ತಾಜಾ ಸುದ್ದಿ

BIGG NEWS : ‘ಡೆತ್ ನೋಟ್’ ಬರೆದಿಟ್ಟು ಕಾಲೇಜಿನ ಬಾತ್ ರೂಮ್ ನಲ್ಲೇ ವಿದ್ಯಾರ್ಥಿನಿ ಆತ್ಮಹತ್ಯೆ

ಮುದ್ದೇಬಿಹಾಳ : ನಾಗರಬೆಟ್ಟದಲ್ಲಿರುವ ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕಾಲೇಜಿನ ಶೌಚಾಲಯದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಕೋಮಲಾಪುರ ಗ್ರಾಮದ ಪದ್ಮಾವತಿ ಸಂಜಯ ಮೇಟಿ (17) ಎಂದು ಗುರುತಿಸಲಾಗಿದೆ.  ಬಾತ್ ರೂಂ ಒಳಗೆ ಹೋದ ವಿದ್ಯಾರ್ಥಿನಿ ನಲ್ಲಿ ನೀರು ಆನ್ ಮಾಡಿ ಪ್ಲಾಸ್ಟಿಕ್ ವಯರ್ ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಹಳ ಹೊತ್ತಾದರೂ ಹೊರಗೆ ಬಾರದ ಹಿನ್ನೆಲೆ ಕಿಟಕಿ ಮೂಲಕ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು …

Read More »

BIG NEWS : ‘ಕುಡಿದ ಮತ್ತಿ’ನಲ್ಲಿ ಯುವತಿಯ ಎಡವಟ್ಟು..! ಬೆಂಗಳೂರಿನಿಂದ ಮುಂಬೈಗೆ ‘ಬಿರಿಯಾನಿ ಆರ್ಡರ್’

ಮುಂಬೈ: ಕುಡಿದ ಮತ್ತಿನಲ್ಲಿ ಮುಂಬೈ ನಿವಾಸಿಯಾಗಿದ್ದ ಯುವತಿಯೊಬ್ಬಳು ಬೆಂಗಳೂರಿನಿಂದ ಆನ್‌ಲೈನ್ ನಲ್ಲಿ ಬಿರಿಯಾನಿ ಆರ್ಡರ್ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಪ್ರತಿಷ್ಠಿತ ಮೇಘನಾ ಫುಡ್ಸ್‌ ಹೋಟೆಲ್‌ನಿಂದ ಮುಂಬೈ ಯುವತಿಯೊಬ್ಬಳು ಆನ್‌ಲೈನ್ ಮೂಲಕವೇ ಮುಂಬೈನಲ್ಲಿರುವ ತನ್ನ ನಿವಾಸಕ್ಕೆ ಬಿರಿಯಾನಿ ಆರ್ಡರ್‌ ಮಾಡಿದ್ದಾಳೆ. ಅಷ್ಟೇ ಅಲ್ಲದೇ 2500 ರೂಪಾಯಿ ಕೂಡಾ ಸಹ ಪಾವತಿಸಿದ್ದಾಳೆ. ತಿನ್ನೋದಕ್ಕೆ ಹಸಿವಾಗುತ್ತಿದ್ದರೂ ಯಾಕೆ ಇನ್ನೂ ಫುಲ್‌ ಬಂದಿಲ್ಲ ಎಂದು ಪರಿಶೀಲನೆ ನಡೆಸಿದಾಗ ತಪ್ಪಾಗಿದೆ ಎಂದು ತಿಳಿಯಲಾಗಿದೆ. ಈ ವಿಚಿತ್ರ ಘಟನೆಯ ಸಂಬಂಧ ಈ ಪೋಸ್ಟ್‌ಗೆ ಜೊಮ್ಯಾಟೋ ಸೇರಿದಂತೆ ಅನೇಕ ಟ್ವಿಟರ್ ಬಳಕೆದಾರರಿಂದ …

Read More »

ಕಾರ್ಕಳದಿಂದ ಪಕ್ಷೇತರ ಅಭ್ಯರ್ಥಿಯಾಗಿ ಪ್ರಮೋದ್ ಮುತಾಲಿಕ್ ಸ್ಪರ್ಧೆ..!

