ತಾಜಾ ಸುದ್ದಿ

ಮತ್ತೊಂದು ʻಶ್ರದ್ಧಾʼ ಮಾದರಿ ಹತ್ಯೆ ಕೇಸ್ : ಮಹಿಳೆಯನ್ನು ತುಂಡು ತುಂಡುಗಳಾಗಿ ಕತ್ತರಿಸಿದ ಗೆಳೆಯ

ಸೆಪ್ಟೆಂಬರ್ 30 ರಂದು ಉತ್ತರ ಪ್ರದೇಶದ ಡಿಯೋರಿಯಾದಲ್ಲಿ 30 ವರ್ಷದ ಮಹಿಳೆಯ ಶವ ತುಂಡು ತುಂಡುಗಳಾಗಿ ಪತ್ತೆಯಾಗಿತ್ತು. ಸದ್ಯ ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಸ್‌ಒಜಿ ತಂಡ ಮತ್ತು ಭಲುವಾನಿ ಪೊಲೀಸರು ಆರೋಪಿ ಮುನ್ನಾ ನಿಷಾದ್ನನ್ನು ಬಂಧಿಸಿದ್ದಾರೆ. ಆರೋಪಿ ಮಹಿಳೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದನು. ಗೋರಖ್ಪುರದಲ್ಲಿ ಬಾಡಿಗೆ ಮನೆಯಲ್ಲಿ ಮಹಿಳೆಯೊಂದಿಗೆ ವಾಸಿಸುತ್ತಿದ್ದೆ ಎಂದು ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ. ಈ ಸಮಯದಲ್ಲಿ ಅವಳು ಗರ್ಭಿಣಿಯಾಗಿದ್ದಳು ಎಂದು ಆರೋಪಿ ಹೇಳಿದ್ದಾನೆ. ಆರೋಪಿಯು ಗರ್ಭಪಾತಕ್ಕೆ ಕೇಳಿದಾಗ, ಅವಳು ನಿರಾಕರಿಸಿದಳು. ಇದರಿಂದ ಕೋಪಗೊಂಡ ಆರೋಪಿ ಆಕೆಯನ್ನು ಕತ್ತು ಹಿಸುಕಿ …

Read More »

ಕಾರ್ಕಳ: ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ – ನಾಲ್ವರ ಬಂಧನ

ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಭುವನೇಂದ್ರ ಕಾಲೇಜ್ ಬಳಿ ಇರುವ ದಾನೀಯ ಪಿರೇರಾ ಪಟ್ಲ ಹೌಸ್ ಎಂಬ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಓರ್ವ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಗೋವರ್ಧನ, ಉಪೇಂದ್ರ ನಾಯ್ಕ, ದೀಪಾ ಉಡುಪಿ, ಅಶೋಕ ಕಾರ್ಕಳ ಪ್ರವೀಣ ಕುಮಾರ್‌ ಆರೋಪಿಗಳಾಗಿದ್ದು, ಈ ಪೈಕಿ ಉಪೇಂದ್ರ ನಾಯ್ಕ ಮತ್ತು ಪ್ರವೀಣ ಎಂಬವರನ್ನು ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಕಾಪು: ಸಾಕುಪುತ್ರಿ ಮನೆ ಬಿಟ್ಟು ಹೋದ ವಿಷಯಕ್ಕೆ ನೊಂದು ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆ- ಸಾಕು ಮಗಳಿಗಾಗಿ ಮುಂದುವರಿದ ಶೋಧ

ಕಾಪು: ಸಮಾಜರತ್ನ ಕೆ. ಲೀಲಾಧರ ಶೆಟ್ಟಿ (68) ಮತ್ತು ಅವರ ಪತ್ನಿ ವಸುಂಧರಾ ಎಲ್‌. ಶೆಟ್ಟಿ (59) ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅವರ ಸಾಕುಪುತ್ರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಸಾಕುಪುತ್ರಿ ಮನೆ ಬಿಟ್ಟು ಹೋದ ವಿಷಯಕ್ಕೆ ನೊಂದು ಈ ದಂಪತಿ ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಲೀಲಾಧರ ಶೆಟ್ಟಿ ದಂಪತಿಯ ಸಾಕು ಮಗಳು ಈ ಹಿಂದೆ ಮನೆ ಕೆಲಸಕ್ಕೆಂದು ಬಂದಿದ್ದಾತನೊಂದಿಗೆ ತೆರಳಿರುವ ಶಂಕೆ ವ್ಯಕ್ತ ಪಡಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು. ಅದರಂತೆ ಆಕೆಯ ಪತ್ತೆಗಾಗಿ ಕಾಪು ಪೊಲೀಸರು ತನಿಖೆ ನಡೆಸುತ್ತಿದ್ದು, ಎರಡು …

Read More »

ಬಂಟ್ವಾಳ : ಹಾಡಹಗಲೆ ಮಹಿಳೆ ಸರ ಕಿತ್ತೊಯ್ದ ಕಳ್ಳರು..!

