ಶಿಕ್ಷಣ

ಅಳದಂಗಡಿ ಸ.ಪ.ಪೂ. ಕಾಲೇಜಿಗೆ ಶೇ. 96.2 ಫಲಿತಾಂಶ

ಅಳದಂಗಡಿ, ಎ. 21: 2022-23ನೇ ಸಾಲಿನ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಇಂದು (ಶುಕ್ರವಾರ, ಏಪ್ರಿಲ್ 21) ಪ್ರಕಟವಾಗಿದ್ದು, ರಾಜ್ಯದ ಶೇ.74.67 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ದಕ್ಷಿಣ ಕನ್ನಡಕ್ಕೆ ಜಿಲ್ಲೆ ಮೊದಲ ಸ್ಥಾನ ಪಡೆದಿದ್ದರೆ, ಉಡುಪಿ ಜಿಲ್ಲೆಗೆ ದ್ವಿತೀಯ ಸ್ಥಾನ ಮತ್ತು ಕೊಡಗು ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ. ಅಳದಂಗಡಿ ಸರಕಾರಿ ಪದವಿ ಪೂರ್ವ ಕಾಲೇಜು ಶೇ.   96.2  ಫಲಿತಾಂಶ ದಾಖಲಿಸಿದೆ. ಕಲಾ ವಿಭಾಗದಲ್ಲಿ 26 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 25 ಮಂದಿ ತೇರ್ಗಡೆ ಹೊಂದಿ ಓರ್ವ ವಿದ್ಯಾರ್ಥಿನಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ. ವಾಣಿಜ್ಯ ವಿಭಾಗದ 54 ಮಂದಿ …

Read More »

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ: ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ. ರಾಜ್ಯದ 21 ಮಂದಿ ಟಾಪರ್‍ಸ್ ಯಾರು ಗೊತ್ತಾ..?! 

ಕರ್ನಾಟಕ, ಏ.21: ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಕಾದುಕುಳಿತಿದ್ದರು. ಕೊನೆಗೂ ಇಂದು ಏಪ್ರಿಲ್‌ 21ರಂದು ಫಲಿತಾಂಶ ಪ್ರಕಟವಾಗಿದೆ. ಹಾಗಾದರೆ ಪಿಯುಸಿ ಫಲಿತಾಂಶದಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನದಲ್ಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ. ಈ ಬಾರಿ 2023ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದಾರೆ. ಹಾಗೆಯೆ ಜಿಲ್ಲಾವಾರು ಫಲಿತಾಂಶವನ್ನು ನೋಡುವುದಾದರೆ ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದೆ. ದ್ವಿತೀಯ ಸ್ಥಾನವನ್ನು ಉಡುಪಿ ಜಿಲ್ಲೆ ಅಲಂಕರಿಸಿದೆ. ಒಟ್ಟಾರೆ ಜಿಲ್ಲಾವಾರು ಪಿಯುಸಿ ವಿದ್ಯಾರ್ಥಿಗಳ …

Read More »

ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲಾ ದಿನಗಳಲ್ಲಿ ಭಾರೀ ಕಡಿತ! 244 ಶಾಲಾ ದಿನಗಳಲ್ಲಿ 180 ದಿನಗಳು ಮಾತ್ರ ಕಲಿಕಾ ದಿನಗಳು

ಬೆಂಗಳೂರು, ಏ. 20: ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಕ್ರಿಯಾ ಯೋಜನೆ ಕುರಿತು ಪ್ರಮುಖ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಶಿಕ್ಷಣಾ ಇಲಾಖೆ ಹೊರಡಿಸಿರುವ ಹೊಸ ಮಾರ್ಗಸೂಚಿಯಲ್ಲಿ ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ. ಶಿಕ್ಷಣ ಇಲಾಖೆ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ 2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಾಲಾ ದಿನಗಳ ಸಂಖ್ಯೆಯಲ್ಲಿ 26 ದಿನಗಳು ಕಡಿತಗೊಂಡಿದೆ. ಕೊರೊನಾ ಸಂಭವಿಸಿದ ಕಲಿಕೆಯ ನಷ್ಟವನ್ನು ಸರಿ …

Read More »

ಪೋಷಕರೇ ಎಚ್ಚರ..! ಮಕ್ಕಳನ್ನು ದಾಖಲಾತಿ ಮಾಡಲು ಯೋಚಿಸಿದ್ದೀರಾ..?! ರಾಜ್ಯದಲ್ಲಿವೆ 1316 ಅನಧಿಕೃತ ಶಾಲೆಗಳು! ಮುಚ್ಚಲು ಮೇ 25ರವರೆಗೆ ಗಡುವು

