ಹೈ-ಫೈ ಕಾರ್​ನಲ್ಲಿ ಬಂದು ಎಳೆನೀರು ಕಳ್ಳತನ : 90 ಸೀಯಾಳದ ಜೊತೆಗೆ ಕಳ್ಳನನ್ನು ಬಂಧಿಸಿದ ಪೊಲೀಸರು

ಕಳ್ಳರು ಬೆಲೆ ಬಾಳುವ ವಸ್ತುಗಳನ್ನು ಕದ್ದು ಶೋಕಿ ಮಾಡುತ್ತಾರೆ. ಆದರೆ ಇಲ್ಲೊಬ್ಬ ಕಳ್ಳನ ಕದಿಯುವ ಸ್ಟೈಲ್ ಬೇರೆಯೇ. ಈ ಕಳ್ಳ ಹೈ-ಫೈ ಕಾರ್​ನಲ್ಲಿ ಡಿಸೇಂಟ್ ಆಗಿ ಬಂದು ಎಳನೀರು ಕದ್ದು ಎಸ್ಕೇಪ್​ ಆಗುತ್ತಿದ್ದ. ಆದರೀಗ ಪೊಲೀಸರ ಅತಿಥಿಯಾಗಿದ್ದಾನೆ.ಮೋಹನ್ ಕಾರಿನಲ್ಲಿ ಬಂದು ಎಳೆನೀರು ಕದಿಯುತ್ತಿದ್ದ ಕಳ್ಳ.

ಗಿರಿನಗರ, ಹನುಮಂತ ನಗರ ಠಾಣೆ ವ್ಯಾಪ್ತಿಯಲ್ಲಿ ಈತ ಕಳ್ಳತನ ಮಾಡುತ್ತಿದ್ದ. ಕದ್ದ ಎಳೆನೀರನ್ನು‌ ಅದೇ ಏರಿಯಾದಲ್ಲಿ‌ ಕಡಿಮೆ ಬೆಲೆಗೆ ಮಾರಾಟ ಮಾಡುತಿದ್ದ. ಸದ್ಯ ಮೋಹನ್​ನನ್ನು ಗಿರಿನಗರ ಬಂಧಿಸಿದ್ದಾರೆ.

ಮೋಹನ್​ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಬಂದಿದ್ದ.​ ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ.

ಗಿರಿನಗರದ ಮಂಕುತಿಮ್ಮ‌ ಪಾರ್ಕ್ ಬಳಿ ವ್ಯಾಗನರ್ ಕಾರ್​​ನಲ್ಲಿ ಬಂದು ಎಳೆನೀರು‌ ಕದ್ದು ಪರಾರಿಯಾಗಿದ್ದನು.

ಮೋಹನ್ ಪ್ರತಿ ದಿನ ಸಿಕ್ಕ ಸಿಕ್ಕ ಕಡೆ ಎಳೆನೀರು‌ ಕದಿಯುತಿದ್ದನು. ಸದ್ಯ ಆರೋಪಿ‌ ಮೋಹನ್​ನನ್ನು ಬಂಧಿಸಲಾಗಿದೆ. ಆತನ ಬಳಿಯಿಂದ 8.5 ಲಕ್ಷ ಬೆಲೆ‌ ಬಾಳುವ ಒಂದು ವ್ಯಾಗನರ್ ಕಾರ್, ಬುಲೆಟ್ ಬೈಕ್‌ ಹಾಗೂ 90 ಎಳೆನೀರು‌ ವಶಕ್ಕೆ ಪಡೆಯಲಾಗಿದೆ.

Check Also

ನಾಪತ್ತೆಯಾಗಿದ್ದ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಪೂಜಾ ಶವವಾಗಿ ಪತ್ತೆ..!!!!

ಶಿವಮೊಗ್ಗ: ಆಗುಂಬೆಯಲ್ಲಿ ನಾಪತ್ತೆ ಆಗಿದ್ದ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ. ತೀರ್ಥಹಳ್ಳಿ ತಾಲೂಕಿನ ಹಸಿಮನೆ ಗ್ರಾಮದ ಪೂಜಾ AK (24) ಅವರ …

Leave a Reply

Your email address will not be published. Required fields are marked *

You cannot copy content of this page.