March 16, 2025 7:49:03 PM
WhatsApp Image 2023-08-31 at 2.02.19 PM

ಮಂಗಳೂರು: ಜಿಲ್ಲಾ ಮಟ್ಟದ ಕಬ್ಬಡ್ಡಿ ಆಟಗಾರ ಸ್ವರಾಜ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಲೋನ್‌  ಆಪ್ ಕಿರುಕುಳ ತಡೆಯಲಾರದೆ ಸ್ವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಆತ್ಮಹತ್ಯೆ ಮಾಡಿಕೊಂಡ ಪುದುವೆಟ್ಟು ನಿವಾಸಿ ಸ್ವರಾಜ್‌ (24) ಲೋನ್‌ ಆಪ್‌ ಮೂಲಕ ಸಾಲ ಪಡೆದಿದ್ದರು. ಆ.30 ಆಪ್‌ ಲೋನ್‌ ಸಾಲಕ್ಕೆ ಸಂಬಂಧಿಸಿ 30 ಸಾವಿರ ಹಣ ಕಟ್ಟಿದ್ದರು. ಬಳಿಕ ಆ.31ರಂದು ಆಪ್‌ ನ ಕ್ರಿಮಿನಲ್‌ಗಳು ಮತ್ತೊಮ್ಮೆ ಹಣ ನೀಡುವಂತೆ ಡೆಡ್‌ಲೈನ್‌ ನೀಡಿದ್ದರು. ಇದರಿಂದ ಸ್ವರಾಜ್‌ ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಈ ವೇಳೆ ವಾಟ್ಸಪ್‌ ಡಿಪಿಯಲ್ಲಿ ಸ್ವರಾಜ್‌ ತನ್ನ ಅಕ್ಕನ ಮಗಳ ಫೋಟೋ ವನ್ನು ಹಾಕಿರುವುದನ್ನೇ ದುರ್ಬಳಕೆ ಮಾಡಿಕೊಂಡ ಆಪ್‌ ಕ್ರಿಮಿನಲ್‌ಗಳು ಹಣ ನೀಡುವಂತೆ ಒತ್ತಡ ಹೇರಲು ಆಫೋಟೋವನ್ನೇ ಬಳಸಿಕೊಂಡಿದ್ದಾರೆ. ಫೋಟೋವನ್ನು ‘Baby for sale’ ಎಂದು ಎಡಿಟ್ ಮಾಡಿ ಸ್ವರಾಜ್‌ ಸ್ನೇಹಿತರು, ಕಾಂಟಾಕ್ಟ್ ಲಿಸ್ಟ್ ನಲ್ಲಿರುವವರಿಗೆ ಫಾರ್ವರ್ಡ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನುತಡೆಯಲಾರದೆ ಸ್ವರಾಜ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.