ಕೇರಳ: ಕೇರಳದ ಇಬ್ಬರು ವಿದ್ಯಾರ್ಥಿಗಳಗೆ ನೊರೊವೈರಸ್(norovirus) ಪಾಸಿಟಿವ್ ಬಂದಿದ್ದು, 15 ಕ್ಕೂ ಹೆಚ್ಚು ಮಕ್ಕಳಲ್ಲಿ ಈ ಸಾಂಕ್ರಾಮಿಕ ರೋಗದ ಲಕ್ಷಣಗಳು ಕಂಡುಬಂದಿದೆ. ಹೀಗಾಗಿ, ಕೊಚ್ಚಿಯ ಖಾಸಗಿ ಶಾಲೆಯನ್ನು ಸೋಮವಾರ ಮುಚ್ಚಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ನೊರೊವೈರಸ್ ಸೋಂಕು ತಡೆಗಟ್ಟಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸೋಂಕಿತ ಮಕ್ಕಳು 5 ರಿಂದ 10 ವರ್ಷ ವಯಸ್ಸಿನವರಾಗಿದ್ದಾರೆ. ಕೆಲವು ಪೋಷಕರಲ್ಲೂ ಕೂಡ ಇದರ ರೋಗಲಕ್ಷಣಗಳನ್ನು ಕಂಡುಬಂದಿದೆ. ಅಲಪ್ಪುಳದ ಪ್ರಾದೇಶಿಕ ವೈರಾಲಜಿ ಲ್ಯಾಬ್‌ನಲ್ಲಿ ಮಕ್ಕಳ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ವೀಣಾ ಜಾರ್ಜ್ ಹೇಳಿದ್ದಾರೆ.
ಸ್ಥಳೀಯ ನಿವಾಸಿಗಳು ಕಟ್ಟುನಿಟ್ಟಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು, ನೀರನ್ನು ಕುದಿಸಿ ಮತ್ತು ಹೆಚ್ಚಿನ ತಾಪಮಾನದಲ್ಲಿ ತರಕಾರಿಗಳನ್ನು ಬೇಯಿಸಿ ಸೇವಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ನೊರೊವೈರಸ್ ಕಲುಷಿತ ನೀರು, ಆಹಾರ ಮತ್ತು ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದ ಮೂಲಕ ಹರಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಅತಿಸಾರ, ವಾಂತಿ ಮತ್ತು ಹೊಟ್ಟೆ ನೋವು ಇದರ ಮುಖ್ಯ ಲಕ್ಷಣಗಳು. ಇದು ಮುಖ್ಯವಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ.