ತಾಜಾ ಸುದ್ದಿ

BREAKING NEWS: ಉಜಿರೆ ಲಾಡ್ಜ್ ಗೆ ಮತ್ತೆ ಪೋಲಿಸ್ ದಾಳಿ

ಬೆಳ್ತಂಗಡಿ: ಉಜಿರೆಯ ಲಾಡ್ಜ್ ಗಳಲ್ಲಿ ಬೆಳ್ತಂಗಡಿ ಇನ್ಸ್ ಪೆಕ್ಟರ್ ಸತ್ಯನಾರಾಯಣ ಅವರ ನೇತೃತ್ವದಲ್ಲಿ ಪೊಲೀಸರು ಶನಿವಾರ ರಾತ್ರಿ ಪರಿಶೀಲನೆ ನಡೆಸಿ ವಸತಿಗೃಹದ ಮಾಲಕರುಗಳಿಗೆ ಎಚ್ಚರಿಕೆ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಪೊಲೀಸರು ಪರಿಶೀಲನೆ ನಡೆಸಿದಾಗ ಉಜಿರೆಯ ಒಂದು ವಸತಿ ಗೃಹದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಕಂಡು ಬಂದಿತ್ತು. ಐವರು ಮಹಿಳೆಯರನ್ನು ರಕ್ಷಿಸಲಾಗಿತ್ತು ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಇಂದು ಮತ್ತೆ ಪೊಲೀಸರು ಪರಿಶೀಲನೆ ನಡೆಸಿ ಎಚ್ಚರಿಕೆ ನೀಡಿದ್ದಾರೆ. ಪರಿಶೀಲನೆಯ ವೇಳೆ ಯಾವುದೇ ಅಕ್ರಮಗಳು ಕಂಡು ಬಂದಿಲ್ಲ ಎನ್ನಲಾಗಿದೆ.

Read More »

ಮಂಗಳೂರಿನಲ್ಲಿ ಪತ್ತೆಯಾಯ್ತು ದೀಪಿಕಾ ದಾಸ್‌ ಮುದ್ದಿನ ಶ್ಯಾಡೋ

ಕಿರುತೆರೆ ನಟಿ, ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ಮೊನ್ನೆಯಷ್ಟೇ ತಮ್ಮ ಮನೆಯ ಬೆಕ್ಕು ಶ್ಯಾಡೋ ಕಾಣಿಯಾಗಿದ್ದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಈ ಬೆಕ್ಕನ್ನು ಹುಡುಕಿಕೊಟ್ಟವರಿಗೆ ಬಹುಮಾನ ಕೊಡುವುದಾಗಿ ಘೋಷಿಸಿದ್ದರು ಇದೀಗ ಬೆಕ್ಕು ಮಂಗಳೂರಿನಲ್ಲಿ ಪತ್ತೆಯಾಗಿದೆ. ತಮ್ಮ ಪ್ರೀತಿಯ ಬೆಕ್ಕು ಸಿಕ್ಕಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ದೀಪಿಕಾ ದಾಸ್, ಬೆಂಗಳೂರಿನಲ್ಲಿ ಕಳೆದು ಹೋದ ಬೆಕ್ಕು ಮಂಗಳೂರಿನಲ್ಲಿ ಪತ್ತೆಯಾಗಿದೆ ಎಂದಿದ್ದಾರೆ. ಅಲ್ಲದೆ, ತಮ್ಮ ಬೆಕ್ಕು ಅಪಹರಣಕ್ಕೆ ಒಳಗಾಗಿತ್ತೆಂದು ಸಹ ಹೇಳಿದ್ದಾರೆ. ‘ಒಳ್ಳೆಯ ಸುದ್ದಿ, ನಮಗೆ ಶ್ಯಾಡೊ (ಬೆಕ್ಕು) ಸಿಕ್ಕಿತು. ಬೆಕ್ಕನ್ನು …

Read More »

ಉಡುಪಿ: ರೈಲ್ವೆ ನಿಲ್ದಾಣದಲ್ಲಿ ಆತ್ಮಹತ್ಯೆಗೈಯಲು ಬಂದಿದ್ದ ಮಹಿಳೆಯ ರಕ್ಷಣೆ..!

