ತಾಜಾ ಸುದ್ದಿ

ಕುಂದಾಪುರ: ಬಸ್ ಟಾಪ್ ಮೇಲಿಂದ ಬಿದ್ದು ಅಯ್ಯಪ್ಪ ಭಕ್ತ ಮೃತ್ಯು

ಕುಂದಾಪುರ: ಶಬರಿಮಲೆ ಯಾತ್ರೆ ಮುಗಿಸಿ ಬಂದು, ಆನೆಗುಡ್ಡೆ ದೇವಸ್ಥಾನದ ಬಳಿ ನಿಲ್ಲಿಸಿದ ಬಸ್ಸಿನ ಟಾಪ್ ನಲ್ಲಿ ಮಲಗಿದ್ದ ವ್ಯಕ್ತಿ ಆಕಸ್ಮಿಕವಾಗಿ ಬಸ್ಸಿನ ಮೇಲಿಂದ ಕೆಳಕ್ಕೆ ಬಿದ್ದು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಬೆಂಗಳೂರು ಕುಂಬಾರಪೇಟೆಯ ಬಾಪೂಜಿ ನಗರದ ನಿವಾಸಿ ಶ್ರೀನಾಥ್ (25) ಎಂದು ಗುರುತಿಸಲಾಗಿದೆ ಡಿ.28ರಂದು ಯಾತ್ರೆ ಮುಗಿಸಿ ಬಂದು ನಿಲ್ಲಿಸಿದ್ದ ಬಸ್ಸಿನ ಮೇಲೆ ಮಲಗಿದ್ದ ಶ್ರೀನಾಥ ಟಾಪ್ ಮೇಲಿಂದ ಆಕಸ್ಮಿಕವಾಗಿ ಜಾರಿ ನೆಲಕ್ಕೆ ಬಿದ್ದು ತಲೆಗೆ ತೀವ್ರ ಗಾಯಗೊಂಡ ಹಿನ್ನೆಲೆಯಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ …

Read More »

ಹೊಸ ವರ್ಷದಂದು ಸುಡಲು ತಯಾರಿಸಿದ ಪ್ರತಿಕೃತಿ ಪ್ರಧಾನಿ ಮೋದಿಯನ್ನು ಹೋಲುತ್ತಿದೆ: ಬಿಜೆಪಿ ಆಕ್ರೋಶ

ಕೊಚ್ಚಿ: ಹೊಸ ವರ್ಷ ಪ್ರಯುಕ್ತ ಸುಡಲು ನಿರ್ಮಿಸಲಾಗಿರುವ ಪ್ರತಿಕೃತಿ (ಕಾರ್ನೀವಲ್) ಪ್ರಧಾನಿ ಮೋದಿಯವರನ್ನು ಹೋಲುತ್ತಿದೆ ಎಂದು ಕೇರಳದ ಎರ್ನಾಕುಲಂ ಬಿಜೆಪಿ ಜಿಲ್ಲಾಧ್ಯಕ್ಷ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಎರ್ನಾಕುಲಂ ಜಿಲ್ಲಾಧ್ಯಕ್ಷ ಕೆ.ಎಸ್. ಶೈಜು ಈ ಬಗ್ಗೆ ಪ್ರತಿಕ್ರಿಯಿಸಿ, ಕೊಚ್ಚಿನ್ ಕಾರ್ನೀವಲ್ ಗಾಗಿ ನಿರ್ಮಿಸಲಾದ ಪ್ರತಿಕೃತಿ ಮುಖ ಪ್ರಧಾನಿ ನರೇಂದ್ರ ಮೋದಿ ಅವರ ಮುಖವನ್ನು ಹೋಲುತ್ತದೆ. ದೇಶದ ಪ್ರಧಾನಿಯನ್ನು ಅವಮಾನಿಸುವ ಪ್ರಯತ್ನ ಇದಾಗಿದೆ. ಕೊಚ್ಚಿನ್ ಕಾರ್ನಿವಲ್ಗೆ ಅಡ್ಡಿಪಡಿಸಲು ಇದನ್ನು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಪ್ರತಿಭಟನೆಯ ನಂತರ ಪ್ರತಿಕೃತಿ ರೂಪ ಬದಲಾಯಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಡಿಸೆಂಬರ್ …

Read More »

ಬಿಗ್‌ಬಾಸ್ 9ರ ವಿನ್ನರ್ ಆಗಿ ರೂಪೇಶ್ ಶೆಟ್ಟಿ ಬಹುತೇಕ ಫಿಕ್ಸ್….!

