ಬೆಂಗಳೂರು: ಪುತ್ತೂರು ಕಂಬಳದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಿರುತೆರೆ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಸಾನ್ಯಾ ಅಯ್ಯರ್ ಸ್ಪಷ್ಟನೆ ನೀಡಿದ್ದು, ಕಪಾಳ ಮೋಕ್ಷೆ ಮಾಡುವಂಥದ್ದು ಏನೂ ನಡೆದೇ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಪುತ್ತೂರಿನಲ್ಲಿ ನಡೆದ ಕಂಬಳಕ್ಕೆ ನಾನು ಅತಿಥಿಯಾಗಿ ಹೋಗಿದ್ದೆ. ಅವತ್ತು ಕಂಬಳವನ್ನು ಸರಿಯಾಗಿ ನೋಡಲು ಆಗದೇ ಇರುವ ಕಾರಣಕ್ಕಾಗಿ ಮತ್ತೆ ಸ್ನೇಹಿತೆಯರ ಜೊತೆ ಹೋದೆ. ಆಗ ಒಬ್ಬ ಹುಡುಗ ನನ್ನ ಫ್ರೆಂಡ್ಸ್ ಕೈ ಹಿಡಿದು ಎಳೆದ. ಭಯ ಆಯಿತು. ಆನಂತರ ಇದನ್ನು ಆಯೋಜಕರ ಗಮನಕ್ಕೆ ತಂದೆವು. ಆ ಹುಡುಗ ನಂತರ ಎಲ್ಲಿಗೆ ಹೋದ? ಏನಾದ ಎನ್ನುವ ವಿಚಾರ ಗೊತ್ತಿಲ್ಲ. ಆದರೆ, ಸುದ್ದಿ ಆದಂತೆ ಅವನ ಕಪಾಳಕ್ಕೆ ನಾನು ಹೊಡೆಯಲಿಲ್ಲ, ನನಗೂ ಅವನು ಹೊಡೆಯಲಿಲ್ಲ ಎಂದು ತಿಳಿಸಿದ್ದಾರೆ.