ತಾಜಾ ಸುದ್ದಿ

ಬಂಟ್ವಾಳ : ಪತಿ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ ಪತ್ನಿ – ದೂರು ದಾಖಲು

ಬಂಟ್ವಾಳ : ಕೌಟುಂಬಿಕ ಕಲಹದ ಹಿನ್ನಲೆ ಪತ್ನಿ ತನ್ನ ಗೆಳೆಯನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಲು ಕಾರು ಹತ್ತಿಸಿದ ಘಟನೆಯು ಬಂಟ್ವಾಳ ಪಾಣಿಮಂಗಳೂರಿನ ಮೆಲ್ಕಾರಿನಲ್ಲಿ ನಡೆದಿದ್ದು, ಇದೀಗ ಪತಿಯು ಎದೆನೋವಿ ನಿಂದಾಗಿ ಆಸ್ಪತ್ರೆ ಸೇರಿದ್ದಾರೆ. ಜನವರಿ 23ರಂದು ಈ ಘಟನೆ ನಡೆದಿದ್ದು ಪತ್ರಿಕೆಯೊಂದರಲ್ಲಿ ಛಾಯಾಗ್ರಾಹಕರಾಗಿರುವಂತಹ ಕಿಶೋರ್ ಕುಮಾರ್ ಬೋಳಾರ್ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಕಿಶೋರ್ ಅವರ ಪತ್ನಿ ಶಿಕ್ಷಕಿ ಶುಭಾ ಮತ್ತು ಶಿಕ್ಷಕ ಶಿವಪ್ರಸಾದ್‌ ಶೆಟ್ಟಿ ಎಂಬವರ ಮೇಲೆ ದೂರು ದಾಖಲಾಗಿದೆ. ಕಿಶೋರ್ ಕುಮಾರ್ ಬೋಳಾರ್ ನೀಡಿರುವ ದೂರಿನ …

Read More »

ಉಡುಪಿ :ಅಪ್ರಾಪ್ತೆಯ ಅರೆನಗ್ನ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ ಮಾಡಿ ಅತ್ಯಾಚಾರ ಎಸಗಿದ ಆರೋಪಿಗೆ 20 ವರ್ಷ ಕಠಿಣ ಸಜೆ

ಉಡುಪಿ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಆಕೆಯ ಅರೆನಗ್ನಗೊಳಿಸಿ ವಿಡಿಯೋ ಚಿತ್ರೀಕರಣ ಮಾಡಿದಲ್ಲದೆ ಬ್ಲ್ಯಾಕ್ ಮೇಲ್ ನೆಪದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಉಡುಪಿ ಜಿಲ್ಲಾ ಪೋಕ್ಸೋ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ, 62 ಸಾವಿರ ರೂಪಾಯಿ ದಂಡ ವಿಧಿಸಿದೆ. ಮಜೂರು ನಿವಾಸಿ ಶಂಶುದ್ದೀನ್ (24) ಶಿಕ್ಷೆಗೆ ಗುರಿಯಾದ ಆರೋಪಿ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಜೂರು ಗ್ರಾಮದ ನಿವಾಸಿಯಾಗಿರುವ ಆರೋಪಿ, ಪ್ರತಿ ದಿನ ಬಾಲಕಿಯನ್ನು ತನ್ನ ಆಟೋದಲ್ಲಿ ಶಾಲೆಗೆ ಬಿಡುತಿದ್ದ. ಆಟೋದಲ್ಲಿ ಶಾಲೆಗೆ ಬಿಡ್ತಿದ್ದ ವೇಳೆ ಒತ್ತಾಯ ಪೂರ್ವಕವಾಗಿ ಬಾಲಕಿಯ ಫೋಟೋ, …

Read More »

