ತಾಜಾ ಸುದ್ದಿ

ಉಡುಪಿ: ಮಿತ್ರ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀಧರ ಹೊಳ್ಳ ನಿಧನ

ಉಡುಪಿ: ಮಿತ್ರ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀಧರ ಹೊಳ್ಳ (67) ಜ.26 ರಂದು ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕಲ್ಪನಾ ಚಿತ್ರಮಂದಿರ ಬಳಿ ಇರುವ ಮಿತ್ರ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಡಾ.ಶ್ರೀಧರ ಹೊಳ್ಳ ಡಿ.17 ರಂದು ತಮ್ಮ ಮನೆಯಲ್ಲಿ ಕುಸಿದು ಬಿದ್ದಿದ್ದರು. ಮೆದುಳಿನ ಕಾಯಿಲೆಗೆ ತುತ್ತಾಗಿದ್ದ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಐಸಿಯುನಲ್ಲಿ 40 ದಿನಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುರುವಾರ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

Read More »

ಹೆಬ್ರಿ : ಕಾರು, ಸ್ಕೂಟರ್ ಗೆ ಪಿಕಪ್ ಢಿಕ್ಕಿ – ಮೂವರಿಗೆ ಗಾಯ

ಹೆಬ್ರಿ : ಪ್ರವಾಸಿ ಮಂದಿರದ ಬಳಿ ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರ್ ಹಾಗೂ ಕಾರಿಗೆ ಪಿಕಪ್ ಡಿಕ್ಕಿಯಾಗಿ ಮೂವರು ಗಾಯಗೊಂಡಿರುವ ಘಟನೆ ಜ.26 ರಂದು ನಡೆದಿದೆ. ಮಂಜುನಾಥ ಹೆಗ್ಡೆ ಎಂಬವರು ಪ್ರವಾಸಿ ಮಂದಿರದ ಬಳಿ ರಸ್ತೆ ಬದಿಯಲ್ಲಿ ತನ್ನ ಕಾರನ್ನು ನಿಲ್ಲಿಸಿ ಕಾರಿನಲ್ಲಿ ಕುಳಿತಿದ್ದರು. ಇದೇ ವೇಳೆ ಅಲ್ಲಿಗೆ ಸ್ಕೂಟರ್ ನಲ್ಲಿ ಬಂದ ಅವರ ಸ್ನೇಹಿತ ನಾಗೇಶ್ ಕಾರಿನಲ್ಲಿ ಕುಳಿತಿದ್ದ ಮಂಜುನಾಥ್ ಅವರೊಂದಿಗೆ ಮಾತನಾಡುತ್ತಿದ್ದಾಗ ಹಿಂದೆಯಿಂದ ಬಂದ ಪಿಕಪ್ ನಾಗೇಶ್ ಇದ್ದ ಸ್ಕೂಟರ್ ಗೆ ಹಾಗೂ ಮಂಜುನಾಥ್ ಇದ್ದ ಕಾರಿಗೆ ಡಿಕ್ಕಿಯಾಗಿ ಮುಂದಕ್ಕೆ ಹೋಗಿ …

Read More »

