ತಾಜಾ ಸುದ್ದಿ

ಸುರತ್ಕಲ್: ಟೋಲ್ ಗೇಟ್ ಗೆ ಗುದ್ದಿ ಟ್ರಕ್‌ ಅಪಘಾತ – ಓರ್ವ ಗಾಯ

ಸುರತ್ಕಲ್: ಎನ್‌ಐಟಿಕೆ ಟೋಲ್ ಗೇಟ್ ನ ಅವಶೇಷಗಳಿಗೆ ಲಾರಿ ಡಿಕ್ಕಿ ಓರ್ವನಿಗೆ ಗಾಯಗೊಂಡು ಆಸ್ಪತ್ರೆ ದಾಖಲಾದ ಘಟನೆ ತಡ ರಾತ್ರಿ 2.30ಕ್ಕೆ ನಡೆದಿದೆ. ಉಡುಪಿ ಕಡೆಯಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ಲಾರಿ ಡಿಕ್ಕಿ ಅಪಘಾತದ ತೀವ್ರತೆಗೆ ಟೋಲ್ ಗೇಟ್ ನ ಕಂಬ ಬುಡ ಸಮೇತ ಎದ್ದು ಬಂದಿದೆ. ಟೋಲ್ ಬೂತ್ ನ ಒಂದು ಪಾಶ್ವ ಸಂಪೂರ್ಣ ಹಾನಿ ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಸ್ಥಳ ಕತ್ತಲಲ್ಲಿ ದಿಢೀರ್ ಎದುರಾಗುವ ಅಪಘಾತದ ಸ್ಪಾಟ್ ಆಗಿದೆ. ಅಪಘಾತದಿಂದ ಕಂಬಗಳು ಜಾರಿ ಕುಸಿಯುವ ಭೀತಿ …

Read More »

BREAKING: ಸೋಮೇಶ್ವರದಲ್ಲಿ ಇಬ್ಬರು ಮಕ್ಕಳು ಸಮುದ್ರಪಾಲು

ಮಂಗಳೂರಿನ ಸೋಮೇಶ್ವರದ ಸಮುದ್ರ ತೀರದಲ್ಲಿ ಆಟವಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಅಲೆಗಳ ರಭಸಕ್ಕೆ ಸಿಲುಕಿ ಕಡಲುಪಾಲಾಗಿದ್ದಾರೆ. ಮೃತ ಮಕ್ಕಳನ್ನು ಸೋಮೇಶ್ವರ ಪರಿಜ್ಞಾನ ದ್ವಿತೀಯ ಪಿಯು ಕಾಲೇಜಿನ ಯಶ್ವಿತ್(18) ಹಾಗೂ ಯುವರಾಜ್(18) ಎಂದು ಗುರುತಿಸಲಾಗಿದೆ. ಯೆಶ್ಚಿತ್, ಮಂಜೇಶ್ವರದ ಕುಂಜತ್ತೂರು ಅಡ್ಕ ನಿವಾಸಿ ಶೇಖರ ಎಂಬವರ ಪುತ್ರ ಹಾಗೂ ಯುವರಾಜ್, ಕುಂಜತ್ತೂರು ಮಜಲ್ ನಿವಾಸಿ ಜಯೇಂದ್ರ ಎಂಬವರ ಪುತ್ರ. ಸಮುದ್ರದಲ್ಲಿ ಕಾಣೆಯಾದ ಇವರಿಬ್ಬರಿಗಾಗಿ ಸ್ಥಳೀಯ ಮುಳುಗುತಜ್ಞರು ಇದೀಗ ಹುಡಕಾಟ ನಡೆಸುತ್ತಿದ್ದಾರೆ.

