January 15, 2025
WhatsApp Image 2022-12-21 at 11.15.13 AM

ಉತ್ತರ ಪ್ರದೇಶದ 2 ವಿವಿಧ ಜಿಲ್ಲೆಗಳಲ್ಲಿ 2 ಹೊಸ ಲವ್ ಜಿಹಾದ್ ಪ್ರಕರಣಗಳು ವರದಿಯಾಗಿವೆ. ಪ್ರಯಾಗ್‌ರಾಜ್‌ನಲ್ಲಿ, ಹಿಂದೂ ಮಹಿಳೆಯೊಬ್ಬಳು ತನ್ನ ಮುಸ್ಲಿಂ ಫೇಸ್‌ಬುಕ್ ಸ್ನೇಹಿತ ತನ್ನ ಸ್ನೇಹಿತರ ಮೂಲಕ ಗ್ಯಾಂಗ್ ರೇ-ಪ್ ಮಾಡಿಸಿದ್ದಾನೆ ಮತ್ತು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರುವ ಮೂಲಕ ಗ-ರ್ಭ-ಪಾ-ತ ಮಾಡಿಸಿಕೊಳ್ಳಲು ಒತ್ತಾಯಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಮತ್ತೊಂದೆಡೆ, ಮಧ್ಯಪ್ರದೇಶದ ಧಾರ್‌ನಿಂದ ಗುಜರಾತ್‌ನ ಸೂರತ್‌ಗೆ ನಿಕಾಹ್‌ಗಾಗಿ ಕರೆದೊಯ್ಯುತ್ತಿದ್ದ ಯವತಿಯನ್ನ ಕಾನ್ಪುರ ಪೊಲೀಸರು ಚೇಸ್ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.

ಮೊದಲ ಘಟನೆಯಲ್ಲಿ, ಕಾನ್ಪುರದ ಲಲ್ಲನ್‌ಪುರವಾ ಆಜಾದ್ ನಗರದಲ್ಲಿ ವಾಸಿಸುವ ಹಿಂದೂ ವ್ಯಕ್ತಿಯೊಬ್ಬರು ತಮ್ಮ ಮಗಳನ್ನು ಅಪಹರಿಸಿದ್ದಕ್ಕಾಗಿ ಎಫ್‌ಐಆರ್ ದಾಖಲಿಸಿದ್ದಾರೆ. ಕೋಚಿಂಗ್‌ಗೆ ಹೋದ ಮಗಳು ಮನೆಗೆ ವಾಪಸ್‌ ಬಂದಿಲ್ಲ ಎಂದು ತಿಳಿಸಿದರು. ಮಾಧ್ಯಮ ವರದಿಗಳ ಪ್ರಕಾರ, ಪೊಲೀಸರು ಹುಡುಗಿಯ ಕರೆ ವಿವರಗಳನ್ನು ಪಡೆದಾಗ, ಕಾನ್ಪುರದ ಅನ್ವರ್ಗಂಜ್ ನಿವಾಸಿ ಮೊಹಮ್ಮದ್ ವಕಾರ್ ನೊಂದಿಗೆ ಸುದೀರ್ಘ ಸಂಭಾಷಣೆ ನಡೆಸಿದ್ದಳು. ಪೊಲೀಸರು ವಕಾರ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ತನಿಖೆಯ ವೇಳೆ ವಕಾರ್ ಯುವತಿಯೊಂದಿಗೆ ಗುಜರಾತ್‌ನ ಸೂರತ್‌ಗೆ ತೆರಳುತ್ತಿದ್ದ ಬಸ್‌ ಹತ್ತಿರುವುದು ಪತ್ತೆಯಾಗಿದೆ. ಈ ಬಸ್ ಫಜಲ್‌ಗಂಜ್‌ನಲ್ಲಿರುವ ಖಾಸಗಿ ಟ್ರಾವೆಲ್ಸ್ ಒಂದಕ್ಕೆ ಸೇರಿದ್ದಾಗಿದೆ. ತಡವಾಗಿ ಬಂದರೂ ಪೊಲೀಸರು ಬಸ್ ಬೆನ್ನಟ್ಟಿದ್ದಾರೆ.