ಮುಂಬೈ ಮೂಲದ ಯುವತಿಯರನ್ನು ಕರೆಸಿ ವೇಶ್ಯಾವಾಟಿಕೆ

ದಾವಣಗೆರೆ:  ಮುಂಬೈ ಮೂಲದ ಯುವತಿಯರನ್ನು ಕರೆಸಿ ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ ಆಘಾತಕಾರಿ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಕಳೆದ ಜನವರಿ 23ರಂದು ತಡರಾತ್ರಿ ಈ ಘಟನೆ ನಡೆದಿದ್ದು, ಜಗಳ ನಡೆದ ಹಿನ್ನೆಲೆ ವೇಶ್ಯಾವಾಟಿಕೆಯ ಅಸಲಿ ಕಹಾನಿ ಬಯಲಿಗೆ ಬಂದಿದೆ. ಅಂದ ಹಾಗೆ ಮುಂಬೈ ಮೂಲದ ಯೋಗಿಶ್, ಕುಮಾರ್ ನಾಯ್ಕ್ ಮತ್ತು ಹೇಮರಾಜ್ ಎಂಬುವರಿಂದ ಈ ಕೃತ್ಯ ನಡೆದಿದ್ದು, ಯೋಗೀಶ್ ಜೊತೆ ಈ‌ ಮೊದಲೇ‌ ಪೋನ್‌ ಸಂಪರ್ಕದಲ್ಲಿದ್ದ ಮುಂಬೈ ಮೂಲದ ಯುವತಿಯರು, ಹಣ ಸಂಪಾದಿಸುವ ಸಲುವಾಗಿ ಯೋಗಿಶ್ ಯಾರನ್ನೇ ಹೇಳಿದರೂ ಅವರೊಂದಿಗೆ ಹೋಗಲು ತಯಾರಾಗಿದ್ದರು. ಇದೇ ಉದ್ದೇಶದಿಂದ …

Read More »

ಮೋದಿ ಪ್ರಧಾನಿ ಆಗಿದ್ದಕ್ಕೆ ನನಗೆ ಪದ್ಮಭೂಷಣ ಪ್ರಶಸ್ತಿ ಬಂತು : ಸಾಹಿತಿ ಎಸ್.ಎಲ್.ಭೈರಪ್ಪ

ಮೈಸೂರು : 2024ರಿಂದ 2029ರವರೆಗೂ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿರಲಿ, ಮೋದಿ ಅವರು ಪ್ರಧಾನಿ ಆಗಿದ್ದಕ್ಕೆ ನನಗೆ ಪದ್ಮಭೂಷಣ ಪ್ರಶಸ್ತಿ ಬಂತು ಎಂದು ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2019ರಲ್ಲೇ ನಾನು ಒಂದು ಲೇಖನ ಬರೆದಿದ್ದೆ. ಮೋದಿ ಮತ್ತೊಮ್ಮೆ ಬಹುಮತದೊಂದಿಗೆ ಪ್ರಧಾನಿ ಆಗಲಿ ಎಂದು ಬರೆದಿದ್ದೆ. 2024ರಿಂದ 2029ರವರೆಗೂ ಮೋದಿ ಅವರೇ ಪ್ರಧಾನಿಯಾಗಿರಲಿ. ನರೇಂದ್ರ ಮೋದಿ ಅವರು ಪ್ರಧಾನಿ ಆಗಿದ್ದಕ್ಕೆ ನನಗೆ ಪದ್ಮಭೂಷಣ ಪ್ರಶಸ್ತಿ ಬಂತು. ನನ್ನ ಕಾದಂಬರಿಗಳ ಮೂಲ ಭಾರತದ ಸಂಸ್ಕೃತಿ. ಈ ಸಂಸ್ಕೃತಿ ಏಕ ರೂಪದಲ್ಲಿ …

Read More »

ಕೆ.ಆರ್ ಮಾರುಕಟ್ಟೆಯಲ್ಲಿ ನೋಟಿನ ರಾಶಿ ಎಸೆದ ಯುವಕನ ಉದ್ದೇಶ ಏನಾಗಿತ್ತು ಗೊತ್ತಾ?

