ತಾಜಾ ಸುದ್ದಿ

ಉಳ್ಳಾಲದಲ್ಲಿ ವೀರ ರಾಣಿ ಅಬ್ಬಕ್ಕ ಥೀಮ್ ಪಾರ್ಕ್ ಸ್ಥಾಪನೆ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಮಂಗಳೂರು : ಪೋರ್ಚುಗೀಸರ ವಿರುದ್ಧ ಹೋರಾಡಿದ ವೀರರಾಣಿ ಅಬ್ಬಕ್ಕ ಅವರ ಬಗ್ಗೆ ಜಾಗೃತಿ ಮೂಡಿಸಲು ಉಳ್ಳಾಲದಲ್ಲಿ ಥೀಮ್ ಪಾರ್ಕ್ ಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಉಳ್ಳಾಲದ ಮಹಾತ್ಮ ಗಾಂಧಿ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ವೀರ ರಾಣಿ ಅಬ್ಬಕ್ಕ ಉತ್ಸವದಲ್ಲಿ ಮಾತನಾಡಿದ ಅವರು, ಅಬ್ಬಕ್ಕ ಭವನ ನಿರ್ಮಾಣಕ್ಕೆ ಜಿಲ್ಲಾಡಳಿತ 10 ಎಕರೆ ಜಾಗವನ್ನು ಮೀಸಲಿಟ್ಟಿದೆ. ಅಬ್ಬಕ್ಕ ಭವನವೊಂದೇ ಸಾಕಾಗುವುದಿಲ್ಲ. ಉಳ್ಳಾಲಕ್ಕೆ ಭೇಟಿ ನೀಡುವವರಲ್ಲಿ ಅಬ್ಬಕ್ಕನ …

Read More »

ಕುಂದಾಪುರ ಸಹಾಯಕ ಆಯುಕ್ತರಾಗಿ ರಶ್ಮಿ ಎಸ್.ಆರ್ ಅಧಿಕಾರ ಸ್ವೀಕಾರ..!

ಉಡುಪಿ : ಕುಂದಾಪುರ ಸಹಾಯಕ ಆಯುಕ್ತರಾಗಿ ರಶ್ಮಿ ಎಸ್.ಆರ್ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು. 2014ನೇ ಬ್ಯಾಚ್ ಕೆ.ಎ.ಎಸ್ ಅಧಿಕಾರಿಯಾಗಿರುವ ರಶ್ಮಿ ಎಸ್. ಆರ್ ಮೂಲತಃ ಮಂಗಳೂರಿನವರು. ಅವರು 2017ರಲ್ಲಿ ಸೇವೆಗೆ ಸೇರಿದ್ದು ದ.ಕ ಜಿಲ್ಲೆಯಲ್ಲಿ ಪ್ರೊಬೇಷನರ್ ಅವಧಿ ಮುಗಿಸಿ 2019ರಲ್ಲಿ ಬಂಟ್ವಾಳ ತಹಶೀಲ್ದಾರ್ ಆಗಿದ್ದು, ಲೋಕಸಭಾ ಹಾಗೂ ಗ್ರಾ.ಪಂ ಚುನಾವಣೆ ಸಮಯದಲ್ಲಿ ಕಾಪು ತಹಶೀಲ್ದಾರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಬಳಿಕ ಬಂಟ್ವಾಳಕ್ಕೆ ವಾಪಾಸ್ಸಾಗಿದ್ದು 2022ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ಪದೋನ್ನತಿ ಹೊಂದಿದ್ದು ಪ್ರಸ್ತುತ ಕುಂದಾಪುರ …

Read More »

ಕೆಲಸ ಕೊಡಿಸುವ ಆಸೆ ತೋರಿಸಿ ಯುವತಿಯರ ಜೊತೆ ಟೆಕ್ಕಿ ಮಾಡಿದ್ದೇನು ಗೊತ್ತಾ..?

