ತಾಜಾ ಸುದ್ದಿ

ಗುಡ್ ನ್ಯೂಸ್ : ಕೇಂದ್ರ ಸರ್ಕಾರದಿಂದ ಇನ್ಮುಂದೆ ಬಡವರಿಗೆ ಅಕ್ಕಿ ಜೊತೆ ಸಿಗಲಿದೆ 9 ವಸ್ತುಗಳು!

ನವದೆಹಲಿ- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವವರಿಗೆ ಪಡಿತರ ಚೀಟಿ ನೀಡುತ್ತವೆ. ಲಾನುಭವಿಗಳ ಆಹಾರ ಭದ್ರತೆಗಾಗಿ ಉಚಿತ ಪಡಿತರವನ್ನು ಒದಗಿಸುತ್ತದೆ. ಆದರೆ ಈಗ ಭಾರತ ಸರ್ಕಾರ ಈ ಯೋಜನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಹೊರಟಿದೆ. ಈ ಹಿಂದೆ ಕೇಂದ್ರವು ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ ನೀಡುತ್ತಿತ್ತು. ಆದರೆ ಇದೀಗ ಉಚಿತ ಅಕ್ಕಿ ಬದಲಿಗೆ 9 ಅಗತ್ಯ ವಸ್ತುಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ. ಭಾರತ ಸರ್ಕಾರದ ಉಚಿತ ಪಡಿತರ ಯೋಜನೆಯಡಿ ದೇಶದ 90 ಕೋಟಿ ಜನರಿಗೆ ಉಚಿತ ಪಡಿತರವನ್ನು ನೀಡಲಾಗುತ್ತಿದೆ. …

Read More »

ಉಡುಪಿ: ವೈದ್ಯನಿಂದ ಕಿರುಕುಳ ಆರೋಪ – ಸಹಪಾಠಿ ವೈದ್ಯ ವಿದ್ಯಾರ್ಥಿನಿಯಿಂದ ದೂರು

ಉಡುಪಿ: ವೈದ್ಯನೊಬ್ಬ ತನ್ನ ಸಹಪಾಠಿ ವೈದ್ಯ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದು ಈ ಸಂಬಂಧ ಉಡುಪಿಯ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಕಿರುಕುಳ ನೀಡಿದ ಮಹಮ್ಮದ್ ಡ್ಯಾನಿಷ್ ಖಾನ್ ಎಂಬಾತನನ್ನು ಬಂಧಿಸಿದ್ದಾರೆ. ಹೊರರಾಜ್ಯದವರಾದ ಇವರು ಪ್ರಾರಂಭದಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿಯಲ್ಲಿದ್ದಾಗ ಡ್ಯಾನಿಷ್ ಮದುವೆಯ ಪ್ರಸ್ತಾಪ ಮುಂದಿಟ್ಟಿದ್ದ ಎನ್ನಲಾಗಿದೆ. ಡ್ಯಾನಿಷ್ ಖಾನ್ ಮತ್ತು ಸಂತ್ರಸ್ತೆ ಒಂದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು ಕ್ಯಾಂಪಸ್‌ನಲ್ಲಿ ಪರಿಚಯವಾಗಿತ್ತು. ನಂತರ 2024ರ ಜನವರಿ 22ರಂದು ಮಾತುಕತೆ ವೇಳೆ ಹಿಂದೂ ಧರ್ಮ ಹಾಗೂ ರಾಮ ಮಂದಿರದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾಗಿ ಆರೋಪಿಸಲಾಗಿದೆ. ರೂಮ್‌ನಲ್ಲಿ ಆರೋಪಿಯು …

Read More »

ಮಂಗಳೂರು: ಕ್ರಿಕೆಟ್ ಆಡುತ್ತಿರುವಾಗಲೇ ಹೃದಯಾಘಾತ; ಯುವಕ ಸಾವು

ಮಂಗಳೂರು: ಕ್ರಿಕೆಟ್ ಆಡುತ್ತಿದ್ದಾಗ ಹೃದಯಾಘಾತಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಯುವಕನೋರ್ವ ಸಾವನ್ನಪ್ಪಿದ ಘಟನೆ ಮೂಡುಪೆರಾರ ಕಾಯರಾಣೆಯಲ್ಲಿ ಸೆಪ್ಟೆಂಬರ್ 1 ರಂದು ನಡೆದಿದೆ. ಮೂಡುಪೆರಾರ ಕಾಯರಾಣೆ ನಿವಾಸಿ ದಿ| ಆನಂದ ಪೂಜಾರಿ ಅವರ ಪುತ್ರ ಪ್ರದೀಪ್ ಪೂಜಾರಿ (31) ಮೃತ ದುರ್ದೈವಿ. ಭಾನುವಾರ ಸಂಜೆ ಮೂಡುಪೆರಾರ ಕಾಯಾರಣೆಯಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಪ್ರದೀಪ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಮೊದಲಿಗೆ ಕೈಕಂಬದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ನಂತರ ಬಜ್ಪೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. …

