ತಾಜಾ ಸುದ್ದಿ

ಉಡುಪಿ: ಆಕಸ್ಮಿಕವಾಗಿ ಬೆಂಕಿ ತಗುಲಿ ಫ್ಯಾನ್ಸಿ ಸ್ಟೋರ್ ಭಸ್ಮ!

ಕುಂದಾಪುರ: ಬೈಂದೂರು ತಾಲೂಕಿನ ನಾವುಂದ ಜಂಕ್ಷನ್ ಪ್ಲಾಜಾ ಗ್ರೋ ಕಾಂಪ್ಲೆಕ್ಸ್ ನಲ್ಲಿರುವ ಫ್ಯಾನ್ಸಿ ಸ್ಟೋರ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಅಂಗಡಿಯಲ್ಲಿನ ವಸ್ತುಗಳು ಸುಟ್ಟು ಕರಕಲಾದ ಘಟನೆ ಶುಕ್ರವಾರ ನಡೆದಿದೆ. ಪ್ರತಿಭಾ ವಿಜೇಂದ್ರ ಅರೆಹೊಳೆ ಎಂಬವರು ಟೈಲರಿಂಗ್ ಜೊತೆಯಲ್ಲಿ ಬಟ್ಟೆ ಹಾಗೂ ಸ್ಟೇಶನರಿಯೊಂದಿಗೆ ಅಂಗಡಿ ನಡೆಸಿಕೊಂಡಿದ್ದರು. ಅಂಗಡಿಯಲ್ಲಿ ಹೊಲಿಗೆ ಯಂತ್ರ, ಫ್ರಿಡ್ಜ್, ಬಟ್ಟೆ, ಪುಸ್ತಕಗಳು, ಸ್ಟೇಶನರಿ ವಸ್ತುಗಳು, ಕಪಾಟು, ಫ್ಯಾನ್ಸಿ ಐಟಂಗಳು, ಸುಮಾರು 5000 ಹಣ ಇತ್ತು. ಅಂಗಡಿ ಮಾಲಕಿ ಪ್ರತಿಭಾ ವಿಜೇಂದ್ರ ಅವರು ಮಧ್ಯಾಹ್ನ 12.00ರ ವರೆಗೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, …

Read More »

ಕಾಪು: ಸೈಬರ್‌ ಪೊಲೀಸರ ಹೆಸರಿನಲ್ಲಿ ಕರೆ ಮಾಡಿ ಸಾಫ್ಟ್ ವೇರ್‌ ಎಂಜಿನಿಯರ್‌ ಯುವತಿಗೆ 4.80 ಲಕ್ಷ ರೂ. ವಂಚನೆ

ಕಾಪು: ಸಾಫ್ಟ್ ವೇರ್‌ ಎಂಜಿನಿಯರ್‌ ಯುವತಿಗೆ ಮುಂಬಯಿ ಸೈಬರ್‌ ಪೊಲೀಸ್‌ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಆಕೆಯ ಖಾತೆಯಿಂದ 4.80 ಲಕ್ಷ ರೂ. ನಗದು ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ ಘಟನೆ ಸಂಭವಿಸಿದೆ. ಕಾಪು ಕೊಪ್ಪಲಂಗಡಿ ನಿವಾಸಿಯಾಗಿರುವ ಯುವತಿ ಹಣ ಕಳೆದುಕೊಂಡವರು.ಮಂಗಳೂರಿನ ಕಂಪೆನಿಯೊಂದರಲ್ಲಿ ಇವರು ಕೆಲಸ ಮಾಡುತ್ತಿದ್ದಾರೆ. ಆಕೆ ಕರ್ತವ್ಯದಲ್ಲಿರುವಾಗ 9259996764 ನಂಬರ್‌ನಿಂದ ಮುಂಬಯಿ ಸೈಬರ್‌ ಪೊಲೀಸರ ಹೆಸರಿನಲ್ಲಿ ಮಹಿಳೆಯೊಬ್ಬರು ಕರೆ ಮಾಡಿ ನಿಮ್ಮ ಹೆಸರಿನಲ್ಲಿ ಬಂದಿರುವ ಕೊರಿಯರ್‌ನಲ್ಲಿ ನಿಷೇಧಿತ ಡ್ರಗ್ಸ್‌ ಇರುವುದಾಗಿ ತಿಳಿಸಿ, ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದರು. ಅನಂತರ ಮತ್ತೋರ್ವರಿಗೆ …

Read More »

