ವೇಣೂರು, ಮೇ 31: ಇಂದು ಬೆಳ್ಳಂಬೆಳಗ್ಗೆ NIA (ರಾಷ್ಟ್ರೀಯ ತನಿಖಾ ದಳ) ಬೆಳ್ತಂಗಡಿ ತಾಲೂಕಿನ ಪೆರಿಂಜೆಯ ಮನೆಗೆ ದಾಳಿ ನಡೆಸಿ ಕಾರ್ಯಾಚರಣೆ ನಡೆಸಿದೆ.
ದ.ಕ. ಜಿಲ್ಲೆಯ ಹಲವೆಡೆ ದಾಳಿ ನಡೆಸಿರುವ ಅಧಿಕಾರಿ ಬೆಳ್ತಂಗಡಿ ತಾಲೂಕಿನಲ್ಲೂ ಹಲವು ಕಡೆ ಕಾರ್ಯಾಚರಣೆ ನಡೆಸಿದ್ದಾರೆ. ಇತ್ತೀಚೆಗೆ ಬಿಹಾರದಲ್ಲಿ ನಡೆದಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ವೇಳೆ ದುಷ್ಕೃತ್ಯ ನಡೆಸಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ವೇಣೂರಿನ ಪೆರಿಂಜೆ ಸೇರಿದಂತೆ ಸುಮಾರು 16 ಕಡೆಗಳಲ್ಲಿ ಮನೆ, ಕಚೇರಿ ಆಸ್ಪತ್ರೆಗಳಿಗೂ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಿಷೇಧಿತ ಪಿಎಫ್‌ಐ ಸಂಘಟನೆ ಮೂಲಕ ಹವಾಲಾ ಹಣ ಕೈ ಬದಲಾಗುತ್ತಿರುವ ಬಗ್ಗೆ NIA ಗೆ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದ್ದು, ಹಣ ಭಯೋತ್ಪಾದನೆಗಳಿಗೆ ಬಳಕೆಯಾಗುತ್ತಿರುವ ಸಂಶಯದ ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.