ತಾಜಾ ಸುದ್ದಿ

32 ವಾರದ ಗರ್ಭಿಣಿಯ ಗರ್ಭಪಾತಕ್ಕೆ ಕೋರ್ಟ್ ಅಸ್ತು

ಮುಂಬೈ: ತನ್ನ ಗರ್ಭ​ವನ್ನು ಮುಂದು​ವ​ರೆ​ಸ​ಬೇಕೆ, ಬೇಡವೇ ಎಂಬು​ದ​ನ್ನು ನಿರ್ಧ​ರಿ​ಸುವ ಹಕ್ಕು ಮಹಿ​ಳೆ​ಗಿದೆ ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ. ಭ್ರೂಣಕ್ಕೆ ತೀವ್ರ​ವಾದ ಸ​ಮ​ಸ್ಯೆ​ಗ​ಳು ಇರು​ವು​ದ​ರಿಂದ ವಿವಾ​ಹಿತ ಮಹಿ​ಳೆಗೆ 32ನೇ ವಾರದಲ್ಲಿ ಗರ್ಭ​ಪಾತ ಮಾಡಿ​ಕೊ​ಳ್ಳಲು ಕೋರ್ಟ್‌ ಅನು​ಮತಿ ನೀಡಿದೆ. ಗರ್ಭ​ದ​ಲ್ಲಿ​ರುವ ಮಗು​ವಿಗೆ ಆರೋಗ್ಯ ಸಮ​ಸ್ಯೆ​ಗ​ಳಿ​ರು​ವು​ದ​ರಿಂದ ಗರ್ಭ​ಪಾ​ತಕ್ಕೆ ಅವ​ಕಾಶ ನೀಡ​ಬೇಕು ಎಂದು ಕೋರಿ ಮಹಿಳೆಯೊ​ಬ್ಬರು ಬಾಂಬೆ ಹೈಕೋರ್ಟ್‌ ಮೆಟ್ಟಿ​ಲೇ​ರಿ​ದ್ದರು. ಈ ಅರ್ಜಿಯ ವಿಚಾ​ರಣೆ ನಡೆ​ಸಿದ ನ್ಯಾಯಮೂರ್ತಿ ಗೌತಮ್‌ ಪಟೇಲ್‌ ಮತ್ತು ನ್ಯಾಯಮೂರ್ತಿ ಎ​ಸ್‌.​ಜಿ.​ ದಿಗೆ ಅವ​ರಿದ್ದ ಪೀಠ, ಭ್ರೂಣಕ್ಕೆ ತೀವ್ರ ಆರೋಗ್ಯ ಸಮ​ಸ್ಯೆ​ಗ​ಳಿ​ದ್ದಾಗ ಗರ್ಭ​ಪಾ​ತಕ್ಕೆ ನಿಗದಿಪಡಿ​ಸಿ​ರುವ ಅವ​ಧಿ​ಯನ್ನು ಪರಿ​ಗ​ಣಿ​ಸ​ಬಾ​ರದು ಎಂದು …

Read More »

ಕಾರ್ಕಳ: ಕುದ್ರೋಟ್ಟುವಿನಲ್ಲಿ ಕಾರಿನೊಳಗೆ ಪೆಟ್ರೋಲ್ ಸುರಿದು ವ್ಯಕ್ತಿ ಆತ್ಮಹತ್ಯೆ..!

ಕಾರ್ಕಳ : ಕಾರಿನೊಳಗೆ ಪೆಟ್ರೋಲ್ ಸುರಿದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚರೀಪೇಟೆ ಕುದ್ರುಟ್ಟು ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ. ಮುಂಡ್ಕೂರು ಗ್ರಾಮದ ಸಚ್ಚರೀ ಪೇಟೆ ಕುದ್ರುಟ್ಟು ನಿವಾಸಿ ಕೃಷ್ಣ ಸಫಲಿಗ 46 ವರ್ಷ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ವೃತ್ತಿಯಲ್ಲಿ ಕಾರು ಚಾಲಕನಾಗಿದ್ದು ತನ್ನ ಮಾರುತಿ ಒಮಿನಿ ಕಾರಿನ ಒಳಗೆ ಕುಳಿತು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಕೃಷ್ಣ ಬರೆದಿದೆ ಎನ್ನಲಾದ ಡೆತ್ ನೋಟ್ ಕೂಡ ಸಿಕ್ಕಿದೆ. ಕೃಷ್ಣ …