ಮಂಗಳೂರು: ತುಳುನಾಡಿನ ಖ್ಯಾತ ನಟ ರೂಪೇಶ್ ಶೆಟ್ಟಿ ಇದೀಗ ನಟ ಸುದೀಪ್ ನಡೆಸಿಕೊಡುವ ಬಿಗ್‌ಬಾಸ್ ಸೀಸನ್ 9ರಲ್ಲಿ ಫೈನಲ್ ಪ್ರವೆಶಿಸಿದ್ದಾರೆ. ಆದರೆ ಇದೀಗ ಲಭ್ಯವಾಗುತ್ತಿರುವ ಮಾಹಿತಿ ಪ್ರಕಾರ ಬಿಗ್‌ಬಾಸ್ ಟ್ರೋಫಿ ಈ ಬಾರಿ ಕೂಡಾ ಕರಾವಳಿಗೆ ಸಿಗುವ ಚಾನ್ಸಸ್ ಇದೆಯಂತೆ. ಕರಾವಳಿಯ ಮನೆ ಮಗ ರೂಪೇಶ್ ಶೆಟ್ಟಿ ಬಹುತೇಕ ಬಿಗ್‌ಬಾಸ್ ವಿನ್ನರ್ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಬಿಗ್‌ಬಾಸ್‌ ಒಟಿಟಿ ಸೀಸನ್‌ನಲ್ಲಿ ಅತೀ ಹೆಚ್ಚು ವೋಟ್ ಪಡೆದ ರೂಪೇಶ್ ಶೆಟ್ಟಿ ತನ್ನ ಟಾಸ್ಕ್, ಮನರಂಜನೆ ಹಾಡಿನ ಮುಖಾಂತರ ಕನ್ನಡಿಗರ ಮನ ಗೆದ್ದಿದ್ದಾರೆ. ಅಷ್ಟೇ …

Read More »

ಹಾವಿನ ತಲೆಯಲ್ಲಿ ಕ್ಯಾನ್ಸರ್ ಕಾರಕ ಗಡ್ಡೆ ; ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆದ ವೈದ್ಯ!

ಧಾರವಾಡ: ಹಾವಿಗೆ ಶಸ್ತ್ರಚಿಕಿತ್ಸೆ ನಡೆಸಿ ಕ್ಯಾನ್ಸರ್ ಕಾರಕ ಗಡ್ಡೆಯನ್ನು ಹೊರ ತೆಗೆದ ಅಪರೂಪದ ಘಟನೆ ಧಾರವಾಡದಲ್ಲಿ ನಡೆದಿದೆ. ಹಿರಿಯ ಪ್ರಾಣಿ ವೈದ್ಯ ಡಾ. ಅನಿಲ್‌ಕುಮಾರ್‍ ಪಾಟೀಲ್ ಅವರು ಈ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದ್ದಾರೆ. ಮನೆಯೊಂದರಲ್ಲಿ ಹಾವು ಸೇರಿಕೊಂಡಿರುವ ಬಗ್ಗೆ ಕರೆ ಬಂದ ಹಿನ್ನೆಲೆಯಲ್ಲಿ ಉರಗ ರಕ್ಷಕ ಸೋಮಶೇಖರ್ ಚೆನ್ನಶೆಟ್ಟಿ ಅವರ ಕೂಡಲೇ ಆ ಮನೆಗೆ ಹೋಗಿ ಟ್ರಿಂಕೆಟ್ ಎಂಬ ವಿಷಕಾರಿಯಲ್ಲದ ಹಾವನ್ನು ರಕ್ಷಿಸಿದ್ದರು. ಈ ವೇಳೆ ಹಾವಿನ ತಲೆಯಲ್ಲಿ ಗೆಡ್ಡೆ ಇರುವುದು ಗೊತ್ತಾಗಿತ್ತು.ಕೂಡಲೇ ಅದನ್ನು ಡಾ. ಅನಿಲ್‌ಕುಮಾರ್‍ ಪಾಟೀಲ್ ಅವರ ಬಳಿ ಕೊಂಡೊಯ್ದರು. ವೈದ್ಯರು ಹಾವಿಗೆ …