ಮಂಗಳೂರು: ಧ್ವಜಾರೋಹಣ ಬಳಿಕ ಮನೆಗೆ ತೆರಳಿದ ನಿವೃತ್ತ ಅಧಿಕಾರಿ ಕುಸಿದು ಬಿದ್ದು ಸಾವು

ಮಂಗಳೂರು:ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನಡೆಸಿದ ವ್ಯಕ್ತಿಯೊಬ್ಬರು ಮನೆಗೆ ತೆರಳಿದ ಬಳಿಕ ಕುಸಿದು ಬಿದ್ದು ಸಾವನ್ನಪ್ಪಿದ ಪ್ರಕರಣ ಇಂದು ನಡೆದಿದೆ. ನಗರದ ಬಿಜೈ ನ್ಯೂ ರೋಡ್ ನಲ್ಲಿರುವ ಫೆಲಿಸಿಟಿ ಅಪಾಟ್೯ಮೆಂಟ್ ಅಸೋಸಿಯೇಶನ್ ವತಿಯಿಂದ ಇಂದು ಗಣರಾಜ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬೆಳಿಗ್ಗೆ 7 ಗಂಟೆಗೆ ಧ್ವಜಾರೋಹಣವನ್ನು ಅಪಾಟ್೯ಮೆಂಟ್ ನ ಹಿರಿಯ ನಾಗರೀಕರಾದ, ನಿವೃತ್ತ ಸರಕಾರಿ ಅಧಿಕಾರಿ ಅಬ್ದುಲ್ ಸಮದ್ (80) ಅವರು ಧ್ವಜಾರೋಹಣ ನಡೆಸಿದ್ದರು. ನಂತರ ಭಾಷಣವನ್ನೂ ಮಾಡಿದ್ದ ಅವರು ಕಾರ್ಯಕ್ರಮ ಮುಗಿದ ಬಳಿಕ ಎಲ್ಲರಿಗೂ ಹಸ್ತಲಾಘವ ಮಾಡಿ, ಮನೆಗೆ ಲಿಫ್ಟ್ ನಲ್ಲಿ ತೆರಳಿದ್ದರು. ಮನೆಯ ಒಳಗೆ …

Read More »

ದ್ವಿಚಕ್ರ ವಾಹನ , ಬಸ್ ನಡುವೆ ಅಪಘಾತ: ಸವಾರ ಸಾವು , ಮತ್ತೋರ್ವ ಗಂಭೀರ

ಉಡುಪಿ: ದ್ವಿಚಕ್ರ ವಾಹನವೊಂದು ವಿರುದ್ದ ದಿಕ್ಕಿನಲ್ಲಿ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಜ. 26 ರಂದು ಶುಕ್ರವಾರ ತಡರಾತ್ರಿ ಕರಾವಳಿ-ಮಲ್ಪೆ ರಸ್ತೆಯ ಪಂಡುಬೆಟ್ಟು ಎಂಬಲ್ಲಿ ನಡೆದಿದೆ. ಮೂಲಗಳ ಪ್ರಕಾರ, ಮಣಿಪಾಲದ ರೆಸ್ಟೋರೆಂಟ್ ಒಂದರಲ್ಲಿ ಉದ್ಯೋಗಿಯಾಗಿರುವ ಇಬ್ಬರು ಯುವಕರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಬಸ್‌ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.ಘಟನೆಯಲ್ಲಿ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವನಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Read More »

ಉಡುಪಿ: ವಾಹನ ಢಿಕ್ಕಿ – ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಉಡುಪಿ: ಬೈಕೊಂದು ಅಫಘಾತಕ್ಕೀಡಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಡುಪಿಯ ಜಿಲ್ಲೆಯ ಕಟಪಾಡಿ-ಶಿರ್ವ ಮುಖ್ಯರಸ್ತೆಯ ಬಂಟಕಲ್ಲು ಅರಸೀಕಟ್ಟೆಯ ಬಳಿ ಗುರುವಾರ ನಡೆದಿದೆ ಮೃತ ಬೈಕ್ ಸವಾರನನ್ನು ದರ್ಶನ್ (24 ) ಎಂದು ಗುರುತಿಸಲಾಗಿದೆ. ಮೂಲತಃ ಕಾರವಾರದವರಾದ ದರ್ಶನ್ ಅವರು ಕಟಪಾಡಿ ಸಮೀಪದ ಶಂಕರಪುರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು ಎನ್ನಲಾಗಿದೆ.  ಕೆಲವೇ ದಿನಗಳ ಹಿಂದೆ ಇದೇ ಯುವಕ ಬೈಕ್ ಅಫಘಾತದಲ್ಲಿ ಕೈ ಮೂಳೆ ಮುರಿತಕ್ಕೆ ಒಳಗಾಗಿ ಮನೆಯಲ್ಲಿದ್ದರು ಅನ್ನುವ ಮಾಹಿತಿ ಇದೆ. ಇನ್ನು ಯಾವುದೋ ಅಪರಿಚಿತ ವಾಹನ ಈತನಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಹೆಲ್ಮೆಟ್ ಧರಿಸದೇ …