ಬೆಂಗಳೂರು;ಕೆ ಆರ್ ಮಾರುಕಟ್ಟೆಯ ಮೇಲ್ಸೇತುವೆಯಿಂದ ಅರುಣ್‌ ಎಂಬಾತ ನಿನ್ನೆ 10 ರೂ.ಮುಖಬೆಲೆಯ ನೋಟುಗಳನ್ನು ಎಸೆದಿರುವುದು ಭಾರೀ ಸುದ್ದಿಯಾಗಿದೆ. ಆತನ ಮೇಲೆ ಕೇಸ್ ದಾಖಲಿಸಿ ಪೊಲೀಸರು ಬಂಧಿಸಿದ್ದರು.ಇದೀಗ ಆತ ನೋಟು ಎಸೆದಿರುವುದರ ಹಿಂದಿನ‌ ಕಾರಣ ಬಯಲಾಗಿದೆ. ಇವೆಂಟ್ ಮ್ಯಾನೇಜರ್, ಆಂಕರ್ ಆಗಿದ್ದ ಅರುಣ್ ಪ್ರಚಾರಕ್ಕಾಗಿ ಹಣ ಎಸೆದಿರೋದಾಗಿ ಹೇಳಿದ್ದಾನೆ. ಹಣದ ನಿರ್ವಹಣೆ ಹಾಗೂ ಉದ್ಯಮದ ಬಗ್ಗೆ ವಿಡಿಯೋ ಮಾಡಿ, ಫೇಸ್‌ಬುಕ್‌, ಇನ್‌ಸ್ಟಾ ಹಾಗೂ ಯುಟ್ಯೂಬ್‌ನಲ್ಲಿ ಹಾಕುತ್ತೇನೆ.ಆದರೆ ನನಗೆ ಹೆಚ್ಚು ಪ್ರಚಾರ ಸಿಗ್ತಿರಲಿಲ್ಲ. ಜನರು ನನಗಾಗಿ ಟೈಮ್‌ ಕೊಡ್ತಿರಲಿಲ್ಲ. ಹಾಗಾಗಿ ಹೆಚ್ಚು ಪ್ರಚಾರ ಸಿಗಲು 10ರೂ.ನೋಟನ್ನು ಎಸೆದಿದ್ದಾನೆ …

Read More »

ಲಯನ್ಸ್ ಕ್ಲಬ್ ಮಂಗಳೂರು ಮಂಗಳಾದೇವಿ ವತಿಯಿಂದ ಶಾಲಾ ಮಕ್ಕಳೊಂದಿಗೆ ಗಣರಾಜ್ಯೋತ್ಸವ ಸಂಭ್ರಮ

ಮಂಗಳೂರು : 74 ನೇ ಗಣರಾಜ್ಯೋತ್ಸವ ಕಾರ್ಯಕ್ರಮವು ನಗರದ ನೋಬಲ್ ಸ್ಕೂಲ್ ಕುಂಜತ್ ಬೈಲ್ ನಲ್ಲಿ ಲಯನ್ಸ್ ಕ್ಲಬ್ ಮಂಗಳೂರು ಮಂಗಳಾದೇವಿ. ಅಧ್ಯಕ್ಷರಾದ ಲಯನ್ ಅನಿಲ್ ದಾಸ್ ರಾಷ್ಟ್ರ ಧ್ವಜಾರೋಹಣಗೈದು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ PDG. ರೋನಾಲ್ಡ್ ಗೊಮ್ಸ್. ಸೆಕ್ರೆಟರಿ ಅನಿತಾ ಗೊಮ್ಸ್ P.S ಆಳ್ವಾ.ಮತ್ತು ಶಾಲಾಡಳಿತಾಧಿಕಾರಿ ಮೊಹಮ್ಮದ್ ಶರೀಫ್. ಸೆಕ್ರೆಟರಿ ಕರಿಬಸವಯ್ಯ.ಮುಖ್ಯ ಅತಿಥಿ ಗಳಾಗಿ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರು ಸವಿತಾ ಕುಮಾರಿ. ಶಿಕ್ಷಕರಾದ ಶ್ರೀಮತಿ ಚಿತ್ರ. ಶ್ರೀಮತಿ ವಾಣಿ. ಸಾವಿತ್ರಿ. ಮುಂತಾದ ಶಿಕ್ಷಕರು ಕಾರ್ಯಕ್ರಮ ವನ್ನು ನಿರೂಪಿಸಿದರು ಮತ್ತು ಉತ್ತಮ ಅಂಕ ಗಳಿಸಿದ …