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೆಲಸ ಹುಡುಕೋದು ಸಿಕ್ಕಾಪಟ್ಟೆ ಕಷ್ಟ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಟೆಕ್ಕಿಯೊಬ್ಬ ಯುವತಿಯರ ಜೊತೆ ಸೆಕ್ಸ್ ಮಾಡಿ ಸಿಕ್ಕಿಬಿದ್ದಿದ್ದಾನೆ. ಸಾಮಾಜಿಕ ಜಾಲಾತಾಣದ ಮೂಲಕ ಹುಡುಗಿಯರ ಪರಿಚಯ ಮಾಡಿಕೊಳ್ಳುತ್ತಾ ಇದ್ದ ಟೆಕ್ಕಿ ದಿಲೀಪ್ ಬಂಧನ ಆಗಿದೆ. ಇನ್‍ಸ್ಟಾಗ್ರಾಂನಲ್ಲಿ ಹುಡುಗಿಯರ ಹೆಸರನ್ನು ಇಟ್ಟುಕೊಂಡು ಹುಡುಗಿಯರ ಪರಿಚಯ ಮಾಡಿಕೊಂಡು ಬಳಿಕ ಕೆಲಸ ಕೊಡಿಸ್ತೀನಿ ಅಂತ ಮೋಸ ಮಾಡ್ತಾ ಇದ್ದ. ಬಳಿಕ ಓಯೋ ರೂಂಗೆ ಕರೆದು ಯುವತಿಯರ ಬೆದರಿಸಿ ಸೆಕ್ಸ್ ಮಾಡ್ತಾ ಇದ್ದ. ಜೊತೆಗೆ ವೀಡಿಯೋ ಮಾಡಿಕೊಂಡು ಹಣಕ್ಕಾಗಿ ಬ್ಲ್ಯಾಕ್  ಮೇಲ್  ಮಾಡ್ತಾ ಇದ್ದ ಎಂಬ …

Read More »

ಸೌದಿಯಲ್ಲಿ ಭೀಕರ ಅಪಘಾತ- ಮಂಗಳೂರಿನ ‌ಮೂವರು ದುರ್ಮರಣ

ದುಬೈ ನಲ್ಲಿ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಮಂಗಳೂರು ಮೂಲದ ಮೂವರು ಯುವಕರು ಸೇರಿ ಒಟ್ಟು ನಾಲ್ವರು ಮೃತಪಟ್ಟ ಘಟನೆ ನಿನ್ನೆ ರಾತ್ರಿ ನಡೆದಿದೆ. ವೇಗವಾಗಿ ತೆರಳುತ್ತಿದ್ದ ಕಾರಿಗೆ ಒಂಟೆಯೊಂದು ಡಿಕ್ಕಿ ಹೊಡೆದಿದ್ದು, ಪರಿಣಾಮ ಕಾರು ಪಲ್ಟಿಯಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡು ಹಳೆಯಂಗಡಿ ಕದಿಕೆಯ ರಿಝ್ವಾನ್, ಕೃಷ್ಣಾಪುರದ ಅಕೀಲ್, ನಾಸಿರ್, ಶಿಹಾಬ್ ಮೃತಪಟ್ಟಿದ್ದಾರೆ. ಸೌದಿ ಅರೇಬಿಯಾದ ರಿಯಾದ್ ಪ್ರಾಂತ್ಯದ ಅಲ್ ಹಸ ಖುರೇಸ್ ರಸ್ತೆಯಲ್ಲಿ ಹೋಗುತ್ತಿದ್ದಂತೆ ಒಂಟೆಯೊಂದು ಕಾರಿಗೆ ಅಡ್ಡ ಬಂದಿದೆ. ಕಾರು ಪಲ್ಟಿಯಾಗಿ ಒಟ್ಟು ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಓರ್ವ ಬಾಂಗ್ಲಾದೇಶದ …

Read More »

ಮುಸ್ಲಿಂ ಯುವಕರ ಜೊತೆ ಹಿಂದೂ ಯುವತಿ ಪತ್ತೆ..!

ಪುತ್ತೂರು: ಹಿಂದೂ ಯುವತಿ ಹಾಗೂ ಮುಸ್ಲಿಂ ಯುವತಿ ಮತ್ತು ಯುವಕರು ಜೊತೆಗಿದ್ದ ಘಟನೆ ಪೆರ್ನೆ ಬಿಳಿಯೂರು ಡ್ಯಾಮ್ ಬಳಿ ಫೆ.3 ರಂದು ರಾತ್ರಿ ವೇಳೆ ನಡೆದಿದೆ. ಓರ್ವ ಹಿಂದೂ ಯುವತಿ ಹಾಗೂ ಓರ್ವ ಮುಸ್ಲಿಂ ಯುವತಿ ಮತ್ತು ಮೂವರು ಮುಸ್ಲಿಂ ಯುವಕರು ಬಿಳಿಯೂರು ಡ್ಯಾಮ್ ಬಳಿ ಮೋಜು-ಮಸ್ತಿ ಮಾಡುತ್ತಿದ್ದು, ಈ ಬಗ್ಗೆ ತಿಳಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿ, ಯುವಕರು ಮತ್ತು ಯುವತಿಯರನ್ನು ಉಪ್ಪಿನಂಗಡಿ ಪೊಲೀಸರಿಗೊಪ್ಪಿಸಿದ್ದಾರೆ ಎಂದು ವರದಿಯಾಗಿದೆ. ಸಿಕ್ಕಿಬಿದ್ದ ಯುವತಿಯರು ಮತ್ತು ಯುವಕರ ಬ್ಯಾಗ್ ನಲ್ಲಿ ಮಾದಕ ವಸ್ತುಗಳು ಪತ್ತೆಯಾಗಿದ್ದು, …

