ತಾಜಾ ಸುದ್ದಿ

ದಕ್ಷಿಣಕನ್ನಡ ಜಿಲ್ಲೆಯ ಮೂರು ಕಡೆ ಎನ್ಐಎ ದಾಳಿ..!

ಮಂಗಳೂರು: ನಿಷೇಧಿತ ಪಿಎಫ್ಐ ಸಂಘಟನೆಗೆ ವಿದೇಶದಿಂದ ಫಂಡಿಗ್ ಮಾಡಲಾಗಿದೆ ಎಂಬ ಪ್ರಕರಣದಲ್ಲಿ ಮಂಗಳೂರಿನ ಉಳ್ಳಾಲ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 3 ಕಡೆಗಳಲ್ಲಿ ಎನ್ಐಎ ದಾಳಿ ನಡೆಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಕಿನ್ಯಾ, ವಳಚ್ಚಿಲ್ ಪದವು ಮತ್ತು ಮೆಲ್ಕಾರ್‌ನಲ್ಲಿ ಎನ್ಐಎ ದಾಳಿ ನಡೆದಿದೆ. ಇಲ್ಲಿನ ಇಬ್ರಾಹಿಂ ಎಂಬವವರ ಮನೆಯಲ್ಲಿ ಎನ್ಐಎ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕೇರಳ ರಾಜ್ಯದಲ್ಲಿ ಧಾರ್ಮಿಕ ಶಿಕ್ಷಕನಾಗಿದ್ದ ಇಬ್ರಾಹಿಂ ಪಿಎಫ್ಐ ನಿಷೆಧದ ಬಳಿಕ ಭೂಗತನಾಗಿದ್ದ. ಇದೀಗ ಇಬ್ರಾಹಿಂ ಮನೆಗೆ ದಾಳಿ ನಡೆಸಿರುವ ಎನ್ಐಎ ಅಧಿಕಾರಿಗಳು ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದೆ. ಈ …

Read More »

ವಿದ್ಯುತ್ ಕಂಬಕ್ಕೆ ಸ್ಕೂಟರ್ ಢಿಕ್ಕಿ-ಸವಾರ ಸಾವು..!

ಉಡುಪಿ: ವಿದ್ಯುತ್ ಕಂಬವೊಂದಕ್ಕೆ ಸ್ಕೂಟರ್ ಢಿಕ್ಕಿ ಹೊಡೆದು ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ವರಂಗದ ಮಾತಿಬೆಟ್ಟು ಎಂಬಲ್ಲಿ ನಡೆದಿದೆ. ಸೂರಿಮಣ್ಣು ನಿವಾಸಿ ಪ್ರಭಾಚಂದ್ರ ಆಚಾರ್ಯ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಭಾನುವಾರ ಮಧ್ಯಾಹ್ನ ದ್ವಿಚಕ್ರ ವಾಹನದಲ್ಲಿ ಮುನಿಯಾಲುನಿಂದ ಸೂರಿಮಣ್ಣು ಕಡೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ವರಂಗ ಗ್ರಾಮದ ಮಾತಿಬೆಟ್ಟು ಹಾಲಿನ ಡೈರಿ ತಿರುವಿನಲ್ಲಿ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ರಸ್ತೆಯ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಪ್ರಭಾಚಂದ್ರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಕುರಿತು …

Read More »

