ತಾಜಾ ಸುದ್ದಿ

ಉಪ್ಪಿನಂಗಡಿ: ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ- ಉಸ್ತಾದ್ ಬಂಧನ

ಖಾಸಗಿ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ  ಆರೋಪಿ ಉಸ್ತಾದ್ ನನ್ನು ಕಾಸರಗೋಡಿನ ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಉಪ್ಪಿನಂಗಡಿ ನಿವಾಸಿ ಇಬ್ರಾಹಿಂರ ಪುತ್ರ ಅಬ್ದುಲ್ ಕರೀಂ(40) ಬಂಧಿತ ಆರೋಪಿಯಾಗಿದ್ದಾನೆ. ಅಬ್ದುಲ್ ಕರೀಂ  ಉಸ್ತಾದ್ ಆಗಿದ್ದು  ಶನಿವಾರ ಈ ಘಟನೆ ನಡೆದಿದೆ. ಕುಂಬಳೆಯಿಂದ ಬದಿಯಡ್ಕ ಭಾಗಕ್ಕೆ ಬರುತ್ತಿದ್ದ ಖಾಸಗಿ ಬಸ್ಸು ಸೀತಾಂಗೋಳಿ ಸ್ಟಾಪ್ ದಾಟಿದ ಕೂಡಲೇ ಆರೋಪಿ ವಿದ್ಯಾರ್ಥಿನಿಗೆ ಕಿರುಕುಳ ನೀಡಲೆತ್ನಿಸಿದ್ದಾನೆ.  ವಿದ್ಯಾರ್ಥಿನಿ ಪ್ರತಿಭಟಿಸಿದಾಗ ಇತರ ಪ್ರಯಾಣಿಕರು ಮದ್ಯ ಪ್ರವೇಶಿ  ಆರೋಪಿಯನ್ನು ಹಿಡಿದು ಬದಿಯಡ್ಕ ಪೊಲೀಸರಿಗೆ ಒಪ್ಪಿಸಿದ್ದಾರೆ.  ಆರೋಪಿ ಅಬ್ದುಲ್ ಕರೀಂ ನನ್ನು ಬಂಧಿಸಿದ ಪೊಲೀಸರು …

Read More »

ಉಡುಪಿ:ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿ- ಗರ್ಭಿಣಿ ಸಹಿತ ಮೂವರಿಗೆ ಗಾಯ

ಉಡುಪಿ: ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಗರ್ಭಿಣಿ ಸಹಿತ ಮೂವರು ಗಾಯಗೊಂಡ ಘಟನೆ ರಾ.ಹೆ. 66ರ ಉದ್ಯಾವರದಲ್ಲಿ ಸಂಭವಿಸಿದೆ. ಪೂರ್ಣಿಮಾ, ಅವರ ಪುತ್ರಿ ಪ್ರಿಯದರ್ಶಿನಿ ಮತ್ತು ಗರ್ಭಿಣಿ ಸೀಮಾ ಸಾಲಿಯಾನ್‌ ಗಾಯಾಳುಗಳು. ಅವರು ಖಾಸಗಿ ಕಾರ್ಯಕ್ರಮದ ನಿಮಿತ್ತ ಬಡಾ ಎರ್ಮಾಳ್‌ಗೆ ಬಂದಿದ್ದು, ಕೆಲಸದ ನಿಮಿತ್ತ ಉಡುಪಿಗೆ ಹೋಗಿದ್ದರು. ಅಲ್ಲಿಂದ ರಿಕ್ಷಾ ಗೊತ್ತುಪಡಿಸಿ ಎರ್ಮಾಳಿಗೆ ಮರಳುತ್ತಿದ್ದಾಗ ಉದ್ಯಾವರ ಕ್ಲಾಸಿಕ್‌ ಆಟೋ ಗ್ಯಾರೇಜ್‌ ಬಳಿ ಅಪಘಾತ ಸಂಭವಿಸಿದೆ.ಗಾಯಾಳುಗಳನ್ನು ಸ್ಥಳೀಯರು ಆ್ಯಂಬುಲೆನ್ಸ್‌ ಮೂಲಕ ಉಡುಪಿಯ ಹೈಟೆಕ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಾಲಕ ಸಣ್ಣಪುಟ್ಟ …

Read More »

2 ತಿಂಗಳ ‘ಗೃಹಲಕ್ಷ್ಮಿ’ ಹಣ ಇಂದೇ ಖಾತೆಗೆ ಜಮಾ..!

