ತಾಜಾ ಸುದ್ದಿ

ಕೋಟ: ಅನಾರೋಗ್ಯದಿಂದ ಪತ್ನಿ ಸಾವು; ಅಘಾತದಲ್ಲಿ ಪತಿಯೂ ಮೃತ್ಯು

ಕೋಟ: ಇಲ್ಲಿನ ಕಂಬಳಕಟ್ಟು ಗುರಿಕಾರ ಮನೆ ಕೃಷ್ಣ ಪೂಜಾರಿ ಧರ್ಮಪತ್ನಿ ಬನ್ನಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕಿ ಮುತ್ತು ಪೂಜಾರ್ತಿ(53ವ) ಅನಾರೋಗ್ಯದಿಂದ ನಿಧನರಾದರು. ಪತ್ನಿಯ ನಿಧನ ಕೇಳಿ ಅಘಾತಗೊಂಡ ಪತಿ ಕೃಷ್ಣ ಪೂಜಾರಿ(58)ಪತ್ನಿಯ ಅಂತ್ಯಸಂಸ್ಕಾರ ನೆರವೆರಿಸಿ ಕೆಲಹೊತ್ತಲ್ಲೆ ಇಹಲೋಕ ತ್ಯಜಿಸಿದ್ದಾರೆ. ಬನ್ನಾಡಿ ಕೃಷ್ಣ ಪೂಜಾರಿ ಬುಧವಾರ ರಾತ್ರಿ ಹೃದಯಾಘಾತದಿಂದ ವಿಧಿವಶರಾಗಿದ್ದು ಮೃತರು ಬ್ರಹ್ಮಬೈದರ್ಕಳ ಕಂಬಳಾಭಿಮಾನಿಯಾಗಿ, ಕಂಬಳದ ಸ್ವಯಂಸೇವಕರಾಗಿ ನಿರಂತರ ಸೇವೆ,ಕೃಷಿರಾಗಿ ಗುರುತಿಸಿಕೊಂಡಿದ್ದರು.ಒರ್ವ ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

Read More »

ಶ್ರೀಮತಿ ಉಷಾಗೆ ಪಿಹೆಚ್.ಡಿ. ಪದವಿ

ಉಡುಪಿ: ದಾವಣಗೆರೆ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಉಷಾ ಇವರಿಗೆ ವಾಣಿಜ್ಯಶಾಸ್ತ್ರ ವಿಷಯದಲ್ಲಿ ಮಂಡಿಸಿದ ಸಂಶೋಧನ ಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾನಿಲಯ ಹಂಪಿ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದೆ. ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್‌ಸ್ರ್ಟೀಟ್, ಮಂಗಳೂರು, ವಾಣಿಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ವಾಲ್ಟರ್ ಡಿಸೋಜ ಇವರ ಮಾರ್ಗದರ್ಶನದಲ್ಲಿ ಇಂಪ್ಯಾಕ್ಟ್ ಆಫ್ ಜಿಎಸ್‌ಟಿ(ಗೂಡ್ಸ್ ಆಂಡ್ ಸರ್ವೀಸಸ್ ಟ್ಯಾಕ್ಸ್) ಆನ್ ಎಂಎಸ್‌ಎಂಇ ಸೆಕ್ಟರ್ ಎಂಬ ವಿಷಯದಲ್ಲಿ ಮಹಾಪ್ರಬಂಧವನ್ನು ಮಂಡಿಸಿದ್ದರು. ಶ್ರೀಮತಿ ಉಷಾ ಇವರು ಶ್ರೀ ರಾಮಪೂಜಾರಿ, ಶ್ರೀಮತಿ ಸುಮತಿ ಇವರ ಪುತ್ರಿ ಹಾಗೂ ಶ್ರೀ ಮಹೇಶ್ …

Read More »

ಮಂಗಳೂರು : ಮುದ್ರಾ ಯೋಜನೆಯಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ 20.50 ಲಕ್ಷ ರೂ ವಂಚನೆ

