ಮಂಗಳೂರು: ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಹೆಣ್ಣಿನ ಸ್ವಾತಂತ್ರ್ಯ್, ಮಾರಕ ವಸ್ತುಗಳಿಂದ ಆಗುವ ಕೆಡುಕು ಹಾಗೂ ಅದನ್ನು ತಡೆಗಟ್ಟುವ ರೀತಿ ಹಾಗೂ ಪೊಲೀಸರು ತೆಗೆದುಕೊಳ್ಳುತ್ತಿರುವ ಕ್ರಮ, ಹೆಚ್ಚುತ್ತಿರುವ ಟ್ರಾಫಿಕ್ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ವಿದ್ಯಾಥಿಗಳೊಂದಿಗೆ ಪೋಲಿಸ್ ಕಮಿಷನರ್ ಎನ್. ಶಶಿಕುಮಾರ್ ಚರ್ಚಿಸಿದರು.
ಐ.ಪಿ.ಎಸ್ ಆಗುವುದರ ಹಿಂದಿರುವ ಪರಿಶ್ರಮ, ವಿದ್ಯಾಭ್ಯಾಸದ ಹಾದಿ ಹಾಗೂ ಜೀವನದ ಗುರಿಯನ್ನು ತಲುಪಲು ಗುರುವಿನ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.
ಸಂವಾದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಹಿಳಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಮಣೆಲ್ ಅಣ್ಣಪ್ಪ ನಾಯಕ್, ಕಾರ್ಯದರ್ಶಿ ಜೀವನ್ ದಾಸ್ ನಾರಾಯಣ, ಉಪಾಧ್ಯಕ್ಷರು ಹಾಗೂ ಕಾಲೇಜಿನ ಸಂಚಾಲಕರಾದ ಡಾ| ಮಂಜುಳಾ ಕೆ.ಟಿ, ಪ್ರಾಂಶುಪಾಲರಾದ ಡಾ| ಸತೀಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.