Read More »

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಆ್ಯಂಬುಲೆನ್ಸ್ – ಗರ್ಭಿಣಿ ಸಾವು

ವಿಜಯಪುರ : ಆ್ಯಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮವಾಗಿ ಪಲ್ಟಿಯಾಗಿ ಗರ್ಭಿಣಿ ಮೃತಪಟ್ಟ ಘಟನೆ ವಿಜಯಪೂರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ ರಸ್ತೆಯ ಮಧ್ಯೆ ನಡೆದಿದೆ. ಗರ್ಭಿಣಿಯನ್ನು ಆಸ್ಪತ್ರೆಗೆ ತರುವಾಗ ವಿಜಯಪುರ ನಗರದ ಮಾರ್ಗದಲ್ಲಿ ಘಟನೆ ನಡೆದಿದೆ. ಭಾಗ್ಯಶ್ರೀ ಪರಣ್ಣನವರ ಮೃತಪಟ್ಟಿರುವ ಗರ್ಭಿಣಿ. ಜಿಲ್ಲೆಯ ತಾಳಿಕೋಟಿಯಿಂದ ವಿಜಯಪುರ ಜಿಲ್ಲಾಸ್ಪತ್ರೆಗೆ ಆ್ಯಂಬುಲೆನ್ಸ್‌ನಲ್ಲಿ ತೆರಳುವಾಗ ಅಪಘಾತ ಸಂಭವಿಸಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Read More »

ಪುತ್ತೂರು: ನಾಪತ್ತೆಯಾಗಿದ್ದ ಯುವಕನ ಕೊಲೆ: ಮೂವರ ಬಂಧನ

ಪುತ್ತೂರು: ಇಲ್ಲಿನ ಒಳಮೊಗ್ರು ಕುಂಬ್ರದಲ್ಲಿನ ಅರ್ತ್ ಮೂವರ್ ಸಂಸ್ಥೆಯೊಂದರಲ್ಲಿ ಟಿಪ್ಪರ್ ಚಾಲಕನಾಗಿ ದುಡಿಯುತ್ತಿದ್ದ, ಬಾಗಲಕೋಟೆಯ ಬಾದಾಮಿಯ ಯುವಕನೊಬ್ಬ ನಾಪತ್ತೆ ಪ್ರಕರಣ ಆತನ ಕೊಲೆಯಲ್ಲಿ ಅಂತ್ಯ ಕಂಡಿದ್ದು, ಘಟನೆಗೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನಿವಾಸಿ ಹನುಮಂತಪ್ಪ (22) ಕೊಲೆಯಾದ ಯುವಕ. ಬಂಧಿತ ಆರೋಪಿಗಳು ಹನುಮಂತಪ್ಪನನ್ನು ದಾರಿ ಮಧ್ಯೆ ಕೊಲೆಗೈದು ಮೃತದೇಹವನ್ನು ಆಗುಂಬೆ ಘಾಟಿಯಲ್ಲಿ ಎಸೆದಿರುವ ಬಗ್ಗೆ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿಗಳಲ್ಲಿ ಒಬ್ಬನಾದ ಶಿವಪ್ಪ ಎಂಬಾತನ ಪತ್ನಿಯೊಂದಿಗೆ ಕೊಲೆಯಾದ ಹನುಮಂತಪ್ಪ ಅಕ್ರಮ ಸಂಬಂಧ ಹೊಂದಿದ್ದ ಎಂಬ ಆರೋಪ …

Read More »

ಬಂಟ್ವಾಳ: ಗ್ಯಾಸ್ ಸೋರಿಕೆಯಿಂದ ಮನೆಗೆ ಬೆಂಕಿ

ಬಂಟ್ವಾಳ : ಬಂಟ್ವಾಳ ತಾಲೂಕು ಪುದು ಗ್ರಾಮದ ಕಬೆಲ ನಿವಾಸಿ ಉಮೇಶ್ ಪೂಜಾರಿ ಯವರ ಬಾಡಿಗೆ ಮನೆಯಲ್ಲಿ ಬಾಡಿಗೆದಾರ ಹೊನ್ನಪ್ಪ ಗೌಡ ರವರ ಅಡುಗೆ ಅನಿಲ ಸೋರಿಕೆ ಯಾಗಿ ಗುರುವಾರ ರಾತ್ರಿ ಅಗ್ನಿ ಅವಘಡವಾಗಿದೆ. ಗ್ಯಾಸ್ ಸೋರಿಕೆಯಾಗಿರುವುದು ತಿಳಿಯದೆ ರಾತ್ರಿ ಅಡುಗೆ ಮಾಡಲು ಗ್ಯಾಸ್ ಉರಿಸಲು ಹೋದಾಗ ಬೆಂಕಿ ಅವಘಡ ವಾಗಿದೆ ,ಬಂಟ್ವಾಳ ಅಗ್ನಿ ಶಾಮಕ ದಳದವರು ಬೆಂಕಿ ಆರಿಸಿದರು ಗ್ರಾಮಸ್ಥರು ಸಹಕರಿಸಿದರು.ಗ್ರಾಮ ಕರಣಿಕರಾದ ಅಶ್ವಿನಿ ಯವರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದರು.

