ತಾಜಾ ಸುದ್ದಿ

ಮಂಗಳೂರು ಮೆಡಿಕಲ್ ಡ್ರಗ್ ಜಾಲ : ಮತ್ತೆ ಇಬ್ಬರು ವೈದ್ಯರ ಬಂಧನ

ಮಂಗಳೂರು : ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳನ್ನು ಒಳಗೊಂಡ ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿಸಿದ ಮಂಗಳೂರು ಪೊಲೀಸರು ಇಂದು ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆಂಧ್ರ ಪ್ರದೇಶದ ಅನಂತಪುರದ ನಿವಾಸಿ ಹಾಗೂ ಪ್ರಸ್ತುತ ಮಂಗಳೂರಿನ ಅತ್ತಾವರದ ಅಪಾರ್ಟ್‌ ಮೆಂಟ್‌ನಲ್ಲಿ ವಾಸವಿರುವ ಡಾ ರಾಘವ ದತ್ತಾ (28) ಮತ್ತು ಬೆಂಗಳೂರಿನ ಹಲಸೂರು ಜೋಡುಪಾಳ್ಯದ ನಿವಾಸಿ ಹಾಗೂ ಹಾಲಿ ಮಂಗಳೂರಿನ ಫಳ್ನೀರ್‌ ನಲ್ಲಿ ವಾಸವಿರುವ ಡಾ ಬಾಲಾಜಿ(29) ಬಂಧಿತ ಆರೋಪಿಗಳಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 13 ಮಂದಿ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಮತ್ತೆ ಇಬ್ಬರ ಬಂಧನದೊಂದಿಗೆ …

Read More »

ನಮ್ಮನ್ನು ಸ್ವಂತ ಇಚ್ಛೆಯ ಪ್ರಕಾರ ಬದುಕಲು ಬಿಡಿ; ಬಂಟ್ವಾಳದ ಸಾನಿಯಾ

ಮಂಗಳೂರು : ಬಲವಂತವಾಗಿ ಲಿಂಗ ಪರಿವರ್ತನೆ ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಸುದ್ದಿ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ತೃತೀಯಲಿಂಗಿಯಾಗಿ ಪರಿವರ್ತನೆಗೊಂಡಿರುವ ಮಹಮ್ಮದ್‌ ನಿಜಾಮ್‌ ನಮ್ಮನ್ನು ಸ್ವಂತ ಇಚ್ಛೆಯ ಪ್ರಕಾರ ಬದುಕಲು ಬಿಡಿ. ಅವಮಾನಿಸುವುದನ್ನು ಬಿಟ್ಟು ನಮ್ಮ ಬದುಕುವ ಹಕ್ಕುಗಳನ್ನು ಗೌರವಿಸಿ ಎಂದಿದ್ದಾರೆ. ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತೊಕ್ಕೊಟ್ಟಿನಲ್ಲಿ ನಡೆದ ತೃತೀಯಲಿಂಗಿಗಳ ಕಾರ್ಯಕ್ರಮದ ವಿಡಿಯೊ ಹಂಚಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ’ ಎಂದು ನೋವು ತೋಡಿಕೊಂಡರು. ತೃತೀಯಲಿಂಗಿ ಬಂಟ್ವಾಳದ ಸಾನಿಯಾ (ಮೊದಲ ಹೆಸರು ಮಹಮ್ಮದ್‌ ನಿಜಾಮ್‌), ‘ನನಗೆ ಬಾಲ್ಯದಿಂದಲೂ …

Read More »

ಮಂಜೇಶ್ವರ: ಬೈಕ್ ಗೆ ಶಾಲಾ ವಾಹನ ಢಿಕ್ಕಿ – ಇಬ್ಬರು ವಿದ್ಯಾರ್ಥಿಗಳು ಮೃತ್ಯು

ಮಂಜೇಶ್ವರ: ಮಂಜೇಶ್ವರ ಸಮೀಪದ ಮೀಂಜ ಬಾಳಿಯೂರು ಬಳಿ ಶಾಲಾ ವಾಹನಕ್ಕೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.ಮೃತಪಟ್ಟವರನ್ನು ಮೀಯಪದವಿನ ಪ್ರೀತೇಶ್ ಶೆಟ್ಟಿ‌ ಮತ್ತು ಅಭಿ ಎಂದು ಗುರುತಿಸಲಾಗಿದೆ.ವಿದ್ಯಾರ್ಥಿಗಳನ್ನು ಕೊಂಡೊಯ್ಯುತ್ತಿದ್ದ ಬಸ್ ಬೈಕ್ ಗೆ ಢಿಕ್ಕಿ ಹೊಡೆದಿದ್ದು, ಬೈಕ್ ನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