Read More »

ಗಂಡ ವಿದೇಶದಲ್ಲಿ ಕೆಲಸ, ಹೆಂಡತಿ ಪಕ್ಕದ ಮನೆಯವನ ಜೋತೆ ಸರಸ, ತನ್ನ ಮೂರು ಮಕ್ಕಳಿಗೆ ಇಲಿ ಪಾ’ಷಾಣ ಕೊಟ್ಟ ಪಾಪಿ ತಾಯಿ…!

ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ನಡೆದಿರುವಂತಹ ಒಂದು ಘಟನೆಯ ಕುರಿತಂತೆ ಇಂದಿನ ಲೇಖನಿಯಲಿ ನಿಮಗೆ ಹೇಳಲು ಹೊರಟಿದ್ದೇವೆ. ರಾಘವಾನಂದಂ ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ. ರಂಜಿತಾ ಎನ್ನುವವರನ್ನು ಮದುವೆಯಾಗಿದ್ದು ದಂಪತಿಗೆ ಮೂರು ಮಕ್ಕಳಿದ್ದರು. ಅವರ ಮಕ್ಕಳಾಗಿರುವ ಭಾರ್ಗವಿ ಹಾಗೂ ಯುವರಾಜ ಮನೆಯ ಮುಂದೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಅರಿಯದಂತೆ ಇಲಿ ಪಾ’ಷಾಣ ಸೇವಿಸಿ ಮರಣ ಹೊಂದಿದ್ದರು ಆದರೆ ಒಬ್ಬ ಮಗ ಮಾತ್ರ ಬದುಕು ಉಳಿದಿದ್ದ. ಈ ಕುರಿತಂತೆ ತಾಯಿ ರಂಜಿತಾ ನನ್ನ ಮಕ್ಕಳಿಗೆ ಬಿಸ್ಕೆಟ್ ನಲ್ಲಿ ಯಾರು ಬೇಕು ಅಂತಾನೆ ಭಾಷಣವನ್ನು ಹಾಕಿ ಮುಗಿಸಿದ್ದಾರೆ ಎಂಬುದಾಗಿ ಪೊಲೀಸ್ …

Read More »

ನದಿಯಲ್ಲಿ ಒಂದೇ ಕುಟುಂಬದ 7 ಮಂದಿಯ ಮೃತದೇಹ ಪತ್ತೆ ಕೇಸ್ ಗೆ ಟ್ವಿಸ್ಟ್..!

ಪುಣೆ:ಇತ್ತೀಚೆಗೆ ಮಹಾರಾಷ್ಟ್ರದ ಪುಣೆಯ ಸಮೀಪದ ನದಿಯಿಂದ ಒಂದೇ ಕುಟುಂಬದ ಏಳು ಮಂದಿಯ ಮೃತದೇಹ ಹೊರ ತೆಗೆಯಲಾಗಿತ್ತು.ಇದೀಗ ಈ ಕುರಿತ ತನಿಖೆಯಲ್ಲಿ ಮಹತ್ವದ ಸುಳಿವು ಪೊಲೀಸರಿಗೆ ಲಭ್ಯವಾಗಿದೆ. ಈ ಹಿಂದೆ ಆರೋಪಿಯೊಬ್ಬನ ಪುತ್ರನ ಸಾವಿನ ಪ್ರಕರಣಕ್ಕೆ ಪ್ರತಿಕಾರದ ಭಾಗವಾಗಿ ಒಂದೇ ಕುಟುಂಬದ 7 ಮಂದಿಯ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನವರಿ 18 ರಿಂದ 24ರ ನಡುವೆ ಭೀಮಾ ನದಿ ದಂಡೆಯಲ್ಲಿ ಮೂರರಿಂದ ಏಳು ವರ್ಷದೊಳಗಿನ ಮೂವರು ಮಕ್ಕಳು ಸೇರಿದಂತೆ ಒಟ್ಟು ಏಳು ಮಂದಿಯ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಮೃತರ ಸಂಬಂಧಿಕರಾದ …