Read More »

ಮಾಜಿ ಶಾಸಕ ವಸಂತ ಬಂಗೇರ ಸಹೋದರ ಶತಾಯುಷಿ ಕೆ.ಜಿ. ಬಂಗೇರ ವಿಧಿವಶ

ಬೆಳ್ತಂಗಡಿ: ಮಾಜಿ ಶಾಸಕ ವಸಂತ ಬಂಗೇರ ಅವರ ಸಹೋದರ ಶತಾಯುಷಿ ಕೆ.ಜಿ(101) ಬಂಗೇರ ಅವರು ವಿಧಿವಶರಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಮುಗ್ಗ ಗುತ್ತು ಕುಟುಂಬದ ಹಿರಿಯರಾದ ಕೇದೆ ಗುರುವಪ್ಪ ಬಂಗೇರ ಮಂಗಳೂರಿನ ಪಾಂಡೇಶ್ವರದ ತಮ್ಮ ಸ್ವಗೃಹದಲ್ಲಿ ಜ. 25 ರಂದು ನಿಧನ ಹೊಂದಿದ್ದಾರೆ.‌ ನಿವೃತ್ತ ಕಂದಾಯ ಅಧಿಕಾರಿಯಾಗಿ ನಂತರ ಡೆಪ್ಯೂಟಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದರು. ಬಿಲ್ಲವ ಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರು ಬೆಳ್ತಂಗಡಿ ಶ್ರೀ ಗುರುದೇವಾ ವಿವಿದೋದ್ದೇಶ ಸೇವಾ ಸಹಕಾರಿ ಸಂಘದ ಸ್ಥಾಪಕಾಧ್ಯಕ್ಷರಾಗಿ ಶ್ರೀ ಗುರುದೇವ ಕಾಲೇಜ್ ಬೆಳ್ತಂಗಡಿ …

Read More »

74ನೇ ಗಣರಾಜ್ಯೋತ್ಸವದ ಅಂಗವಾಗಿ ಮಾನ್ವಿ ಕೆರೆ ದಂಡೆಯಲ್ಲಿ ಧ್ವಜಾರೋಹಣ

ಮಂಗಳೂರು: ತಾ.ಪಂ/ ಜೋಕಟ್ಟೆ ಗ್ರಾ.ಪಂ: 74ನೇ ಗಣರಾಜ್ಯೋತ್ಸವದ ಅಂಗವಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಮೃತ ಸರೋವರ ಯೋಜನೆಯಡಿ ಮಂಗಳೂರು ತಾಲೂಕಿನ ಜೋಕಟ್ಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಾನ್ವಿ ಕೆರೆ ದಂಡೆಯಲ್ಲಿ ಹಿರಿಯ ನಾಗರಿಕರಾದ ಶ್ರೀಮತಿ ಬೆನ್ನಿ ವೇಗಸ್ ಅವರು ಧ್ವಜಾರೋಹಣ ನೆರವೇರಿಸಿದರು. ಇತ್ತೀಚೆಗಷ್ಟೇ ಜೋಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ಜಲ ಸಂರಕ್ಷಣೆಗೆ ಸಂಬಂಧಪಟ್ಟಂತೆ ಚಿತ್ರಕಲಾ ಸ್ಪರ್ಧೆ ಆಯೋಜಿಸಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಈ ಸುಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ಶ್ರೀ ಉಮ್ಮರ್‌ ಫಾರುಕ್ ಪಂಚಾಯತ್‌ ಅಧ್ಯಕ್ಷರು , ಶ್ರೀ ಅಬ್ದುಲ್ಲಾ …

Read More »

ಮಂಗಳೂರಲ್ಲಿ ‘ಆಟೋ ರಿಕ್ಷಾ’ಗಳಿಗೆ ಹೊಸ ರೂಲ್ಸ್‌ : ಫೆ. 20ರೊಳಗೆ ‘ಕಲರ್‌ ಕೋಡ್‌’ ಬದಲಾವಣೆ ಆದೇಶ