Read More »

ಪಾಸ್ ಪೋರ್ಟ್ ಪರಿಶೀಲನೆಗೆ ಠಾಣೆಗೆ ಬಂದಿದ್ದ ಮಹಿಳೆಯ ತಲೆಗೆ ಗುಂಡು ಹಾರಿಸಿದ ಪೊಲೀಸ್

ಪಾಸ್ ಪೋರ್ಟ್ ಪರಿಶೀಲನೆಗೆ ಪೊಲೀಸ್ ಠಾಣೆಗೆ ಬಂದಿದ್ದ ಮಹಿಳೆಯೊಬ್ಬರ ತಲೆಗೆ ಪೊಲೀಸ್ ಅಧಿಕಾರಿಯೊಬ್ಬರು ಆಕಸ್ಮಿಕವಾಗಿ ಗುಂಡು ಹಾರಿಸಿದ ಘಟನೆ ನಡೆದಿದ್ದು, ಮಹಿಳೆ ಗಂಭೀರವಾಗಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ.ಮಹಿಳೆಯನ್ನು ಇಶ್ರತ್ ಎಂದು ಗುರುತಿಸಲಾಗಿದ್ದು, ಇವರು ತನ್ನ ಸಂಬಂಧಿಯೊಂದಿಗೆ ಪೊಲೀಸ್ ಠಾಣೆಗೆ ಪಾಸ್ ಪೋರ್ಟ್ ವೇರಿಫಿಕೇಶನ್ ಗೆ ಬಂದಿದ್ದಾರೆ. ಈ ವೇಳೆ ಒಬ್ಬ ಪೊಲೀಸ್ ಅಧಿಕಾರಿ ಬಂದು ಎಸ್‌ಐ ಮನೋಜ್ ಶರ್ಮಾಗೆ ಪಿಸ್ತೂಲ್ ನೀಡಿದರು. ಎಸ್‌ಐ ಪಿಸ್ತೂಲ್ ಕ್ಲೀನ್ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಮಹಿಳೆಯ ಮೇಲೆ ತಗುಲಿ ಮಹಿಳೆ ನೆಲಕ್ಕೆ ಬಿದ್ದಿದ್ದಾಳೆ. ಗಾಯಗೊಂಡ ಮಹಿಳೆಯನ್ನು ತಕ್ಷಣವೇ …

Read More »

ಐಸಿಸ್ ಪಿತೂರಿ ಪ್ರಕರಣ, ಬೆಳ್ಳಂ ಬೆಳಗ್ಗೆ ಕರ್ನಾಟಕ ಸೇರಿದಂತೆ ದೇಶದ 44 ಕಡೆ NIA ದಾಳಿ

ದೇಶಾದ್ಯಂತ ಭಯೋತ್ಪಾದಕ ದಾಳಿ ನಡೆಸಲು ಜಾಗತಿಕ ಭಯೋತ್ಪಾದಕ ಗುಂಪು ಐಸಿಸ್ ಪಿತೂರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕರ್ನಾಟಕ ಮತ್ತು ಮಹಾರಾಷ್ಟ್ರದ 40 ಸ್ಥಳಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿದೆ. ಇಂದು ಬೆಳಿಗ್ಗೆಯಿಂದ ಎನ್‌ಐಎ ದಾಳಿ ನಡೆಸುತ್ತಿರುವ ಒಟ್ಟು 44 ಸ್ಥಳಗಳಲ್ಲಿ, ಏಜೆನ್ಸಿ ಅಧಿಕಾರಿಗಳು ಕರ್ನಾಟಕದ 1, ಪುಣೆಯ 2, ಥಾಣೆ ಗ್ರಾಮೀಣದ 31, ಥಾಣೆ ನಗರದ 9 ಮತ್ತು ಭಯಂದರ್ನ 1 ಸ್ಥಳವನ್ನು ಶೋಧಿಸಿದ್ದಾರೆ ಎನ್ನಲಾಗಿದೆ. ಕರ್ನಾಟಕದಲ್ಲಿ ಒಂದು, ಪುಣೆಯಲ್ಲಿ 2, ಥಾಣೆ …