ಮಂಗಳೂರು: ವ್ಯಕ್ತಿಯೋರ್ವ ಕೇಂದ್ರ ಸರಕಾರದ ಮುದ್ರಾ ಯೋಜನೆಯಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಗೆ 20.50 ಲಕ್ಷ ರೂ. ಪಡೆದು ವಂಚಿಸಿರುವ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಐಸ್‌ಕ್ರೀಂ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಅನಿಲ್‌ ಎನ್ನುವವರಿಗೆ ಪರಿಚಯವಾಗಿದ್ದ ಪ್ರಕಾಶ್ ಪೂಜಾರಿ ಎಂಬಾತ ತಾನು ಮುದ್ರಾ ಯೋಜನೆಯ ಏಜೆಂಟ್ ಎಂದು ಪರಿಚಯಿಸಿ ಸಾಲ ಕೊಡಿಸುತ್ತೇನೆ ಎಂದು ತಿಳಿಸಿದ್ದಾನೆ. ಅನಿಲ್ ಅವರು ಬೇಡ ಎಂದರೂ, ವಿನಯದಿಂದ ಮಾತನಾಡಿ ಹಲವರಿಗೆ 15 ಲಕ್ಷ ರೂ. ವರೆಗೆ ಸಾಲ ತೆಗೆಸಿಕೊಟ್ಟಿದ್ದೇನೆ ಎಂದು ಹೇಳಿದ್ದಾನೆ. 15 ಲಕ್ಷ ರೂ. …

Read More »

ಪುತ್ತೂರು: ಹಿಂದು ಫೈರ್ ಬ್ರಾಂಡ್ ಖ್ಯಾತಿಯ ಅರುಣ್ ಪುತ್ತಿಲ ಮೇಲೆ ಲೈಂಗಿಕ ದೌರ್ಜನ್ಯ ಆರೋಪ!

ಪುತ್ತೂರು :  ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ  ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದಡಿ ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿರುವ ದಕ್ಷಿಣ ಕನ್ನಡ ಮಹಿಳಾ ಠಾಣೆಯಲ್ಲಿ ಐಪಿಸಿ 417, 354A, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 47 ವರ್ಷದ ಮಹಿಳೆಯಿಂದ ಬೆಂಗಳೂರಿನ ಪೈ ವಿಸ್ತಾ ಹೋಟೆಲ್​ನಲ್ಲಿ ಲೈಂಗಿಕ ದೌರ್ಜನ್ಯ ಆರೋಪ ಮಾಡಲಾಗಿದ್ದು, 2023 ಜೂನ್​ನಲ್ಲಿ ಬೆಂಗಳೂರಿನ ಪೈ ವಿಸ್ತಾ ಹೋಟೆಲ್​ನಲ್ಲಿ ಲೈಂಗಿಕ ದೌರ್ಜನ್ಯವೆಸಗಿ  ಫೋಟೊ, ಸೆಲ್ಫಿ, ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಅರುಣ್ ಕುಮಾರ್ …

Read More »

ದ.ಕ ಜಿಲ್ಲೆಯಲ್ಲಿ ನಾಳೆ (ಆ.2) ಎಲ್ಲಾ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರಕಾರಿ, ಖಾಸಗಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪಿಯು ಕಾಲೇಜುಗಳಿಗೆ (ಆಗಸ್ಟ್ 2) ಶುಕ್ರವಾರದಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಮುಲೈ ಮುಗಿಲನ್ ರಜೆ ಘೋಷಿಸಿದ್ದಾರೆ.

