ಹೆಬ್ರಿ : ಪ್ರವಾಸಿ ಮಂದಿರದ ಬಳಿ ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರ್ ಹಾಗೂ ಕಾರಿಗೆ ಪಿಕಪ್ ಡಿಕ್ಕಿಯಾಗಿ ಮೂವರು ಗಾಯಗೊಂಡಿರುವ ಘಟನೆ ಜ.26 ರಂದು ನಡೆದಿದೆ. ಮಂಜುನಾಥ ಹೆಗ್ಡೆ ಎಂಬವರು ಪ್ರವಾಸಿ ಮಂದಿರದ ಬಳಿ ರಸ್ತೆ ಬದಿಯಲ್ಲಿ ತನ್ನ ಕಾರನ್ನು ನಿಲ್ಲಿಸಿ ಕಾರಿನಲ್ಲಿ ಕುಳಿತಿದ್ದರು.
ಇದೇ ವೇಳೆ ಅಲ್ಲಿಗೆ ಸ್ಕೂಟರ್ ನಲ್ಲಿ ಬಂದ ಅವರ ಸ್ನೇಹಿತ ನಾಗೇಶ್ ಕಾರಿನಲ್ಲಿ ಕುಳಿತಿದ್ದ ಮಂಜುನಾಥ್ ಅವರೊಂದಿಗೆ ಮಾತನಾಡುತ್ತಿದ್ದಾಗ ಹಿಂದೆಯಿಂದ ಬಂದ ಪಿಕಪ್ ನಾಗೇಶ್ ಇದ್ದ ಸ್ಕೂಟರ್ ಗೆ ಹಾಗೂ ಮಂಜುನಾಥ್ ಇದ್ದ ಕಾರಿಗೆ ಡಿಕ್ಕಿಯಾಗಿ ಮುಂದಕ್ಕೆ ಹೋಗಿ ರಸ್ತೆಯ ಬದಿಯಲ್ಲಿರುವ ಚರಂಡಿಗೆ ಬಿದ್ದು ಪಲ್ಟಿಯಾಗಿದೆ.
ಈ ಅಪಘಾತದಿಂದ ಸ್ಕೂಟರ್ ಸವಾರ ನಾಗೇಶ್, ಕಾರಿನಲ್ಲಿದ್ದ ಮಂಜುನಾಥ್ ಹಾಗೂ ಪಿಕಪ್ ಚಾಲಕ ಸುನಿಲ್ ಮೂರೂ ಜನ ಗಾಯಗೊಂಡಿದ್ದಾರೆ. ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.