ಅಂತಿಮವಾಗಿ, ಸುಮಾರು 750 ಕಿಮೀ ಚೇಸ್ ಮಾಡಿದ ನಂತರ, ಮಧ್ಯಪ್ರದೇಶದ ಧಾರ್‌ನಲ್ಲಿ ಪೊಲೀಸರು ಬಸ್ ಅನ್ನು ಪತ್ತೆ ಮಾಡಿದರು. ಪೊಲೀಸರು ಯುವತಿಯನ್ನ ವಶಪಡಿಸಿಕೊಂಡಿದ್ದಾರೆ. ಆರೋಪಿ ಮೊಹಮ್ಮದ್ ವಕಾರ್ ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಈವರೆಗೆ ಬಂದಿರುವ ಮಾಹಿತಿ ಪ್ರಕಾರ ವಕಾರ್ ಯುವತಿಯನ್ನ ಮತಾಂತರಗೊಳಿಸಿ ಗುಜರಾತ್ ನ ಸೂರತ್ ಗೆ ನಿಕಾಹ್ ಮಾಡಿಕೊಳ್ಳಲು ಕರೆದುಕೊಂಡು ಹೋಗುತ್ತಿದ್ದ. ಅನ್ವರ್ ವಿರುದ್ಧ ಐಪಿಸಿಯ ಸೆಕ್ಷನ್ 363, 120 ಬಿ ಮತ್ತು ಧರ್ಮ ಪ್ರಚಾರ ನಿಷೇಧ ಕಾಯಿದೆ 2020 ರ ಉತ್ತರ ಪ್ರದೇಶದ ಕಾನೂನು 3/5 ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಎರಡನೇ ಪ್ರಕರಣ ಪ್ರಯಾಗ್‌ರಾಜ್ ಜಿಲ್ಲೆಯದ್ದಾಗಿದೆ. ಇಲ್ಲಿ ವಾಸಿಸುತ್ತಿರುವ 35 ವರ್ಷದ ಮಹಿಳೆಯೊಬ್ಬರು ಉನ್ನಾವೋದ ಬಂಗಾರ್‌ಮೌ ನಿವಾಸಿಯಾದ ತನ್ನ ಫೇಸ್‌ಬುಕ್ ಸ್ನೇಹಿತನ ವಿರುದ್ಧ ಜುನ್ಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 10 ವರ್ಷಗಳ ಹಿಂದೆ ತನ್ನ ಮುಸ್ಲಿಂ ಫೇಸ್‌ಬುಕ್ ಸ್ನೇಹಿತ ತನ್ನ ಹೆಸರನ್ನು ಬದಲಾಯಿಸಿ ತನ್ನೊಂದಿಗೆ ಸ್ನೇಹ ಬೆಳೆಸಿದ್ದ ಮತ್ತು ನಂತರ ಇಬ್ಬರೂ ಭೇಟಿಯಾಗಲು ಪ್ರಾರಂಭಿಸಿದರು. ಕೆಲವು ದಿನಗಳ ನಂತರ ಆರೋಪಿ ಮಹಿಳೆಯನ್ನು ಹೊರಗಡೆ ತಿರುಗಾಡಲು ಕರೆದುಕೊಂಡು ಹೋಗುವ ನೆಪದಲ್ಲಿ ಬೇರೆ ಊರಿಗೆ ಕರೆದೊಯ್ದಿದ್ದ. ಈ ವೇಳೆ ಮಹಿಳೆಗೆ ಆರೋಪಿ ಮುಸ್ಲಿಂ ಎಂದು ತಿಳಿದು ಬಂದಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಪ್ರಕಾರ, ಆರೋಪಿಯ ಅನೇಕ ಸ್ನೇಹಿತರು ಈಗಾಗಲೇ ಬೇರೆ ನಗರದಲ್ಲಿದ್ದರು. ಇವರೆಲ್ಲರೂ ಸಂತ್ರಸ್ತೆಯ ಮೇ-ಲೆ ಸಾಮೂಹಿಕ ಅ ತ್ಯಾ ಚಾ ರ ಎಸಗಿದ್ದಾರೆ. ಈ ಸಂದರ್ಭದಲ್ಲಿ, ಮಹಿಳೆಯ ಅಶ್ಲೀಲ ವೀಡಿಯೊವನ್ನು ಮಾಡಲಾಗಿದ್ದು, ಅದು ಪದೇ ಪದೇ ವೈರಲ್ ಆಗುವುದಾಗಿ ಬೆದರಿಕೆ ಹಾಕಿದ್ದಾರೆ. ಬಳಿಕ ಆರೋಪಿ ಮಹಿಳೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಈ ಭರವಸೆ ನೀಡಿದ ಬಳಿಕ ಆಕೆಗೆ ಅನುಕೂಲ ಮಾಡಿಕೊಡುವ ನೆಪದಲ್ಲಿ ಮಹಿಳೆಯನ್ನು ತನ್ನ ಮನೆಗೆ ಕರೆದೊಯ್ದಿದ್ದಾನೆ. ಇಲ್ಲಿ ಆರೋಪಿಯ ಸಹೋದರ ಕೂಡ ಆಕೆಯ ಮೇಲೆ ಅ ತ್ಯಾ ಚಾ ರ ಎಸಗಿದ್ದಾನೆ. ಸ್ವಲ್ಪ ಸಮಯದ ನಂತರ ಮಹಿಳೆ ಗರ್ಭಿಣಿಯಾದಳು ಮತ್ತು ಆಕೆಗೆ ಗರ್ಭಪಾತ ಮಾಡಿಸಲಾಯಿತು ಎಂದು ಮಹಿಳೆ ಆರೋಪಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.