ಬಂಟ್ವಾಳ: ಹಗಲು ಹೊತ್ತಿನಲ್ಲಿ ಅಂಗಡಿಯೊಂದರಲ್ಲಿ ಮಹಿಳೆಯೋರ್ವಳ ಕುತ್ತಿಗೆಗೆ ‌ಕೈ ಹಾಕಿ ಅಪರಿಚಿತ ವ್ಯಕ್ತಿಗಳಿಬ್ಬರು ಬಂಗಾರದ ಚೈನ್ ಎಳೆದು ಪರಾರಿಯಾದ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಅಜ್ಜಿಬೆಟ್ಟು ಎಂಬಲ್ಲಿ ಮಧ್ಯಾಹ್ನ ನಡೆದಿದೆ. ಬಿಸಿರೋಡಿನ ಬಿ.ಮೂಡ ಗ್ರಾಮದ ಅಜ್ಜಿಬೆಟ್ಟು ಶಾಲಾ ಮೈದಾನದ ಬಳಿ ಇರುವ ಮಹಾಲಕ್ಷ್ಮಿ ಸ್ಟೋರ್ ಮಾಲಕಿ ಸರೋಜಿನಿ ಅವರ ಕುತ್ತಿಗೆಯಿಂದ ಇಬ್ಬರು ಕಳ್ಳರು ಬಂಗಾರದ ಚೈನ್ ಎಗರಿಸಿ ಪರಾರಿಯಾಗಿರುವುದು.   ಸುಮಾರು 75 ಸಾವಿರ ಮೌಲ್ಯದ 1.50 ಪವನ್ ನ ಚಿನ್ನದ ಸರ ಕಳವಾಗಿದೆ. ಮಧ್ಯಾಹ್ನ ಸುಮಾರು ‌ 2.45 ಗಂಟೆಗೆ …

Read More »

ಮಂಗಳೂರು: 3 ವರ್ಷದ ಮಗು ಸಹಿತ ತಾಯಿ ನಾಪತ್ತೆ..!

ಮಂಗಳೂರು: ಪತ್ನಿ ಹಾಗೂ ಮೂರು ವರ್ಷದ ಪುತ್ರ ನಾಪತ್ತೆಯಾಗಿರುವ ಬಗ್ಗೆ ವ್ಯಕ್ತಿಯೋರ್ವರು ಬಜಪೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಜ್ಪೆಯ ಕೆ.ಪಿ. ನಗರದ ಶಾಹಿಸ್ತಾ ಮಂಜೀಲ್‌ನ ಅಹ್ಮದ್‌ ಮಕ್ಸೂದ್‌ ಅವರ ಪತ್ನಿ ಶರೀನಾ ವೈ. (24) ಮತ್ತು ಮಗ ಮಹ್ಮದ್‌ ತೋಹಾರ್‌ (3) ಡಿ. 11ರಂದು ರಾತ್ರಿ ಕಾಣೆಯಾದ ಬಗ್ಗೆದೂರು ದಾಖಲಾಗಿದೆ. ಅಹ್ಮದ್‌ ಮಕ್ಸೂದ್‌ ಅವರು ತಾಯಿ ಮತ್ತು ಪತ್ನಿಯೊಂದಿಗೆ ವಾಸವಾಗಿದ್ದು ಸುಮಾರು 6 ವರ್ಷಗಳ ಹಿಂದೆ ಸುಳ್ಯದ ಶರಿನಾ (24) ಅವರನ್ನು ವಿವಾಹವಾಗಿದ್ದು ಈ ದಂಪತಿಗಳಿಗೆ 3 ವರ್ಷದ ಗಂಡು ಮಗುವಿದೆ. ಶರೀನಾ …

Read More »

