ಅಹಮದಾಬಾದ್: ಪ್ರೀತಿ ಪಾತ್ರರು ನಿಧನರಾದ ಬಳಿಕ ಅವರ ಕುಟುಂಬದವರು ಅಥವಾ ಆಪ್ತರು ಅವರ ಪ್ರತಿಮೆ ಮಾಡುವುದುಂಟು. ಆದರೆ, ಗುಜರಾತ್‌ನ ತಪಿ ಜಿಲ್ಲೆಯಲ್ಲಿ ಇಬ್ಬರು ಪ್ರೇಮಿಗಳು ಆರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಆ ಜೋಡಿಯ ಕುಟುಂಬ ಸದಸ್ಯರು ಅಸುನೀಗಿರುವ ಯುವಕ ಹಾಗೂ ಯುವತಿಯ ಪುತ್ಥಳಿ ಸ್ಥಾಪನೆ ಮಾಡಿ, ಅದಕ್ಕೆ ವಿವಾಹ ಮಾಡಿದ್ದಾರೆ.
ಗಣೇಶ್ ಮತ್ತು ರಂಜನಾ ಎಂಬ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆದರೆ, ಅವರಿಬ್ಬರ ಕುಟುಂಬದವರು ಮದುವೆಗೆ ಒಪ್ಪಿರಲಿಲ್ಲ. ಇದರಿಂದ ನೊಂದು ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಅವರಿಬ್ಬರ ಅಗಲಿಕೆಯ ದುಃಖದಿಂದ ನೊಂದ 2 ಕುಟುಂಬಗಳೂ ಭಿನ್ನಾಭಿಪ್ರಾಯ ಮರೆತು ಅವರ ಪ್ರತಿಮೆಗಳನ್ನು ಸ್ಥಾಪಿಸಿ ಅವುಗಳಿಗೆ ಮದುವೆ ಮಾಡಿಸಿದ್ದಾರೆ.