ನೂತನ ಸಂಸತ್ ಭವನಕ್ಕೆ ‘ಪ್ರಧಾನಿ ಮೋದಿ’ ದಿಢೀರ್ ಭೇಟಿ

ನವದೆಹಲಿ : ಪ್ರಧಾನಿ ಮೋದಿ ಗುರುವಾರ ತಡರಾತ್ರಿ ಹೊಸ ಸಂಸತ್ ಭವನಕ್ಕೆ ದಿಢೀರ್ ಭೇಟಿ ನೀಡಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಳೆದು ವಿವಿಧ ಕಾಮಗಾರಿಗಳನ್ನ ಪರಿಶೀಲಿಸಿದರು. ಸಂಸತ್ತಿನ ಉಭಯ ಸದನಗಳಲ್ಲಿ ಬರುತ್ತಿರುವ ಸೌಲಭ್ಯಗಳನ್ನ ವೀಕ್ಷಿಸಿದರು.

ಪ್ರಧಾನಿಯವರು ಕಟ್ಟಡ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದರು.

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕೂಡ ಪ್ರಧಾನಿ ಜೊತೆ ಉಪಸ್ಥಿತರಿದ್ದರು. 10 ಡಿಸೆಂಬರ್ 2020 ರಂದು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಂಸತ್ ಭವನದ ಶಂಕುಸ್ಥಾಪನೆ ಮಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಸಂಪುಟ ಸಚಿವರು ಮತ್ತು ವಿವಿಧ ದೇಶಗಳ ರಾಯಭಾರಿಗಳು ಭಾಗವಹಿಸಿದ್ದರು. ಸಂಸತ್ತಿನ ಚಳಿಗಾಲದ ಅಧಿವೇಶನಕ್ಕಾಗಿ ಅಕ್ಟೋಬರ್ 2022ರೊಳಗೆ ಹೊಸ ಕಟ್ಟಡವು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಹೊಸ ಸಂಸತ್ತಿನ ವಿಸ್ತೀರ್ಣ 64,500 ಚದರ ಮೀಟರ್ ಆಗಿರುತ್ತದೆ. ಹೊಸ ಕಟ್ಟಡವನ್ನು ಸೆಂಟ್ರಲ್ ವಿಸ್ಟಾ ಯೋಜನೆಯಡಿ ನಿರ್ಮಿಸಲಾಗುತ್ತಿದೆ.

Check Also

ಉಡುಪಿ: ಪ್ರೇಯಸಿಯೊಂದಿಗೆ ವಾಗ್ವಾದ- ಅರ್ಧದಾರಿಯಲ್ಲಿ ಬಸ್ ಬಿಟ್ಟು ಹೋದ ಚಾಲಕ

ಉಡುಪಿ:  ಖಾಸಗಿ ಬಸ್ ಚಾಲಕನೊಬ್ಬ ತನ್ನ ಪ್ರೇಯಸಿಯೊಂದಿಗೆ ವಾಗ್ವಾದಕ್ಕಿಳಿದು ಬಸ್ಸನ್ನು ಅರ್ಧದಾರಿಯಲ್ಲಿ ನಿಲ್ಲಿಸಿ ಹೋದ ವಿಚಿತ್ರ ಘಟನೆ ಉಡುಪಿಯಲ್ಲಿ ನಡೆದಿದೆ. …

Leave a Reply

Your email address will not be published. Required fields are marked *

You cannot copy content of this page.