Read More »

ಇಸ್ಲಾಂಗೆ ಮತಾಂತರಗೊಂಡ ರಾಖಿ ಸಾವಂತ್

ನವದೆಹಲಿ: ನಟಿ ರಾಖಿ ಸಾವಂತ್ ಹಾಗೂ ಮೈಸೂರು ಮೂಲದ ಆದಿಲ್ ದುರಾನಿ ಅವರ ರಹಸ್ಯ ಮದುವೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ವಿವಾಹ ಹಿನ್ನೆಲೆಯಲ್ಲಿ ರಾಖಿ ಸಾವಂತ್ ಅವರು, ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡು ತಮ್ಮ ಹೆಸರನ್ನು ರಾಖಿಯಿಂದ ಫಾತಿಮಾಗೆ ಬದಲಾಯಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಮದುವೆಯ ಸುದ್ದಿಯನ್ನು ಆದಿಲ್ ದುರಾನಿ ತಳ್ಳಿ ಹಾಕಿದ್ದಾರೆ. ತನ್ನ ಬಹುಕಾಲದ ಗೆಳೆಯ, ಮೈಸೂರು ಮೂಲದ ಆದಿಲ್ ಖಾನ್ ದುರಾನಿ ಜೊತೆಗಿನ ಮದುವೆಯ ಸಮಯದಲ್ಲಿ, ರಾಖಿ ಸಾವಂತ್ ತನ್ನ ಹೆಸರನ್ನು ಕೂಡ ಬದಲಾಯಿಸಿಕೊಂಡಿದ್ದಾರೆ. ವಿಶೇಷ ಮದುವೆ ಪ್ರಮಾಣಪತ್ರದ ಪ್ರಕಾರ, ರಾಖಿ …

Read More »

BIGG NEWS : ಭೂ ಪರಿವರ್ತನೆ ಮಾಡುವ ಮಾಲೀಕರಿಗೆ ಬಿಗ್ ಶಾಕ್ : ರಾಜ್ಯ ಸರ್ಕಾರದಿಂದ ಅರ್ಜಿ ಶುಲ್ಕ ಭಾರೀ ಹೆಚ್ಚಳ

ಬೆಂಗಳೂರು: ಬೇಸಾದಯ ಉದ್ದೇಶಕ್ಕಾಗಿ ಹೊಂದಿರುವ ಯಾವುದೇ ಭೂಮಿಯನ್ನು ಬೇಸಾಯೇತರ ಉದ್ದೇಶಕ್ಕಾಗಿ ಪರಿವರ್ತಿಸುವಾಗ ಸಲ್ಲಿಸುವಂತ ಅರ್ಜಿ ಶುಲ್ಕದಲ್ಲಿ ಭಾರೀ ಹೆಚ್ಚಳ ಮಾಡಲಾಗಿದೆ. ಈ ಸಂಬಂಧ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯಿಂದ ರಾಜ್ಯ ಪಾಲರ ಪರವಾಗಿ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಅದರಲ್ಲಿ ಮೂಲ ಅಧಿನಿಯಮದಲ್ಲಿನ 96ನೇ ಪ್ರಕರಣದಲ್ಲಿ ಉಪಪ್ರಕರಣ(1)ರಲ್ಲಿ ಸುಳ್ಳು ಅಥವಾ ತಪ್ಪು ಅಫಿಡವಿಟ್ ಘೋಷಣೆಯನ್ನಾಧರಿಸಿ ಎಂಬ ಪದಗಳನ್ನು ಸೇರಿಸುವುದು ಎಂದಿದ್ದಾರೆ. ಇನ್ನೂ ಭೂ ಪರಿವರ್ತನೆ ಶುಲ್ಕಲದಲ್ಲಿ ಭಾರೀ ಹೆಚ್ಚಳ ಮಾಡಲಾಗಿದೆ. ಒಂದು ಸಾವಿರ ರೂಪಾಯಿಯ ಶುಲ್ಕವನ್ನು ಒಂದು ಲಕ್ಷಕ್ಕೆ ಹೆಚ್ಚಿಸಿದ್ದರೇ, ಇಪ್ಪತ್ತೈದು ರೂಪಾಯಿಗಳ …

Read More »

BREAKING NEWS: ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ ವೇಳೆ ಭದ್ರತಾ ಲೋಪ