Read More »

ಹಗರಣ ಸಾಬೀತಾದರೆ ಸಾರ್ವಜನಿಕವಾಗಿ ನನಗೆ ನೇಣು ಹಾಕಿ-ಡಾ. ಸುಧಾಕರ್

ಕೋಲಾರ: ಕೋವಿಡ್​-19 ಸಂದರ್ಭದಲ್ಲಿ ಹಗರಣ ಮಾಡಿರುವುದು ಸಾಬೀತಾದಲ್ಲಿ ಸಾರ್ವಜನಿಕವಾಗಿ ನನಗೆ ನೇಣು ಹಾಕಿ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರೋಪ ಸಂಬಂಧಿಸಿ ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಕೋವಿಡ್​ ವೇಳೆ 3 ಸಾವಿರ ಕೋಟಿ ಖರ್ಚು ಮಾಡಿಲ್ಲ ಎಂಬುದನ್ನು ಶ್ವೇತಪತ್ರದಲ್ಲಿ ಬರೆದುಕೊಡಲು ನಾನು ಸಿದ್ದನಿದ್ದೇನೆ. ಈ ಬಗ್ಗೆ ಚರ್ಚಿಸಲು ಅವಕಾಶ ನೀಡಿದರೂ ಪಲಾಯನವಾದ ಅನುಸರಿಸಿದ ಸಿದ್ದರಾಮಯ್ಯ ಈಗ ವೃಥಾ ಆರೋಪದಲ್ಲಿ ತೊಡಗಿದ್ದಾರೆ. ನಾನು ಹಗರಣ ಮಾಡಿರುವುದು ಸಾಬೀತಾದಲ್ಲಿ ಸಾರ್ವಜನಿಕವಾಗಿ ನನಗೆ ನೇಣು ಹಾಕಿ ಎಂದು …

Read More »

ಮಲ್ಪೆ ಮೀನುಗಾರರ ಬಲೆಗೆ ಬಿದ್ದ ಬಂಗಾರ ವರ್ಣದ ಅಂಜಲ್ ಮೀನು..!

ಉಡುಪಿ : ಉಡುಪಿಯ ಜಿಲ್ಲೆಯ ಮಲ್ಪೆಯ ಕಡಲ ತೀರದಲ್ಲಿ ಅಪರೂಪದ ಬಂಗಾರ ವರ್ಣದ ಅಂಜಲ್ ಮೀನೊಂದು ಮೀನುಗಾರರ ಬಲೆಗೆ ಬಿದ್ದಿದೆ. ಸ್ವರ್ಣ ಬಣ್ಣದ ಹೊಂದಿರುವ ಈ ಅಂಜಲ್ ಮೀನು ಸುಮಾರು 16 ಕೆಜಿ ತೂಗುತ್ತದೆ. ಮಲ್ಪೆ ಕಡಲಿನಲ್ಲಿ ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರ ಬಲೆಗೆ ಈ ಮೀನು ಸಿಕ್ಕಿ ಹಾಕಿಕೊಂಡಿದೆ. ಇನ್ನು ಈ ಮೀನು ಮಲ್ಪೆ ಬಂದರಿನಲ್ಲಿ ಕೆ.ಜಿಗೆ 600 ರೂಪಾಯಿನಂತೆ ಮಾರಾಟವಾಗಿದೆ. ಮಲ್ಪೆಯ ನಿವಾಸಿಯಾಗಿರುವ ಸುರೇಶ್ ಎಂಬವರು ಈ ಮೀನನ್ನು ಒಟ್ಟು 9,600 ಕೊಟ್ಟು ಖರೀದಿ ಮಾಡಿದ್ದಾರೆ . ಬಂಗಾರ ಬಣ್ಣದ ಅಂಜಲ್ …

Read More »

ಮೊಹಮ್ಮದ್ ಶಮಿ ಮದುವೆಯ ವಿಚ್ಛೇದನ ವಿಚಾರ : ಪತ್ನಿಗೆ ಜೀವನಾಂಶ ನೀಡಲು ಕೋರ್ಟ್ ಆದೇಶ..!