ಬೆಂಗಳೂರು, ಎ. 19: ಶಿಕ್ಷಣ ಇಲಾಖೆಯು ರಾಜ್ಯದಲ್ಲಿ 1316 ಅನಧಿಕೃತ ಶಾಲೆಗಳನ್ನು ಗುರುತಿಸಿದ್ದು, ಇನ್ನಷ್ಟು ಶಾಲೆಗಳ ತಪಾಸಣೆ ಕಾರ್ಯ ಮುಂದುವರಿದಿದೆ. ಈ ಬಗ್ಗೆ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿ ಮೇ 25 ರೊಳಗೆ ಶಾಲೆಗಳನ್ನು ಮುಚ್ಚಲು ಸೂಚಿಸಿದ್ದು, ಅನಧಿಕೃತ ಶಾಲೆಗಳ ಆಡಳಿತ ಮಂಡಳಿಗೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. `ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಶಾಲೆಗಳ ಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಬೇಕು, ದೂರುಗಳು ಬಂದರೂ, ಕ್ರಮ ಕೈಗೊಳ್ಳದೆ ಸಮಯ ವ್ಯರ್ಥ ಮಾಡಬಾರದು. ಪಟ್ಟಿಯನ್ನು ಒದಗಿಸಿದರೆ ಪೋಷಕರಿಗೂ ಅನುಕೂಲವಾಗುತ್ತದೆ. ಮಕ್ಕಳನ್ನು ಶಾಲೆಗೆ ಸೇರಿಸುವ ಮೊದಲು …

Read More »

ಬಳಂಜ ಸ.ಹಿ.ಪ್ರಾ. ಶಾಲೆಯಲ್ಲಿಂದು ರೂ. 12 ಲಕ್ಷ ವೆಚ್ಚದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ

ಬಳಂಜ, ಎ. 16: ಇಂದು ಶಿಕ್ಷಣ ವ್ಯವಸ್ಥೆ ಸಂಪೂರ್ಣ ಬದಲಾಗಿದೆ. ಶೋಷಿತರು, ಬಡವರು ಮಾತ್ರ ಸರಕಾರಿ ಶಾಲೆಯನ್ನು ಅವಲಂಬಿಸುವುದು ಅನ್ನುವ ಮಾತು ಸುಳ್ಳಾಗಿದ್ದು, ಶ್ರೀಮಂತರ ಮಕ್ಕಳು ಸಹ ಇಂದು ಸರಕಾರಿ ಶಾಲೆಗಳನ್ನು ಅವಲಂಬಿಸುತ್ತಿದ್ದಾರೆ. ಇಂದು ಶಾಲೆಗಳು ಖಾಸಗಿ ಶಾಲೆಗಳಿಗೆ ಮೀರಿಸುವಷ್ಟು ಮೂಲ ಸೌಲಭ್ಯ ಇದೆ ಎಂದು ಕೆನರಾ ಬ್ಯಾಂಕ್ ಅದೀನಕ್ಕೊಳಪಟ್ಟ ಕ್ಯಾನ್ ಫಿನ್ ಹೋಮ್ಸ್ ಸಂಸ್ಥೆಯ ಡಿಜಿಎಂ ಪ್ರಶಾಂತ್ ಜೋಶಿ ಹೇಳಿದರು.ಬಳಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಸಂಸ್ಥೆ ಬೆಳ್ತಂಗಡಿ ಹಾಗೂ ರೋಟರಿ ಸಂಸ್ಥೆ ಇಂದಿರಾ ನಗರ ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ಕೆನರಾ …

Read More »

ಬಜಿರೆ ಶಾಲೆಯಲ್ಲಿ ಸದ್ದಿಲ್ಲದೆ ನಿರ್ಮಾಣವಾಗಿದೆ ಆಕರ್ಷಕ ಕುಟೀರ! ಪಚ್ಚೇರಿ ಕುಟುಂಬಸ್ಥರ ಕೊಡುಗೆ, ರೂ. 5 ಲಕ್ಷದಷ್ಟು ವೆಚ್ಚ

ವೇಣೂರು, ಎ. 16: ಬಜಿರೆ ಸ.ಉ.ಪ್ರಾ. ಶಾಲೆಯಲ್ಲಿ ಆಕರ್ಷಕ ಕುಟೀರವೊಂದು (ಬಯಲು ರಂಗ ಮಂದಿರ) ಸದ್ದಿಲ್ಲದೆ ನಿರ್ಮಾಣ ಆಗಿದೆ.ಪಚ್ಚೇರಿ ದಿ| ಪ್ರವೀಣ್ ಪೂಜಾರಿ ಸ್ಮರಣಾರ್ಥ ಅವರ ಸಹೋದರ ನವೀನ್ ಪೂಜಾರಿ ಪಚ್ಚೇರಿ ಹಾಗೂ ಮನೆಯವರು ಸುಮಾರು ರೂ. 5 ಲಕ್ಷ ವೆಚ್ಚದಲ್ಲಿ ಕುಟೀರದ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಪಚ್ಚೇರಿ ದಿ| ಪ್ರವೀಣ್ ಪೂಜಾರಿ ಅವರ ಸವಿನೆನಪೊಂದು ಶಾಶ್ವತವಾಗಿ ಸಮಾಜದಲ್ಲಿ ನೆನಪಿಸುವಂತೆ ಮಾಡಿದೆ.ಪ್ರವೀಣ್ ಪೂಜಾರಿ ಅವರು ಪೂನಾದಲ್ಲಿ ಖಾಸಗಿ ಕಂಪನೆಯೊಂದರಲ್ಲಿ ಮನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ 2021ರಲ್ಲಿ ಮಹಾಮಾರಿ ಕೊರೊನಾಕ್ಕೆ ಬಲಿಯಾಗಿದ್ದರು. ತೀರಾ …