ಉಡುಪಿ  : ನಗರದ ಇಂದ್ರಾಳಿಯ ರೈಲು ನಿಲ್ದಾಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದರೆನ್ನಲಾದ ಮಹಿಳೆಯೊಬ್ಬರನ್ನು ರೈಲ್ವೆ ಪೋಲಿಸರು ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಜಂಟಿಯಾಗಿ ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟ ಮಹಿಳೆಯನ್ನು ಗೆದ್ಲಹಳ್ಳಿಯ ನಿವಾಸಿ ಗಂಗಣ್ಣ ಎಂಬವರ ಪುತ್ರಿ ಸವಿತಾ(32) ಎಂದು ಗುರುತಿಸಲಾಗಿದೆ. ಇವರನ್ನು ಬೈಲೂರಿನ ಹೊಸ ಬೆಳಕು ಆಶ್ರಮದಲ್ಲಿ ಪುರ್ನವಸತಿ ಕಲ್ಪಿಸಲಾಗಿದೆ. ಸಂಬಂಧಿಕರು ಆಶ್ರಮವನ್ನು ಸಂಪರ್ಕಿ ಸಲು ಸೂಚಿಸಲಾಗಿದೆ. ಜೀವನದಲ್ಲಿ ಎದುರಾಗಿರುವ ಕೌಟುಂಬಿಕ ಸಮಸ್ಯೆಗಳಿಂದ ನೊಂದಿರುವ ಸವಿತಾ ಆತ್ಮಹತ್ಯೆಗೆ ನಿರ್ಧರಿಸಿರುವುದಾಗಿ ಹೇಳಿಕೊಂಡಿದ್ದಾರೆ. ರೈಲು ನಿಲ್ದಾಣದಲ್ಲಿ ಮಹಿಳೆಯ ನಡವಳಿಕೆಯ ಬಗ್ಗೆ ಸಂಶಯಪಟ್ಟ ಕರ್ತವ್ಯನಿರತ ಪೋಲಿಸರು, ವಿಚಾರಿಸಿದಾಗ ಈ …

Read More »

SHOCKING NEWS: ಅಂಕಪಟ್ಟಿ ಕೊಡಲು ವಿಳಂಬ ಮಾಡಿದ್ಕೆ ಬೆಂಕಿ ಹಚ್ಚಿ ಪ್ರಾಂಶುಪಾಲರನ್ನೇ ಕೊಂದ ವಿದ್ಯಾರ್ಥಿ

ಮಧ್ಯಪ್ರದೇಶ: ಅಂಕಪಟ್ಟಿ ಕೊಡಲು ವಿಳಂಬ ಮಾಡಿದ್ರು ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಮಹಿಳಾ ಪ್ರಾಂಶುಪಾಲರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ. ಫೆಬ್ರವರಿ 20 ರಂದು ಬಿಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ವಿಮುಕ್ತ ಶರ್ಮಾ ಮೇಲೆ ಮಾಜಿ ವಿದ್ಯಾರ್ಥಿ ಅಶುತೋಷ್ ಶ್ರೀವಾಸ್ತವ (24) ಎಂಬಾತ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಈ ವೇಳೆ, ವಿಮುಕ್ತಾರ ದೇಹ ಶೇ. 90ರಷ್ಟು ಸುಟ್ಟ ಗಾಯಗಳಾಗಿತ್ತು. ಕೂಡಲೇ ಅವರನ್ನು ಚೋಯಿತ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ವಿಮುಕ್ತ ಇಂದು (ಶನಿವಾರ) ಮುಂಜಾನೆ 4 ಗಂಟೆ …

Read More »