ಕೋಟ: ಬೆಳ್ಳಂಬೆಳಿಗ್ಗೆ ವಿವಾಹಿತ ಮಹಿಳೆಯ ಕೊಲೆ – ಪತಿಯಿಂದಲೇ ಕೃತ್ಯ ಶಂಕೆ

ಕೋಟ: ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಕಾರ್ಕಡ ಕಡಿದ ಹೆದ್ದಾರಿ ಅಂಗನವಾಡಿ ಕೇಂದ್ರದ ಸಮೀಪ ಬಾಡಿಗೆ ಮನೆಯಲ್ಲಿ ಬೆಳ್ಳಂಬೆಳಿಗ್ಗೆ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತ ಮಹಿಳೆ ಜಯಶ್ರೀ ಎಂದು ಗುರುತಿಸಲಾಗಿದ್ದು ಇವರು ಕೊಪ್ಪಳ ಮೂಲದವರಾಗಿದ್ದಾರೆ. 8 ತಿಂಗಳ ಹಿಂದೆಯಷ್ಟೇ ಮದುವೆಯಾಗಿ ಕಾರ್ಕಡದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಪತಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಗುಂಡ್ಮಿ ಗ್ರಾಮದ ಕಿರಣ್ ಉಪಾಧ್ಯ ಎಂದು ತಿಳಿದು ಬಂದಿದೆ. ಶಂಕೆಯ ಮೇರೆಗೆ ಮೃತಳ ಪತಿ ಕಿರಣ್ ಉಪಾಧ್ಯ …

Read More »

ಪುತ್ತೂರು: ಚೂರಿ ಇರಿತ ಆರೋಪ; ವಿದ್ಯಾರ್ಥಿನಿಯನ್ನು ಅಮಾನತು ಮಾಡುವಂತೆ ವಿದ್ಯಾರ್ಥಿ ಸಂಘಟನೆ ಆಗ್ರಹ

ಪುತ್ತೂರು: ಕೊಂಬೆಟ್ಟು ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ಅದೇ ಕಾಲೇಜಿನ ವಿದ್ಯಾರ್ಥಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ ಎಂದು ಸುಳ್ಳು ಆರೋಪ ಹೊರಿಸಿದ ವಿದ್ಯಾರ್ಥಿನಿಯನ್ನು ಅಮಾನತು ಮಾಡುವಂತೆ ಕೋರಿ ವಿದ್ಯಾರ್ಥಿ ಸಂಘಟನೆ ಕಾಲೇಜಿನ ಪ್ರಾಂಶುಪಾಲರಿಗೆ ಹಾಗೂ ಪುತ್ತೂರು ನಗರ ಠಾಣಾಧಿಕಾರಿಗೆ ಮನವಿ ಸಲ್ಲಿಸಿತು. ವಿದ್ಯಾರ್ಥಿನಿಯನ್ನು ಸಂಸ್ಥೆಯಿಂದ ವಜಾಗೊಳಿಸದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ವಿದ್ಯಾರ್ಥಿ ಸಂಘಟನೆ ಎಚ್ಚರಿಕೆ ನೀಡಿದೆ. ಜೊತೆಗೆ ಆರೋಪಿ ಎಂದು ಬಾಲಕನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಘಟನೆ ಒತ್ತಾಯಿಸಿದೆ. ಪುತ್ತೂರು ಕಾಲೇಜಿನ ವಿದ್ಯಾರ್ಥಿಗಳು ಸಭೆ ನಡೆಸಿದ್ದು, ಕೊಂಬೆಟ್ಟು ಸರ್ಕಾರಿ ಪಿಯು …

Read More »

ಉಡುಪಿ: ಆನ್ ಲೈನ್ ಟ್ರೇಡಿಂಗ್ ವಂಚನೆ- ಪುತ್ತೂರು ಮೂಲದ ಮುಸ್ತಫಾ ಸಹಿತ ನಾಲ್ವರ ಬಂಧನ

ಉಡುಪಿ: ಆನ್‌ಲೈನ್‌  ಟ್ರೇಡಿಂಗ್ ನಲ್ಲಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳ ಪೊಲೀಸರು ಬಂಧಿಸಿ 13 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆದಿದ್ದಾರೆ. ಉಪೇಂದ್ರ ಭಟ್ ಅವರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ವಾಟ್ಸ್ಯಾಪ್‌ ನಲ್ಲಿ ಮೋತಿಲಾಲ್ ಒಸ್ವಾಲ್ ಪ್ರೈವೇಟ್ ವೆಲ್ತ್ ಮ್ಯಾನೇಜ್ ಮೆಂಟ್ ಗ್ರೂಪ್‌ ಗೆ ಸೇರಿಸಿದ್ದು, ಮೋತಿಲಾಲ್ ಒಸ್ವಾಲ್ ಪ್ರೈವೇಟ್ ವೆಲ್ತ್ ಮ್ಯಾನೇಜ್ ಮೆಂಟ್ ಗ್ರೂಪ್ ನ ಅಕೌಂಟ್ ನಂಬರ್‌ ನೀಡಿದ್ದಾರೆ. ವಾಟ್ಸ್ಯಾಪ್‌ ನಲ್ಲಿ ಟ್ರೇಡಿಂಗ್  ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ ನಂಬಿಸಿ, ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ …

