ತಾಜಾ ಸುದ್ದಿ

ಫ್ರೀ ಬಸ್ ಹತ್ತಿ ಹುಬ್ಬಳ್ಳಿಯಿಂದ ಪುತ್ತೂರಿಗೆ ಬಂದ ವಿವಾಹಿತೆ ಮಹಿಳೆ ಪ್ರಿಯಕನೊಂದಿಗೆ ಎಸ್ಕೇಪ್..!

ಪುತ್ತೂರು: ಬಸ್ ಫ್ರೀ ಆದ ಬೆನ್ನಲೆಯಲ್ಲೇ ವಿವಾಹಿತ ಮಹಿಳೆಯೊಬ್ಬರು ಫ್ರೀ ಬಸ್ ನಲ್ಲೆ ಪ್ರಿಯಕನನ್ನು ನೋಡಲು ಎಂದು ಹುಬ್ಬಳಿಯಿಂದ ಪುತ್ತೂರಿಗೆ ಬಂದು ನಾಪತ್ತೆಯಾಗಿರುವ ಘಟನೆ ನಡೆದಿದೆ. ಮದುವೆಯಾಗಿದ್ದ ಮಹಿಳೆ 11 ತಿಂಗಳ ಮಗು ಹಾಗೂ ಗಂಡನನ್ನು ಬಿಟ್ಟು ಪ್ರಿಯಕನನ್ನು ನೋಡಲು ಫ್ರೀ ಬಸ್ ನಲ್ಲಿ ಹತ್ತಿ ಪುತ್ತೂರಿಗೆ ಬಂದಿದ್ದಾರೆ. ಈಕೆಗೆ ಮದುವೆ ಆಗುವ ಮೊದಲೇ ಪುತ್ತೂರಿನ ಯುವಕನ ಜೊತೆ ಪ್ರೀತಿ ಶುರುವಾಗಿತ್ತು. ಆದರೆ ಮದುವೆಯಾಗಿದ್ದು ಮಾತ್ರ ಬೇರೆ ಯುವಕನ ಜೊತೆ. ಮದುವೆಯಾದರೂ ತನ್ನ ಪ್ರಿಯಕನ‌ ಜೊತೆ ಒಡನಾಟದಲ್ಲಿದ್ದಳು ಎನ್ನಲಾಗಿದೆ. ವಿವಾಹಿತ ಮಹಿಳೆಯ ಪ್ರಿಯಕರ ಕೋಡಿಂಬಾಡಿ …

Read More »

ಮಂಗಳೂರು: ಟಿಪ್ಪರ್ – ಸ್ಕೂಟರ್ ನಡುವೆ ಅಪಘಾತ; ಇಚ್ಚಂಪಾಡಿಯ ಯುವಕ ಮೃತ್ಯು

ನೆಲ್ಯಾಡಿ: ಟಿಪ್ಪರ್ ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ, ಇಚ್ಚಂಪಾಡಿಯ ಯುವಕನೋರ್ವ ಮೃತಪಟ್ಟ ಘಟನೆ ಮಂಗಳೂರಿನ ಪಂಪ್‌ವೆಲ್ ನಲ್ಲಿ ನಡೆದಿದೆ. ಇಚ್ಚಂಪಾಡಿ ಇಲ್ಲುಂಗಲ್ ನಿವಾಸಿ ಆಂಟನಿ ಹಾಗೂ ವಾಮನ ದಂಪತಿ ಪುತ್ರ ಸಂದೇಶ್‌ (25ವ.) ಮೃತಪಟ್ಟ ಯುವಕ. ಇವರು ಬೆಂದೂರ್‌ವೆಲ್‌ನಲ್ಲಿ ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ರಾತ್ರಿ ಪಾಳಿಯ ಕೆಲಸ ಮುಗಿಸಿ ತನ್ನ ಸ್ಕೂಟಿಯಲ್ಲಿ ರೂಮ್ ಗೆ ತೆರಳುವ ವೇಳೆ ಪಂಪ್ ವೆಲ್ ನಲ್ಲಿ ಈ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ಸಂದೇಶ್ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತರು …

Read More »

ವಿಟ್ಲ: ಕೆಲಸಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಯುವತಿ ಮಂಗಳೂರಿನಲ್ಲಿ ಪತ್ತೆ..!!