Read More »

BREAKING: ಪೋರ್ಬಂದರ್ ಕರಾವಳಿಯಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ, ಮೂವರು ಸಿಬ್ಬಂದಿ ನಾಪತ್ತೆ

ನವದೆಹಲಿ: ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ಎಎಲ್‌ಎಚ್) ಹೆಲಿಕಾಪ್ಟರ್ ನಾಲ್ಕು ಸಿಬ್ಬಂದಿಯೊಂದಿಗೆ ಸಮುದ್ರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಓರ್ವ ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು, ಉಳಿದ ಮೂವರು ಸಿಬ್ಬಂದಿಗಾಗಿ ಶೋಧ ಕಾರ್ಯ ಪ್ರಗತಿಯಲ್ಲಿದೆ. ಹೆಲಿಕಾಪ್ಟರ್ ಅವಶೇಷಗಳು ಪತ್ತೆಯಾಗಿವೆ. ಹೆಲಿಕಾಪ್ಟರ್ ಹಡಗನ್ನು ಸಮೀಪಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಎನ್ನಲಾಗಿದೆ ಪ್ರಸ್ತುತ, ಐಸಿಜಿ ಶೋಧ ಕಾರ್ಯಾಚರಣೆಗಾಗಿ ನಾಲ್ಕು ಹಡಗುಗಳು ಮತ್ತು ಎರಡು ವಿಮಾನಗಳನ್ನು ಕಾರ್ಯಚರಣೆಗೆ ಇಳಿಸಲಾಗಿದೆ ಅಂಥ ತಿಳಿದು ಬಂದಿದೆ.

Read More »

ಗಣೇಶೋತ್ಸವ ಹಾಗೂ ಮೀಲಾದುನ್ನಬಿ ಆಚರಣೆಯ ಪ್ರಯುಕ್ತ : ಶಾಂತಿ ಸಭೆ ನಡೆಸಿದ ನಗರ ಪೊಲೀಸ್ ಆಯುಕ್ತರು

ಮಂಗಳೂರು: ಗಣೇಶೋತ್ಸವ ಹಾಗೂ ಮೀಲಾದುನ್ನಬಿ ಆಚರಣೆಯ ಪ್ರಯುಕ್ತ ನಗರದಲ್ಲಿ ಶಾಂತಿ  ಕಾಪಾಡಬೇಕು ಮತ್ತು ಎಲ್ಲಾ ಧರ್ಮದ ಮುಖಂಡರು ಇದಕ್ಕೆ ಸಹಕರಿಸಬೇಕೆಂದು ಮಂಗಳೂರು ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ. ತನ್ನ  ಕಚೇರಿಯಲ್ಲಿ ಸೋಮವಾರ ಶಾಂತಿ ಸಭೆ ನಡೆಸಿ ಧಾರ್ಮಿಕ ಮತ್ತು ಸಮಾಜದ ಮುಖಂಡರಿಗೆ ಕೆಲವೊಂದು ಸೂಚನೆಗಳನ್ನು ಆಯುಕ್ತರು ನೀಡಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಸೆ.6ರಿಂದ ಸೆ.17ರವರೆಗೆ 165 ಕಡೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಮಾಡಲಾಗುತ್ತದೆ. ಈ ಪೈಕಿ 22 ಅತೀ ಸೂಕ್ಷ್ಮ, 64 ಸೂಕ್ಷ್ಮ, 79 ಸಾಮಾನ್ಯ ಗಣೇಶ ಪ್ರತಿಷ್ಠಾಪನಾ …

Read More »