Read More »

ಮಂಗಳೂರು ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೆರಿಗೆ ಸಮಯದಲ್ಲಿ ಆದಲು – ಬದಲು ಆರೋಪ – ದೂರು ದಾಖಲು

ಮಂಗಳೂರು: ನವಜಾತ ಶಿಶುವಿನ ಹೆರಿಗೆ ಸಂದರ್ಭದಲ್ಲಿ ವೈದ್ಯಕೀಯ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿ ಲೇಡಿ ಗೊಸ್ಚೆನ್ ಆಸ್ಪತ್ರೆಯ ವಿರುದ್ಧ ಆರೋಗ್ಯ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಪೋಷಕರು ದೂರು ಸಲ್ಲಿಸಿದ್ದಾರೆ. ಮಗುವಿನ ತಾಯಿಯ ಚಿಕ್ಕಪ್ಪ ನೀಡಿದ ದೂರಿನ ಪ್ರಕಾರ, ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದ ಅವರ ತಂಗಿಯನ್ನು ಆಗಸ್ಟ್ 17 ರಂದು ರಾತ್ರಿ ಲೇಡಿ ಗೊಸ್ಚೆನ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅವರು ಆಗಸ್ಟ್ 18 ರಂದು ಬೆಳಿಗ್ಗೆ 10:30 ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. .ಆರಂಭದಲ್ಲಿ ಮಗು ಆರೋಗ್ಯವಾಗಿದೆ ಎಂದು ವೈದ್ಯರು ಕುಟುಂಬಕ್ಕೆ …

Read More »

ಝೀ ಕನ್ನಡ ಸರಿಗಮಪ ಸೆಲೆಬ್ರಿಟಿ ಗಾಯಕ ಅನಿಲ್ ಕುಮಾರ್ ರವರನ್ನು ಕಾರ್ಕಳದಲ್ಲಿ ಸ್ವಾಗತಿಸಿದ ತುಳುನಾಡ ತುಡರ್ ಕೀರ್ತಿ ಕಾರ್ಕಳ

ಇಂದು ಕಾರ್ಕಳಕ್ಕೆ ಆಗಮಿಸಿದ ಕರ್ನಾಟಕಕ್ಕೆ ಹೆಸರುವಾಸಿಯಾದಂತ ಮೊದಲ ಹೆಣ್ಣು ಧ್ವನಿ ಗಾಯಕರದಂತಹ ಅನಿಲ್ ಕುಮಾರ್ (ಬಾಬಿ) ಬೆಂಗಳೂರು. ಝೀ ಕನ್ನಡ ಸರಿಗಮಪ ಸೆಲೆಬ್ರಿಟಿ ಗಾಯಕರಾದಂತಹ ಹಾಗೂ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ, ಡಾಕ್ಟರೇಟ್ ಪದ್ಮಭೂಷಣ ಪ್ರಶಸ್ತಿ, ಜೀ ಕನ್ನಡ ಯುವರತ್ನ ಪ್ರಶಸ್ತಿ, ವೀರ ಕನ್ನಡಿಗ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರು ಇಂದು ಕಾರ್ಕಳದ ಬಾಹುಬಲಿ ಗೊಮ್ಮಟೇಶ್ವರ ಬೆಟ್ಟಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ತುಳುನಾಡ ತುಡರ್ ಕೀರ್ತಿ ಕಾರ್ಕಳ ಹಾಗೂ ಹರಿಪ್ರಸಾದ್ ಬೆಂಗಳೂರು, ಸತೀಶ್ ಬೆಂಗಳೂರು ಆತ್ಮೀಯವಾಗಿ ಬರಮಾಡಿಕೊಂಡರು.

