May 20, 2025 2:43:36 PM

ಉಡುಪಿ: ಲಾರಿ ಮಾಲಿಕರ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ. ಇತ್ತ ಪೊಲೀಸ್‌ ಇಲಾಖೆಯಿಂದ ಲಾರಿ ಮಾಲಿಕರಿಗೆ ನೋಟಿಸ್ ಜಾರಿ ಮಾಡಿದೆ. ಲಾರಿಗಳನ್ನು ತಕ್ಷಣವೇ ರಾಷ್ಟ್ರೀಯ ಹೆದ್ದಾರಿ ಬದಿಯಿಂದ ತೆರವುಗೊಳಿಸುವಂತೆ ಸೂಚನೆ ನೀಡಿದ್ದು,ಇಲ್ಲದೇ ಹೋದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೋಲಿಸ್ ಇಲಾಖೆ ಎಚ್ಚರಿಕೆ ನೀಡಿದೆ.

ಇನ್ನುಮುಷ್ಕರ ಕುರಿತು, ಲಾರಿ ಮಾಲಿಕರ ಸಂಘಟನೆಯ ಮುಖಂಡ ರಾಘವೇಂದ್ರ ಶೆಟ್ಟಿ ಮಾತನಾಡಿ, ನಾವು ಅಕ್ರಮವಾಗಿಯೇ ಬೇಕು ಎಂದಿದ್ದೇವೆ ಎಂಬಂತೆ ನಮ್ಮನ್ನು ಬಿಂಬಿಸಲಾಗಿದೆ. ಇದು ಶುದ್ದ ಸುಳ್ಳು, ನಮಗೆ ಅಕ್ರಮ ಬೇಡ ಸಕ್ರಮ ‌ಮಾಡಿದರೆ  ನಮ್ಮ  ಚಾಲಕರಿಗೆ ಕಿರುಕುಳ ಕೂಡಾ  ಆಗುವುದಿಲ್ಲಎಂದರು.

ಗಣಿ‌ ಇಲಾಖೆಯವರು ವರಿಷ್ಟಾದಿಕಾರಿ, ಜಿಲ್ಲಾದಿಕಾರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಆದರೆ ನಮ್ಮನ್ನು ಸಭೆ ಕರೆದು ಸಾದಕ ಭಾದಕ ಗಳ ಕುರಿತು ಸರಿ ತಪ್ಪು ನಿರ್ಧರಿಸಲು ಉನ್ನತ ಮಟ್ಟದ ಸಮಿತಿ ಮಾಡಿ ಇದರಿಂದಾಗಿ‌ ವ್ಯವಸ್ಥೆ ಸರಿಯಾಗಲಿದೆ ಎಂದು ತಿಳಿಸಿದರು.

