ಗದಗ:ಅತಿಥಿ ಶಿಕ್ಷಕನೋರ್ವ ಸಹಶಿಕ್ಷಕಿ ಹಾಗೂ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ವಿದ್ಯಾರ್ಥಿ ಮೃತಪಟ್ಟಿದ್ದು ಶಿಕ್ಷಕಿ ಗಂಭೀರವಾಗಿರುವ ಬಗ್ಗೆ ವರದಿಯಾಗಿದೆ.
ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮುತ್ತಪ್ಪ ಹಡಗಲಿ ಎಂಬಾತ ವಿದ್ಯಾರ್ಥಿಯ ಮೇಲೆ ಗುದ್ದಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಈ ವೇಳೆ ತಡೆಯಲು ಬಂದ ಬಾಲಕನ ತಾಯಿಯಾಗಿರುವ ಅತಿಥಿ ಶಿಕ್ಷಕಿ ಗೀತಾ ಬಾರಕೇರಿ ಅವರ ಮೇಲೂ ಮನಬಂದಂತೆ ಹಲ್ಲೆ ಮಾಡಿದ್ದಾನೆ.ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವಗೊಂಡ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಹಲ್ಲೆ ಮಾಡುವುದನ್ನು ಬಿಡಿಸಲು ಹೋದ ಸರ್ಕಾರಿ ಶಾಲೆಯ ಸಹ ಶಿಕ್ಷಕನ ಮೇಲೂ ಹಲ್ಲೆ ಮಾಡಿದ್ದಾನೆ.ವಿಷಯ ತಿಳಿದು ಗ್ರಾಮಸ್ಥರು ಬಂದು ಅತಿಥಿ ಶಿಕ್ಷಕನನ್ನು ತಡೆದಿದ್ದಾರೆ.ಈ ವೇಳೆ ಆತ ಪರಾರಿಯಾಗಿದ್ದಾನೆ.
ಕೂಡಲೇ ಆಂಬುಲೆನ್ಸ್ ಗೆ ಕರೆ ಮಾಡಿ ರಕ್ತದ ಮಡುವಿನಲ್ಲಿ ಸಾವನ್ನಪ್ಪಿದ ಬಾಲಕ ಮತ್ತು ತೀವ್ರ ಗಾಯಗೊಂಡಿರುವ ಅತಿಥಿ ಶಿಕ್ಷಕಿಯರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ಹೆಚ್ಚಿನಮಾಹಿತಿ ನಿರೀಕ್ಷಿಸಲಾಗಿದೆ..