ಬೆಂಗಳೂರು : ಎರಡು ತಿಂಗಳುಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸರ್ಕಾರ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಇಂದು ಎಲ್ಲಾ ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಅವರ ಖಾತೆಗೆ ಇಂದು ವರ್ಗಾಯಿಸಲಾಗುತ್ತಿದೆ.   ಹೌದು ಗೃಹಲಕ್ಷ್ಮಿ ಹಣ ಖಾತೆಗೆ ಸೇರಲು ಯಾಕೆ ವಿಳಂಬ ವಾಗುತ್ತಿದೆ ಎನ್ನುವುದರ ಕುರಿತು ಕೆಲವು ದಿನಗಳ ಹಿಂದೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದು, ತಿಂಗಳಿಗೆ 2,400 ಕೋಟಿ ರೂ. ಖರ್ಚಾಗುತ್ತಿದೆ. ಮಂಡ್ಯದಲ್ಲಿ ಡಿಪಿಟಿಗೆ ಪುಷ್ ಮಾಡಿ …

Read More »

ಉಡುಪಿ: ಕಾರಿನ ಗ್ಲಾಸ್ ಮುಚ್ಚಿ ಮಲಗಿದ್ದ ಚಾಲಕ ಉಸಿರು ಗಟ್ಟಿ ಸಾವು..!

ಉಡುಪಿಯಲ್ಲಿ ಕಾರಿನ ಗ್ಲಾಸ್ ಮುಚ್ಚಿ ಮಲಗಿದ್ದ ಚಾಲಕ ಉಸಿರು ಗಟ್ಟಿ ಸಾವನ್ನಪ್ಪಿದ ಘಟನೆ ನಡೆದಿದೆ. ರೋಗಿಯೊಬ್ಬರನ್ನು ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗೆಂದು ಕಾರಿನಲ್ಲಿ ಕರೆದು ಕೊಂಡು ಬಂದಿದ್ದರು. ರಾತ್ರಿ ಕಾರಿನಲ್ಲಿಯೇ ಮಲಗಿದ್ದ ಅವರು, ಬೆಳಗಾಗುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ಹೌದು ಕಾರಿನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿರುವ ವ್ಯಕ್ತಿಯನ್ನು ಚಿಕ್ಕಮಗಳೂರು ಮೂಲದ ಆನಂದ (37) ಎಂದು ತಿಳಿದುಬಂದಿದೆ. ರೋಗಿಯೊಬ್ಬರನ್ನು ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗೆ ಕಾರಿನಲ್ಲಿ ಕರೆದುಕೊಂಡು ಬಂದಿದ್ದರು. ಬಳಿಕ ರೋಗಿಯನ್ನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಲಾಗಿತ್ತು. ನಂತರ ಮಣಿಪಾಲದಲ್ಲಿ ಉಳಿದುಕೊಳ್ಳಲು ಯಾವುದೇ ರೂಂ ಸಿಗದ ಕಾರಣ, ಮಣಿಪಾಲ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ …

Read More »

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ರಾಜ್ಯಪಾಲರು- ಸಿದ್ದುಗೆ ಶುರುವಾಯ್ತು ಢವಢವ

ಬೆಂಗಳೂರು: ಮೂಡ ಹಗರಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಈ ಹಿನ್ನೆಲೆ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಎಫ್‌ಐಆರ್ ಆಗುವ ಸಾಧ್ಯತೆಯಿದೆ. ಮೈಸೂರು ಲೋಕಾಯುಕ್ತಕ್ಕೆ ಡಿಜೆ ಅಬ್ರಹಾಂ ಸಿದ್ದರಾಮಯ್ಯ ಮೇಲೆ ದೂರು ನೀಡಿದರು. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಪತ್ರವನ್ನು ಟಿಜೆ ಅಬ್ರಹಾಂ ಮೈಸೂರು ಲೋಕಾಯುಕ್ತಕ್ಕೆ ನೀಡಲಿದ್ದಾರೆ. ಇಂದು ರಾಜಭವನದಿಂದ ಟಿಜೆ ಅಬ್ರಹಾಂ ಪ್ರಾಸಿಕ್ಯೂಷನ್ ಸಾಂಕ್ಷನ್ ಪ್ರತಿ ಪಡೆಯು ಸಾಧ್ಯತೆಯಿದ್ದು, ರಾಜಭವನದಿಂದ ಸ್ಯಾಂಕ್ಷನ್ ಪ್ರತಿ ಲೋಕಾಯುಕ್ತಕ್ಕೂ ಸಹ ಹೋಗಲಿದೆ. ಲೋಕಾಯುಕ್ತಕ್ಕೆ ಪ್ರಾಸಿಕ್ಯೂಷನ್ ಸ್ಯಾಂಕ್ಷನ್ ಪ್ರತಿ ಸಿಕ್ಕ ಬಳಿಕ ಸಿದ್ದರಾಮಯ್ಯ …

Read More »

ಪೆರ್ನೆ: ಖಾಸಗಿ ಬಸ್ ಲಾರಿ ನಡುವೆ ಡಿಕ್ಕಿ : ಗಂಭೀರ ಗಾಯಗೊಂಡಿದ್ದ ಲಾರಿ ಚಾಲಕ ಮೃತ್ಯು!