ಮೊಹಮ್ಮದ್ ಶಮಿ ಅವರು ಭಾರತದ ಕ್ರಿಕೆಟ್ ತಂಡದ ವೇಗದ ಬೌಲರ್ ಎಂದೇ ಪ್ರಸಿದ್ಧಿಯಾಗಿದ್ದಾರೆ. ಇವರ ದಾಂಪತ್ಯ ಜೀವನವು ಬಿರುಕುಗೊಂಡ ವಿಚಾರ ಎಲ್ಲರಿಗೂ ತಿಳಿದಿದೆ. ಮೊಹಮ್ಮದ್ ಶಮಿ ಮತ್ತು ಹಸೀನ್ ಜಹಾನ್ ಅವರ ಮದುವೆಯು ಅದಾಗಲೇ ಮುರಿದು ಬಿದ್ದಿತ್ತು. ವಿಚ್ಛೇದಿತ ಪತ್ನಿ ಜೀವನಾಂಶವನ್ನು ಬೇಡಿ ನ್ಯಾಯಾಲಯದ ಮೆಟ್ಟಿಲೇರಿದ್ದಳು. ಇದೀಗ ಕೋಲ್ಕತ್ತಾ ನ್ಯಾಯಾಲಯವು ಮೊಹಮ್ಮದ್ ಶಮಿ ಅವರಿಗೆ ಜೀವನಾಂಶವನ್ನು ನೀಡುವಂತೆ ಆದೇಶಿಸಿದೆ. ಇತ್ತೀಚಿನ ದಿನಗಳಲ್ಲಿ ವಿಚ್ಛೇದನದ ಪ್ರಕರಣಗಳನ್ನು ಹೆಚ್ಚಾಗಿಯೇ ಕೇಳುತ್ತಿದ್ದೇವೆ. ಮೊಹಮ್ಮದ್ ಶಮಿ ಮತ್ತು ಹಸೀನ್ ಜಾಹಾನ್ ಅವರ ವಿವಾಹವು, ಸ್ನೇಹಿತರ ಹಾಗೂ ಸಂಬಂಧಿಗಳ ಎದುರಲ್ಲಿಯೇ ನಡೆದಿತ್ತು. …

Read More »

BIGG NEWS: ದತ್ತಪೀಠ & ದತ್ತಮಾಲೆಯ ಬಗ್ಗೆ ವಿವಾದಾತ್ಮಕ ಹೇಳಿಕೆ : ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ ಕ್ಷಮೆಯಾಚನೆ

ಚಿಕ್ಕಮಗಳೂರು: ದತ್ತಪೀಠ ಮತ್ತು ದತ್ತಮಾಲೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ ಕ್ಷಮೆಯಾಚಿಸಿದ್ದಾರೆ. ಶಿರಡಿ ಸಾಯಿಬಾಬಾ ದರ್ಶನಕ್ಕೆ ತೆರಳಿರುವ ಟಿ.ಡಿ ರಾಜೇಗೌಡ ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದಾರೆ.ಹಳ್ಳಿಗಳಲ್ಲಿ ರೂಡಿಯಿರುವ ಶಬ್ದವನ್ನು ಬಳಸಿದ್ದೇನೆ. ಆ ಶಬ್ದ ಬಳಕೆ‌ ಯಾರ ಸಂಸ್ಕೃತಿಯೂ ಆಗಬಾರದು. ಆ ಶಬ್ದ ಬಳಸಬಾರದಿತ್ತು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕ್ಷಮೆಯಾಚಿಸಿದ್ದಾರೆ.ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡುತ್ತಿದ್ದಾರೆ ಆದ್ದರಿಂದ ಆಕ್ರೋಶವಾಗಿ ಮಾತನಾಡಿದೆ. ದತ್ತಮಾಲೆ ಹಾಕಲಿಲ್ಲ ಎಂದು ದಲಿತ ವಿದ್ಯಾರ್ಥಿಗೆ ಹಲ್ಲೆ ಮಾಡಿದರು. ಹಲ್ಲೆ ವಿಷಯವಾಗಿ ಬುದ್ದಿಹೇಳುವ ಕೆಲಸವನ್ನು ಮಾಡಿದ್ದೇನೆ. ಇನ್ನು ಶಾಸಕ ಟಿ.ಡಿ.ರಾಜೇಗೌಡ ಅವರ …