ದಕ್ಷಿಣಕನ್ನಡ : ಜಿಲ್ಲೆಯಾದ್ಯಂತ ಸಂಚರಿಸುವ ಆಟೋ ರಿಕ್ಷಾಗಳಿಗೆ ಹೊಸ ರೂಲ್ಸ್‌ ಜಾರಿಯಾಗಿದ್ದು, ಫೆ. 20ರೊಳಗೆ ರಿಕ್ಷಾ ಗಳ ಬಣ್ಣ ಬದಲಾಯಿಸಲು ಸೂಚನೆ ನೀಡಲಾಗಿದೆ. ಎಲ್ಲ ವಿಧದ ಆಟೋ ರಿಕ್ಷಾಗಳಿಗೆ (ಇ-ಆಟೋ ರಿಕ್ಷಾಗಳು ಒಳಗೊಂಡಂತೆ) ಮೆಥನಾಲ್‌ ಮತ್ತು ಇಥನಾಲ್‌ ಇಂಧನ ಬಳಸಿ ಸಂಚರಿಸುವ ಆಟೋರಿಕ್ಷಾ ಒಳಗೊಂಡಂತೆ ಆಟೋ ರಿಕ್ಷಾದ ಮಧ್ಯ ಭಾಗ ದಿಂದ ಕೆಳಗಡೆ ಕಪ್ಪು ಬಣ್ಣವನ್ನು ಪೂರ್ತಿಯಾಗಿ ಬಳಿಯಬೇಕು. ಆಟೋ ರಿಕ್ಷಾದ ಮಧ್ಯ ಭಾಗದಿಂದ ಮೇಲೆ ಹಳದಿ ಬಣ್ಣವನ್ನು ಬಳಿಯಬೇಕು. ಇದು ವಲಯ 1 ಮತ್ತು ವಲಯ 2 ಕ್ಕೂ ಅನ್ವಯವಾಗುತ್ತದೆ. ವಲಯ 1ಕ್ಕೆ ಚೌಕಾಕೃತಿ …

Read More »

74ನೇ ಗಣರಾಜ್ಯೋತ್ಸವದ ಅಂಗವಾಗಿ ಮದಕ ಕೆರೆ ದಂಡೆಯಲ್ಲಿ ಧ್ವಜಾರೋಹಣ

ಉಳ್ಳಾಲ ತಾ.ಪಂ/ ಮುನ್ನೂರು ಗ್ರಾ.ಪಂ: 74ನೇ ಗಣರಾಜ್ಯೋತ್ಸವದ ಅಂಗವಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಮೃತ ಸರೋವರ ಯೋಜನೆಯಡಿ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮದಕ ಕೆರೆ ದಂಡೆಯಲ್ಲಿ ಶ್ರೀಮತಿ ರಾಜೇಶ್ವರಿ ಉಪಾಧ್ಯಕ್ಷರು ಅವರು ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ ಇತ್ತೀಚೆಗಷ್ಟೇ ಮುನ್ನೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಜಲ ಸಂರಕ್ಷಣೆಗೆ ಸಂಬಂಧಪಟ್ಟಂತೆ ಜಲಜೀವನ್‌ ಮಿಷನ್‌ ವತಿಯಿಂದ ಆಯೋಜಿಸಿದ್ದ ಜಲ ಸಂರಕ್ಷಣೆ ನಮ್ಮ ಹೊಣೆ ಕುರಿತ್ತಂತೆ ಕಿರುಕಥೆ ರಚನೆ ಹಾಗೂ ಜಲ ಸಂರಕ್ಷಣಾ ಮಾದರಿ ತಯಾರಿ ಕುರಿತ್ತಂತೆ ಸ್ಪರ್ಧೆ …

Read More »

You cannot copy content of this page.