ಉಡುಪಿ : ಪ್ರಾಥಮಿಕ ಶಾಲೆಯ ಶಿಕ್ಷಕನೋರ್ವ ಕಂಠಪೂರ್ತಿ ಕುಡಿದು ಶಾಲೆಯ ಜಗುಲಿ ಮೇಲೆ ಮಲಗಿದ ಘಟನೆ ಪೆರ್ಡೂರು ಗ್ರಾಮದ ಅಲಂಗಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಶಾಲೆಯ ಶಿಕ್ಷಕರಾದ ಕೃಷ್ಣಮೂರ್ತಿ ಕಂಠಪೂರ್ತಿ ಕುಡಿದು ಜಗಲಿಯಲ್ಲೆ ಮಲಗಿದ್ದಾರೆ. ಗ್ರಾಮದ ಶಾಲೆಯ ಮಕ್ಕಳ ಭವಿಷ್ಯ ರೂಪಿಸಬೇಕಾದ ಶಿಕ್ಷಕ ಇಂತಹ ಕಾರ್ಯವನ್ನು ನಡೆಸಿದ್ದು, ಶಿಕ್ಷಕನನ್ನು ಕೂಡಲೇ ಅಮಾನಾತು ಮಾಡುವಂತೆ ಪೆರ್ಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವು ಪೂಜಾರಿ ಉಪಾಧ್ಯಕ್ಷೆ ಚೇತನಾ ಶೆಟ್ಟಿ. ಗ್ರಾಮ ಪಂಚಾಯಿತಿ ಸದಸ್ಯರಾದ ಕೆ ತುಕಾರಾಮ ನಾಯಕ್ .ರಮೇಶ್ ಪೂಜಾರಿ ಶಾಲಾಭಿವೃದ್ಧಿ ಸಮಿತಿ, ಬೈದಷ್ರಿ ಫ್ರೆಂಡ್ಸ್ ನ ಸತೀಶ್ (ಅಣ್ಣು), ಗ್ರಾಮಸ್ಥರು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಮನವಿ ಸಲ್ಲಿಸಿದ್ದಾರೆ.