Read More »

ಉಡುಪಿ: ವಿದ್ಯಾರ್ಥಿನಿ ಅಸ್ವಸ್ಥ – ಬಸ್ಸನ್ನೇ ಆಸ್ಪತ್ರೆಗೆ ಕೊಂಡೊಯ್ದ ಚಿಕಿತ್ಸೆ ಕೊಡಿಸಿದ ಚಾಲಕ ನಿರ್ವಾಹಕ

ಉಡುಪಿ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೋರ್ವಳು ದಿಢೀರ್ ಅಸ್ವಸ್ಥಗೊಂಡ ಪರಿಣಾಮ ಖಾಸಗಿ ಬಸ್ ಚಾಲಕ ಸಮಯ ಪ್ರಜ್ಞೆ ಮೆರೆದು ಬಸ್ಸನ್ನೇ ಆಸ್ಪತ್ರೆಗೆ ಕೊಂಡೊಯ್ದ ಮತ್ತೊಂದು ಘಟನೆ ಗುರುವಾರ ಬೆಳಗ್ಗೆ ಉಡುಪಿಯಲ್ಲಿ ನಡೆದಿದೆ. ಇಂದು ಬೆಳಗ್ಗೆ ಮಂಗಳೂರಿನಿಂದ ಮಣಿಪಾಲಕ್ಕೆ ಹೊರಟಿದ್ದ ಎಕೆಎಂ ಎಸ್ ಬಸ್ಸಿಗೆ ಮೂಲ್ಕಿಯಲ್ಲಿ ವಿದ್ಯಾರ್ಥಿನಿ ಯೊಬ್ಬಳು ಉಡುಪಿಗೆ ತೆರಳಲು ಹತ್ತಿದ್ದಾಳೆ. ಆದರೆ ಕಟಪಾಡಿ ದಾಟಿ ಉದ್ಯಾವರ ಸಮೀಪಿಸುತ್ತಿದ್ದಂತೆ ಬಸ್ಸಿನಲ್ಲಿದ್ದ ವಿದ್ಯಾರ್ಥಿನಿ ಅಸ್ವಸ್ಥಗೊಂಡಿದ್ದಳು. ಬಸ್ಸಿನ ಚಾಲಕ ನಸೀಫ್, ಹಾಗೂ ನಿರ್ವಾಹಕ ಮೋಹಿತ್ ಕೂಡಲೇ ಬಸ್ಸನ್ನು ಉಡುಪಿಯ ಟಿ.ಎಂ.ಎ . ಪೈ ಆಸ್ಪತ್ರೆಗೆ ಕೊಂಡೊಯ್ದ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ …

Read More »

ಇನ್ಮುಂದೆ ಮುಸ್ಲಿಂ ವಿವಾಹ ನೋಂದಣಿಯನ್ನು ಖಾಜಿ, ಮೌಲ್ವಿಗಳು ಮಾಡುವಂತಿಲ್ಲ.!

ಅಸ್ಸಾಂ ಕ್ಯಾಬಿನೆಟ್ ಮುಸ್ಲಿಂ ವಿವಾಹ ನೋಂದಣಿ ಮಸೂದೆ, 2024 ಅನ್ನು ಅನುಮೋದಿಸಿದೆ. ಇದು ಖಾಜಿ ಅಥವಾ ಮೌಲ್ವಿಗಳು ಮುಸ್ಲಿಂ ವಿವಾಹಗಳನ್ನು ನೋಂದಾಯಿಸುವುದನ್ನು ತಡೆಯಲಿದ್ದು, ಈ ಕಾರ್ಯವನ್ನು ಉಪ-ರಿಜಿಸ್ಟ್ರಾರ್ ನಿರ್ವಹಿಸಲಿದ್ದಾರೆ. ಈ ಮೂಲಕ ಬಾಲ್ಯ ವಿವಾಹವನ್ನು ತಡೆಯಲು ಸಿಎಂ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರವು ಮಹತ್ವದ ಹೆಜ್ಜೆಯನ್ನು ಒಟ್ಟಿದೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, ’18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳನ್ನು ಒಳಗೊಂಡ ಯಾವುದೇ ಮದುವೆಯನ್ನು ನೋಂದಾಯಿಸಲಾಗುವುದಿಲ್ಲ ಎಂದು ನಾವು ಮಸೂದೆಯನ್ನು ಪರಿಚಯಿಸಿದ್ದೇವೆ. ಅಲ್ಲದೇ, …

Read More »

ಮಣಿಪಾಲ: 32 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಸೆರೆ

ಮಣಿಪಾಲ: ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಮಾರು 32 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಣಿಪಾಲ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಗಣೇಶ್‌ ಪ್ರಭು (54) ಬಂಧಿತ ಆರೋಪಿ. ಮಣಿಪಾಲ ಠಾಣೆ ವ್ಯಾಪ್ತಿಯಲ್ಲಿ 1992 ರಲ್ಲಿ 12 ಜನರ ಮೇಲೆ ಹಲ್ಲೆ ನಡೆಸಿದ ಆರೋಪ ಈತನ ಮೇಲಿದೆ. ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ಕರೆತರಲಾಗಿದ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

Read More »

You cannot copy content of this page.