ವಿಟ್ಲ : ಕೆಲಸಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಯುವತಿ ಮಂಗಳೂರಿನಲ್ಲಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಬಂಟ್ವಾಳ ತಾಲೂಕು ವೀರಕಂಭ ಮಜಿ ನಿವಾಸಿ ಬಾಲಕೃಷ್ಣ ರವರ ಪುತ್ರಿ ಶ್ರೀದೇವಿ (23) ನಾಪತ್ತೆಯಾಗಿದ್ದ ಯುವತಿ. ಶ್ರೀದೇವಿ ರವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯದ ಸೇವಾ ಪ್ರತಿನಿಧಿಯಾಗಿ ಕೆಲಸ ಮಾಡಿಕೊಂಡಿದ್ದು, ಜೂ.9 ರಂದು ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಮಜಿ ಎಂಬಲ್ಲಿರುವ ಮನೆಯಿಂದ ಎಂದಿನಂತೆ ಕೆಲಸಕ್ಕೆ ಹೋಗಿ ಬರುವುದಾಗಿ ವಿಟ್ಲಕ್ಕೆ ಹೋದವರು ಸಾಯಂಕಾಲವಾದರೂ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಯುವತಿ ಮಂಗಳೂರಿನ ಪಿಜಿಯೊಂದರಲ್ಲಿ ಪತ್ತೆಯಾಗಿದ್ದು, ಪಾಂಡೇಶ್ವರ ಠಾಣೆಗೆ ಹಾಜರಾಗಿರುವುದಾಗಿ ತಿಳಿದು …

Read More »

ಬೆಂಗಳೂರಿಗೆ ಹೋಗುವುದಾಗಿ ಮೆಸೇಜ್ ಮಾಡಿ ಸದ್ದಿಲ್ಲದೇ ಕಾಣೆಯಾದ ಬಂಟ್ವಾಳದ ಯುವತಿ..!

ಬಂಟ್ವಾಳ; ಬೆಂಗಳೂರಿಗೆ ಹೋಗುವುದಾಗಿ ಮೆಸೇಜ್ ಮಾಡಿ ತಿಳಿಸಿದ ಯುವತಿಯೋರ್ವಳು ಅ ಬಳಿಕ ಯಾವುದೇ ಸುದ್ದಿಯಿಲ್ಲದೆ ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಿ.ಮೂಡ ಕಸ್ಬಾ ಗ್ರಾಮದ ಲೆಕ್ಕಸಿರಿ ಪಾದೆ ನಿವಾಸಿ ರಮೇಶ್ ಸಾಲಿಯಾನ್ ಅವರ ಮಗಳು ನೇಹಾ (22) ಕಾಣೆಯಾದ ಯುವತಿ. ಮಂಗಳೂರಿನ ಸೇಪ್ಟಿ ಇನಸ್ಟುಮೆಂಟ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿಗೆ ಮನೆಯವರು ಮದುವೆ ಮಾಡುವ ಉದ್ದೇಶದಿಂದ ಸಂಬoಧ ನೋಡಲು ಮುಂದಾದಾಗ ಮದುವೆ ಸದ್ಯ ನನ್ನ ಒಪ್ಪಿಗೆ ಇಲ್ಲ ಎಂದು ಹೇಳಿದ್ದಲ್ಲದೆ,ನಾನು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕಾಗಿದೆ ಹೇಳಿದ್ದಳು. ಅ ಬಳಿಕ …

Read More »

ಗಂಡ ಹೆಂಡತಿ ಜಗಳ; ಪುಟ್ಟ ಕಂದಮ್ಮನ ಬಲಿ ತೆಗೆದ ತಂದೆ

ಕೋಲಾರ: ತಂದೆಯೊಬ್ಬ ತನ್ನ 2 ವರ್ಷದ ಹೆಣ್ಣು ಮಗುವನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ಮುಳಬಾಗಲು ತಾಲ್ಲೂಕಿನ ಕೆ.ಬಿ.ಕೊತ್ತೂರು ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಆರೋಪಿಯನ್ನು ಕೊತ್ತೂರು ಗ್ರಾಮದ  32 ವರ್ಷದ ಗಂಗಾಧರ್ ಎಂದು ಗುರತಿಸಲಾಗಿದೆ. ಕ್ಷುಲ್ಲುಕ ಕಾರಣಕ್ಕೆ ನಡೆಯುತ್ತಿದ್ದ ಪತಿ ಗಂಗಾಧರ್  ಹಾಗೂ ಪತ್ನಿ ರೇಣುಕಾ ನಡುವಿನ ಗಲಾಟೆಯಲ್ಲಿ 2 ವರ್ಷದ ರಮ್ಯ ಎಂಬ ಪುಟ್ಟ ಕಂದಮ್ಮ ಜೀವಕಳೆದುಕೊಂಡಿದೆ ಎನ್ನಲಾಗಿದೆ.ಈ ಬಗ್ಗೆ ರೇಣುಕಾ ನಂಗಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಕೋಲಾರ ಎಸ್ಪಿ ನಾರಾಯಣ ಭೇಟಿ ಪರಿಶೀಲನೆ ನಡೆಸಿದ್ದಾರೆ.

