ಗಮನಿಸಿ :ಮಂಗಳೂರಿಗೆ ಅಮಿತ್ ಶಾ ಭೇಟಿ ಹಿನ್ನಲೆ ಸಂಚಾರದಲ್ಲಿ ಬದಲಾವಣೆ

ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಮಂಗಳೂರು ನಗರಕ್ಕೆ ಆಗಮಿಸಿ ಏರ್ಪೋರ್ಟ್ ರಸ್ತೆಯಲ್ಲಿನ ಕೆಂಜಾರು ಸಮೀಪದ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಆಯೋಜಿಸಿರುವ ಸಭೆಯಲ್ಲಿ ಭಾಗವಹಿಸುವ ಕಾರಣ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಜೆ ಸುಮಾರು 4 ಗಂಟೆಯಿಂದ 9 ಗಂಟೆಯವರೆಗೂ ಕೆಂಜಾರು ಸಮೀಪದ ಏರ್ಪೋರ್ಟ್ ರಸ್ತೆಯಲ್ಲಿ ವಾಹನ ಹಾಗೂ ಜನಸಂದಣಿ ಜಾಸ್ತಿ ಇದ್ದು, ಸಂಚಾರ ವ್ಯತ್ಯಯ ಆಗಬಹುದಾದ ಕಾರಣ ಕೆಂಜಾರು ಸಮೀಪದ ರಸ್ತೆಯನ್ನು ಉಪಯೋಗಿಸಿ ಏರ್ಪೋರ್ಟ್ ಗೆ ಹೋಗುವವರು ಪರ್ಯಾಯ ರಸ್ತೆಯಾಗಿ ಮುಲ್ಕಿ -ಕಟೀಲ್ -ಬಜಪೆ ಮೂಲಕ ಏರ್ ಪೋರ್ಟ್ ಗೆ ಹೋಗಬಹುದು. ಇದಲ್ಲದೆ ಕುದುರೆಮುಖ ಜಂಕ್ಷನ್- ಜೋ ಕಟ್ಟೆ -ಪೊರ್ಕೊಡಿ -ಏರ್ ಪೋರ್ಟ್, ಇಂಡಸ್ಟ್ರಿಯಲ್ ಏರಿಯಾ -ಜೋಕಟ್ಟೆ -ಪೊರ್ಕೋಡಿ -ಏರ್ಪೋರ್ಟ್, ನಂತೂರು , ಬಿಕರ್ನ ಕಟ್ಟೆ- ಕೈಕಂಬ -ಏರ್ಪೋರ್ಟ್ ಈ ಮಾರ್ಗಗಳನ್ನು ಉಪಯೋಗಿಸಬೇಕಾಗಿ ಕೋರಲಾಗಿದೆ.

Check Also

ಜುಲೈ.23ರಂದು 2024-25ನೇ ಸಾಲಿನ ‘ಕೇಂದ್ರ ಬಜೆಟ್’ ಮಂಡನೆ

ನವದೆಹಲಿ: 2024-25ನೇ ಸಾಲಿನ ಕೇಂದ್ರ ಬಜೆಟ್ ( Union Budget ) ಜುಲೈ 23 ರಂದು ಲೋಕಸಭೆಯಲ್ಲಿ ಮಂಡನೆಯಾಗಲಿದೆ. ಸಂಸತ್ತಿನ …

Leave a Reply

Your email address will not be published. Required fields are marked *

You cannot copy content of this page.