ಸುಬ್ರಹ್ಮಣ್ಯ: ಕಾಡಾನೆ ಪತ್ತೆಗೆ ಮುಂದುವರಿದ ಕಾರ್ಯಾಚರಣೆ…

ಸುಬ್ರಹ್ಮಣ್ಯ: ಕಡಬ ತಾಲೂಕಿನಲ್ಲಿ ಕಾಡಾನೆ ಪತ್ತೆ ಕಾರ್ಯಾಚರಣೆ ಶನಿವಾರವೂ ಮುಂದುವರಿದಿದೆ. ನಿನ್ನೆಯೂ ಕಾರ್ಯಾಚರಣೆ ನಡೆದಿದ್ದು, ಸಾಕಾನೆಗಳಿಗೆ ವಿರಾಮ ನೀಡಲಾಗಿತ್ತು. ಕಡಬ ತಾಲೂಕಿನ ರೆಂಜಿಲಾಡಿಯಲ್ಲಿ ಯುವತಿ ಸಹಿತ ಇಬ್ಬರು ಕಾಡಾನೆ ದಾಳಿಗೆ ಬಲಿಯಾದ ಬೆನ್ನಲ್ಲೇ ಸ್ಥಳೀಯರ ಆಗ್ರಹದ ಮೇರೆಗೆ ಕಳೆದ ಮಂಗಳವಾರದಿಂದ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭವಾಗಿದ್ದು, ಗುರುವಾರ ಒಂಟಿ ಸಲಗವನ್ನು ಸೆರೆ ಹಿಡಿದು ನಾಗರಹೊಳೆ ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಕೊಂಡೊಯ್ಯಲಾಗಿದೆ. ಆದರೆ ತಾಲೂಕಿನಲ್ಲಿ ಇನ್ನೂ ಕೆಲವು ಕಾಡಾನೆಗಳು ಇರುವ ಸುಳಿವು ದೊರೆತ ಹಿನ್ನೆಲೆಯಲ್ಲಿ ಅವುಗಳನ್ನು ಸೆರೆ ಹಿಡಿಯುವ ಸಲುವಾಗಿ ಕಾಡಾನೆ ಸೆರೆ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ. ಇನ್ನು …

Read More »

ವಿಟ್ಲ: ನಾಳೆ (ಫೆ.26 )ಶಿವಾಜಿ ಜಯಂತಿ ಆಚರಣೆ

ವಿಟ್ಲ:  ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಇದರ ಆಶ್ರಯದಲ್ಲಿ ಹಿಂದೂ ಜಾಗರಣ ವೇದಿಕೆ ವಿಟ್ಲ ನಗರ ವತಿಯಿಂದ ನಾಳೆ (ಫೆ.26) ಭಾನುವಾರ ದಂದು ಬೆಳಿಗ್ಗೆ 9.30 ಗಂಟೆಗೆ ಸರಿಯಾಗಿ ವಿಟ್ಲ ಶ್ರೀ ಪಂಚಲಿಂಗಶ್ವರ ದೇವಸ್ಥಾನದ ವಠಾರದಲ್ಲಿ ಶಿವಾಜಿ ಜಯಂತಿಯನ್ನು ಆಚರಿಸುವುದಾಗಿ ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಎಲ್ಲಾ ಹಿಂದೂ ಬಾಂಧವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹಿಂದೂ ಜಾಗರಣ ವೇದಿಕೆ ವಿಟ್ಲ ಪ್ರಕಟನೆಯಲ್ಲಿ ತಿಳಿಸಿದೆ.

Read More »

BREAKING NEWS : ಭಟ್ಕಳದಲ್ಲಿ ಸೊಸೆಯಿಂದ ನಾಲ್ವರ ಹತ್ಯೆ ಪ್ರಕರಣ : ಇಬ್ಬರು ಆರೋಪಿಗಳು ಅರೆಸ್ಟ್

ಭಟ್ಕಳ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡವಳ್ಳಿಯಲ್ಲಿ ಆಸ್ತಿಗಾಗಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಸಂಬಂಧ ಭಟ್ಕಳ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಮೃತರ ಪುತ್ರಿ ಜಯಾ ಅಡಿಗ ನೀಡಿರುವ ದೂರಿನ ಮೇರೆಗೆ ಆರೋಪಿಗಳಾದ ಸೊಸೆ ವಿದ್ಯಾಭಟ್, ಶ್ರೀಧರ್ ಭಟ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಮುಖ ಆರೋಪಿ ವಿನಯ್ ಭಟ್ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ. ಹಾಡವಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಮಾರಕಾಸ್ತ್ರದಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಹಾಡವಳ್ಳಿ ನಿವಾಸಿಗಳಾದ ಶಂಭು …

Read More »