ಮಂಗಳೂರು: ನಕಲಿ ಆಧಾರ್ ಕಾರ್ಡ್ ಬಳಸಿ ಆರೋಪಿಗಳಿಗೆ ಜಾಮೀನು

ಮಂಗಳೂರು: ನಕಲಿ ಆಧಾರ್ ಕಾರ್ಡ್ ಬಳಸಿ ವ್ಯಕ್ತಿಯೋರ್ವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಮತ್ತು ಬೆಂಗಳೂರಿನ 14 ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. 2022ರ ಜು. 26ರಂದು ಈತ ಬೇರೆ ಸಂಖ್ಯೆಯ ಆಧಾರ್ ಕಾರ್ಡ್ ಮೂಲಕ ಜಾಮೀನು ಶ್ಯೂರಿಟಿ ನೀಡಿದ್ದ. ಈತನ ದಾಖಲೆ ಪರಿಶೀಲನೆ ನಡೆಸಿದಾಗ ಈತ ವಿವಿಧೆಡೆ ಇದೇ ರೀತಿ 14 ಪ್ರಕರಣಗಳಲ್ಲಿ ನಕಲಿ ಆಧಾರ್ ಕಾರ್ಡ್ ಬಳಸಿ ಜಾಮೀನು ಶ್ಯೂರಿಟಿ ನೀಡಿರುವುದು ಗೊತ್ತಾಗಿದೆ.ಇಷ್ಟು ಮಾತ್ರವಲ್ಲ ಇತ್ತ ಮಂಗಳೂರಿನ ಕಸಬಾ ಬೆಂಗ್ರೆಯ ಮೊಯಿದ್ದೀನ್ ನಾಸೀರ್ (46) ನ. …

Read More »

ಪುತ್ತೂರು: ನೇಣಿಗೆ ಶರಣಾದ ಯುವ ವಿಜ್ಞಾನಿ ಭರತ್ ಕಲ್ಲರ್ಪೆ

ಪುತ್ತೂರಿನ ನಿವಾಸಿ ಡಿಆರ್ ಡಿಓ ಹೈದರಾಬಾದ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯುವ ವಿಜ್ಞಾನಿ ಮನೆಯಲ್ಲಿ ನೇಣಿ ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ಪುತ್ತೂರಿನ ಕಲ್ಲರ್ಪೆ ನಿವಾಸಿ ಭರತ್ ಕಲ್ಲರ್ಪೆ(24) ಎಂದು ಗುರುತಿಸಲಾಗಿದೆ. ಈತ ಎರಡು ತಿಂಗಳ ಹಿಂದೆಯಷ್ಟೇ ಹೈದರಾಬಾದ್ ನಲ್ಲಿರುವ DRDO ಸಂಸ್ಥೆಗೆ ತಾತ್ಕಾಲಿಕ ನೆಲೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಈ ನಡುವೆ ಕಳೆದ ಒಂದು ವಾರದ ಹಿಂದೆ ಸಂಸ್ಥೆಗೆ ರಾಜೀನಾಮೆ ನೀಡಿ ಊರಿಗೆ ಬಂದಿದ್ದರು, ಆದರೆ ಸಂಸ್ಥೆಗೆ ರಾಜೀನಾಮೆ ಪತ್ರ ನೀಡಿದ್ದರೂ ರಾಜೀನಾಮೆ ಸ್ವೀಕಾರ ಮಾಡಿರಲಿಲ್ಲ ಎಂದು ತಿಳಿದು ಬಂದಿದೆ. ಈ ನಡುವೆ ನಿನ್ನೆ …

Read More »