Read More »

ಆಧುನಿಕ ಜಗತ್ತಿನ ಸವಾಲು ಎದುರಿಸಲು ಡಿಜಿಟಲ್ ಗ್ರಂಥಾಲಯ ಸಹಕಾರಿ: ಡಾ| ಶಿವಾನಂದ ಬುಳ್ಳ

ಮಂಗಳೂರು: ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ, ಆಧುನಿಕ ಜಗತ್ತಿನ ಸವಾಲನ್ನು ಎದುರಿಸಲು ಡಿಜಿಟಲ್ ಗ್ರಂಥಾಲಯ ಸಹಕಾರಿ. ಡಿಜಿಟಿಲ್ ಗ್ರಂಥಾಲಯದಲ್ಲಿರುವ ಸಂಪನ್ಮೂಲವನ್ನು ಉಪಯುಕ್ತವಾಗಿ ಬಳಸಿಕೊಳ್ಳಿ ಎಂದು ಎ.ವಿ ಬಾಳಿಗಾ ಕಾಲೇಜಿನ ಗ್ರಂಥಪಾಲಕರಾದ ಡಾ| ಶಿವಾನಂದ ಬುಳ್ಳ ಅವರು ಬೆಸೆಂಟ್ ಮಹಿಳಾ ಕಾಲೇಜಿನ ಗ್ರಂಥಾಲಯ ಹಾಗೂ ರೀಡರ್ಸ್ ಕ್ಲಬ್ ಇದರ ಸಹಯೋಗದಲ್ಲಿ ಆಯೋಜಿಸಲಾದ ಡಿಜಿಟಿಲ್ ಗ್ರಂಥಾಲಯದ ಉದ್ಟಾಟನೆ ಹಾಗೂ ಕಾರ್ಯಗಾರವನ್ನು ಉದ್ಟಾಟಿಸಿ ಮಾತನಾಡಿದರು. ರಾಷ್ಟ್ರೀಯ ಮಹಿಳಾ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಹಾಗು ಸಂಚಾಲಕರಾದ ಡಾ| ಮಂಜುಳಾ ಕೆ.ಟಿ ಮಾತನಾಡಿ ಶರವೇಗದಲ್ಲಿ ಮಾಹಿತಿ ದೊರೆಯುವುದರಿಂದ ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸದಿಂದ …

Read More »

ಕುರ್ಚಿ ತರುವುದು ತಡವಾಯಿತೆಂದು ಕಾರ್ಯಕರ್ತನಿಗೆ ಕಲ್ಲೆಸೆದ ಸಚಿವ…!

ತಮಿಳುನಾಡು; ಕುರ್ಚಿ ತರುವುದು ತಡವಾಯಿತೆಂದು ಸಿಟ್ಟಾದ ಡಿಎಂಕೆ ಪಕ್ಷದ ಸಚಿವ ಎಸ್​​ಎಂ ನಾಸರ್​​ ಕಾರ್ಯಕರ್ತನ ಮೇಲೆ ಕಲ್ಲು ಎಸೆದಿರುವ ಘಟನೆ ನಡೆದಿದೆ. ಸಚಿವರು ಕಾರ್ಯಕರ್ತನ ಮೇಲೆ ಕಲ್ಲು ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ರಾಜಕಾರಣಿಗಳು ಚುನಾವಣಾ ಸಮಯದಲ್ಲಿ ಪ್ರಚಾರಕ್ಕೆ ಹೋದಾಗ ಅತ್ಯಂತ ಸಭ್ಯತೆಯಿಂದ ವರ್ತಿಸುತ್ತಾರೆ.ಆದರೆ ಗೆದ್ದ ಬಳಿಕ ದುರ್ವರ್ತನೆ ತೋರಿಸುತ್ತಾರೆ ಎಂದು ನೆಟ್ಟಿಗರು ಮಿನಿಸ್ಟರ್ ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

Read More »

You cannot copy content of this page.