March 19, 2026
WhatsApp Image 2026-03-09 at 3.15.02 PM
ಮಂಗಳೂರು : ಮದುವೆಯಾಗಿ 2 ಮಕ್ಕಳಿದ್ದ ಮಹಿಳೆಯನ್ನು ಪ್ರೀತಿ ಪ್ರೇಮ ಎಂದು ಬಲೆಗೆ ಬಿಳಿಸಿ ಬಳಿಕ ಹಲ್ಲೆಗೈದು, ಕೊಲೆಗೆ ಯತ್ನಿಸಿದ ಘಟನೆ ಉಳ್ಳಾಲದ ಮಿಲ್ಲತ್ ನಲ್ಲಿ ನಡೆದಿದೆ. ಘಟನೆ ವಿವರ: ಪ್ರಕರಣದ ಸಾರಾಂಶ: ಮದುವೆಯಾಗಿ 2 ಮಕ್ಕಳಿದ್ದ ಮಹಿಳೆ ಒಂದು ವರ್ಷಗಳಿಂದ ಉಳ್ಳಾಲದ ಮಿಲ್ಲತ್ ನಗರದ ಮೊಹಮ್ಮದ್ ಅರ್ಫಾಝ್ ಎಂಬಾತನೊಂದಿಗೆ ಪ್ರೇಮ ಉಂಟಾಗಿ ಸುಮಾರು 06 ತಿಂಗಳಿನಿಂದ ಜೊತೆ ಜೀವನ ನಡೆಸುತ್ತಿದ್ದು, ಇದೀಗ ಆರೋಪಿತನು ಗಾಂಜಾ ಸೇವಿಸುತ್ತಿದ್ದ ಬಗ್ಗೆ ಮಾಹಿತಿ ಇದ್ದು, ಆತನು ಮಹಿಳೆಯ ಮನೆಯಲ್ಲಿ ಗಾಂಜಾ ಪ್ಯಾಕ್ ಮಾಡಿ ಮಾರಾಟ ಮಾಡುತ್ತೇನೆ ಎಂದು ಹೇಳುತ್ತಿದ್ದಾಗ ಮಹಿಳೆ ಆಕ್ಷೇಪ ಮಾಡಿದ್ದರಿಂದ ಆಕೆಗೆ ಮಂಗಳೂರು ನಗರದ ಬಂದರಿನ ಜೆ.ಎಂ ರಸ್ತೆ ಎಂಬಲ್ಲಿರುವ ಗಣಪತಿ ಭಂಡಾರ್ಕರ್ ಅಂಗಡಿಯ ಎದುರಿನಲ್ಲಿರುವ ಬಾಡಿಗೆ ಮನೆಯಲ್ಲಿ ದಿನಾಂಕ 13-03-2026 ರಂದು ಸಂಜೆ 06-00 ಗಂಟೆಗೆ ಕೈಯಿಂದ ಹಲ್ಲೆ ನಡೆಸಿ ಕಾಲಿನಿಂದ ತುಳಿದು ಚೂಡಿದಾರರ ಶಾಲುವಿನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡುವ ಉದ್ದೇಶದಿಂದ ಎಳೆದು ಅಲ್ಲದೇ ಸಣ್ಣ ಕತ್ತರಿಯಿಂದ ಕುತ್ತಿಗೆ, ಎದೆಗೆ ಚುಚ್ಚಿಗೆ ಗಾಯಗೊಳಿಸಿ ಅಲ್ಲದೇ ಮೈ ಮುಟ್ಟಿ ಗಟ್ಟಿಯಾಗಿ ಹಿಡಿದು ಮಾನಭಂಗ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಯತ್ನ ಮಾಡಿರುತ್ತಾನೆ. ಸಂತ್ರಸ್ತ ಮಹಿಳೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳೆ. ಈ ಬಗ್ಗೆ ಪಾಂಡೆಶ್ಚೇರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.