ಉಡುಪಿ: ಅಪಾರ್ಟೆಂಟ್ ಗೆ ನುಗ್ಗಿ ಲ್ಯಾಪ್ ಟಾಪ್, ಐಪ್ಯಾಡ್ ಕಳ್ಳತನ- ಇಬ್ಬರು ಅರೆಸ್ಟ್

ಉಡುಪಿ:  ಮಣಿಪಾಲ ಠಾಣೆ ವ್ಯಾಪ್ತಿಯ ವಿದ್ಯಾರತ್ನನಗರದ ಅಪಾರ್ಟೆಂಟ್ ವೊಂದರಲ್ಲಿ ಎರಡು ಲ್ಯಾಪ್ ಟಾಪ್ ಮತ್ತು ಐಪಾಡ್ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ಪೆರುಮಾಳ್ ನಿವಾಸಿ ಪಿ ಕಾರ್ತಿಕ್ (28) ಹಾಗೂ ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ಬಾಲನ್ (34) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸುಮಾರು 4,00,000 ರೂ. ಮೌಲ್ಯದ ಎರಡು ಲ್ಯಾಪ್ ಟಾಪ್ ಮತ್ತು 1 ಆಪಲ್ ಕಂಪನಿಯ ಐಪಾಡ್ ನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇವರು ಮಣಿಪಾಲದ ಅಪಾರ್ಟ್ ಮೆಂಟ್ ಗಳಲ್ಲಿ …

Read More »

ಉಡುಪಿ: ರೈತರು ಮೂರು ದಿನದೊಳಗೆ ಪಹಣಿ, ಆಧಾರ್‌ ಜೋಡಣೆ ಮಾಡಿಸಿಕೊಳ್ಳಬೇಕು – ಜಿಲ್ಲಾಧಿಕಾರಿ

ಉಡುಪಿ: ರೈತರಿಗೆ ನಿಗದಿತ ಸಮಯದಲ್ಲಿ ಸರಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹಾಗೂ ಅಕ್ರಮ ಖಾತಾ ಬದಲಾವಣೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಆಧಾರ್‌ ಜೋಡಣೆ ಆವಶ್ಯಕವಾಗಿರುವುದರಿಂದ ಜಿಲ್ಲೆಯ ರೈತರು ಮೂರು ದಿನದೊಳಗೆ ಪಹಣಿ, ಆಧಾರ್‌ ದಾಖಲಾತಿಗಳೊಂದಿಗೆ ಹಾಗೂ ಆಧಾರ್‌ ಜೋಡಣೆಯಾಗಿರುವ ಮೊಬೈಲ್‌ನೊಂದಿಗೆ ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಯವರನ್ನು ಸಂಪರ್ಕಿಸಿ ಆಧಾರ್‌ ಜೋಡಣೆ ಮಾಡಿಸಿಕೊಳ್ಳಬಹುದು. ಜಿಲ್ಲೆಯಲ್ಲಿ ಜಮೀನು ಹೊಂದಿ ಬೇರೆ ರಾಜ್ಯ ಹಾಗೂ ವಿದೇಶದಲ್ಲಿ ವಾಸವಿದ್ದ ಭೂಮಾಲಕರು ಅವರ ಕುಟುಂಬಸ್ಥರು/ಸಂಬಂಧಿಕರು ಜಿಲ್ಲೆಯಲ್ಲಿದ್ದಲ್ಲಿ ಅವರಿಂದ ಮಾಹಿತಿ ಪಡೆದು ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಿ ಪಹಣಿಗೆ ಆಧಾರ್‌ ಜೋಡಣೆ …

Read More »

ಅರುಣ್ ಪುತ್ತಿಲಗೆ ಜಾಮೀನು ಮಂಜೂರು..! ಸುಳ್ಳು ಆರೋಪಗಳಿಗೆ ಕಾನೂನು ಹೋರಾಟ – ಪುತ್ತಿಲ

ಪುತ್ತೂರು : ಮಹಿಳಾ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಪ್ರಕರಣದ ಹಿನ್ನಲೆಯಲ್ಲಿ ನ್ಯಾಯಾಲಯಕ್ಕೆ ವಕೀಲರ ಮೂಲಕ ಹಾಜರಾದ ಅರುಣ್‌ ಕುಮಾರ್‌ ಪುತ್ತಿಲಗೆ ಪುತ್ತೂರಿನ ಸಿವಿಲ್‌ ಜಡ್ಜ್‌ ಹಾಗೂ ಜೆಎಂಎಫ್‌ ಸಿ ನ್ಯಾಯಾಲಯ. ಜಾಮೀನು ಮಂಜೂರು ಮಾಡಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇದ್ದು ಮುಂದಿನ ದಿನಗಳಲ್ಲಿ ನನ್ನ ವಿರುದ್ಧ ಬಂದಂತಹ ಆರೋಪಗಳಿಗೆ ಕಾನೂನು ರೀತಿಯ ಹೋರಾಟ ರಡುತ್ತೇನೆ ಎಂದು ಅರುಣ್‌ ಕುಮಾರ್‌ ಪುತ್ತಿಲ ತಿಳಿಸಿದ್ದಾರೆ. ಘಟನೆ ಹಿನ್ನೆಲೆ:  ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದ್ದು, ಮಹಿಳೆಯೊಬ್ಬರು ದಕ್ಷಿಣ ಕನ್ನಡ …

Read More »

ಸೊಳ್ಳೆ ಬತ್ತಿ ಕಿಡಿಯಿಂದ ಸಿಲಿಂಡರ್ ಸ್ಪೋಟಗೊಂಡು ಯುವಕ ಸ್ಥಳದಲ್ಲೇ ಸಾವು..!