Read More »

ಮಂಗಳೂರಿನಲ್ಲಿ ಟ್ರಾಫಿಕ್‌ ಪೊಲೀಸರ ಎಡವಟ್ಟು ; ಕಾರಿನ ಸಹ ಪ್ರಯಾಣಿಕ ಹೆಲ್ಮೆಟ್ ಧರಿಸದ್ದಕ್ಕೆ 500 ರೂ. ದಂಡ!

ಮಂಗಳೂರು: ಕಾರಿನಲ್ಲಿ ಸಹ ಪ್ರಯಾಣಿಕ ಹೆಲ್ಮೆಟ್ ಧರಿಸಿಲ್ಲವೆಂದ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ ವಿಚಿತ್ರ ಪ್ರಸಂಗವೊಂದು ಮಂಗಳೂರಿನಲ್ಲಿ ನಡೆದಿದೆ. 500 ರೂ. ದಂಡ ಪಾವತಿಸುವಂತೆ ಕಾರು ಚಾಲಕನಿಗೆ ನೋಟಿಸ್ ಬಂದಿದ್ದು, ಈ ನೋಟಿಸ್ ನೋಡಿ ಅವರು ಶಾಕ್ ಆಗಿದ್ದಾರೆ. ನವೆಂಬರ್‌ 29ರಂದು ಮಂಗಳಾದೇವಿ ರಸ್ತೆಯಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆಯಾಗಿದ್ದು, ಸಹ ಪ್ರಯಾಣಿಕ ಹೆಲ್ಮೆಟ್ ಧರಿಸಿರಲಿಲ್ಲ. ಹೀಗಾಗಿ ದಂಡ ಪಾವತಿಸಿ ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಉಲ್ಲಂಘನೆ ವಿವರಗಳು ಎಂಬ ಕಾಲಂನಲ್ಲಿ ’ಕಾರು’ ಎಂದೂ, ಉಲ್ಲಂಘನೆ ರೀತಿ ಕಾಲಂನಲ್ಲಿ ಸಹಸವಾರ ಹೆಲ್ಮೆಟ್ ಧರಿಸಿಲ್ಲ’ ಎಂದು ನಮೂದಿಸಲಾಗಿದೆ. ಡಿಸೆಂಬರ್‍ 22ರಂದು …

Read More »