Read More »

ನೇಣು ಬಿಗಿದು 11 ವರ್ಷದ ಬಾಲಕ ಮೃತ್ಯು…!

ಹನ್ನೊಂದು ವರ್ಷದ ಬಾಲಕನೊಬ್ಬ ತನ್ನ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪಾಲಕ್ಕಾಡ್‌ನಲ್ಲಿ ನಡೆದಿದೆ. ಎಡತನಾಟುಕರ ಕೊಟಪಳ್ಳ ಶಾಲೆಯ 5ನೇ ತರಗತಿ ವಿದ್ಯಾರ್ಥಿ ರಿದಾನ್(11) ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಶಾಲೆಯಿಂದ ಪ್ರವಾಸಕ್ಕೆ ತೆರಳಲಾಗದೆ ಖಿನ್ನತೆಗೆ ಒಳಗಾಗಿ ಮಗು ಇಂತಹ ಕೃತ್ಯಕ್ಕೆ ಬಲಿಯಾಗಿದ್ದಾನೆ. ಬೆಳಗ್ಗೆ ಮನೆಯೊಳಗೆ ಮಗು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಶಾಲೆಯಿಂದ ವಯನಾಡಿಗೆ ಪ್ರವಾಸ ಹೋಗುವುದೆಂದು ನಿರ್ಧರಿಸಲಾಯಿತು. ಪ್ರವಾಸದಲ್ಲಿ ಆಸಕ್ತಿ ಇದ್ದರೂ ಹಣ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಮನೆಯಲ್ಲಿ ಹೇಳಿದರು. ಹಣ ನೀಡದಿದ್ದಲ್ಲಿ ಪ್ರವಾಸಕ್ಕೆ ತೆರಳುವಂತಿಲ್ಲ ಎಂದು ಶಾಲಾ …

Read More »

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ

ಬೆಳ್ತಂಗಡಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿ‌‌ ದರ್ಶನ‌ ಪಡೆದುಕೊಂಡಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪತ್ನಿ ಚೆನ್ನಮ್ಮ ಸಮೇತರಾಗಿ ಗುರುವಾರ ರಾತ್ರಿಯೇ‌ ಆಗಮಿಸಿ ಧರ್ಮಸ್ಥಳ ಸನ್ನಿಧಿ ವಸತಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದು, ಇಂದು ಬೆಳಗ್ಗೆ ಮಂಜುನಾಥ ಸ್ವಾಮಿ ವಿಶೇಷ ದರ್ಶನ ಪಡೆದಿದ್ದಾರೆ. ಇನ್ನು ಮಂಜುನಾಥ ದೇವರಿಗೆ ಪೂಜೆ ಸಲ್ಲಿಸಿದ ದಂಪತಿಗಳು ಬಳಿಕ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ‌ಹೆಗ್ಗಡೆಯವರನ್ನು ಭೇಟಿ‌‌ ಮಾಡಿ‌ದ್ದಾರೆ.

Read More »

ಗುಂಡು ಹಾರಿಸಿ ಮಗನನ್ನು ಹತ್ಯೆಗೈದ ತಂದೆ..!