ಪತಿ ತೀರಿಕೊಂಡ ದಿನವೇ ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿದ ಮಹಿಳೆ

ಬೆಂಗಳೂರು: ಎರಡು ವರ್ಷಗಳ ಹಿಂದೆ ಪತಿ ತೀರಿಕೊಂಡ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದಿದ್ದ ಮಹಿಳೆ ಗಂಡನ ಪುಣ್ಯತಿಥಿ ದಿನ ತನ್ನ ಮಗುವಿನೊಂದಿಗೆ ಸಕಲವಾರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌. ವಿಜಯಲಕ್ಷ್ಮಿ (35) ಹಾಗೂ ಪುತ್ರ ಹರಿಹರನ್ (7)ಮೃತರು ಎಂದು ಗುರುತಿಸಲಾಗಿದೆ. ಬೆಂಗಳೂರು ಹೊರವಲಯ ಬನ್ನೇರುಘಟ್ಟ ಸಮೀಪದ ಸಕಲವಾರ ಕೆರೆಗೆ ಮಗುವನ್ನು ಸೊಂಟಕ್ಕೆ ಕಟ್ಟಕೊಂಡು ವಿಜಯಲಕ್ಷ್ಮಿ ಜಿಗಿದಿದ್ದಾರೆ. ಇವರು ಸಿ.ಕೆ.ಪಾಳ್ಯದಲ್ಲಿ ವಾಸವಾಗಿದ್ದರು.ಕಳೆದ ಎರಡು ವರ್ಷಗಳಿಂದ ಗಂಡನಿಲ್ಲದೇ ಮಗುವಿನೊಂದಿಗೆ ವಾಸವಾಗಿದ್ದ ಮಹಿಳೆ ಮನನೊಂದು ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿದ್ದಾಳೆ. ಇವರು ಆಂಧ್ರ ಪ್ರದೇಶ ಮೂಲದವರಾಗಿದ್ದು,ಕುಟುಂಬ ಸಮೇತವಾಗಿ ಕೆಲವು …

Read More »

ಬೆಳ್ತಂಗಡಿ: ಲೋ ಬಿಪಿಯಿಂದ ಹೃದಯಾಘಾತ; ಯುವತಿ ಸಾವು

ಬೆಳ್ತಂಗಡಿ: ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆದು ಮನೆಯಲ್ಲಿದ್ದ ಯುವತಿ ಲೋ ಬಿಪಿ ಆಗಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಆ 13 ರಂದು ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲು ಎಂಬಲ್ಲಿ ನಡೆದಿದೆ. ಇಲ್ಲಿನ ಜಾತಿಮಾರು ನಿವಾಸಿ ರಾಜು ದೇವಾಡಿಗ ಮತ್ತು ಸರೋಜ ದಂಪತಿಗಳ ಮಗಳು ಸುಮಾ (19) ಮೃತ ಯುವತಿ.ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಮೊದಲ ವರ್ಷದ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಸುಮಾ ಮನೆಗೆ ಬಂದಿದ್ದಳು. ಆಗಸ್ಟ್ 9 ರಂದು ಅನಾರೋಗ್ಯದ ಕಾರಣದಿಂದ ಸ್ಥಳೀಯ ಆಸ್ಪತ್ರೆಗೆ ತೆರಳಿ ಮಾತ್ರೆಗಳನ್ನು ಪಡೆದು ಮನೆಗೆ ತೆರಳಿದ್ದಳು. ನಂತರ …

Read More »

ರೌಡಿಗಳಿಗೆಲ್ಲ ಮನೆಯನ್ನ ಬಾಡಿಗೆ ನೀಡಬೇಡಿ ಎಂದವನ ಕೊಲೆಗೆ ಯತ್ನ

ಉಳ್ಳಾಲ: ರೌಡಿಗಳಿಗೆಲ್ಲ ಮನೆಯನ್ನ ಬಾಡಿಗೆ ನೀಡಬೇಡಿ ಎಂದು ಸಂಬಂಧಿಕರಲ್ಲಿ ಹೇಳಿದ ವ್ಯಕ್ತಿಯ ಮೇಲೆ ಕತ್ತಿಯಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ನೆತ್ತಿಲಪದವು ಎಂಬಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ನೆತ್ತಿಲಪದವು ನಿವಾಸಿ ಮನ್ಸೂರ್ (40) ಎಂಬುವರ ಮೇಲೆ ಕತ್ತಿಯಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಲಾಗಿದೆ. ಉಳ್ಳಾಲದ ನಟೋರಿಯಸ್ ಟಾರ್ಗೆಟ್ ತಂಡದ ಕೋಟೆಪುರ ನಿವಾಸಿ ನಮೀರ್ ಹಂಝ ಕೊಲೆಗೆ ಯತ್ನಿಸಿದ ಆರೋಪಿಯಾಗಿದ್ದು, ಕೃತ್ಯ ಎಸಗಿದ ಬಳಿಕ ತಲೆಮರೆಸಿಕೊಂಡಿದ್ದಾನೆ. ನಮೀರ್ ಹಂಝ ತನ್ನ ಸಹೋದರನಿಗೆ ಬಾಡಿಗೆ ಮನೆ ನೋಡಲೆಂದು ನೆತ್ತಿಲಪದವು ಬಳಿಯ ಮನ್ಸೂರ್ …