Read More »

ನೆದರ್ಲೆಂಡ್ ಕನ್ಯೆಯನ್ನು ಮದುವೆಯಾದ ಮಂಗಳೂರು ಮುಸ್ಲಿಂ ಯುವಕ

ಮಂಗಳೂರು : ಪ್ರೀತಿ ಎಂಬ ಮಾಯೆಗೆ ಅಂತರವಿಲ್ಲ, ಭಾಷೆ ಬೇಕಿಲ್ಲ ಪ್ರೀತಿಸುವ ಮನಸ್ಸುಗಳಿದ್ದರೆ ಸಾಕು, ಯಾರಿಗೆ, ಯಾವಾಗ, ಯಾರಮೇಲಾದರೂ ಪ್ರೀತಿ ಹುಟ್ಟಬಹುದು. ಇದಕ್ಕೆ ನೆದರ್ಲೆಂಡ್  ಯುವತಿ ಮಂಗಳೂರಿನ ಯುವಕ ಪರಸ್ಪರ ಪ್ರೀತಿಸಿ ಮದುವೆಯಾಗಿರುವ ಘಟನೆ ಸಾಕ್ಷಿಯಾಗಿದೆ. ಯುವಕ ಮೂಲತಃ ಮಂಗಳೂರಿನವನಾಗಿದ್ದು ನೆದರ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಪ್ರೀತಿಯಾಗಿದ್ದು , ಇಬ್ಬರೂ ಪರಸ್ಪರ ಒಪ್ಪಿಕೊಂಡು ಮದುವೆಯಾಗಿದ್ದಾರೆ. ನೆದರ್‌ಲೆಂಡ್ ಯುವತಿ ಮುಸ್ಲಿಂ ಸಂಪ್ರದಾಯದಂತೆಯೇ ಇಲ್ಲಿನ ಸುರತ್ಕಲ್ ನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಯುವತಿ ಕುಟುಂಬಸ್ಥರೂ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಈ ಸಂಭ್ರಮದ ವೀಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. …

Read More »

ಧರ್ಮಸ್ಥಳ : ದ್ವಾರದ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ..!

ಬೆಳ್ತಂಗಡಿ : ಅಪರಿಚಿತ ವ್ಯಕ್ತಿಯೊಬ್ಬರು ಮಲಗಿದ್ದಲ್ಲೆ ಸಾವನ್ನಪ್ಪಿದ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ. ಧರ್ಮಸ್ಥಳ ದ್ವಾರದ ಬಳಿ ಸುಮಾರು 65-70 ವರ್ಷದ ಪ್ರಾಯದ ವ್ಯಕ್ತಿಯೊಬ್ಬರು ಮಲಗಿರುವ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ವ್ಯಕ್ತಿಯ ಬಗ್ಗೆ ಗುರುತು ಪತ್ತೆಯಾದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆ ಸಂಪರ್ಕಿಸಲು ಮನವಿ ಮಾಡಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

