ವೇಣೂರು, ಎ. 18: ಇಂದು ವಿದ್ಯುತ್ ಬಿಲ್ ಪಾವತಿಗೆ ಅನೇಕ ವಿದಾನಗಳಿವೆ. ವಿವಿಧ ಆಪ್ಗಳ ಮೂಲಕ ಮೊಬೈಲ್ನಲ್ಲೇ ಪಾವತಿಗೂ ಅವಕಾಶ ಇದೆ. ವೇಣೂರು ಮೆಸ್ಕಾಂ ಕಚೇರಿಯಲ್ಲಿ ಪ್ರತೀ ತಿಂಗಳ 10, 14, 21 ಮತ್ತು 25ನೇ ತಾರೀಕಿನಂದು ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ವಿದ್ಯುತ್ ಬಿಲ್ ಸ್ವೀಕರಿಸುತ್ತಾರೆ.
ಪಂಚಾಯತ್ನಲ್ಲಿ ಯಾವಾಗೆಲ್ಲ ವಿದ್ಯುತ್ ಬಿಲ್ ಸ್ವೀಕರಿಸುತ್ತಾರೆ ಇನ್ನಷ್ಟು ಮಾಹಿತಿ
ತಿಳಿಯಿರಿ
ಪ್ರತೀ ತಿಂಗಳ ಒಂದನೇ ತಾರೀಕಿನಂದು ಆರಂಬೋಡಿ ಗ್ರಾ.ಪಂ. ಕಚೇರಿಯಲ್ಲಿ, ನಾಲ್ಕನೇ ತಾರೀಕಿನಂದು ಕಾಶಿಪಟ್ಣ ಗ್ರಾ.ಪಂ. ಕಚೇರಿಯಲ್ಲಿ, ಐದು ಮತ್ತು ಇಪ್ಪತೈದನೇ ತಾರೀಕಿನಂದು ಪೆರಿಂಜೆ ಗ್ರಾ.ಪಂ. ಕಚೇರಿಯಲ್ಲಿ, ಹದಿನೇಳನೇ ತಾರೀಕಿನಂದು ಕುಕ್ಕೇಡಿ ಗ್ರಾ.ಪಂ. ಕಚೇರಿಯಲ್ಲಿ, ಹದಿನಂಟನೇ ತಾರೀಕಿನಂದು ಅಂಡಿಂಜೆ ಗ್ರಾ.ಪಂ. ಕಚೇರಿಯಲ್ಲಿ ಬೆಳಿಗ್ಗೆ ಹತ್ತು ಗಂಟೆಯಿಂದ ಒಂದು ಗಂಟೆಯವರೆಗೆ ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ಬಿಲ್ ಸ್ವೀಕರಿಸುತ್ತಾರೆ. ನಿಗದಿ ಪಡಿಸಿದ ದಿನಾಂಕದಂದು ಸರಕಾರಿ ರಜೆ ಇದ್ದರೆ ಅದರ ಮುಂದಿನ ದಿನದಂದು ಬಿಲ್ ಸ್ವೀಕರಿಸಲಾಗುತ್ತದೆ ಎಂದು ವೇಣೂರು ಮೆಸ್ಕಾಂ ಮಾಹಿತಿ ನೀಡಿದೆ.