
ಬಂಟ್ವಾಳ: ಮಸೀದಿ ವಿಚಾರಕ್ಕೆ ಸಂಬಂಧಿಸಿ ಎರಡು ಗುಂಪುಗಳ ನಡುವೆ ತಲವಾರು ಮತ್ತು ಕಬ್ಬಿಣದ ರಾಡ್‌ಗಳಿಂದ ಭೀಕರ ಹೊಡೆದಾಟ ನಡೆದಿದೆ. ಸಜಿಪನಡುವಿನ ತಲೆಮೊಗರು ಮಸೀದಿ ಬಳಿ ನಡೆದ ಈ ಸಂಘರ್ಷದಲ್ಲಿ ಹಲವರು ಗಾಯಗೊಂಡಿದ್ದು, ಬಂಟ್ವಾಳ ಪೊಲೀಸರು ಒಟ್ಟು 3 ಪ್ರತ್ಯೇಕ ಎಫ್‌ಐಆರ್ ದಾಖಲಿಸಿದ್ದಾರೆ.
ಮಸೀದಿ ವಿಚಾರದಲ್ಲಿ ಆರಂಭವಾದ ಈ ಗಲಾಟೆ ಹಿಂಸಾತ್ಮಕ ರೂಪ ಪಡೆದುಕೊಂಡಿದ್ದು, ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದಾರೆ.