NIA ಗೆ ಭಯೋತ್ಪಾದನಾ ದಾಳಿಯ ಬೆದರಿಕೆ ಸಂದೇಶ

ಮುಂಬೈನಲ್ಲಿ ಭಯೋತ್ಪಾದನಾ ದಾಳಿ ನಡೆಸುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಮೇಲ್ ಸಂದೇಶ ಬಂದಿದೆ. ಪೊಲೀಸ್ ಮೂಲಗಳ ಪ್ರಕಾರ, ತಾಲಿಬಾನಿ ಸದಸ್ಯ ಎಂದು ಹೇಳಿಕೊಳ್ಳುವ ಅಪರಿಚಿತ ವ್ಯಕ್ತಿಯಿಂದ ಮೇಲ್ ಸ್ವೀಕರಿಸಲಾಗಿದೆ. ಹೀಗಾಗಿ ಮಹಾರಾಷ್ಟ್ರದ ವಿವಿಧ ನಗರಗಳಲ್ಲಿ ಅಲರ್ಟ್ ಆಗಿರಲು ಎನ್‌ಐಎ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದೆ. “ಬೆದರಿಕೆ ಮೇಲ್ ಕಳುಹಿಸಿದ ವ್ಯಕ್ತಿ ತನ್ನನ್ನು ತಾಲಿಬಾನಿ ಎಂದು ಹೇಳಿಕೊಂಡಿದ್ದಾನೆ. ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆಯಲಿದೆ ಎಂದು ಆತ ಹೇಳಿಕೊಂಡಿದ್ದಾನೆ ಎಂದು ಮುಂಬೈ ಪೊಲೀಸ್ ಮೂಲಗಳು ತಿಳಿಸಿವೆ. ಬೆದರಿಕೆ ಮೇಲ್ ಬಂದ ನಂತರ, ಮುಂಬೈ ಪೊಲೀಸರೊಂದಿಗೆ ಎನ್‌ಐಎ ಜಂಟಿ …

Read More »

BIG NEWS- ತುಳು ಸ್ಟ್ಯಾಂಡ್ ಆಫ್ ಕಾಮಿಡಿಯನ್ ಅರ್ಪಿತ್ ಬಂಧನ

ಮುಲ್ಕಿ : ಮುಲ್ಕಿ ಸಮೀಪದ ಪಡುಪಣಂಬೂರು ಪೆಟ್ರೋಲ್ ಬಂಕ್ ಬಳಿ ನಡೆದ ಹಿಟ್ ಆಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತುಳು ಸ್ಟ್ಯಾಂಡ್ ಆಫ್ ಕಾಮಿಡಿಯನ್ ಅರ್ಪಿತ್ ರನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದ ಇಂದೋರ್‌ನಿಂದ ಕೇರಳ ಕಡೆಗೆ ಹೋಗುತ್ತಿದ್ದ ಲಾರಿ ಪಡುಪಣಂಬೂರು ಬಳಿ ಟಯರ್ ಪಂಚರ್ ಆಗಿದ್ದು ಲಾರಿಯಲ್ಲಿದ್ದ ಮಧ್ಯಪ್ರದೇಶ ನಿವಾಸಿಗಳಾದ ಬಬುಲು(23), ಆಚಲ್ ಸಿಂಗ್ (30) ಹಾಗೂ ಕೇರಳ ನಿವಾಸಿ ಅನೀಶ್(42) ಎಂಬವರು ಕೆಳಗಿಳಿದು ಹೆದ್ದಾರಿ ಬದಿಯಲ್ಲಿ ಟಯರ್ ತೆಗೆದು ದುರಸ್ತಿ ಮಾಡುತ್ತಿದ್ದರು. ಈ ವೇಳೆ ಹೆದ್ದಾರಿಯಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀ …

Read More »

ತಡರಾತ್ರಿ ಬೆತ್ತಲೆಯಾಗಿ ಓಡಾಡಿ ಹಲವು ಮನೆಯ ಬಾಗಿಲನ್ನು ತಟ್ಟಿದ ಯುವತಿ; ಸಿಸಿಟಿವಿಯಲ್ಲಿ ದೃಶ್ಯ ಸೆರೆ..!

ಉತ್ತರಪ್ರದೇಶ: ತಡಾರಾತ್ರಿ ಯುವತಿಯೊಬ್ಬಳು ಬೆತ್ತಲೆಯಾಗಿ ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾಂಪುರದ ಬೀದಿಗಳಲ್ಲಿ ಬೆತ್ತಲೆಯಾಗಿ ಜನವರಿ 29 ರಂದು ರಾತ್ರಿ ಯುವತಿ ಕೆಲವರ ಮನೆಯ ಬಾಗಿಲನ್ನು ತಟ್ಟಿದ್ದಾರೆ. ಘಟನೆಯ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ರಾಂಪುರ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ ಪೊಲೀಸರು ಇನ್ನೂ ಯುವತಿ ಯಾರು ಎಂದು ಪತ್ತೆಮಾಡಿಲ್ಲ.25ರ ಹರೆಯದ ಯುವತಿ ಎಂದು ಹೇಳಲಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ರಾಂಪುರ ಪೊಲೀಸರು ಹೇಳಿದ್ದಾರೆ.ಮಧ್ಯರಾತ್ರಿ ಈ ರೀತಿ ಒಂಟಿಯಾಗಿ ನಡೆದಾಡಿರುವುದು ಯಾರು ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.

Read More »

You cannot copy content of this page.