ಉಡುಪಿ: ಈ ಬಾರಿಯ ಚುನಾವಣೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಶ್ರೀರಾಮ ಸೇನೆ ನಾಯಕ ಪ್ರಮೋದ್ ಮುತಾಲಿಕ್ ಅಧಿಕೃತ ಘೋಷಣೆ ಮಾಡಿದ್ದಾರೆ. ಕಾರ್ಕಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾನು ಬಿಜೆಪಿ, ಬಿಜೆಪಿ ಸಿದ್ಧಾಂತದ ವಿರೋಧಿ ಅಲ್ಲ. ಬಿಜೆಪಿಯೊಳಗಿನ ಕೆಲ ವ್ಯಕ್ತಿಗಳ ತತ್ವ ಸಿದ್ಧಾಂತ ವಿರುದ್ಧ ನನ್ನ ಹೋರಾಟ. ಬಿಜೆಪಿ ಅಂದು ಮಾಡಿದ ಅವಮಾನ ಎಂದಿಗೂ ಮರೆಯೋದಿಲ್ಲ. ಹಿಂದುತ್ವ ಪ್ರಾಮಾಣಿಕತೆ ಇದ್ದರೆ ನನಗೆ ಬಿಜೆಪಿ ಕಾರ್ಕಳದಲ್ಲಿ ಬೆಂಬಲ ಕೊಡಬೇಕು’ ಎಂದು ಅವರು ಕರೆ ನೀಡಿದ್ದಾರೆ.ಸಾವಿರಾರು ಕಾರ್ಯಕರ್ತರ ಒತ್ತಡದಿಂದ ನೋವಿನ …

Read More »

ಹಿಜಬ್ ವಿವಾದ : ಶೀಘ್ರದಲ್ಲೇ ತ್ರಿಸದಸ್ಯ ಪೀಠದಲ್ಲಿ ಇತ್ಯರ್ಥ..!

ನವದೆಹಲಿ : ರಾಜ್ಯ ಸರಕಾರದ ತರಗತಿಗಳಲ್ಲಿ ಹಿಜಬ್ ಧರಿಸುವುದನ್ನು ನಿರ್ಬಂಧಿಸಿ ಕೋರ್ಟ್ ಮೆಟ್ಟಿಲೇರಿರುವ ವಿಧ್ಯಾರ್ಥಿಗಳ ಪ್ರಕರಣವನ್ನು ಇತ್ಯರ್ಥಗೊಳಿಸಲು ಶೀಘ್ರದಲ್ಲಿ ತ್ರಿಸದಸ್ಯ ಪೀಠದಲ್ಲಿ ಆರಂಭಿಸಲಾಗುವುದು. ಅದಕ್ಕೆ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಭರವಸೆ ನೀಡಿದ್ದಾರೆ ಮುಂದಿನ ತಿಂಗಳಿನಿಂದ ಪರೀಕ್ಷೆಗಳು ಪ್ರಾರಂಭವಾಗುವ ಹಿನ್ನಲೆ ಹಿಜಬ್ ವಿವಾದದ ಪ್ರಕರಣದ ವಿಚಾರಣೆಯನ್ನು ಶೀಘ್ರ ಆರಂಭಿಸುವಂತೆ ವಿದ್ಯಾರ್ಥಿನಿಯರ ಪರ ವಕೀಲೆ ಮೀನಾಕ್ಷಿ ಅರೋರಾ ಮನವಿ ಮಾಡಿದ ಹಿನ್ನೆಲೆ ಸಿಜೆಐ ಈ ಭರವಸೆ ನೀಡಿದ್ದಾರೆ. ಇಂದು ಕಲಾಪ ಆರಂಭವಾಗುತ್ತಿದ್ದಂತೆ ಈ ಬಗ್ಗೆ ಕೋರ್ಟ್ ಗಮನಕ್ಕೆ ತರಲಾಯಿತು. ಮುಂದಿನ …

Read More »