Read More »

ಉಡುಪಿ: ಮುಂದುವರಿದ ಮಳೆ – ಆಗಸ್ಟ್ 2ರಂದು ಜಿಲ್ಲೆಯ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ

ಉಡುಪಿ: ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು. ದಿನಾಂಕ:01-08-2024ರ ಹವಾಮಾನ ಇಲಾಖೆಯ ರೆಡ್ ಅಲರ್ಟ್ ಮುನ್ಸೂಚನೆಯಂತೆ ಮಳೆಯ ತೀವ್ರತೆ ಹೆಚ್ಚಾಗುವುದರಿಂದ ಮುಂಜಾಗೃತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಿನಾಂಕ : 02.08.2024 ರಂದು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ, ಹಾಗೂ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಲಾಗಿರುತ್ತದೆ.

Read More »

ಮುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಕ್ಕೆ ಮಂಗಳೂರು ತಹಶೀಲ್ದಾರ್ ಭೇಟಿ

ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳವೂರು ದುರ್ಗಕೊಡಿಯಲ್ಲಿ ಸುಂದರಿ ಇವರ ಮನೆಗೆ ಗುಡ್ಡ ಜರಿದು ಯಾವುದೇ ಕ್ಷಣದಲ್ಲಿ ಮನೆ ಬೀಳುವ ಪರಿಸ್ಥಿತಿ ಉಂಟಾಗಿದೆ . ಸುಮಾರು 50 – 60 ವರ್ಷಗಳಿಂದ ವ್ಯಾಸ್ತವ್ಯ ಹೂಡಿರುವ ಸುಂದರಿಯವರ ಮನೆಗೆ ಕಳೆದ ವರ್ಷದ ಮಳೆಯಲ್ಲಿ ಕೂಡ ಗುಡ್ಡದ ನೀರು ಹರಿದು ಭಾರಿ ಹಾನಿಯಾಗಿತ್ತು . ಇದಕ್ಕೆ ಕಾರಣ PWD ಪಕ್ಕ ಲಕ್ಷ್ಮಿ ರಮೇಶ್ ರಾವ್ ಎಂಬವರು ಜಾಗ ಖರೀದಿ ಮಾಡಿದ್ದು ಅವೈಜ್ಞಾನಿಕವಾಗಿ ಜಾಗವನ್ನು ಅಗೆದಿದ್ದು PWD ಚರಂಡಿ ಹಾಗೂ ನೀರು ಹೋಗುವ ತೋಡು ಮುಚ್ಚಿದರ ಪರಿಣಾಮ ಈ …

Read More »

ಮೂಡುಬಿದಿರೆ : ಭೀಕರ ಮಳೆಗೆ ಬೋರುಗುಡ್ಡೆಯಲ್ಲಿ ಮನೆ ಕುಸಿತ – ವೃದ್ದೆ ಸಾವು

ಮೂಡುಬಿದಿರೆ: ಭೀಕರ ಮಳೆಗೆ ಮನೆಯೊಂದು ಸಂಪೂರ್ಣವಾಗಿ ಕುಸಿದು ಬಿದ್ದ ಪರಿಣಾಮ ವೃದ್ಧೆಯೊಬ್ಬರು ಸಾವನ್ನಪ್ಪಿದ ಘಟನೆ ತಾಲೂಕಿನ ಬೋರುಗುಡ್ಡೆಯಲ್ಲಿ ನಡೆದಿದೆ. ಕಳೆದ ರಾತ್ರಿ ಈ ಪ್ರದೇಶದಲ್ಲಿ ಸುರಿದ ರಣಭೀಕರ ಮಳೆಗೆ ಮನೆಯೊಂದು ಕುಸಿದು ಬಿದ್ದಿದೆ. ನೆಲ್ಲಿಕಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬೋರುಗುಡ್ಡೆ ಜನತಾ ಕಾಲನಿ ನಿವಾಸಿ ಪರಿಶಿಷ್ಟ ಜಾತಿಯ ಗೋಪಿ (80) ಎಂಬವರು ಮೃತಪಟ್ಟಿದ್ದಾರೆ. ಮಳೆಯಿಂದಾಗಿ ಗೋಪಿ ಅವರ ಮನೆ ಸೋರುತ್ತಿತ್ತು. ಅದಕ್ಕೆ ಟರ್ಪಾಲು ಹಾಕಲೆಂದು ಮಕ್ಕಳು ಹೊರಗೆ ಬಂದಿದ್ದರು. ಈ ಸಂದರ್ಭ ಮನೆಯು ಸಂಪೂರ್ಣ ಕುಸಿದು ಬಿದ್ದಿದ್ದು, ಮನೆಯೊಳಗಡೆಯಿದ್ದ ಗೋಪಿ ಅವರಿಗೆ ತೀವ್ರ ಗಾಯಗಳಾಗಿದ್ದವು. …

