ಮಂಗಳೂರು: ಕದರಿಕಾ ಚಾರಿಟೇಬಲ್ ಟ್ರಸ್ಟ್ ಇದರ ಅಂಗ ಸಂಸ್ಥೆಯಾದ ಕದ್ರಿ ಕ್ರಿಕೆಟರ್ಸ್(ರಿ) ವತಿಯಿಂದ ಅಳ್ವಾಸ್ ಜಿಮ್ ಹಾಗೂ ದಕ್ಷಿಣ ಕನ್ನಡ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡಿಂಗ್ ಇದರ ಸಹಯೋಗದೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಹಾಗೂ ಮಂಗಳೂರು ದಕ್ಷಿಣ ಶಾಸಕರಾದ ವೇದವ್ಯಾಸ್ ಕಾಮತ್ ರವರ ಸಹಕಾರದೊಂದಿಗೆ ಕದ್ರಿ ಮನೋಹರ್ ಶೆಟ್ಟಿ ರವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಹಾಗೂ ಸಂಗೀತ ರಸ ಸಂಜೆ ಕಾರ್ಯಕ್ರಮ ಕದ್ರಿ ಮಂಜುನಾಥ ಸ್ವಾಮಿಯ ರಥೋತ್ಸವದಂದು ಕದ್ರಿ ಮೈದಾನದಲ್ಲಿ ದಿನಾಂಕ 22-01-2023 ರಂದು ನಡೆಯಲಿದೆ. ಎಂದು ಕದ್ರಿ ಕ್ರಿಕೆಟರ್ಸ್ ಇದರ ಅಧ್ಯಕ್ಷರಾದ ಕದ್ರಿ ಮನೋಹರ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಲವಾರು ದೇಹದಾರ್ಡ್ಯ ಪಟುಗಳು ಭಾಗವಹಿಸಲಿದ್ದು ಮಿಸ್ಟರ್ ದಕ್ಷಿಣ ಕನ್ನಡ ವಿಜೇತರಿಗೆ 50,000/-ರೂ ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು.
ಅಲ್ಲದೆ ರನ್ನರ್ ಆಪ್ ವಿಜೇತರಿಗೆ 25,000/- ರೂ. ನಗದು ಹಾಗೂ ಸ್ಮರಣಿಕೆ ನೀಡಲಾಗುವುದು ಮತ್ತು ಪ್ರತಿ ವಿಭಾಗದ ವಿಜೇತರಿಗೆ 10,000, 8,000, 6,000, 4,000, ,2000 ರೂ. ಹೀಗೆ ವಿವಿಧ ನಗದು ಬಹುಮಾನಗಳನ್ನು ನೀಡಲಾಗುವುದು. ಇದರ ಜೊತೆಗೆ ಖ್ಯಾತ ಹಿನ್ನೆಲೆ ಗಾಯಕರಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಲ್ಲಿದ್ದು ಖ್ಯಾತ ಬಾಲಿವುಡ್ ಹಿನ್ನೆಲೆ ಗಾಯಕಿ ಹಂಸಿಕಾ ಐಯ್ಯರ್ ತನ್ನ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಹಾಗೆ ಬಹುಬಾಷ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಭಾಗವಹಿಸಲಿದ್ದು ಅದ್ದೂರಿ ಕದ್ರಿ ನೈಟ್ ಕಾರ್ಯಕ್ರಮ ನಡೆಯಲಿದೆ.