ಜಾತ್ರೆಯಲ್ಲಿ ದೇವರ ವಿಗ್ರಹವನ್ನು ಹೊತ್ತುಕೊಂಡಿದ್ದ ಕ್ರೇನ್‌ ಬಿದ್ದು ನಾಲ್ವರು ದುರ್ಮರಣ

ಚೆನ್ನೈ;ಜಾತ್ರೆಯಲ್ಲಿ ದೇವರ ವಿಗ್ರಹವನ್ನು ಹೊತ್ತುಕೊಂಡಿದ್ದ ಕ್ರೇನ್‌ ಕೆಳಗೆ ಬಿದ್ದು ನಾಲ್ವರು ಮೃತಪಟ್ಟು, 9 ಮಂದಿ ಗಾಯಗೊಂಡಿರುವ ಘಟನೆ ಅರಕ್ಕೋಣಂ ಸಮೀಪದ ನೆಮಿಲಿಯ ಕಿಲ್ವೀಡಿ ಗ್ರಾಮದಲ್ಲಿ ನಡೆದಿದೆ. ಕೆ.ಮುತ್ತುಕುಮಾರ್(39),ಎಸ್.ಭೂಪಾಲನ್ (40), ಮತ್ತು ಬಿ.ಜೋತಿಬಾಬು (17) ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಜಾತ್ರೆಯ ಪ್ರಯುಕ್ತ ದೇವತೆಯ ವಿಗ್ರಹವನ್ನು ಕ್ರೇನ್‌ ಮೂಲಕ ಗ್ರಾಮದಲ್ಲಿ ಹೊತ್ತುಕೊಂಡು ಮೆರವಣಿಗೆ ಮಾಡುತ್ತಿದ್ದರು. ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು ದೇವರನ್ನು ಅಲಂಕರಿಸಲು ಎಂಟು ಜನ ಕ್ರೇನ್‌ ಮೇಲೆಯೇ ವಿಗ್ರಹದ ಪಕ್ಕದಲ್ಲಿದ್ದರು. ಈ ವೇಳೆ ಎಂಟು ಜನರ ಭಾರದಿಂದ ಕ್ರೇನ್‌ ಒಂದು ಕಡೆ ವಾಲಿ ಏಕಾಏಕಿ ಬಿದ್ದು …

Read More »

ಸುರತ್ಕಲ್: ನವವಿವಾಹಿತೆ ನೇಣು ಬಿಗಿದ  ಸ್ಥಿತಿಯಲ್ಲಿ ಪತ್ತೆ.!

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳ ಒಟ್ಟೆ ಕಾಯರ್ ಎಂಬಲ್ಲಿ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಉಳ್ಳಾಲ ಕೋಟೆಕಾರ್ ಮಾಡೂರು ನಿವಾಸಿ ಚಂದ್ರಶೇಖರ-ಗಿರಿಜಾ ದಂಪತಿ ಪುತ್ರಿ ದಿವ್ಯಾ(26) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ಒಂದೂವರೆ ವರ್ಷದ ಹಿಂದಷ್ಟೇ ಒಟ್ಟೆಕಾಯರ್ ನಿವಾಸಿ ಹರೀಶ್ ಎಂಬವರನ್ನು ಮದುವೆಯಾಗಿದ್ದರು. ದಂಪತಿ ಶನಿವಾರ ನೆರೆಮನೆಯಲ್ಲಿ ಜರುಗಿದ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಈ ವೇಳೆ ಜಗಳ ನಡೆದಿದ್ದು ದಿವ್ಯಾ ಬೇಸರಗೊಂಡು ವಾಪಸ್ ಮನೆಗೆ ಬಂದಿದ್ದರು. ಇದರಿಂದ ನೊಂದಿದ್ದ ದಿವ್ಯಾ ನಿನ್ನೆ ಸಂಜೆ ಬೆಡ್ ರೂಮ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. …

Read More »

ಅಂಡಮಾನ್ ಮತ್ತು ನಿಕೋಬಾರ್‌ನ 21 ದ್ವೀಪಗಳಿಗೆ ʻಪರಮವೀರ ಚಕ್ರʼ ಪ್ರಶಸ್ತಿ ಪುರಸ್ಕೃತರ ಹೆಸರಿಟ್ಟ ಪ್ರಧಾನಿ ಮೋದಿ!

ನವದೆಹಲಿ : ಇಂದು ನಡೆದ ಪರಾಕ್ರಮ್ ದಿವಸ್(Parakram Diwas) ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಂಡಮಾನ್ ಮತ್ತು ನಿಕೋಬಾರ್‌ನ ಹೆಸರಿಸದ 21 ದೊಡ್ಡ ದ್ವೀಪಗಳಿಗೆ ʻಪರಮ ವೀರ ಚಕ್ರʼ ಪ್ರಶಸ್ತಿ ಪುರಸ್ಕೃತ(Param Vir Chakra awardees)ರ ಹೆಸರನ್ನು ಹೆಸರಿಸಿದ್ದಾರೆ.   ಈ ಹಿಂದೆ ರಾಸ್ ಐಲ್ಯಾಂಡ್ಸ್ ಎಂದು ಕರೆಯಲಾಗುತ್ತಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪದಲ್ಲಿ ನಿರ್ಮಿಸಲಾಗಿದ್ದ ನೇತಾಜಿಗೆ ಮೀಸಲಾಗಿರುವ ರಾಷ್ಟ್ರೀಯ ಸ್ಮಾರಕದ ಮಾದರಿಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದರು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ …

Read More »

ಗಾಯಕಿ ಮಂಗ್ಲಿ ಕಾರಿನ ಮೇಲೆ ಕಲ್ಲು ತೂರಾಟ-ಮೇಕಪ್ ರೂಂಗೆ ನುಗ್ಗಿ ದಾಂಧಲೆ..!