Read More »

ಫಲ್ಗುಣಿ ನದಿ ಪ್ರವಾಹ,ಅಪಾಯದಲ್ಲಿ ಸಿಲುಕಿದವರ ರಕ್ಷಣೆ

ಮಂಗಳೂರು ತಾಲೂಕು ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಲ್ಗುಣಿ ನದಿಯ ನೀರಿನ ಮಟ್ಟವು ನಿನ್ನೆ ರಾತ್ರಿ ಸುರಿದ ಭಾರಿ ಪ್ರಮಾಣದ ಮಳೆಗೆ ಜಾಸ್ತಿಯಾಗಿದ್ದು ನದಿ ಸಮೀಪದ ಗೀತಾ ವಿ ಶೆಟ್ಟಿ ಮಾಲೀಕತ್ವದ ಫಾರ್ಮ್ ಹೌಸ್ ಮುಳುಗಡೆಯಾಗಿದ್ದು, ಮನೆಯಲ್ಲಿದ್ದ ಕೆಲಸದಾಳುಗಳಾದ ದರ್ಣಪ್ಪ ನಾಯ್ಕ , ಕೌಶಲ್ಯ , ತೇಜಸ್ ಇವರು ಹೊರಗಡೆ ಬರಲು ಆಗದೆ ಮಹಡಿ ಮೇಲೆ ಹೋಗಿರುತ್ತಾರೆ . ಘಟನಾ ಸ್ಥಳದ ಮಾಹಿತಿ ಪಡೆದುಕೊಂಡ ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಆಳ್ವ ಗುಂಡ್ಯ ಇವರು ಕೂಡಲೇ SDRF ರಕ್ಷಣಾ ಇಲಾಖೆ ಹಾಗೂ ಅಗ್ನಿಶಾಮಕ …

Read More »

ಬೆಳ್ತಂಗಡಿ: ಭಾರಿ ಮಳೆಗೆ ಗುಡ್ಡ ಕುಸಿದು ದೇವಸ್ಥಾನಕ್ಕೆ ಹಾನಿ..!

ಬೆಳ್ತಂಗಡಿ :ಭಾರಿ ಮಳೆಗೆ ಗುಡ್ಡ ಕುಸಿದು ದೇವಸ್ಥಾನಕ್ಕೆ ಹಾನಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದಿದೆ. ಭಾರೀ ಮಳೆಯಾಗುತ್ತಿರುವ ಕಾರಣ ದೇವಸ್ಥಾನದ ಸುತ್ತಿ ಇರುವ ಗುಡ್ಡ ಏಕಾಏಕಿ ದೇವಸ್ಥಾನದ ಮೇಲೆ ಬಿದ್ದಿದೆ. ದೇವಸ್ಥಾನದ ಗರ್ಭಗುಡಿ ಮತ್ತು‌ ಸುತ್ತು ಪೌಳಿಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ನೀರಿನ ಜೊತೆಗೆ ದೇವಸ್ಥಾನದ ಒಳಗಡೆ ಮಣ್ಣು ನುಗ್ಗಿದ್ದು. ಮಳೆ ಜಾಸ್ತಿಯಾದರೆ ಮತ್ತಷ್ಟು ಗುಡ್ಡ ಕುಸಿಯುವ ಸಾಧ್ಯತೆ ಇದೆ.

Read More »

You cannot copy content of this page.