ವೇಣೂರು, ಎ. 22: ಇತಿಹಾಸ ಪ್ರಸಿದ್ಧ ಅಜಿಲಸೀಮೆಗೆ ಒಳಪಟ್ಟ ಇಲ್ಲಿಯ ಶ್ರೀ ಮಹಾಲಿಂಗೇಶ್ವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಎ. 14ರಿಂದ ಆರಂಭಗೊಂಡಿದ್ದು, ಇಂದು ರಾತ್ರಿ ಮಹಾ ರಥೋತ್ಸವ ಜರಗಲಿದೆ.
ದೇವಸ್ಥಾನದಲ್ಲಿ ಇಂದು ಕವಾಟೋದ್ಘಾಟನೆ, ವಿಶೇಷ ಸೇವಾದಿಗಳು, ತುಲಾಭಾರ ಸೇವೆ, ಚೂರ್ಣೋತ್ಸವ ಜರಗಿತು.
ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ನೂರಾರು ಮಂದಿ ಭಕ್ತರು ಪಾಲ್ಗೊಂಡರು. ಇಂದು ರಾತ್ರಿ 8-30 ರಿಂದ ಕೊಡಮಣಿತ್ತಾಯ ದೈವದ ಗಗ್ಗರ ಸೇವೆ ಬಳಿಕ ಗಂಟೆ 9 ಗಂಟೆಯಿಂದ ಮಹಾರಥೋತ್ಸವ ಜರಗಲಿದ್ದು, ಅವಭೃತ ಕಟ್ಟೆಪೂಜೆ, ಬಾಕಿಮಾರು ಗದ್ದೆಗೆ ಸವಾರಿ, ದೈವ-ದೇವರ ಭೇಟಿ, ಅವಭೃತ ಸ್ನಾನ, ಧ್ವಜಾವರೋಹಣ ಜರಗಲಿದೆ.
ಇಂದು ರಾತ್ರಿ 7-30ರಿಂದ ಯಕ್ಷಗಾನ ಗಾನ ವೈಭವ, ರಾತ್ರಿ 9-30ರಿಂದ ಯಕ್ಷಗಾನ ಮಾಯಾ ತಿಲೋತ್ತಮೆ ಜರಗಲಿದೆ.
ನಾಳೆ ಎ. 23ರಂದು ರಾತ್ರಿ ಅಂಗಣ ಪಂಜುರ್ಲಿ ನೇಮೋತ್ಸವ ನಡೆಯಲಿದೆ.