ಸಹಕಾರ ರತ್ನ ಜಯಕರ ಶೆಟ್ಟಿ ಇಂದ್ರಾಳಿಯವರಿಗೆ ಎಸ್ ಕೆಪಿಎ ಉಡುಪಿ ವಲಯದಿಂದ ಗೌರವಾಭಿನಂದನೆ

ಉಡುಪಿ: ಇತ್ತೀಚಿಗೆ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಜಯಕರ ಶೆಟ್ಟಿ ಇಂದ್ರಾಳಿಯವರಿಗೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯದಿಂದ ಗೌರವಾಭಿನಂದನೆ ಸಲ್ಲಿಸಲಾಯಿತು. ಛಾಯಾಗ್ರಾಹಕರ ಸಂಘಟನೆಗೆ ಮೊದಲಿನಿಂದಲೂ ಸಹಾಯ, ಸಹಕಾರ ನೀಡಿದ ಇಂದ್ರಾಳಿಯವರಿಗೆ ಸರ್ವ ಛಾಯಾಗ್ರಾಹಕರ ಪರವಾಗಿ ಅಭಿನಂದನೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಉಡುಪಿ ಶಾಖೆಯ ಪ್ರಬಂಧಕ ರಾಘವೇಂದ್ರ ಉಪಾಧ್ಯಾಯ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ , ಜಿಲ್ಲಾ ಕಾರ್ಯದರ್ಶಿ ವಾಮನ ಪಡುಕರೆ, ಉಪಾಧ್ಯಕ್ಷ ಸುರಭಿ ಸುಧೀರ್, ಸಂಚಾಲಕ ಸಂತೋಷ್ ಕೋರಂಗ್ರಪಾಡಿ, ವಲಯಾಧ್ಯಕ್ಷ …

Read More »

ಬೈಕ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿಕೊಂಡು ಯುವಕನಿಂದ ಅಸಭ್ಯ ವರ್ತನೆ

ಆಂಧ್ರಪ್ರದೇಶ; ಹಾಡಹಗಲೇ ಯುವಕನೊಬ್ಬ ಅಸಭ್ಯ ರೀತಿಯಲ್ಲಿ ಬೈಕ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿ ಕರೆದುಕೊಂಡು ಹೋಗಿರುವ ವಿಡಿಯೋ ವೈರಲ್ ಆಗಿದೆ. ಆಂದ್ರಪ್ರದೇಶದ ವಿಶಾಖಪಟ್ಟಣಂನ ಪ್ರಧಾನ ಮಂತ್ರಿ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ. ವಿಡಿಯೋ ವೈರಲ್ ಬೆನ್ನಲ್ಲೇ ಸ್ಟೀಲ್ ಪ್ಲಾಂಟ್ ಪೊಲೀಸರು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಯುವಕ ಮತ್ತು ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಅವರಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರನ್ನು ಗಾಜುವಾಕಾ ಬಳಿಯ ವೆಂಪಲಿನಗರ ಮತ್ತು ಸಮತಾನಗರದ ನಿವಾಸಿಗಳು ಎಂದು ಪೊಲೀಸರು ಹೇಳಿದ್ದಾರೆ.

Read More »

BREAKING NEWS: ಅಪಘಾತದಿಂದ ಗಾಯದಿಂದ ರಿಷಭ್ ಪಂತ್‌ ʼಜೀವನ್ಮರಣ ಹೋರಾಟʼ : ಏರ್ ಆಂಬ್ಯುಲೆನ್ಸ್ ಒದಗಿಸಲು ʼಪುಷ್ಕರ್ ಸಿಂಗ್ ಧಾಮಿ ಸೂಚನೆʼ

ನವದೆಹಲಿ: ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ರಿಷಭ್ ಪಂತ್ ತೀವ್ರ ಗಾಯಗೊಂಡಿದ್ದಾರೆ. ಪೊಲೀಸರ ಪ್ರಕಾರ, ಕಾರು ಚಾಲನೆ ಮಾಡುವಾಗ ಕ್ರಿಕೆಟರ್ ನಿದ್ರೆಗೆ ಜಾರಿದ ಪರಿಣಾಮವಾಗಿ ನಿಯಂತ್ರಣ ಕಳೆದುಕೊಂಡು ಬಿಎಂಡಬ್ಲ್ಯೂ ಕಾರು ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಕ್ರಿಕೆಟಿಗ ಕಾರಿನಲ್ಲಿ ಒಬ್ಬರೇ ಇದ್ದರು ಮತ್ತು ಧಗಧಗನೇ ಹೊತ್ತಿಉರಿದ ಕಾರಿನ ಗಾಜು ಒಡೆದು ಹೊರ ಬಂದು ಇದೀಗ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ ಎಂದು ಉತ್ತರಾಖಂಡ್ ಪೊಲೀಸ್ ಡಿಜಿಪಿ ಅಶೋಕ್ ಕುಮಾರ್ ಹೇಳಿದರು. ಪಂತ್ ಅವರ ಕಾರು …