Read More »

ಹಿರಿಯ ನಟಿ ಲೀಲಾವತಿ ಇನ್ನಿಲ್ಲ

ಬೆಂಗಳೂರು: ಕೆಲ ದಿನಗಳಿಂದ ಅನಾರೋಗ್ಯ ಹಾಗೂ ತೀವ್ರ ಉಸಿರಾಟದ ತೊಂದರೆಯಿಂದಲುತ್ತಿದ್ದ ದಕ್ಷಿಣ ಭಾರತದ ಹಿರಿಯ ನಟಿ ಲೀಲಾವತಿ ವಿಧಿವಶವಾಗಿದ್ದಾರೆ. 50 ವರ್ಷಗಳ ಕಾಲ ಚಿತ್ರರಂಗಕ್ಕೆ ಲೀಲಾವತಿ ಸೇವೆ ಸಲ್ಲಿಸಿದ್ದ ಲೀಲಾವತಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದರು. ಕನ್ನಡದಲ್ಲಿ ಅಷ್ಟೇ ಅಲ್ಲ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆ ಸೇರಿದಂತೆ ಒಟ್ಟು 600 ಚಿತ್ರಗಳಲ್ಲಿ ನಟಿಸಿದ್ದರು.  

Read More »

ಪುತ್ತೂರು: ಅಡಿಕೆ ಕೊಯ್ಯುವ ವೇಳೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

ಪುತ್ತೂರು: ಅಡಿಕೆ ಕೊಯ್ಯುವ ವೇಳೆ ಮರದಿಂದ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಇಲ್ಲಿನ ಬೆಟ್ಟಂಪಾಡಿಯಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ನಿಡ್ನಳ್ಳಿ ಗ್ರಾಮದ ತಂಬುತ್ತಡ್ಕ ನಿವಾಸಿ ಸಯ್ಯದ್ (45) ಎಂದು ಗುರುತಿಸಲಾಗಿದೆ. ಬೆಟ್ಟಂಪಾಡಿ ಸಮೀಪದ ಕೃಷಿಕರೋರ್ವರ ಮನೆಗೆ ಸಯ್ಯದ್ ಅಡಿಕೆ ಕೊಯ್ಯಲು ತೆರಳಿದ್ದರು. ಈ ವೇಳೆ ಅಡಿಕೆ ಕೊಯ್ಯುವಾಗ ಕಾಲು ಜಾರಿ ಮರದಿಂದ ಕೆಳಗೆ ಬಿದ್ದ ಇವರನ್ನು, ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ದು ಬಳಿಕ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಲ್ಲಿ ತಲುಪುವ ವೇಳೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

Read More »

ರಾಜ್ಯದ ಜನರೇ ಗಮನಿಸಿ: ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್‌ ಯೋಜನೆಯ ಹೈಲೆಟ್ಸ್ ಇಲ್ಲಿದೆ

ಬೆಂಗಳೂರು : ರಾಜ್ಯ ಸರ್ಕಾರವು ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬಗಳಿಗೆ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್‌ಗಳನ್ನು ಹೊಸದಾಗಿ ಬಿಡುಗಡೆ ಮಾಡಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್‌ಗಳನ್ನು, ಆಯುಷ್ಮಾನ್ ಭಾರತ್ – ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ” ಎಂದು ಮರುನಾಮಕರಣ ಮಾಡ ಮಾಡಲಾಗಿದ್ದು, ಇದನ್ನು ಸಿಎಂ ಸಿದ್ದರಾಮಯ್ಯ ಅವರು ಮೊನ್ನೆ ಬಿಡುಗಡೆ ಮಾಡಿದರು.   ಯೋಜನೆಯ ಹೈಲೆಟ್ಸ್ * ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ನ್ಯಾಷನಲ್ ಪೊರ್ಟಲ್ ಗೆ ನೂತನ ಹೆಲ್ತ್ ಕಾರ್ಡ್ ಗಳನ್ನ ಸಂಯೋಜನೆಗೊಳಿಸಲಾಗಿದ್ದು, …

Read More »

You cannot copy content of this page.