ಬಂಟ್ವಾಳ: ಇಲಿನ ಬಡ್ಡಕಟ್ಟೆಯ ರಾಯರ ಚಾವಡಿಯಲ್ಲಿರುವ ಶ್ರೀ ಪಂಜುರ್ಲಿ, ಪಿಲಿಚಾಮುಂಡಿ, ಕಲ್ಲುರ್ಟಿ, ಕಲ್ಕುಡ ದೈವಸ್ಥಾನದಲ್ಲಿ ಜ.27 ಮತು ಜ.28ರಂದು ನೇಮೋತ್ಸವ ನಡೆಯಲಿದೆ.ಜ. 27ರಂದು ಬೆಳಿಗ್ಗೆ 8.30ಕ್ಕೆ ನೇಮೋತ್ಸವದ ಮುಹೂರ್ತ, ಬಳಿಕ ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಪೂಜೆ, ಶ್ರೀ ನಾಗಸನ್ನಿಧಿಯಲ್ಲಿ ನಾಗ ತಂಬಿಲ, ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಮಹಾಪೂಜೆ, ಶ್ರೀ ಅಶ್ವತ್ಥ ನಾರಾಯಣ ಕಟ್ಟೆ ಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4ಕ್ಕೆ ದೈವಸ್ಥಾನದಲ್ಲಿ ನವಕ ಪ್ರಧಾನ ಹೋಮ, ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ರಂಗ ಪೂಜೆ, ರಾತ್ರಿ 8ಗಂಟೆಗೆ ದೈವಸ್ಥಾನದಿಂದ ನೇಮೋತ್ಸವ ಗದ್ದೆಗೆ ಭಂಡಾರ ಹೊರಡುವುದು, ಶ್ರೀ ಪಿಲಿಚಾಮುಂಡಿ, ಕಲ್ಕುಡ ದೈವಗಳಿಗೆ ನೇಮೋತ್ಸವ, ಹಾಗೂ ವಲಸರಿ ನಡೆಯಲಿದೆ. ಜ.28ರಂದು ಸಂಜೆ 5.30ಕ್ಕೆ ಶ್ರೀ ಪಂಜುರ್ಲಿ ದೈವಕ್ಕೆ ಎಣ್ಣೆಬೂಳ್ಯ, ರಾತ್ರಿ 9ಕ್ಕೆ ಶ್ರೀ ಪಂಜುರ್ಲಿ ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ ನಡೆಲಿದೆ.