ಉಪ್ಪಿನಂಗಡಿ : ಖಾಸಗಿ ಬಸ್ ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿ, ಲಾರಿ ಚಾಲಕ ಮೃತಪಟ್ಟ ಹಾಗೂ ಬಸ್ಸಿನಲ್ಲಿದ್ದ ಹಲವರು ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನೆ ಎಂಬಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ತರಕಾರಿ ತುಂಬಿಕೊಂಡು ಮಂಗಳೂರು ಕಡೆಗೆ ತೆರಳುತಿದ್ದ ಲಾರಿ ನಡುವೆ ಪೆರ್ನೆ ಬಳಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಲಾರಿ ಚಾಲಕ ಗಂಭೀರ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಬಸ್ಸಿನಲ್ಲಿದ್ದ ಹಲವು ಪ್ರಯಾಣಿಕರು …

Read More »

ಶಿರೂರು ಗುಡ್ಡ ಕುಸಿತ: ಈಶ್ವರ್​ ಮಲ್ಪೆಗೆ ನದಿಯಲ್ಲಿ ಸಾಮಾಗ್ರಿ ಪತ್ತೆ|ಅರ್ಜುನ್​ ಲಾರಿಯದ್ದಾ?

ಶಿರೂರು: ಗುಡ್ಡ ಕುಸಿತದಲ್ಲಿ ಕೇರಳದ ಲಾರಿ ಡ್ರೈವರ್​ ಅರ್ಜುನ್ ನಾಪತ್ತೆಯಾಗಿದ್ದರು. ಅಂದು ಗಂಗಾವಳಿ ನೀರಿನ ರಭಸ ಜೋರಿದ್ದ ಕಾರಣ ಅರ್ಜುನ್​ ಮತ್ತು ಲಾರಿಯನ್ನು ಹುಡುಕಲು ರಕ್ಷಣಾ ತಂಡಕ್ಕೆ ಸಾಧ್ಯವಾಗಿರಲಿಲ್ಲ. ಕೊನೆಗೆ ಮುಳುಗು ತಜ್ಞ ಈಶ್ವರ್​ ಮಲ್ಪೆ ನೀರಿಗೆ ಇಳಿದು ಅರ್ಜುನ್​ಗಾಗಿ ಹುಡುಕಾಡಿದರು. ಕೊಟ್ಟ ಮಾತಿಗೆ ತಪ್ಪದ ಈಶ್ವರ್​ ಮಲ್ಪೆ ಮತ್ತೆ ಗಂಗಾವಳಿ ನೀರಿಗೆ ಇಳಿದಿದ್ದಾರೆ. ಈ ವೇಳೆ ಲಾರಿ ಜಾಕ್ ಜೊತೆಗೆ ಲೋಹದ ಸಾಮಾಗ್ರಿ ಪತ್ತೆಯಾಗಿದೆ. ಆದರೀಗ ಪತ್ತೆಯಾದ ಸಾಮಾಗ್ರಿ​​ ಕುರಿತಾಗಿ ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ಶುಕ್ರವಾರದಂದು ಈಶ್ವರ್​ ಮಲ್ಪೆ ನದಿ ಆಳಕ್ಕೆ ಹೋಗಿ …

Read More »

ಈ ಪ್ರಶಸ್ತಿ ‘ದೈವಕ್ಕೆ’ ಸಲ್ಲಬೇಕು : ರಾಷ್ಟೀಯ ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದ ಬಳಿಕ ರಿಷಬ್ ಶೆಟ್ಟಿ