ಮಗನನ್ನು ಗುಂಡು ಹಾರಿಸಿ , ತಂದೆ ಒಬ್ಬ ಹತ್ಯೆಗೈದಿರುವ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೆರೆಕಲ್ ಎಂಬಲ್ಲಿ ಘಟನೆ ನಡೆದಿದೆ. 32 ವರ್ಷದ ನರ್ತನ್ ಭೂಪಣ್ಣ ಕೊಲೆಯಾದ ಯುವಕ ಎಂದು ಹೇಳಲಾಗುತ್ತಿದೆ. ಸ್ಥಳೀಯರ ಮಾಹಿತಿಯನ್ನು ಆಧರಿಸಿ ಈಗ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲ ನಡೆಸುತ್ತಿದ್ದರೆ ಎಂದು ತಿಳಿದುಬಂದಿದೆ.   ಗಂಭೀರವಾಗಿ ಗಾಯಗೊಂಡಂತಹ ನರ್ತನ ನನ್ನು ವಿಕ್ಟೊರಿಯ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ವಾಗುತ್ತದೆ ಕೊನೆಯುಸಿರೆಳೆದಿದ್ದಾನೆ. ಘಟನೆ ಕುಡಿತ ದೇವಾ ಕಾಮಾಕ್ಷಿ ಪೊಲೀಸ್ ಠಾಣಾದಲ್ಲಿ ಪ್ರಕರಣ ದಾಖಲಾಗಿದೆ.

Read More »

ಪುತ್ತಿಲ ಪರಿವಾರದ ರುವಾರಿ ಅರುಣ್ ಕುಮಾರ್ ಪುತ್ತಿಲ ಬಿಜೆಪಿಗೆ ಸೇರ್ಪಡೆ ಸಾಧ್ಯತೆ..!!

ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಎರಡನೇ ಸ್ಥಾನ ಪಡೆದುಕೊಂಡು ಬಳಿಕದ ದಿನಗಳಲ್ಲಿ ಅಭಿಮಾನಿಗಳು ಸ್ಥಾಪಿಸಿದ ಪುತ್ತಿಲ ಪರಿವಾರದ ಮುಖ್ಯಸ್ಥರೂ ಆಗಿರುವ ಅರುಣ್ ಕುಮಾರ್ ಪುತ್ತಿಲ ಅವರು ಮತ್ತೆ ಬಿಜೆಪಿಗೆ ಬರುವುದು ಖಚಿತ ಎಂಬ ಸುದ್ದಿ ಜನಜನಿತವಾಗಿದೆ. ಪ್ರಮುಖ ಹುದ್ದೆ ನೀಡುವ ಕುರಿತು ಪ್ರಮುಖ ಬಿಜೆಪಿ ನಾಯಕರ ಜೊತೆಯೂ ಮಾತುಕತೆ ನಡೆದಿದೆ. ಅರುಣ್ ಪುತ್ತಿಲ ಸೇರ್ಪಡೆಗೆ ಪುತ್ತೂರಿನಲ್ಲಿ ಕೆಲ ಬಿಜೆಪಿ ಮುಖಂಡರ ವಿರೋಧದ ನಡುವೆಯೂ ಹೈಕಮಾಂಡ್ ಮುಂದಿನ ಲೋಕಸಭಾ ಚುನಾವಣೆ ಹಾಗೂ ಪಕ್ಷದ ಬಲವರ್ಧನೆ ನಿಟ್ಟಿನಲ್ಲಿ ಅ ಪುತ್ತಿಲ ಅವರನ್ನು ಸೇರಿಸಲು …

Read More »

ಪುತ್ತೂರು: ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಟೆಂಪೋ ಚಾಲಕ

ಪುತ್ತೂರು: ಟೆಂಪೋ ಚಾಲಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ  ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಕುರಿಂಜ ಪೊನ್ನಲಡ್ಕ ಎಂಬಲ್ಲಿ ಗುರುವಾರ ನಡೆದಿದೆ. ಮೃತ ಚಾಲಕನನ್ನು ಯಾದವ ಯಾನೆ ರವೀಂದ್ರ (45) ಎಂದು ಗುರುತಿಸಲಾಗಿದೆ. ಆತ್ಮಹತ್ಯೆ ಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಿನಿ ಟೆಂಪೋ ಚಾಲಕರಾಗಿದ್ದ ಅವರು ಮನೆಯಿಂದ ಸ್ವಲ್ಪ ದೂರದಲ್ಲಿ ತನ್ನ ಟೆಂಪೋ ನಿಲ್ಲಿಸಿ ಪಕ್ಕದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Read More »

You cannot copy content of this page.