ಬಳ್ಳಾರಿ: ತೆಲುಗು ಮೂಲದ ಇತ್ತೀಚೆಗೆ ಕನ್ನಡದಲ್ಲಿಯೂ ಖ್ಯಾತಿ ಗಳಿಸುತ್ತಿರುವ ಗಾಯಕಿ ಮಂಗ್ಲಿ ಕಾರಿನ ಮೇಲೆ ಬಳ್ಳಾರಿಯಲ್ಲಿ ಕಳೆದ ರಾತ್ರಿ ಕಲ್ಲು ತೂರಾಟ ನಡೆದ ಘಟನೆ ನಡೆದಿದೆ. ನಿನ್ನೆ ರಾತ್ರಿ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಬಳ್ಳಾರಿ ಉತ್ಸವ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. ಬಳ್ಳಾರಿ ಉತ್ಸವದಲ್ಲಿ ಹಾಡಲೆಂದು ಸಿಂಗರ್ ಮಂಗ್ಲಿ ಬಂದಿದ್ದರು. ಉತ್ಸವದಲ್ಲಿ ಹಾಡು ಮುಗಿಸಿ ವೇದಿಕೆಯ ಹಿಂಭಾಗಕ್ಕೆ ಹೋಗುವಾಗ ಕಾರ್ಯಕ್ರಮಕ್ಕೆ ಬಂದಿದ್ದ ಜನರು ಅವರನ್ನು ನೋಡಲು ಮುಗಿಬಿದ್ದಿದ್ದರು. ವಿಶೇಷವಾಗಿ ಯುವಕರ ದಂಡು ಮಂಗ್ಲಿ ಅವರನ್ನು ಕಾಣಲು ಮುಗಿಬಿದ್ದಿದ್ದರು. ವೇದಿಕೆ ಹಿಂಭಾಗದಲ್ಲಿದ್ದ ಮೇಕಪ್ …

Read More »

ಕಾಸರಗೋಡು: ತಾಯಿ ಮತ್ತು ಮಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ..!

ಕಾಸರಗೋಡು: ತಾಯಿ ಮತ್ತು ಮಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೇಡಡ್ಕ ಕುಂಡಂಗುಯಿಯಲ್ಲಿ ನಡೆದಿದೆ. ಕುಂಡಂಗುಯಿ ಚಂದ್ರ ಎಂಬವರ ಪತ್ನಿ ನಾರಾಯಣಿ (46) ಮತ್ತು ಪುತ್ರಿ ಶ್ರೀನಂದಾ (12)ಮೃತದೇಹ ಪತ್ತೆಯಾಗಿದೆ.ಘಟನೆ ಬಗ್ಗೆ ಅನುಮಾನ ವ್ಯಕ್ತವಾಗಿದೆ. ನಾರಾಯಣಿರವರ ಮೃತದೇಹ ನೇಣು ಬಿಗಿದು ಹಾಗೂ ಶ್ರಿನಂದಾಳ ಮೃತದೇಹ ಮನೆಯ ಕೋಣೆಯಲ್ಲಿ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.ಈ ಕುರಿತು ಹೆಚ್ಚಿನ‌ ಮಾಹಿತಿ ನಿರೀಕ್ಷಿಸಲಾಗಿದೆ.

Read More »

ಭೀಕರ ರಸ್ತೆ ಅಪಘಾತ, ಟ್ರಕ್​-ಕಾರು ನಡುವೆ ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಸಾವು

ಸಿಕರ್: ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ಟ್ರಕ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಹರಿಯಾಣ ನಿವಾಸಿಗಳು ಎನ್ನಲಾಗಿದೆ. ಫತೇಪುರ್-ಸಲಾಸರ್ ರಸ್ತೆಯಲ್ಲಿ ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಫತೇಪುರ್-ಸಲಾಸರ್ ರಸ್ತೆಯಲ್ಲಿ ಟ್ರಕ್ ಮತ್ತು ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಹರಿಯಾಣ ನಿವಾಸಿಗಳು ಎಂದು ತಿಳಿದುಬಂದಿದೆ.

Read More »

You cannot copy content of this page.