Read More »

ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣ : ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗ

ಮಂಗಳೂರು : ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, ಆರೋಪಿ ಶಾರೀಕ್ ಗೆ ಪಾಕಿಸ್ತಾನದ ಉಗ್ರ ಸಂಘಟನೆಗಳ ಜೊತೆಗೆ ಸಂಪರ್ಕ ಹೊಂದಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಕುಕ್ಕರ್ ಬಾಂಬ್ ಪ್ರಕರಣ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮಹತ್ವದ ಮಾಹಿತಿಯೊಂದು ಸಿಕ್ಕಿದ್ದು, ಒಡಿಸ್ಸಾದ ಟಾಸ್ಕ್ ಪೋರ್ಸ್ ನಿಂದ ಪ್ರೀತಂಕಾರ್ ಬಂಧನದ ಬೆನ್ನಲ್ಲೇ ಕುಕ್ಕರ್ ಬಾಂಬ್ ಪ್ರಕರಣದ ಆರೋಪಿ ಶಾರೀಕ್ ಗೆ ಐಸೀಸ್ ಏಜೆಂಟ್ ಗಳ ಜೊತೆಗೆ ನಂಟು ಹೊಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಒಡಿಸ್ಸಾ ಮೂಲದ ಪ್ರೀತಂಕಾರ್ ಎಂಬಾತ …

Read More »

ದನ ತಪ್ಪಿಸಲು ಹೋಗಿ ಆಟೋ ರಿಕ್ಷಾ ಪಲ್ಟಿ- ತುಳು ಹಾಸ್ಯ ಕಲಾವಿದರಾಗಿದ್ದ ರಿಕ್ಷಾ ಚಾಲಕ ಸಾವು

ವಿಟ್ಲ : ಆಟೋ ರಿಕ್ಷಾಕ್ಕೆ ದನವೊಂದು ಅಡ್ಡಬಂದ ಪರಿಣಾಮ ನಿಯಂತ್ರಣ ತಪ್ಪಿದ ಆಟೋ ಪಲ್ಟಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಪುಣಚದಲ್ಲಿ ಮಂಗಳವಾರ ನಡೆದಿದೆ.ಮೃತರನ್ನು ಜಗನ್ನಾಥ ಪೈಸಾರಿ (57) ಎಂದು ಗುರುತಿಸಲಾಗಿದೆ. ಮಂಗಳವಾರ ಮಧ್ಯಾಹ್ನ ಊಟ ಮುಗಿಸಿದ ಬಳಿಕ ಪುಣಚದ ಅಟೋರಿಕ್ಷಾ ಪಾರ್ಕಿಂಗ್ ಸ್ಥಳಕ್ಕೆ ಬರುತ್ತಿದ್ದ ಸಂದರ್ಭ ಮಣಿಲ ಎಂಬಲ್ಲಿ ದುರ್ಘಟನೆ ಸಂಭವಿಸಿದ್ದು, ಅಟೋರಿಕ್ಷಾ ರಸ್ತೆಗೆ ಪಲ್ಟಿಯಾಗಿ ಬಿದ್ದ ಕಾರಣ, ಅವರ ತಲೆಗೆ ಗಂಭೀರ ಗಾಯವಾಗಿದ್ದು, ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರೆನ್ನಲಾಗಿದೆ. ತುಳು ನಾಟಕ ರಂಗದಲ್ಲಿ ಹಾಸ್ಯ ಅಭಿನಯದ …

Read More »

ಕಾಂತಾರ -2 ಚಿತ್ರಕ್ಕೆ ಮುಹೂರ್ತ ಫಿಕ್ಸ್‌!

ನಟ, ನಿರ್ದೇಶಕ ರಿಷಬ್ ಶೆಟ್ಟಿಯವರ ಬಹುನಿರೀಕ್ಷಿತ ಕಾಂತಾರ – 2 ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್ 27ನೇ ತಾರೀಖು ಕಾಂತಾರ ಪ್ರೀಕ್ವೆಲ್ ಮುಹೂರ್ತ ನೆರವೇರಲಿದೆ. ಇನ್ನು ಕಳೆದ ಬಾರಿಯಂತೆ ಈ ಬಾರಿಯೂ ಆನೆಗುಡಿ ಗಣಪತಿ ದೇವಸ್ಥಾನದಲ್ಲೇ ಚಿತ್ರದ ಮುಹೂರ್ತ ಮಾಡಲು ಚಿತ್ರತಂಡ ತಯಾರಿ ನಡೆಸಿದೆಯೆಂದು ತಿಳಿದುಬಂದಿದೆ. ಹಾಗೇ ಈ ಬಾರಿ ಯಾರೆಲ್ಲಾ ಕಲಾವಿದರು ಇದ್ದಾರೆ ಎಂಬ ಬಗ್ಗೆ ಕುತೂಹಲ ಹೆಚ್ಚಿದೆ.