Read More »

ಮಣಿಪಾಲ : ಅವಧಿ ಮೀರಿ ಪಬ್ ಗಳಲ್ಲಿ ಡಿಜೆ – ಪೊಲೀಸರಿಂದ ಕಾರ್ಯಾಚರಣೆ , ಎಚ್ಚರಿಕೆ

ಉಡುಪಿ: ನಿಗದಿತ ಅವಧಿ ಮೀರಿ ಪಬ್‌ಗಳು ಕಾರ್ಯಚರಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಣಿಪಾಲ ಪೊಲೀಸರು, ಕಾರ್ಯಾಚರಣೆ ನಡೆಸಿ ಪಬ್ ಗಳ ಡಿಜೆಯನ್ನು ಸ್ಥಗಿತಗೊಳಿಸಿ ಎಚ್ಚರಿಕೆ ನೀಡಿದ್ದಾರೆ. ವಾರಾಂತ್ಯವಾದ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಮಣಿಪಾಲದಲ್ಲಿ ಅನಧಿಕೃತ ಪಬ್ ಗಳು ಮತ್ತು ಅವಧಿ ಮೀರಿ ಕಾರ್ಯಾಚರಿಸುತ್ತಿರುವ ಪಬ್ ಗಳ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಇತ್ತೀಚೆಗೆ ದೂರು ನೀಡಿದ್ದರು.ಈ ದೂರಿನ ಹಿನ್ನೆಲೆಯಲ್ಲಿ ಮಣಿಪಾಲದಲ್ಲಿನ 6 ಅಕ್ರಮ ಪಬ್‌ನ ಡಿಜೆ ನಿಲ್ಲಿಸಿ ಅವುಗಳ ಮಾಲೀಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಹಲವು ಪಬ್‌ಗಳಲ್ಲಿ ರಾಜಕೀಯ ನಾಯಕರ ಬೆಂಬಲದಿಂದ …

Read More »

ಬಂಟ್ವಾಳ – ಹೃದಯಾಘಾತದಿಂದ ಪೆಟ್ರೋಲ್ ಬಂಕ್ ಮ್ಯಾನೆಜರ್ ಪರುಷಣ್ಣ ನಿಧನ…!!

ಬಂಟ್ವಾಳ  : ಹೃದಯಾಘಾತದಿಂದ ಬಿಸಿರೋಡಿನ ಪೆಟ್ರೋಲ್ ಬಂಕ್ ಒಂದರ ಮ್ಯಾನೇಜರ್ ಸಾವನಪ್ಪಿರುವ ಘಟನೆ ನಡೆದಿದೆ. ಮೃತರನ್ನು ಬಿಸಿರೋಡಿನ ಸರ್ಕಲ್ ಬಳಿಯಲ್ಲಿರುವ ಪೆಲತ್ತಿಮಾರ್ ನಿವಾಸಿ ಪುರುಷೋತ್ತಮ ಪೂಜಾರಿ ( ಪರುಷಣ್ಣ) (45) ಎಂದು ಗುರುತಿಸಲಾಗಿದೆ. ಪುರುಷೋತ್ತಮ ಅವರು ಕೃಷಿಕನಾಗಿದ್ದುಕೊಂಡು ಬಿಸಿರೋಡಿನ ಸುತ್ತಮುತ್ತಲಿನ ಜನರ ಅಚ್ಚುಮೆಚ್ಚಿನ ಪುರುಷಣ್ಣ ಎಂದೇ ಹೆಸರುವಾಸಿಯಾಗಿ ಸಾಮಾಜಿಕ ಸೇವೆಯ ಮೂಲಕ ಚಿರಪರಿಚಿತರಾಗಿದ್ದರು. ನೇರ ನಡೆ ನುಡಿಯ ವ್ಯಕ್ತಿಯಾಗಿದ್ದ ಇವರು ಬಿಸಿರೋಡಿನ ಗುರುಕೃಪ ಪೆಟ್ರೋಲ್ ಪಂಪ್ ನಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಾತ್ರಿ ಸುಮಾರು ಒಂದು ಗಂಟೆ ವೇಳೆ ಇವರಿಗೆ ಹೃದಯ ನೋವು …

