March 13, 2026
WhatsApp Image 2023-02-12 at 12.12.03 PM

ಬೆಂಗಳೂರು : ಕಾಂತಾರ ಸಿನೆಮಾ ಬಂದ ಮೇಲೆ ದೈವದ ವೇಷ ಧರಿಸಿ ಕಾರ್ಯಕ್ರಮಗಳಲ್ಲಿ ನೃತ್ಯ ಮಾಡುವುದು ಇದೀಗ ಹೆಚ್ಚಾಗಿದ್ದು, ಈ ನಡುವೆ ಬೆಂಗಳೂರಿನ ಕಾಲೇಜಿನಲ್ಲಿ ಪಂಜುರ್ಲಿ ದೈವದ ವೇಷ ಧರಿಸಿ ವರಾಹಂ ರೂಪಂ ಹಾಡಿಗೆ ನರ್ತಿಸುತ್ತಿದ್ದ ವಿಧ್ಯಾರ್ಥಿ ಮೇಲೆ ದೈವದ ಆವಾಹನೆ ಆಗಿರುವ ಘಟನೆ ನಡೆದಿದೆ.

ಬೆಂಗಳೂರಿನ ಗಾಯತ್ರಿ ನಗರದಲ್ಲಿರುವ ಹೊಂಬೇಗೌಡ ಪದವಿಪೂರ್ವ ಕಾಲೇಜಿನಲ್ಲಿ ಕಾಲೇಜಿನಲ್ಲಿ ನಡೆದಿದೆ. ದ್ವೀತಿಯ ಪಿಯುಸಿಯ ವಿಶಾಲ್ ದೈವ ಅವಾಹನೆಗೆ ಒಳಗಾದ ವಿದ್ಯಾರ್ಥಿ. ವಿಶಾಲ್ ಪಂಜುರ್ಲಿ ದೈವದ ವೇಷ ಧರಿಸಿ ವರಾಹ ರೂಪಂ ಹಾಡಿಗೆ ನೃತ್ಯ ಮಾಡುತ್ತಿದ್ದ. ದೈವ ಆವಾಹನೆಯಾಗುತ್ತಿದ್ದಂತೆ ವೇದಿಕೆ ಮೇಲಿಂದ ಕೆಳಗೆ ಬಂದು ನರ್ತಿಸಿದ್ದಾನೆ. ಕೂಡಲೇ ಎಚ್ಚೆತ್ತ ನಾಲ್ಕೈದು ಮಂದಿ ಬಂದರೂ ವಿಶಾಲ್​ನನ್ನು ಸಮಾಧಾನಪಡಿಸಲು ಸಾಧ್ಯವಾಗಿಲ್ಲ‌.

ವಿಶಾಲ್ ಮೇಲೆ ದೈವ ಆವಾಹನೆಯಾಗಿ ಉದ್ವೇಗಕ್ಕೆ ಒಳಗಾಗುತ್ತಿದ್ದಂತೆ ಆಯೋಜಕರು ಹಾಡನ್ನು ಅರ್ಧಕ್ಕೇ ನಿಲ್ಲಿಸಿದ್ದಾರೆ. ವಿದ್ಯಾರ್ಥಿಯ ಆರ್ಭಟ ಕಂಡು ಕಾಲೇಜು ವಾರ್ಷಿಕೋತ್ಸವಕ್ಕೆ ಬಂದಿದ್ದ ನೋಡುಗರು ಶಾಕ್ ಆಗಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.