Read More »

ಪಿಎಂಶ್ರೀ ಯೋಜನೆಯಡಿ ಬಜಿರೆ ಶಾಲೆಯಿನ್ನು ಸ್ಮಾರ್ಟ್! ಪ್ರೀ ಸ್ಕೂಲ್‌ನಿಂದ ದ್ವಿತೀಯ ಪಿಯುಸಿವರೆಗೆ ಶಿಕ್ಷಣ…!?

ವೇಣೂರು, ಎ. 13: ಬಜಿರೆ ಸ.ಉ.ಪ್ರಾ. ಶಾಲೆಗೆ ಹೊಸಕಟ್ಟಡ, ಸ್ಮಾರ್ಟ್‌ಲ್ಯಾಬ್, ಸ್ಮಾರ್ಟ್ ತರಗತಿಗಳು, ಸುಸಜ್ಜಿತ ಗ್ರಂಥಾಲಯ, ಕ್ರೀಡಾ ಕೊಠಡಿಯ ಜತೆ ಪ್ರೀ ಸ್ಕೂಲ್‌ನಿಂದ ದ್ವಿತೀಯ ಪಿಯುಸಿವರೆಗೆ ಶಿಕ್ಷಣ…..ಹೌದು ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಭಾಗವಾಗಿ ದೇಶದಾದ್ಯಂತ ಪ್ರಧಾನ ಮಂತ್ರಿಯವರ ಪಿಎಂಶ್ರೀ (ಪ್ರಧಾನಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ) ಯೋಜನೆಯಡಿ ದ.ಕ. ಜಿಲ್ಲೆಯ ೮ ಶಾಲೆಗಳ ಪೈಕಿ ವೇಣೂರು ಗ್ರಾ.ಪಂ. ವ್ಯಾಪ್ತಿಯ ಬಜಿರೆ ಸ.ಉ.ಪ್ರಾ. ಶಾಲೆಯೂ ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ಯೋಜನೆ ಅನುಷ್ಠಾನವಾದರೆ ಬಜಿರೆ ಶಾಲೆ ಸ್ಮಾರ್ಟ್ ಆಗುವುದರಲ್ಲಿ ಸಂದೇಹವಿಲ್ಲ. ಪ್ರಿ-ಸ್ಕೂಲ್‌ನಿಂದ ಪಿಯುಸಿವರೆಗೆಪಠ್ಯಕ್ರಮದ ರಚನೆ ಮತ್ತು …

Read More »

ಕಾಶಿಪಟ್ಣ: ನಾರಾವಿ ಸಂತ ಅಂತೋನಿ ಕಾಲೇಜಿನ ಎನ್ನೆಸ್ಸೆಸ್ ಶಿಬಿರದ ಉದ್ಘಾಟನೆ

ವೇಣೂರು, ಎ. 13: ಎನೆಸ್ಸೆಸ್ ಶಿಬಿರವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸ್ವಚ್ಛತೆ, ಬಾಂಧವ್ಯ, ಸ್ವಯಂಪರಿಪಾಲನೆ ಮುಂತಾದ ಗುಣಗಳನ್ನು ಅಭಿವೃದ್ಧಿಪಡಿಸುತ್ತದೆ ಎಂದು ಯು. ನಾರಾಯಣ ಭಟ್ ಕೇಳಗುತ್ತು ಹೇಳಿದರು.ಕಾಶಿಪಟ್ಣ ಕೇಳ ದ.ಕ.ಜಿ.ಪಂ. ಹಿರಿಯ ಪಾಥಮಿಕ ಶಾಲೆಯಲ್ಲಿ ನಡೆದ ನಾರಾವಿ ಸಂತ ಅಂತೋನಿ ಪದವಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ೨೦೨೨-೨೩ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಕಾಲೇಜಿನ ಪ್ರಾಚಾರ್ಯ ವಂ| ಡಾ. ಆಲ್ವಿನ್ ಸೆರಾವೋ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಶಿಬಿರದ ಯಶಸ್ವಿಗೆ ಶುಭ ಹಾರೈಸಿದರು. ಕೇಳದಪೇಟೆ ಸ.ಹಿ.ಪ್ರಾ. ಶಾಲೆಯ ಮುಖ್ಯಶಿಕ್ಷಕ …

Read More »

You cannot copy content of this page.