Read More »

ಉಳ್ಳಾಲ: ಕಾರು ಢಿಕ್ಕಿ – ಮಗನೊಂದಿಗೆ ಸ್ಕೂಟರಲ್ಲಿ ಪ್ರಯಾಣಿಸುತ್ತಿದ್ದ ತಂದೆ ಮೃತ್ಯು

ಉಳ್ಳಾಲ: ಬೈಕ್ ಮತ್ತು ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ನಲ್ಲಿದ್ದ ಸಹಸವಾರ ಸಾವನಪ್ಪಿದ್ದು, ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಚೆಂಬುಗುಡ್ಡೆ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ಅಳೇಕಲ ನಿವಾಸಿ ಅಬ್ಬಾಸ್(58) ಎಂದು ಗುರುತಿಸಲಾಗಿದೆ. ಅವರು ಶನಿವಾರ ಬೆಳಗ್ಗೆ ಮಗ ನೌಶಾದ್ ಜತೆ ಬೈಕ್‍ನಲ್ಲಿ ದೇರಳಕಟ್ಟೆಗೆ ತೆರಳಿದ್ದರು. ಈ ಸಂದರ್ಭ ಚೆಂಬುಗುಡ್ಡೆ ಬಳಿ ಕಾರೊಂದು ಬೈಕ್‍ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಬೈಕ್‍ನಲ್ಲಿದ್ದ ಇಬ್ಬರು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು, ಈ ಪೈಕಿ ತಂದೆ ಅಬ್ಬಾಸ್ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ …

Read More »

ಮಂಗಳೂರು: ಸೌಜನ್ಯಾ ಪರ ಹೋರಾಟಕ್ಕಿಳಿದ ಬಿಜೆಪಿ – ಆಗಷ್ಟ್‌ 27ರಂದು ಬೆಳ್ತಂಗಡಿಯಲ್ಲಿ ಪ್ರತಿಭಟನೆ

ಮಂಗಳೂರು: ಬಿಜೆಪಿ ಸೌಜನ್ಯಾ ಪರ ಹೋರಾಟಕ್ಕಿಳಿದಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರನೊಳಗೊಂಡು ಬೆಳ್ತಂಗಡಿಯಲ್ಲಿ 27ರಂದು ಪ್ರತಿಭಟನೆ ನಡೆಯಲಿದೆ. ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾತನಾಡಿ, ಎಸ್‌ಡಿಎಂ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಪೊಲೀಸ್ ತನಿಖೆಯಾಗಿ ಸಿಐಡಿ ಬಳಿಕ ಹೋರಾಟ ನಡೆದು ಸಿಬಿಐ ತನಿಖೆಯೂ ಆಗಿದೆ. ಕೊನೆಗೆ ಸಿಬಿಐ ಬಂಧಿತ ವ್ಯಕ್ತಿ ಆರೋಪಿಯಲ್ಲ ಎಂದು ಹೇಳಿದೆ. ಅಂದು ಕೂಡ ಬಿಜೆಪಿ ಈ ವಿಚಾರದಲ್ಲಿ ಹೋರಾಟ ಮಾಡಿತ್ತು. ಇದೀಗ ಮತ್ತೆ ಬಿಜೆಪಿ ಇಡೀ ಪ್ರಕರಣದ ಮರು ತನಿಖೆಗೆ ಆಗ್ರಹಿಸುತ್ತದೆ …

Read More »

ಉಡುಪಿ: ಅಪರ ಜಿಲ್ಲಾಧಿಕಾರಿಯಾಗಿ ಮಮತಾ ದೇವಿ ಜಿಎಸ್ ನೇಮಕ

ಉಡುಪಿ: ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ವರ್ಗಾವಣೆಗೊಂಡಿದ್ದು, ನೂತನ ಅಪರ ಜಿಲ್ಲಾಧಿಕಾರಿಯಾಗಿ ಮಮತಾ ದೇವಿ ಜಿಎಸ್ ನೇಮಕಗೊಂಡಿದ್ದಾರೆ.ನೂತನ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿಎಸ್ ಬೆಂಗಳೂರು ನೃಪತುಂಗ ವಿಶ್ವವಿದ್ಯಾನಿಲಯದ ಕುಲ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.

Read More »

You cannot copy content of this page.