 ಮನೆಯಲ್ಲಿ ಸೊಳ್ಳೆ ಬತ್ತಿ ಹಚ್ಚುವವರೇ ಎಚ್ಚರ. ಸೊಳ್ಳೆ ಬತ್ತಿಯ ಕಿಡಿಯಿಂದ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಹೈದರಾಬಾದ್ ನಲ್ಲಿ ನಡೆದಿದೆ. ಹೈದರಾಬಾದ್ ನಲ್ಲಿ 27 ವರ್ಷದ ಯುವಕನೊಬ್ಬ ಸೊಳ್ಳೆಗಳನ್ನು ಓಡಿಸಲು ಸೊಳ್ಳೆ ಬತ್ತಿ ಹಚ್ಚಿದ್ದಾನೆ. ಈ ವೇಳೆ ಗ್ಯಾಸ್ ಸಿಲಿಂಡರ್ ಲೀಕ್ ಆಗಿದ್ದು, ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮನೆಗೆ ಬೆಂಕಿ ಹೊತ್ತಿಕೊಂಡು ಯುವಕ ಸಾವನ್ನಪ್ಪಿದ್ದಾನೆ. ಅಭಿಷೇಕ್ ಎಂಬ ಯುವಕ ಮೃತಪಟ್ಟ ಯುವಕನಾಗಿದ್ದು, ತನ್ನ ಸಹೋದರಿಯ ಮನೆಗೆ ಬಂದಿದ್ದು, ಅಭಿಷೇಕ್ ತನ್ನ ತಾಯಿ ಮತ್ತು ತಂದೆಯೊಂದಿಗೆ ನಿದ್ರೆಗೆ ಜಾರಿದನು, ಸೊಳ್ಳೆಗಳು ಹೆಚ್ಚಿದ್ದ …

Read More »

ಕಾಪು ಬೀಚ್ ನಲ್ಲಿ ಮುಳುಗುತ್ತಿದ್ದ ಯುವಕನನ್ನು ರಕ್ಷಿಸಿದ ಸ್ಥಳೀಯ ಮೀನುಗಾರರು

ಕಾಪು : ಸಾಂಪ್ರದಾಯಿಕ ಮೀನುಗಾರಿಕೆಗೆ ಬಲೆ ಇಡಲು ಸಮುದ್ರಕ್ಕೆ ಹೋಗಿ, ಸಮುದ್ರ ಪಾಲಾಗುವ ಭೀತಿಗೊಳಗಾದ ಯುವಕನನ್ನು ಸ್ಥಳೀಯ ಮಿನುಗಾರರು ರಕ್ಷಿಸಿದ ಘಟನೆ ಇಂದು ಕಾಪು ಬೀಚ್ ನಲ್ಲಿ ನಡೆದಿದೆ. ಕಾಪು ಪಡುಗ್ರಾಮದ ನಿವಾಸಿ ಸಚಿನ್ (31) ಸ್ಥಳೀಯ ಮೀನುಗಾರರಿಂದ ರಕ್ಚಿಸಲ್ಪಟ್ಟ ಯುವಕ. ರವಿವಾರ ರಜಾ ದಿನವಾಗಿದ್ದು, ಸಾಂಪ್ರದಾಯಿಕ ಮೀನುಗಾರಿಕೆಗಾಗಿ ಬಲೆ ಇಡಲೆಂದು ಬಲೆಯೊಂದಿಗೆ ತೆರಳಿದ್ದ ಸಚಿನ್ ಅವರು ಸಮುದ್ರದಲ್ಲಿ ಮುಳುಗಿ, ಸಮುದ್ರ ಪಾಲಾಗುವ ಭೀತಿ ಎದುರಾಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ಬೊಬ್ಬೆ ಹಾಕಿದ್ದು, ಮೀನುಗಾರಿಕಾ ವೃತ್ತಿನಿರತರಾದ ಶರ್ಮಾ, ಹರೀಶ್ ಕರ್ಕೇರ ಅವರು ಸಮುದ್ರಕ್ಕೆ ಇಳಿದು …

Read More »

You cannot copy content of this page.