ಹುಬ್ಬಳ್ಳಿ: ಯುವ ಜನೋತ್ಸವದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಗೆ ಆಗಮಿಸಿದಂತ ಪ್ರಧಾನಿ ನರೇಂದ್ರ ಮೋದಿಯವರು, ರೋಡ್ ಶೋ ನಡೆಸಿದ ವೇಳೆಯಲ್ಲಿ ಭದ್ರತಾ ಲೋಪ ಕಂಡು ಬಂದಿದೆ. ಭದ್ರತೆಯನ್ನು ಮೀರಿದಂತ ಯುವಕನೋರ್ವ ಮೋದಿಗೆ ಹಾರ ಹಾಕಲು ಯತ್ನಿಸಿದ್ದಾನೆ.   ಇಂದು ಮೋದಿಯವರು ಹುಬ್ಬಳ್ಳಿಯಲ್ಲಿ ರೋಡ್ ಶೋ ನಡೆಸುತ್ತಿದ್ದಂತ ಸಂದರ್ಭದಲ್ಲಿ ಭದ್ರತಾ ಲೋಪ ಕಂಡು ಬಂದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರೋಡ್ ಶೋ ನಡೆಸುತ್ತಿದ್ದಂತ ಸಂದರ್ಭದಲ್ಲಿ ಭದ್ರತೆಯನ್ನು ಮೀರಿ ಯುವಕನೋರ್ವ ನಡೆದುಕೊಂಡಿದ್ದಾರೆ. ಪ್ರಧಾನಿ ಮೋದಿಯವರ ಭದ್ರತೆಯನ್ನು ಮೀರಿ ಹುಬ್ಬಳ್ಳಿಯ ರೋಡ್ ಶೋ ವೇಳೆ, ಮೋದಿಗೆ ಹಾರ ಹಾಕಲು ಯತ್ನಿಸಿದ್ದಾನೆ. …

Read More »

ಬಂಟ್ವಾಳ: ಭಜರಂಗದಳದ ಮುಖಂಡನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ

ಬಂಟ್ವಾಳ: ಬಜರಂಗದಳದ ಮುಖಂಡನೋರ್ವನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾದ ಘಟನೆ ಪಾಣೆಮಂಗಳೂರು ಹಳೆ ಸೇತುವೆ ಬಳಿ ನಡೆದಿದೆ. ಸಜೀಪ ನಿವಾಸಿ ರಾಜೇಶ್ ಪೂಜಾರಿ ಸಾವನ್ನಪ್ಪಿದವರು. ರಾಜೇಶ್ ಪೂಜಾರಿ ಬಜರಂಗದಳದ ಕಲ್ಲಡ್ಕ ಪ್ರಖಂಡ ಗೋ ರಕ್ಷಣಾ ಪ್ರಮುಖ್ ಆಗಿದ್ದರು ಎಂದು ತಿಳಿದುಬಂದಿದೆ. ಯುವಕ ನದಿಗೆ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಮುಸ್ಲಿಮ್ ಯುವಕರ ತಂಡ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಕಾರದೊಂದಿಗೆ ಮೃತದೇಹವನ್ನು ನೀರಿನಿಂದ ಮೇಲಕ್ಕೆ ಎತ್ತಿದೆ. ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.ಇದು ಆತ್ಮಹತ್ಯೆಯೋ? ಅಥವಾ ಅಪಘಾತವೋ? ಎಂಬುವುದು ತಿಳಿದು ಬರಬೇಕಿದೆ.

Read More »

BIGG NEWS : ಶಬರಿಮಲೆ ಪ್ರಸಾದಕ್ಕೆ ಬಳಸಿದ ಏಲಕ್ಕಿಯಲ್ಲಿ ಕೆಮಿಕಲ್‌ ಪತ್ತೆ : 6.5 ಕೋಟಿ ರೂ.ಮೌಲ್ಯದ ʻಅರಾವಣಂʼ ನೈವೇದ್ಯ ವ್ಯರ್ಥ

