಾಟ್ಸಾಪ್ ಗ್ರೂಪ್​ಗಳಲ್ಲಿ ಹರಿಬಿಟ್ಟಿರುವ ಆರೋಪ ಕೇಳಿಬಂದಿದೆ. ಈ ಕುರಿತು ಪತಿ ವಿರುದ್ಧ ಪತ್ನಿಯೇ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ಬೆನ್ನಲ್ಲೇ ಆರೋಪಿಯ ಮಗಳು ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನು ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ ಮೂಲದ ಸಮಾಜ ಸೇವಕ ಆಸೀಫ್ ಮಗಳ ಪ್ರೀತಿ …

Read More »

ಬಂಟ್ವಾಳ : ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿದ ಕಳ್ಳರು..! ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ಬಂಟ್ವಾಳ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ನುಗ್ಗಿ ಮನೆಯಲ್ಲಿದ್ದ ಸುಮಾರು 4.14 ಲಕ್ಷ ರೂ. ಮೌಲ್ಯದ 69 ಗ್ರಾಂ. ಚಿನ್ನಾಭರಣ ಕಳವುಗೈದ ಘಟನೆ ಬಂಟ್ವಾಳದ ಇರಾ ಗ್ರಾಮದ ಕಿನ್ನಿಮಜಲುವಿನಲ್ಲಿ ನಡೆದಿದೆ. ಕಿನ್ನಿಮಜಲು ನಿವಾಸಿ ವನಿತಾ ಅವರ ಮನೆಯಲ್ಲಿ ಈ ಕಳ್ಳತನ ಕೃತ್ಯ ನಡೆದಿದೆ. ಅವರ ಮನೆ ಮಂದಿ ಕೆಲಸಕ್ಕೆ ಹೋಗಿದ್ದರು ಈ ವೇಳೆ ಕಳ್ಳರು ಒಳ ನುಗ್ಗಿ ಚಿನ್ನಾಭರಣ ದೋಚಿದ್ದಾರೆ ಎಂದು ತಿಳಿದುಬಂದಿದೆ. ಕಳ್ಳರು ಮುಂಬಾಗಿಲ ಬೀಗ ಮುರಿದಿರುವುದನ್ನು ಕಂಡ ವನಿತಾ ಅವರ ಅಕ್ಕ ಸುಜಾತ ಅವರು, ಕರೆ ಮಾಡಿ ಈ …

Read More »

You cannot copy content of this page.