ಅಮೆರಿಕ: ಪ್ರೆಗ್ನೆಂಟ್ ಆದ ಕಾರಣಕ್ಕೆ ಕಂಪೆನಿಯೊಂದು ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಿದ ಘಟನೆ ಅಮೆರಿಕಾದಲ್ಲಿ ನಡೆದಿದೆ.
ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಿದದ್ದಕ್ಕೆ ಆಕೆಗೆ 15 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಅಮೆರಿಕದ ಉದ್ಯೋಗ ನ್ಯಾಯಮಂಡಳಿಯು ಸಂಸ್ಥೆಗೆ ಆದೇಶಿಸಿದೆ. ಚಾರ್ಲೊಟ್ ಲೀಚ್ (34) ಎಂಬ ಮಹಿಳೆ ಸಂಸ್ಥೆಯೊಂದರ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅವರು ಗರ್ಭಿಣಿಯಾಗಿದ್ದಕ್ಕೆ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಇದರಿಂದ ಆಕೆ ತುಂಬಾ ಬೇಸರಗೊಂಡಿದ್ದರು. ಹೆರಿಗೆಯ ನಂತರವೂ ಕಂಪೆನಿಯ ಕೆಲಸಕ್ಕೆ ಏನೂ ಲೋಪ ಬಾರದಂತೆ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಕೈ ಮುಗಿದರೂ ಕಂಪೆನಿ ಕೇಳಿರಲಿಲ್ಲ. ಹೀಗಾಗಿ ಅವರು ಕಂಪೆನಿ ವಿರುದ್ದ ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್‌ನಲ್ಲಿ ವಿಚಾರಣೆ ವೇಳೆ ಆಕೆ ಒಪ್ಪಂದಕ್ಕೆ ಸಹಿ ಹಾಕದ ಕಾರಣ ಹೆರಿಗೆ ರಜೆ ನೀಡಲಾಗುವುದಿಲ್ಲ ಎಂಬುದಾಗಿ ಕಂಪೆನಿ ಹೇಳಿತ್ತು. ಆದರೆ ಕಂಪೆನಿಯ ಈ ವಾದವನ್ನು ಕೋರ್ಟ್ ಒಪ್ಪಿರಲಿಲ್ಲ. ಅಲ್ಲದೆ ಕಂಪೆನಿಯು ಆಕೆಗೆ 14,885 ಪೌಂಡ್‌ಗಳನ್ನು (ಸುಮಾರು 15 ಲಕ್ಷ ರೂಪಾಯಿ) ಪರಿಹಾರ ನೀಡಬೇಕೆಂಬ ಆದೇಶ ನೀಡಲಾಯಿತು. ಕೆಲಸದಿಂದ ವಜಾಗೊಳಿಸುವ ಕಾರಣಕ್ಕೆ ಚಾರ್ಲೊಟ್ ಈ ಹಿಂದೆಯೂ ಹಲವು ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದರು ಎಂದೂ ತಿಳಿದು ಬಂದಿದೆ.