ಉಡುಪಿ: ಉದ್ಯಾವರ ಸೇತುವೆಯಿಂದ ಹೊಳೆಗೆ ಹಾರಿದ್ದ ವ್ಯಕ್ತಿಯ ಮೃತ ದೇಹ ಪತ್ತೆ

ಉಡುಪಿ: ಉದ್ಯಾವರ ಸೇತುವೆಯಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯ ಮೃತ ದೇಹವು ನಿನ್ನೆ ಸಂಜೆ ಉದ್ಯಾವರ ಅಂಕುದ್ರು ಎಂಬಲ್ಲಿ ಪತ್ತೆಯಾಗಿದೆ. ಮೃತರನ್ನು ಉಡುಪಿ ನಗರದ ಕೋರ್ಟ್ ರಸ್ತೆಯ ನಿವಾಸಿ, ಉಡುಪಿ ಪೈ ಇಂಟರ್ನ್ಯಾಷನಲ್ ಎಲೆಕ್ಟ್ರಾನಿಕ್ ಮಳಿಗೆಯ ಸೇಲ್ಸ್ ಮ್ಯಾನ್ ರವೀಂದ್ರ ಭಟ್( 55 ) ಎಂದು ಗುರುತಿಸಲಾಗಿದೆ ಅವರು ನಿನ್ನೆ ಮನೆಯಿಂದ ಹೋದವರು ನಾಪತ್ತೆಯಾಗಿದ್ದರು ತನ್ನ ಸ್ಕೂಟರ್ ಅನ್ನು ಸೇತುವೆ ಮೇಲೆ ನಿಲ್ಲಿಸಿ ಮೇಲಿನಿಂದ ಹೊಳೆಗೆ ಹಾರಿ ನಾಪತ್ತೆಯಾಗಿದ್ದರು. ಸ್ಥಳಕ್ಕೆ ಆಗಮಿಸಿದ ಕಾಪು ಪೋಲೀಸರು ದೋಣಿ ಮೂಲಕ ಶೋಧ ಕಾರ್ಯಾ ನಡೆಸಿದ್ದು ಮೃತ …

Read More »

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ಪತ್ತೆ – 60 ಲಕ್ಷ ಮೌಲ್ಯದ ಚಿನ್ನ ವಶಕ್ಕೆ

ಮಂಗಳೂರು : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಮೂರು ಪ್ರಯಾಣಿಕರನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಅವರಿಂದ 969 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಇಂಡಿಯನ್ ಎಕ್ಸ್ ಪ್ರೆಸ್ ವಿಮಾನದಲ್ಲಿ ಬಂದ ಪ್ರಯಾಣಿಕರ ತಪಾಸಣೆ ವೇಳೆ ಈ ಅಕ್ರಮ ಸಾಗಾಟದ ಪ್ರಕರಣ ಬೆಳಕಿಗೆ ಬಂದಿದೆ. ಮೂವರು ಪ್ರಯಾಣಿಕರು ಶೂ ಮತ್ತು ಚಾಕಲೇಟ್ ಬಾಕ್ಸ್ ಹಾಗೂ ಬೆಡ್ ಶೀಟ್ ಗಳಲ್ಲಿ ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದಾರೆ. ವಶಪಡಿಸಿಕೊಂಡ ಚಿನ್ನದ ಮೌಲ್ಯ 60, 07,800 ಎಂದು ಅಂದಾಜಿಸಲಾಗಿದೆ.

Read More »

ಉಳ್ಳಾಲ: ಯುವಕನಿಗೆ ಚೂರಿಯಿಂದ ಇರಿದು ಹತ್ಯೆ..!

ಉಳ್ಳಾಲ: ಯುವಕನೋರ್ವನನ್ನು ಚೂರಿಯಿಂದ ಇರಿದು ಹತ್ಯೆ ನಡೆಸಿರುವ ಘಟನೆ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಸಾರಸ್ವತಕಾಲನಿ ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ  ಸಂಭವಿಸಿದೆ. ಸಾರಸ್ವತಕಾಲನಿ ನಿವಾಸಿ ವರುಣ್ (28) ಹತ್ಯೆಯಾದವರು. ಸ್ಥಳೀಯ ಸೂರಜ್ ಎಂಬಾತ ಕೃತ್ಯ ಎಸಗಿರುವುದಾಗಿ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಕೊಲ್ಯ ಜಾಯ್ಲಾಂಡ್ ಶಾಲೆ ಸಮೀಪ  ತಡರಾತ್ರಿ ವೇಳೆ ಸೂರಜ್ ಹಾಗೂ ಇನ್ನಿಬ್ಬರು ಮದ್ಯಪಾನ ನಡೆಸುತ್ತಿರುವುದನ್ನು ವರುಣ್ ಪ್ರಶ್ನಿಸಿದ್ದರು. ಇದರಿಂದ  ಐದು ಮಂದಿಯ ನಡುವೆ ವಾಗ್ವಾದ ನಡೆದು ಸೂರಜ್ , ವರುಣ್ ಹೃದಯಭಾಗಕ್ಕೆ ಚೂರಿಯಿಂದ ತಿವಿದು ಹತ್ಯೆ ನಡೆಸಿದ್ದಾನೆ. ಹಳೇ ವೈಷಮ್ಯದಿಂದ ಕೃತ್ಯ ನಡೆದಿರುವ …

Read More »

You cannot copy content of this page.