ಗುಂಡು ತಗುಲಿ ಯೋಗಿ ಆದಿತ್ಯನಾಥ್ ಭದ್ರತಾ ಸಿಬ್ಬಂದಿ ಸಾವು

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭದ್ರತೆಯಲ್ಲಿ ನಿಯೋಜಿತರಾಗಿದ್ದ ಹೆಡ್ ಕಾನ್ಸ್‌ಟೆಬಲ್ ಆಕಸ್ಮಿಕವಾಗಿ ತನ್ನ ಸರ್ವಿಸ್ ರಿವಾಲ್ವರ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದ ಘಟನೆ ಲಕ್ನೋದಲ್ಲಿ ನಡೆದಿದೆ. ಸಂದೀಪ್ ಯಾದವ್ ಮೃತಪಟ್ಟ ಪೊಲೀಸ್. ಸಂದೀಪ್ ಯಾದವ್ ಶನಿವಾರದಂದು ಕರ್ತವ್ಯಕ್ಕೆ ಸೇರಬೇಕಿತ್ತು. ಮಸೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಅವರ ಮನೆಯಲ್ಲಿ ತಮ್ಮ ರಿವಾಲ್ವರ್ ಅನ್ನು ಸ್ವಚ್ಛಗೊಳಿಸುತ್ತಿದ್ದಾಗ ಆಕಸ್ಮಿಕವಾಗಿ ರಿವಾಲ್ವರ್‌ನಿಂದ ಗುಂಡು ಹಾರಿದೆ. ಈ ವೇಳೆ ಗುಂಡು ಸಂದೀಪ್ ಯಾದವ್ ಅವರ ತಲೆಗೆ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿ ಸಂದೀಪ್ ಯಾದವ್ ಅವರ …

Read More »

ಭಟ್ಕಳ: ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ..!

ಭಟ್ಕಳ : ಆಸ್ತಿ ವಿವಾದಕ್ಕೆ ಒಂದೇ ಕುಟುಂಬಗ ನಾಲ್ವರನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡವಳ್ಳಿ ಗ್ರಾಮದ ಸಮೀಪ ನಡೆದಿದೆ. ಕೊಲೆಯಾದವರನ್ನು ಶಂಭು ಭಟ್ (65) ಆತನ ಪತ್ನಿ ಮಾದೇವಿ ಭಟ್, ಮಗ ರಾಜೀವ್ ಭಟ್ (34) ಹಾಗೂ ಮಗನ ಪತ್ನಿ ಕುಸುಮಾ ಭಟ್ (30) ಎಂದು ಗುರುತಿಸಲಾಗಿದೆ. ಆಸ್ತಿ ವಿಚಾರಕ್ಕಾಗಿ ಈ ಕೊಲೆ ನಡೆದಿದೆ ಎಂದು ಹೇಳಲಾಗಿದ್ದು, ನಾಲ್ವರ ತಲೆಯನ್ನು ಕಡಿದು ಕೊಲೆ ಮಾಡಲಾಗಿದ್ದು, ಇಡೀ ಊರನ್ನೇ ಬೆಚ್ಚಿ ಬಿಳಿಸಿದೆ ಸ್ಥಳಕ್ಕೆ ಪೊಲೀಸರು ಹಾಜರಾಗಿ ಪರಿಶೀಲನೆ …

Read More »

ಜಿಮ್ ನಲ್ಲಿ ವರ್ಕೌಟ್ ಮಾಡುತ್ತಲೇ ಕೊನೆಯುಸಿರೆಳೆದ ಯುವ ಪೊಲೀಸ್ ಕಾನ್ಸ್ ಟೇಬಲ್…!

ಹೈದರಾಬಾದ್: ಇತ್ತೀಚೆಗೆ ಹೃದಯಾಘಾತಗಳು ಮರಣಘಾತಗಳಾಗುತ್ತಿದ್ದು ಯುವಕರೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಜಿಮ್ ನಲ್ಲಿ ವರ್ಕ್ ಔಟ್  ಮಾಡುತ್ತಿರುವಾಗಲೇ ಹೃದಯಾಘಾತ ಸಂಭವಿಸಿ ಯುವ ಪೊಲೀಸ್ ಕಾನ್ಸ್ ಟೇಬಲ್ ಇಹಲೋಕ ತ್ಯಜಿಸಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ವಿಶಾಲ್ (24ವರ್ಷ) ಎಂಬ ಬೋವೆನ್ ಪಲ್ಲಿ ನಿವಾಸಿಯಾಗಿದ್ದು, ಆಸೀಫ್ ನಗರ ಪೊಲೀಸ್ ಠಾಣೆಯಲ್ಲಿ ಕಾನ್ಸ್ ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ವಿಶಾಲ್ ಅವರು ಪುಷ್ ಅಪ್ಸ್ ಮಾಡುತ್ತಿರುವುದು ಕಂಡುಬಂದಿದ್ದು, ಬಳಿಕ ವಿಶಾಲ್ ಮತ್ತೊಂದು ವರ್ಕ್ ಔಟ್ ಗೆ ತೆರಳಲು …

Read More »

You cannot copy content of this page.