March 14, 2026
WhatsApp Image 2023-06-08 at 1.04.15 PM

ಬೆಂಗಳೂರು: ರಾಜ್ಯದ ಯಜಮಾನಿ ಮಹಿಳೆಯರಿಗೆ ಸರ್ಕಾರದಿಂದ 2000 ರೂ ಪ್ರತಿ ತಿಂಗಳು ನೀಡುವಂತ ಗೃಹ ಲಕ್ಷ್ಮಿ ಯೋಜನೆ ( Gruha Lakshmi Scheme ) ಘೋಷಣೆ ಮಾಡಿತ್ತು. ಈ ಯೋಜನೆಗೆ ಮಹಿಳೆಯರು ನೋಂದಾಯಿಸಿಕೊಳ್ಳಲು ಜುಲೈ.3ರಂದು ಅಧಿಕೃತ ದಿನಾಂಕ ಪ್ರಕಟವಾಗಲಿದೆ.

ಈ ಬಗ್ಗೆ ಮಾಹಿತಿ ನೀಡಿರುವಂತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ನೋಂದಣಿ ಪ್ರಕ್ರಿಗೆ ಜುಲೈ.14ರಿಂದ ಚಾಲನೆ ನೀಡಲು ತಾತ್ಕಾಲಿಕ ಚರ್ಚೆಯಾಗಿದ್ದು, ಜುಲೈ.3ರಂದು ಅಧಿಕೃತ ದಿನಾಂಕ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

 

ಜುಲೈ.3ರಿಂದ ನೋಂದಣಿ ಪ್ರಕ್ರಿಯೆಗೆ ಅಧಿಕೃತ ಮಾಹಿತಿ ಹೊರ ಬೀಳಲಿದೆ. ಅರ್ಜಿ ನೋಂದಣಿಯ ಬಳಿಕ ಆಗಸ್ಟ್ ತಿಂಗಳ ವೇಳೆಗೆ ಎಲ್ಲಾ ಗೃಹ ಲಕ್ಷ್ಮಿಯರ ಖಾತೆಗೆ ತಲಾ 2000 ಹಣ ತಲುಪಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂಬುದಾಗಿ ಹೇಳಿದ್ದಾರೆ.

ಗೃಹ ಲಕ್ಷ್ಮೀ ಯೋಜನೆ ನೋಂದಣಿಗೆ ಆಪ್ ಕೂಡ ಅಭಿವೃದ್ಧಿ ಪಡಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಸರ್ವರ್ ಮೇಲೆ ಇನ್ನೂ ಹೆಚ್ಚು ಒತ್ತಡ ಬೀಡುವುದು ಬೇಡ ಎನ್ನುವ ಕಾರಣಕ್ಕೆ ಗೃಹ ಲಕ್ಷ್ಮೀ ಯೋಜನೆಯ ನೋಂದಣಿಯನ್ನು ವಿಳಂಬ ಮಾಡಲಾಗುತ್ತಿದೆ ಎಂದರು.

About The Author

Leave a Reply

Your email address will not be published. Required fields are marked *

You cannot copy content of this page.