Read More »

ತಾಯಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ಮೋದಿ ಸಹೋದರರು

ಗಾಂಧೀನಗರ: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರು ಇಂದು ಮುಂಜಾನೆ ವಿಧಿವಶರಾಗಿದ್ದು, ಅವರ ಅಂತಿಮ ಸಂಸ್ಕಾರದಲ್ಲಿ ಮೋದಿ ಕುಟುಂಬದ ಸದಸ್ಯರೆಲ್ಲರೂ ಭಾಗಿಯಾಗಿದ್ದಾರೆ. ಮೋದಿ ಸಹೋದರರು ಹೀರಾಬೆನ್ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದು, ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಮೋದಿ ತಾಯಿಯ ಅಗಲಿಕೆ ಸುದ್ದಿ ತಿಳಿಯುತಿದ್ದಂತೆಯೇ ಪ್ರಧಾನಿ ಅಹಮದಾಬಾದ್‌ಗೆ ತೆರಳಿದ್ದರು. ಹೀರಾಬೆನ್ ಅಂತ್ಯಕ್ರಿಯೆಗೂ ಮುನ್ನ ಪ್ರಧಾನಿ ಪಾರ್ಥೀವ ಶರೀರದ ಮೆರವಣಿಗೆಯಲ್ಲಿ ಹೆಗಲು ಕೊಟ್ಟಿದ್ದಾರೆ. ಪಂಕಜ್ ಮೋದಿ ಅವರ ನಿವಾಸದಿಂದ ಪಾರ್ಥಿವ ಶರೀರ ಅಂತಿಮ ಯಾತ್ರೆ ಹೊರಡಲಾಗಿತ್ತು. ಇಂದು ಬೆಳಗ್ಗೆ 9:30ರ ವೇಳೆಗೆ ಸೆಕ್ಟರ್ 30ರ ರುದ್ರಭೂಮಿಯಲ್ಲಿ …

Read More »

‘ಭವ್ಯವಾದ ಶತಮಾನದ ದೀಪ ದೇವರ ಪಾದ ಸೇರಿದೆ’: ತಾಯಿಯ ಅಗಲಿಕೆಯ ಬಗ್ಗೆ ಪ್ರಧಾನಿ ಮೋದಿ ಟ್ವೀಟ್

 ನವದೆಹಲಿ: ಶತಮಾನದ ದೀಪವು ದೇವರ ಪಾದ ಸೇರಿದೆ ಎಂದಿ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ. ತನ್ನ ತಾಯಿ ಹೀರಾಬೆನ್ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಅಹಮದಾಬಾದಿನ ಯುಎನ್ ಮೆಹ್ತಾ ಆಸ್ಪತ್ರೆಯಲ್ಲಿ ಶುಕ್ರವಾರ ಮುಂಜಾನೆ ಕೊನೆಯುಸಿರೆಳೆದಿದ್ದರು. ಈ ಬಗ್ಗೆ ತನ್ನ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಭವ್ಯವಾದ ಶತಮಾನವು ದೇವರ ಪಾದದ ಮೇಲೆ ನಿಂತಿದೆ. ತಾಯಿಯಲ್ಲಿ ನಾನು ಮೂರು ವಿಚಾರಗಳನ್ನು ಕಂಡಿದ್ದು, ಅದು ತಪಸ್ವಿಯ ಪ್ರಯಾಣ, ನಿಸ್ವಾರ್ಥ ಕರ್ಮಯೋಗಿಯ ಸಂಕೇತ ಮತ್ತು ಮೌಲ್ಯಗಳಿಗೆ ಬದ್ಧವಾಗಿರುವ ಜೀವನವನ್ನು ಒಳಗೊಂಡಿದೆ ಎಂದವರು ಬರೆದುಕೊಂಡಿದ್ದಾರೆ.

Read More »

You cannot copy content of this page.