Read More »

ಪುಣೆ-ಮುಂಬೈ ಎಕ್ಸ್ ಪ್ರೇಸ್ ವೇನಲ್ಲಿ ‘ತೈಲ ಟ್ಯಾಂಕರ್’ ಸ್ಫೋಟ

ಪುಣೆ : ಪುಣೆ-ಮುಂಬೈ ಎಕ್ಸ್ಪ್ರೆಸ್ವೇಯಲ್ಲಿ ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಪೆಟ್ರೋಲ್ ಟ್ಯಾಂಕರ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ.   ಲೋನಾವಾಲಾ ಮತ್ತು ಖಂಡಾಲಾ ನಡುವಿನ ಎಕ್ಸ್ಪ್ರೆಸ್ವೇ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಯನ್ನ ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಅಪಘಾತದ ನಂತರ ಟ್ಯಾಂಕರ್’ಗೆ ಬೆಂಕಿ ಹೊತ್ತಿಕೊಂಡಿದ್ದು, ನಂತ್ರ ಸ್ಫೋಟಗೊಂಡಿತು, ಇದರಿಂದಾಗಿ ರಾಸಾಯನಿಕದ ಉರಿಯುವ ಬೆಂಕಿ ರಸ್ತೆಯಲ್ಲಿ ಪ್ರಯಾಣಿಸುವ ವಾಹನ ಚಾಲಕರಿಗೆ ತಗುಲಿತು ಎಂದು ಅಧಿಕಾರಿ ತಿಳಿಸಿದ್ದಾರೆ. ವರದಿಯ ಪ್ರಕಾರ, …

Read More »

ಸಂಸತ್‌ ಸ್ಥಾನಕ್ಕೆ ಆಯ್ಕೆ ಹೈಕಮಾಂಡ್ ಗೆ ಬಿಟ್ಟ ವಿಚಾರ: ಅರುಣ್‌ ಕುಮಾರ್ ಪುತ್ತಿಲ

ಮಂಗಳೂರು: ರಾಜಕೀಯ ಅಧಿಕಾರಕ್ಕೋಸ್ಕರ ಕಾಂಗ್ರೆಸ್ ಉಚಿತ ಯೋಜನೆ ಜಾರಿಗೆ ತಂದಿದೆ. ಆದರೆ ಗ್ಯಾರೆಂಟಿ ಯೋಜನೆಗಳಿಗೆ ಅನುದಾನ ಹೇಗೆ ತರುತ್ತಾರೆ ಎಂಬುವುದು ಪ್ರಶ್ನೆಯಾಗಿದೆ. ಆರ್ಥಿಕ ಅನುಕೂಲ ಹೇಗೆ ಮಾಡುತ್ತಾರೆ ಎಂಬುದನ್ನು ಕಾದು ನೋಡೋಣ ಎಂದು ಪುತ್ತೂರಿನಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ, ಹಿಂದು ಸಂಘಟಕ ಅರುಣ್‌ ಕುಮಾರ್ ಪುತ್ತಿಲ ಹೇಳಿದ್ದಾರೆ. ರಾಜ್ಯಾದ್ಯಂತ ಮದ್ಯ ಮಾರಾಟದ ಬೆಲೆಯನ್ನು 20 ರೂಪಾಯಿ ಏರಿಕೆ ಮಾಡಿದ್ದಾರೆ. ಇಂತಹ ಇನ್ನಷ್ಟು ಏರಿಕೆಗಳು ರಾಜ್ಯದಲ್ಲಿ ಆಗಬಹುದು. ಇದೀಗ ವಿದ್ಯುತ್  ದರ ಏರಿಕೆ ಆಗಿರುವುದು ರಾಜ್ಯಾದ್ಯಂತ ಚರ್ಚೆಯಾಗುತ್ತಿದೆ. ದಕ್ಷಿಣ ಕನ್ನಡ ಸಂಸದ ಸ್ಥಾನಕ್ಕೆ ಪುತ್ತಿಲ …

Read More »

You cannot copy content of this page.