ಬೆಂಗಳೂರು : 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನ ಘೋಷಿಸಲಾಗಿದ್ದು, 2022 ರಿಂದ ಚಿತ್ರರಂಗದಲ್ಲಿ ಅತ್ಯುತ್ತಮವಾದುದನ್ನ ಆಚರಿಸಲಾಗುತ್ತಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನವದೆಹಲಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿಜೇತರನ್ನು ಬಹಿರಂಗಪಡಿಸಿತು. ಕನ್ನಡಿಗ, ನಟ ರಿಶಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಇನ್ನು ಪ್ರಶಸ್ತಿ ಬಂದಿರುವ ಕುರಿತು ನಟ ನಿರ್ದೇಶಕ ರಿಷಬ್ ಶೆಟ್ಟಿ ಮೊದಲ ಪ್ರತಿಕ್ರಿಯೆ ನೀಡಿದ್ದು, ಪ್ರಶಸ್ತಿ ಘೋಷಣೆ ಮಾಡುವಾಗಲೇ ಪ್ರಶಸ್ತಿ ಬಂದಿರುವುದು ಗೊತ್ತಾಗಿದೆ. ಸಿನಿಮಾವನ್ನು ಜನ ನೋಡಿ ಮೆಚ್ಚುವುದು ಮುಖ್ಯವಾಗಿದೆ. ನಮ್ಮ ಸಿನಿಮಾ ತಂಡಕ್ಕೂ ಅಭಿನಂದನೆ ಹೇಳುತ್ತೇನೆ. ಕಾಂತಾರ ಚಿತ್ರಕ್ಕೆ ರಾಷ್ಟ್ರ …

Read More »

ಮಂಗಳೂರು: ಕೆತ್ತಿಕಲ್ಲು ಅವೈಜ್ಞಾನಿಕ ಕಾಮಗಾರಿ- ಎನ್‌ಎಚ್‌ಐ, ಡಿಬಿಎಲ್‌, ಜಾಗದ ಮಾಲಕನ ವಿರುದ್ಧ ಕೇಸು ದಾಖಲು

ಮಂಗಳೂರು : ಕೆತ್ತಿಕಲ್ಲು ಭೂಕುಸಿತ ಪ್ರದೇಶದಲ್ಲಿ ಅನಧಿಕೃತವಾಗಿ ಮಣ್ಣು ತೆಗೆದಿರುವ ಭೂಮಾಲಕರು ಮತ್ತು ಎನ್‌ಎಚ್‌ಐನವರು ಅನುಮತಿಸಿದ ಡಿಬಿಎಲ್ ಕಂಪೆನಿಯವರ ವಿರುದ್ಧ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಹಾಗೂ ಎಂಎಂಡಿಆರ್ ಕಾಯಿದೆ-1957ರಡಿ ಪ್ರಕರಣ ದಾಖಲಿಸಲಾಗಿದೆ. ಸುರಕ್ಷತೆಗೆ ಅಪಾಯವಿರುವುದರಿಂದ ವೆಟ್‌ವೆಲ್‌ನ ಮನಪಾದಿಂದಲೂ ಕ್ರಿಮಿನಲ್ ಕ್ರಮಕ್ಕಾಗಿ ಪೊಲೀಸ್ ತನಿಖೆಯನ್ನು ನಡೆಸಲು ಪ್ರಕರಣ ದಾಖಲಿಸಲಾಗಿದೆ. ಮಂಗಳೂರು ಸೆಂಟ್ರಲ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರನ್ನು ತನಿಖಾಧಿಕಾರಿಯನ್ನಾಗಿ ಪೊಲೀಸ್ ಆಯುಕ್ತರು ನೇಮಿಸಿದ್ದಾರೆ. ಜಿಯೋಲಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ) ಸಲಹೆಯಂತೆ, ಘಟನಾ ಸ್ಥಳದಲ್ಲಿ ನೀರಿನ ಸಂಗ್ರಹ …

Read More »

ಮಡಿಕೇರಿ: ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ಅಡ್ಡೆ ಮೇಲೆ ದಾಳಿ – ಮೂವರ ಬಂಧನ

ಕೊಡಗು: ಕೊಡಗಿನಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದ್ದ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಅಲ್ಲಿ ಮೂವರನ್ನು ಬಂಧಿಸಿದ್ದಾರೆ. ದಾಳಿಯ ವೇಳೆ ಆರೋಪಿಗಳಿಂದ ಹಲವಾರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 2 ನಾಡ ಬಂದೂಕು, 1 ನಾಡ ಪಿಸ್ತೂಲು ಸೇರಿದಂತೆ ಹಲವಾರು ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿ ನಡೆಸಿದ ಪೊಲೀಸರು ಶಿವರಾಮ್, ರವಿ, ಕೋಟಿ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ, ಅವರ ಗುಂಪಿನ ನಾಯಕನಾಗಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಕೇರಳದ ಇಡುಕ್ಕಿ ಮೂಲದ ಸುರೇಶ್ (42) ನೇತೃತ್ದಲ್ಲೇ ಅಕ್ರಮ ಶಸ್ತ್ರಾಸ್ತ್ರಗಳು ಸಿದ್ಧವಾಗುತ್ತಿದ್ದವು …

Read More »

You cannot copy content of this page.