ಕೊಚ್ಚಿ : ಶಬರಿಮಲೆ ಅಯ್ಯಪ್ಪ ಸ್ವಾಮಿ ಪ್ರಸಾದ ಎಂದಾಗ ಎಲ್ಲರೂ ಭಕ್ತಿಯಿಂದ ಸ್ವೀಕಾರ ಮಾಡುತ್ತಾರೆ ಇದೀಗ ಇಂತಹ ದೇವಸ್ಥಾನದ ಪ್ರಸಾದ ಕ್ಕೆ ಬಳಸಿದ ಏಲಕ್ಕಿಯಲ್ಲಿ ಕೆಮಿಕಲ್ ಪತ್ತೆಯಾಗಿದ್ದು‌, ಮತ್ತೊಂದು ಆತಂಕಕ್ಕೆ ಕಾರಣವಾಗಿದೆ. ಅಯ್ಯಪ್ಪ ಸ್ವಾಮಿ ಪ್ರಸಾದ ʻಅರಾವಣಂʼಗೆ ಬಳಸಲಾದ ಏಲಕ್ಕಿಯಲ್ಲಿ95 ಬಗೆಯ ಭಾರೀ ಪ್ರಮಾಣದ ಕ್ರಿಮಿನಾಶಕ ಪತ್ತೆಯಾಗಿದೆ. ಈ ನಿಟ್ಟಿನಲ್ಲಿ 6.5 ಕೋಟಿ ರೂ ಮೌಲ್ಯದ ಅಯ್ಯಪ್ಪ ಸ್ವಾಮಿ ಪ್ರಸಾದ ವ್ಯರ್ಥಮಾಡಲಾಗಿದೆ ಎಂಧು ಕೆಮಿಕಲ್‌ ಟೆಸ್ಟ್‌ ಮೂಲಕ ಮಾಹಿತಿ ಬಹಿರಂಗವಾಗಿದೆ. ಈ ನಿಟ್ಟಿನಲ್ಲಿ ಕೇರಳ ಹೈಕೋರ್ಟ್‌ ʻಅರಾವಣಂʼ ಪ್ರಸಾದವನ್ನು ಭಕ್ತರಿಗೆ ವಿತರಣೆ ಮಾಡುವುದಕ್ಕೆ ತಡೆಯಾಜ್ಞೆ …

Read More »

ಇರಾ : ಪಿಲಿಪಂಜರದ ಶತಾಯುಷಿ ಅಜ್ಜಿ ನಿಧನ

ಮುಡಿಪು: ಇಲ್ಲಿನ ಇರಾ ಪಿಲಿಪಂಜರದ ಶತಾಯುಷಿ ಕಲ್ಯಾಣಿ (102) ಗುರುವಾರ ಸ್ವಗೃಹದಲ್ಲಿ ವಯೋ ಸಹಜ ಖಾಯಿಲೆಯಿಂದ ವಿಧಿವಶರಾಗಿದ್ದಾರೆ. ಪ್ರಸೂತಿ ತಜ್ಞೆಯೂ ಆಗಿದ್ದ ಇವರು ಇರಾ ವ್ಯಾಪ್ತಿಯಲ್ಲಿ ಹಿರಿಯಜ್ಜಿ ಎಂಬ ಹೆಗ್ಗಳಿಕೆ ಇವರದು. ಇವರು 5 ಗಂಡು ಮಕ್ಕಳು, 1 ಹೆಣ್ಣು ಮಗಳು, ಹಾಗೂ ಕುಟುಂಬಸ್ಥರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Read More »

ವಿಟ್ಲ: ಭಾರತ ಸೇವಾಶ್ರಮ ಕನ್ಯಾನ -ವಸತಿ ಕಟ್ಟಡಗಳ ನಿರ್ಮಾಣಕ್ಕೆ ಶಿಲಾನ್ಯಾಸ

ವಿಟ್ಲ: ಭಾರತ ಸೇವಾಶ್ರಮ (ರಿ) ಕನ್ಯಾನ ಇದರ ವತಿಯಿಂದ ಇಂದು ನಡೆದ ಆಶ್ರಮದ ಕಾರ್ಯಕರ್ತರ ವಸತಿ ಕಟ್ಟಡಗಳ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಭಾಗವಹಿಸಿದರು. ಈ ಸಂದರ್ಭದಲ್ಲಿ ಆಶ್ರಮದ ಕಾರ್ಯದರ್ಶಿ ಈಶ್ವರ ಭಟ್,  ಕರ್ನಾಟಕ ಬ್ಯಾಂಕ್ ನ ಆಡಳಿತ ನಿರ್ದೇಶಕರಾದ ಮಹಾಬಲೇಶ್ವರ ಎಂ ಎಸ್,  ಆಶ್ರಮದ ಆಡಳಿತ ಸಮಿತಿಯ ಪ್ರಮುಖರು,ಕನ್ಯಾನ ಪಂಚಾಯತ್ ಸದಸ್ಯರಾದ ಅಬ್ದುಲ್ ಮಜೀದ್ ಕನ್ಯಾನ ಹಾಗು ಆಶ್ರಮದ ಕಾರ್ಯಕರ್ತರು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

Read More »

You cannot copy content of this page.