ನಮ್ಮ ನ್ಯಾಯಯುತ ಹೋರಾಟ ಪಕ್ಷ, ಅಧಿಕಾರಿಗಳ ವಿರುದ್ದ ಅಲ್ಲ.ಸೆಪ್ಟೆಂಬರ್ 30 ರಂದು ಜಿಲ್ಲಾಧಿಕಾರಿ ಗೆ ಮನವಿ ಮಾಡಿದ್ದೆವೆ. ನಾವು ಜಿಪಿಎಸ್ ಹಾಕಲು‌ ಬದ್ದ ಸದಸ್ಯರ ಮನವೊಲಿಸಲು ನಾವು ತಯಾರಿದ್ದೇವೆ. ಆದರೆ ಜಿಲ್ಲಾಡಳಿತದ ಮೇಲೆ ನಮಗೆ ನಂಬಿಕೆ ಇಲ್ಲ.ಉಡುಪಿ ಗ್ರಾಮ ಪಂಚಾಯತ್ ನಲ್ಲಿ 46 ಲೀಗಲ್ ಮರಳು ಇದೆ ಎಂದಿದ್ದಾರೆ.ಆದರೆ ನಮ್ಮ ಜಿಲ್ಲೆಯಲ್ಲಿ ಕೇವಲ 3 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಲೀಗಲ್ ಮರಳು ಇದೆ ಸೈಜ್ ಕಲ್ಲು ಪಾದೆ175 ಇದೆ ಎಂದು ಗಣಿ ಅಧಿಕಾರಿ ಮಾಹಿತಿ ನೀಡಿದ್ದಾರೆ. ಆದರೆ ಇರುವುದು ಕೇವಲ46 ಕೆಂಪು ಕಲ್ಲಿಗೆ ಉಡುಪಿಯಲ್ಲಿ ಪರ್ಮಿಟ್ ಇಲ್ಲ ನಮಗೆ ದಕ್ಷಿಣ ಕನ್ನಡ  ನಿಡ್ಡೊಡಿಯಿಂದ ಬರುವಂತದ್ದುಈ ಎಲ್ಲಾ ವ್ಯವಸ್ಥೆ ಯನ್ನು ಸರಿ ಮಾಡಿ ಕೊಡುತ್ತೇವೆ ಎಂದು ಜಿಲ್ಲಾಧಿಕಾರಿ ಗಳು ಲಿಖಿತವಾಗಿ ಬರೆದು ಕೊಡಬೇಕು. ಹೀಗೆ ಮಾಡಿದ್ದಲ್ಲಿ ನಾವು ಜಿಪಿಎಸ್ ಅಳವಡಿಸಲು ತಯಾರಿದ್ದೇವೆ ಎಂದರು.

ಜಿಲಾ ಉಸ್ತುವಾರಿ ಸಚಿವರು,‌ಶಾಸಕರು ಸಮ್ಮುಖದಲ್ಲಿ ಬರೆದು ಕೊಡಬೇಕು.ಅಲ್ಲಿಯವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಕಿಡಿಕಾರಿದರು. ವಿನಾ ಕಾರಣ ತೊಂದರೆ ನೀಡಿದ್ದಲ್ಲಿ ನಾವು ಕೂಡಾ ಬಂಧನಕ್ಕೆ ಒಳಗಾಗುತ್ತೆವೆ.ಒಬ್ಬ ಸದಸ್ಯನನ್ನು ಅರೆಸ್ಟ್‌ ಮಾಡಿದರೆ ನಾವು ಎಲ್ಲಾ ಸದಸ್ಯರು ಬಂಧನಕ್ಕೆ ಒಳಗಾಗುತ್ತೇವೆ. ಅಕ್ಟೋಬರ್ 4ರಂದು ಜಾಥಾ ನಡೆಸಲಿದ್ದೇವೆ ಎಂದರು.

ಜಿಲ್ಲಾಧಿಕಾರಿ ಸಭೆಯಲ್ಲಿ ಗಣಿ ಇಲಾಖಾ ಅಧಿಕಾರಿ ಖಾಸಗಿ ವ್ಯಕ್ತಿಯನ್ನು ಸಭೆಗೆ ಕರೆದುಕೊಂಡು ಬಂದಿದ್ದರು ಇದರ ಕುರಿತು ಕೂಡ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ.ನಮಗೆ ಪ್ರತಿಭಟನೆ ಮಾಡುವ ಅವಕಾಶ ಕೂಡಾ ಇಲ್ಲವೇ

ನಮ್ಮ ಜೀವನವನ್ನೇ ಫುಟ್ ಪಾತ್ ಗೆ ತಂದು ಹಾಕಿದ್ದಾರೆ.ಅಧಿಕಾರಿಗಳ ಕಣ್ಣು ತಪ್ಪಿಸಿ ಒಂದು ಹುಲ್ಲು ಕಡ್ಡಿ ಕೂಡಾ ಅಲ್ಲಾಡವುದಿಲ್ಲ ಎಂದು ಲಾರಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು.

About The Author

Leave a Reply

Your email address will not be published. Required fields are marked *

<p>You cannot copy content of this page.</p>